ಕೆಲವರು ಯಾಕೆ ಮದುವೆ ಅಂದ್ರೆ ಮಾರುದ್ದ ಓಡುತ್ತಾರೆ?

By Suvarna NewsFirst Published Jan 3, 2023, 3:16 PM IST
Highlights

ಒಂದು ವಯಸ್ಸಿಗೆ ಬರ್ತಿದ್ದಂತೆ ಮನೆಯಲ್ಲಿ ಮದುವೆ ಗಲಾಟೆ ಶುರುವಾಗುತ್ತದೆ. ಆದ್ರೆ ಕೆಲವರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಇಷ್ಟವಿರೋದಿಲ್ಲ. ಇದಕ್ಕೆ ನಾನಾ ಕಾರಣವಿದೆ. ವಯಸ್ಸು 40 ದಾಟಿದ್ರೂ ಮದುವೆ ಏಕೆ ಆಗಿಲ್ಲ ಎಂಬುದಕ್ಕೆ ಕೆಲ ಪುರುಷರು ಕಾರಣ ಹೇಳಿದ್ದಾರೆ.
 

ಮದುವೆ ಒಂದು ಸುಂದರ ಬಂಧ. ಇದು ಅರೇಂಜ್ಡ್ ಮ್ಯಾರೇಜ್ ಇರಲಿ ಇಲ್ಲ ಲವ್ ಮ್ಯಾರೇಜ್ ಇರಲಿ, ನಮ್ಮ ಜೀವನವನ್ನು ಬೇರೊಬ್ಬರ ಜೊತೆ ಹಂಚಿ ಬದುಕುವ ಲೈಫ್ ಇದು. ಇದ್ರಲ್ಲಿ ಹೊಂದಾಣಿಕೆ, ಪ್ರೀತಿ, ಪರಸ್ಪರ ಗೌರವ ಎಲ್ಲವೂ ಮುಖ್ಯವಾಗುತ್ತದೆ. ಸಂಗಾತಿಯ ಆಸಕ್ತಿಗೂ ಮಹತ್ವ ನೀಡಬೇಕಾಗುತ್ತದೆ. ಇಲ್ಲಿ ನಾನು ಎನ್ನುವದಕ್ಕಿಂತ ನಾವು ಎಂಬುದು ಮಹತ್ವ ಪಡೆಯುತ್ತದೆ.  ಮದುವೆಯಾಗಿ ಸಂಗಾತಿ ಜೊತೆ ಸುಂದರ ಬದುಕು ಕಟ್ಟಿಕೊಳ್ಳಲು, ವಂಶಾಭಿವೃದ್ಧಿ ಮಾಡಲು ಅನೇಕರು ಬಯಸ್ತಾರೆ. ಆದ್ರೆ ನಮ್ಮ ಸಮಾಜದಲ್ಲಿ ಮದುವೆಯನ್ನು ಇಷ್ಟಪಡದ ಅನೇಕ ಜನರಿದ್ದಾರೆ. ಅವರಿಗೆ ಮದುವೆ ಹೆಸರು ಕೇಳಿದ್ರೆ ಭಯವಾಗುತ್ತದೆ. ಮದುವೆ ನಂತ್ರ ಜೀವನವನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಅವರಿಗೆ ಇಷ್ಟವಿಲ್ಲ. ವಿವಾಹ, ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ಅವರು ಭಾವಿಸಿದ್ದಾರೆ. ಅನೇಕ ಅವಿವಾಹಿತ ಪುರುಷರು ಇದನ್ನು ಒಪ್ಪಿಕೊಂಡಿದ್ದಾರೆ ಕೂಡ. ತಮ್ಮದೇ ಆದ ಕಾರಣಕ್ಕೆ ಮದುವೆಯಾಗದೆ ಒಂಟಿಯಾಗಿ ಜೀವನ ನಡೆಸುತ್ತಿರುವ ಅನೇಕರಿದ್ದಾರೆ. ಅವರು ಮದುವೆಯಾಗದಿರಲು ಕಾರಣವೇನು ಎಂಬುದನ್ನು ನಮ್ಮ ಮುಂದೆ ಹೇಳಿದ್ದಾರೆ.

ಇವರು ಮದುವೆ (Marriage) ಯಾಗದಿರಲು ಕಾರಣವೇನು ಗೊತ್ತಾ? 
ಈತನಿಗೆ ಮದುವೆಯ ಅಗತ್ಯವಿಲ್ಲವಂತೆ :
ಈತನಿಗೆ ಈಗ 35 ವರ್ಷ. ಈಗ್ಲೂ ವರ್ಜಿನ್ (Virgin) . 35 ವರ್ಷದಲ್ಲಿ ಒಬ್ಬ ಪುರುಷ ವರ್ಜಿನ್ ಅಂದ್ರೆ ಮೂಗಿನ ಮೇಲೆ ಬೆರಳಿಡುವವರೇ ಹೆಚ್ಚು. ಆದ್ರೆ ನನಗೆ ಚಿಂತೆಯಿಲ್ಲ ಎನ್ನುತ್ತಾನೆ ಈ ವ್ಯಕ್ತಿ. ಆತನಿಗೆ ಸೆಕ್ಸ್ (Sex) ಅಗತ್ಯವಿದೆ ಎಂದು ಈವರೆಗೂ ಅನ್ನಿಸಿಲ್ಲವಂತೆ. ಸೆಕ್ಸ್ ಇಲ್ಲದೆ ನಾನು ಜೀವಿಸಬಲ್ಲ. ದಾಂಪತ್ಯದಲ್ಲಿ ಸೆಕ್ಸ್ ಕೂಡ ಮಹತ್ವ ಪಡೆಯುತ್ತದೆ. ಹಾಗಾಗಿ ನನಗೆ ಮದುವೆ ಅಗತ್ಯವಿಲ್ಲ ಎನ್ನುತ್ತಾನೆ ಈತ.

RELATIONSHIP TIPS: ಗಂಡ ಎಲ್ಲರೆದುರೇ ದಪ್ಪಗಿದ್ದೀಯಾ, ಆನೆ, ಹಂದಿ ಅಂತ ಹೀಯಾಳಿಸ್ತಾನೆ !

ಪತ್ನಿ (Wife) ಹೇಳಿದಂತೆ ಕೇಳಲು ಸಾಧ್ಯವಿಲ್ಲ : ಮದುವೆಯಾದ್ಮೇಲೆ ಪತ್ನಿ ಹೇಳಿದಂತೆ ಕೇಳ್ಬೇಕಾಗುತ್ತದೆ ಎಂಬುದು ಇನ್ನೊಬ್ಬ ವ್ಯಕ್ತಿ ವಾದ. ನನಗೆ ನನ್ನ ಜೀವನ (Life) ವನ್ನು ಇನ್ನೊಬ್ಬರಿಗೆ ನೀಡಲು ಇಷ್ಟವಿಲ್ಲ. ಪತ್ನಿ ಹೇಳಿದಂತೆ ಜೀವನ ನಡೆಸುವುದು ಅಸಾಧ್ಯ. ಹಾಗಾಗಿಯೇ ನಾನು ಮದುವೆಯಾಗಬಾರದು ಅಂದ್ಕೊಂಡಿದ್ದೇನೆ ಎನ್ನುತ್ತಾನೆ 40 ವರ್ಷದ ವ್ಯಕ್ತಿ. ಅನೇಕ ಬಾರಿ ನನಗೆ ಒಂಟಿತನ (Loneliness) ಕಾಡಿದ್ದು ಸತ್ಯ. ಆದ್ರೆ ಎಲ್ಲ ವಿಷ್ಯಕ್ಕೆ ಬೇರೆಯವರ ಒಪ್ಪಿಗೆ ಪಡೆಯಬೇಕಾದ ಇಲ್ಲವೆ ಎಲ್ಲವನ್ನೂ ಚರ್ಚಿಸಿ ಜೀವನ ನಡೆಸುವುದಕ್ಕಿಂತ ಒಂಟಿತನ ಬೆಸ್ಟ್ ಎನ್ನುತ್ತಾನೆ ಈತ. ಮದುವೆಗಿಂತ ಸಂತೋಷ ಮುಖ್ಯವಂತೆ ಈತನಿಗೆ.

ಮಹಿಳೆಯರ ಮೇಲೆ ಆಸಕ್ತಿಯಿಲ್ಲ : 25ನೇ ವಯಸ್ಸಿನಲ್ಲಿರುವಾಗ್ಲೇ ಈತನಿಗೆ ಸತ್ಯ (Truth) ವೊಂದು ಗೊತ್ತಾಯ್ತಂತೆ. ಆತನಿಗೆ ಮಹಿಳೆಯರ ಮೇಲೆ ಯಾವುದೇ ಆಸಕ್ತಿ ಇಲ್ಲವಂತೆ. ಮೊದಲು ತಾನೇ ಸರಿಯಿಲ್ಲವೆಂದು ಈತ ಭಾವಿಸಿದ್ದನಂತೆ. ದಿನ ಕಳೆದಂತೆ ತನ್ನನ್ನು ತಾನು ಅರ್ಥ ಮಾಡಿಕೊಂಡಿದ್ದೇನೆ. ನನಗೆ ಮಹಿಳೆಯರ ಮೇಲೆ ಆಸಕ್ತಿಯಿಲ್ಲ. ಅವರು ಜೊತೆ ಸೆಕ್ಸ್ ನಡೆಸುವ ಅಗತ್ಯವೂ ಇಲ್ಲ. ಇದ್ರಿಂದ ನನ್ನ ಜೀವನ ಹಾಳು ಮಾಡಿಕೊಳ್ಳಲಾರೆ. ಹಾಗಾಗಿ ನಾನು ಮದುವೆಯಾಗುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎನ್ನುತ್ತಾನೆ ಈ ವ್ಯಕ್ತಿ.

ಅವಳಿಗೆ ನೀವು ಇಷ್ಟವಾಗಿದ್ದೀರಾ? ಕಂಡು ಕೊಳ್ಳೋದು ಹೇಗೆ?

ಸ್ವಾತಂತ್ರ್ಯ ಕಳೆದುಕೊಳ್ಳಲಾರೆ ಎನ್ನುತ್ತಾನೆ ಈತ : 41 ವರ್ಷದ ಈ ವ್ಯಕ್ತಿಗೆ ಮದುವೆಯಾದ್ರೆ ಸ್ವಾತಂತ್ರ್ಯ ಕಳೆದುಕೊಳ್ಳುವ ಭಯವಿದೆಯಂತೆ. ಈಗ ನನ್ನಿಷ್ಟದಂತೆ ಎಲ್ಲವನ್ನೂ ಮಾಡ್ತೇನೆ. ರಜೆಯಲ್ಲಿ ಎಲ್ಲಿ ಬೇಕಾದ್ರೂ ಸುತ್ತಾಡಿ ಬರುತ್ತೇನೆ. ಮದುವೆಯಾದ್ಮೇಲೆ ಇದು ಸಾಧ್ಯವಿಲ್ಲ. ಸಂಗಾತಿ ಆಸೆಗಳನ್ನು ನೋಡ್ಬೇಕು. ಆಗ ನನ್ನ ಬಯಕೆಗಳನ್ನು ಮುಚ್ಚಿಡಬೇಕಾಗುತ್ತದೆ. ಪತ್ನಿ ಕಾರಣಕ್ಕೆ ನಾನು ಸಾಕಷ್ಟನ್ನು ಕಳೆದುಕೊಳ್ಳುವ ಆತಂಕವಿದೆ. ನನ್ನಿಂದ ಇದು ಸಾಧ್ಯವಿಲ್ಲ. ಹಾಗಾಗಿ ನಾನು ಮದುವೆಯಾಗಲ್ಲ ಎನ್ನುತ್ತಾನೆ ಈ ವ್ಯಕ್ತಿ. 

click me!