ಒಂಟಿಯಾಗಿದ್ದರೆ ಜೀವನದಲ್ಲಿ ಹೆಚ್ಚು ಖುಷಿಯೋ, ಜೊತೆಯಾಗಿದ್ದರೆ ಆನಂದವೋ?

Published : Jan 03, 2023, 01:08 PM IST
ಒಂಟಿಯಾಗಿದ್ದರೆ ಜೀವನದಲ್ಲಿ ಹೆಚ್ಚು ಖುಷಿಯೋ, ಜೊತೆಯಾಗಿದ್ದರೆ ಆನಂದವೋ?

ಸಾರಾಂಶ

ನಾವು ಸಿಂಗಲ್ ಆಗಿದ್ರೆ ನಮಗೆ ಸಂಬಂಧದಲ್ಲಿರುವ ವ್ಯಕ್ತಿಗಳು ಖುಷಿಯಾಗಿದ್ದಾರೆ ಎನ್ನಿಸುತ್ತದೆ. ಅದೇ ನಾವು ಸಂಬಂಧದಲ್ಲಿದ್ರೆ ನಮಗೆ ಸಿಂಗಲ್ ಆಗಿರುವ ವ್ಯಕ್ತಿ ಖುಷಿಯಾಗಿದ್ದಾನೆ ಎನ್ನಿಸುತ್ತದೆ. ಇಬ್ಬರಲ್ಲಿ ಯಾರಿಗೆ ಹೆಚ್ಚು ಸಂತೋಷ ಸಿಗುತ್ತೆ ಎಂಬುದೇ ದೊಡ್ಡ ಪ್ರಶ್ನೆ.  

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಹೀಗೊಂದು ಗಾಧೆಯನ್ನು ನೀವು ಕೇಳಿರಬಹುದು. ಬೇರೆಯವರ ಜೀವನ ಯಾವಾಗ್ಲೂ ಚೆನ್ನಾಗಿಯೆ ಕಾಣುತ್ತೆ. ಆದ್ರೆ ಅಲ್ಲಿ ನಾವು ನಿಂತಾಗ್ಲೇ ವಾಸ್ತವ ಅರಿವಿಗೆ ಬರೋದು. ಇದು ಸಿಂಗಲ್ ಹಾಗೂ ಮಿಂಗಲ್ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ನಡೆಯುವ ತಿಕ್ಕಾಟ. ಸಿಂಗಲ್ ಆಗಿರುವ ವ್ಯಕ್ತಿಗೆ ಸಂಗಾತಿ ಜೊತೆಗಿರುವ ವ್ಯಕ್ತಿ ನೋಡಿದ್ರೆ ಹೊಟ್ಟೆ ಕಿಚ್ಚಾಗುತ್ತದೆ. ಆತ ತುಂಬಾ ಚೆನ್ನಾಗಿದ್ದಾನೆಂದು ಭಾವಿಸ್ತಾರೆ. ಅದೇ ಸಂಗಾತಿ ಜೊತೆಗಿರುವ ವ್ಯಕ್ತಿ ಸಿಂಗಲ್ ಆಗಿರುವ ವ್ಯಕ್ತಿ ನೋಡಿ ಕೈ ಹಿಸುಕಿಕೊಳ್ತಾನೆ. ಆತನಿಗೆ ಸಿಂಗಲ್ ಲೈಫ್ ಸುಂದರವಾಗಿ ಕಾಣುತ್ತದೆ. ಸಿಂಗಲ್ ಹಾಗೂ ಮಿಂಗಲ್ ಇದ್ರಲ್ಲಿ ಯಾರು ಸುಖಿಗಳು ಎಂಬ ಪ್ರಶ್ನೆ ಇಂದು ನಿನ್ನೆಯದಲ್ಲ. ನಾವಿಂದು ಯಾರು ಹೆಚ್ಚು ಸುಖವಾಗಿರ್ತಾರೆ ಎಂಬುದನ್ನು ನಿಮಗೆ ಹೇಳ್ತೆವೆ.

ಒಂಟಿ (Alone) ಹಾಗೂ ಜಂಟಿ ವ್ಯಕ್ತಿಗಳ ಜೀವನ (Life) : ಒಂಟಿಯಾಗಿರುವ ಜನರು ಕೆಲವೊಂದು ವಿಷ್ಯಗಳಲ್ಲಿ ಲಕ್ಕಿ ಅಂದ್ರೆ ತಪ್ಪಾಗೋದಿಲ್ಲ. ಅವರು ಏನು ಬೇಕಾದರೂ ಮಾಡಬಹುದು. ಅವರನ್ನು ಪ್ರಶ್ನಿಸುವ ಹಾಗೂ ಕಟ್ಟಿಹಾಕುವ ಇನ್ನೊಬ್ಬ ವ್ಯಕ್ತಿ ಇರೋದಿಲ್ಲ. ಡೇಟ್ (Date ) ಮಾಡಬಹುದು,  ಹೊಸ ಜನರನ್ನು ಭೇಟಿ ಮಾಡಬಹುದು, ಬೇಕೆಂದಾಗ ಬೇಕಾದ ಸ್ಥಳಕ್ಕೆ ಹೋಗಿ ಎಂಜಾಯ್ ಮಾಡಿ ಬರಬಹುದು, ಆಸಕ್ತಿಯಿರುವ ಯಾವುದೇ ಕೆಲಸವನ್ನು ಕೂಡ ಮಾಡಬಹುದು. ಆದ್ರೆ ಸಂಗಾತಿ ಹೊಂದಿರುವ ಜನರಿಗೆ ಇಂಥ ಅವಕಾಶ ಸುಲಭವಾಗಿ ಸಿಗುವುದಿಲ್ಲ. ಯಾವುದೇ ಕೆಲಸ ಮಾಡುವ ಸಮಯ (Time) ದಲ್ಲಿ ಕೂಡ ಅವರು ಸಂಗಾತಿ ಜೊತೆ ಚರ್ಚೆ ನಡೆಸಬೇಕು. ಬೇಕೆಂದಾಗ ಪ್ರವಾಸಕ್ಕೆ ಹೋಗಲು, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ರೆ ಅವರಿಗೆ ಸಂಗಾತಿ ರೂಪದಲ್ಲಿ ಒಬ್ಬ ವ್ಯಕ್ತಿಯ ಬೆಂಬಲ ಸಿಗುತ್ತದೆ. ತಮ್ಮ ಸಮಸ್ಯೆಯನ್ನು ಅವರು ಹೇಳಬಹುದು. ಸಂಗಾತಿ ಜೊತೆ ಸಂತೋಷ ಹಂಚಿಕೊಳ್ಳಬಹುದು. ಆದ್ರೆ ಈ ಅವಕಾಶ ಒಂಟಿಯಾಗಿರುವ ವ್ಯಕ್ತಿಗೆ ಸಿಗೋದಿಲ್ಲ.  

ಒಂಟಿಯಾಗಿರುವುದ್ರಿಂದ ಆಗುವ ಲಾಭ : ಮೊದಲೇ ಹೇಳಿದಂತೆ ಸಮಯ ಸಂಪೂರ್ಣ ನಿಮ್ಮದಾಗಿರುತ್ತದೆ. ಆಸಕ್ತಿಗೆ ನೀರೆರೆಯಬಹುದು. ನಿಮ್ಮೊಂದಿಗೆ ನೀವು ಗರಿಷ್ಠ ಸಮಯ ಕಳೆಯಲು ಅವಕಾಶವಿರುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಗುರಿ ಸಾಧಿಸಲು ನೀವು ಹೆಚ್ಚು ಗಮನ ಹರಿಸಬಹುದಾಗಿದೆ. ಸಮಯ ನೀಡಿಲ್ಲ ಎಂದು ಆರೋಪ ಮಾಡುವ ವ್ಯಕ್ತಿ ಇರೋದಿಲ್ಲ. ನೀವು ಯಾರಿಗೂ ಹೆಚ್ಚಿನ ಸಮಯ ನೀಡಬೇಕಾಗಿಲ್ಲ. ನಿಮ್ಮಿಷ್ಟದಂತೆ ನೀವು ಇಡೀ ದಿನವನ್ನು ಕಳೆಯಬಹುದು. ಬೇಕಾದ ಬಟ್ಟೆ, ಬೇಕಾದ ವಸ್ತು ಖರೀದಿಗೆ ಅವಕಾಶವಿದೆ. 

ಯಾರ್ ಮೇಲಾದ್ರೂ ಕ್ರಶ್ ಆದ್ರೆ ಹೀಗೆಲ್ಲಾ ಆಗುತ್ತಂತೆ ಹೌದಾ?

ಜಂಟಿಯಾಗಿರುವ ಪ್ರಯೋಜನ : ಇಡೀ ದಿನ ಹೊರಗೆ ದಣಿದು ಮನೆಗೆ ಬಂದಾಗ ನಿಮ್ಮನ್ನು ಗಮನಿಸುವ ವ್ಯಕ್ತಿಯೊಬ್ಬರು ನಿಮ್ಮ ಬಳಿ ಇರ್ತಾರೆ. ನಿಮ್ಮನ್ನು ಅರ್ಥಮಾಡಿಕೊಳ್ಳುವ ಮತ್ತು ನಿಮ್ಮ ಮಾತನ್ನು ಕೇಳುವವರು ಜೊತೆಗಿರ್ತಾರೆ. ನಿಮ್ಮ ನಿರ್ಧಾರ ಬೆಂಬಲಿಸಿ ನಿಮ್ಮ ಜೊತೆಗಿರ್ತಾರೆ. ನಿಮ್ಮ ದುಃಖದಲ್ಲಿ ಭಾಗಿಯಾಗ್ತಾರೆ. ಯಾವುದೇ ಸಮಸ್ಯೆಯನ್ನು ಸಂಗಾತಿ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು. ಅನಾರೋಗ್ಯಕ್ಕೀಡಾದಾಗ ನಿಮ್ಮ ನೆರವಿಗೆ ಬರುವ ವ್ಯಕ್ತಿಯೊಬ್ಬರು ನಿಮ್ಮ ಜೊತೆಗಿರ್ತಾರೆ. ನೀವು ತಪ್ಪು ನಿರ್ಧಾರ ತೆಗೆದುಕೊಂಡಾಗ ಅದನ್ನು ಸರಿಪಡಿಸಿ, ಸೂಕ್ತ ದಾರಿಗೆ ಕರೆದೊಯ್ಯುವ ಅಥವಾ ನಿಮ್ಮ ಒತ್ತಡವನ್ನು ಕಡಿಮೆ ಮಾಡುವ ವ್ಯಕ್ತಿ ನಿಮ್ಮ ಬಳಿ ಇರ್ತಾರೆ. ಯಾವುದೇ ವಿಶೇಷ ಸಂದರ್ಭದಲ್ಲಿ ನೀವು ಒಂದಾಗಿ ಸಂಭ್ರಮಿಸುವ ಅವಕಾಶವಿರುತ್ತದೆ. 

ಅವಳಿಗೆ ನೀವು ಇಷ್ಟವಾಗಿದ್ದೀರಾ? ಕಂಡು ಕೊಳ್ಳೋದು ಹೇಗೆ?

ಒಂಟಿ – ಜಂಟಿಯಲ್ಲಿ ಯಾವುದು ಬೆಸ್ಟ್ ? : ನಾವು ಒಂದು ಗಿಡವನ್ನು ಹೇಗೆ ಬೆಳೆಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಾವು ಗಿಡಕ್ಕೆ ಪ್ರತಿ ದಿನ ನೀರು ಹಾಕಿದ್ರೆ ಅದು ಫಲ ನೀಡುತ್ತದೆ. ನೀರು ಹಾಕದೆ ಹೋದ್ರೆ ಅದು ಒಣಗುತ್ತದೆ. ಇದೇ ರೀತಿ ಸಂಬಂಧಕ್ಕೆ ಅಗತ್ಯವಿರುವ ಎಲ್ಲವನ್ನೂ ನೀವು ನೀಡಿದಾಗ ನಿಮ್ಮ ಜಂಟಿ ಜೀವನ ಚೆನ್ನಾಗಿಯೇ ಇರುತ್ತದೆ. ಜಂಟಿ ಹಾಗೂ ಒಂಟಿ ಎರಡೂ ತನ್ನದೆ ಆದ ಸಂತೋಷವನ್ನು ಹೊಂದಿದೆ. ಆತ ಒಂಟಿಯಾಗಿದ್ದಾನಾ ಇಲ್ಲ ಜಂಟಿಯಾಗಿದ್ದಾನಾ ಎನ್ನುವುದಕ್ಕಿಂತ ಆತ ಹೇಗಿದ್ದಾನೆ ಎನ್ನುವುದು ಮುಖ್ಯವಾಗುತ್ತದೆ. ಸಂತೋಷ ಎನ್ನುವುದು ಬೇರೆ ವ್ಯಕ್ತಿಯಿಂದ ಸಿಗುವುದಲ್ಲ. ನಮ್ಮಲ್ಲಿರುವ ಭಾವನೆ. ನಾವು ಸಂತೋಷವನ್ನು ನಮ್ಮಲ್ಲಿಯೇ ಹುಡುಕುವ ಪ್ರಯತ್ನ ನಡೆಸಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!