Break up ಗೆ ಕಾರಣವಾಗೋ ತಪ್ಪುಗಳಿವು!

By Suvarna News  |  First Published Jan 16, 2022, 10:25 AM IST

ಪ್ರೀತಿಗೆ ಬೀಳೋದೇನೋ ಸುಲಭ. ಆದರೆ, ಅದನ್ನು ಉಳಿಸಿಕೊಳ್ಳುವುದು ಕಷ್ಟ. ಅದರಲ್ಲೂ ಈಗಿನ ದಿನಗಳಲ್ಲಿ ಸಣ್ಣಪುಟ್ಟ ಮಾತಿಗೂ ಬ್ರೇಕಪ್ ನಡೆದು ಬಿಡುತ್ತದೆ. ಕೆಲವೇ ದಿನಗಳಲ್ಲಿ ಪ್ರೀತಿಸುತ್ತಿರುವ ಹುಡುಗ ಅಥವಾ ಹುಡುಗಿಯ ಜೊತೆಗೆ ಬ್ರೇಕಪ್ ಮಾಡಿಕೊಳ್ಳುವುದೇ ಈಗಿನ ಟ್ರೆಂಡ್ ಅನಿಸುವಂತಹ ಸ್ಥಾನಕ್ಕೆ ಬಂದು ಬಿಟ್ಟಿದ್ದೀವಿ. 
 


ಯಾವುದೇ ಸಂಬಂಧದಲ್ಲಿ (Relationship) ಸಮಸ್ಯೆಗಳು ಸಹಜ.ಆದರೆ ಅದನ್ನು ತುಂಬಾ ನಾಜೂಕಾಗಿ ಪರಿಹರಿಸಿಕೊಳ್ಳಬೇಕು. ಇಲ್ಲವಾದರೆ ಒಂದು ಅಮೂಲ್ಯ ಸಂಬಂಧವನ್ನು ಕಳೆದುಕೊಂಡು ಕೊರಗುವಂತಾಗುತ್ತದೆ. ಅದರಲ್ಲೂ ಪ್ರೇಮಿಗಳ ವಿಷಯಕ್ಕೆ ಬಂದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆಡುವ ಚಿಕ್ಕ ಮಾತು, ನಡೆ ಕೂಡಾ ಬ್ರೇಕಪ್‌ಗೆ ಕಾರಣವಾಗುತ್ತದೆ. ಸಾಮಾನ್ಯ ಜಗಳದ ಕಾರಣಕ್ಕಾಗಿ ಸಂಬಂಧವನ್ನೇ ಕಡಿದುಕೊಂಡು ಕೊರಗುವ ಮೂರ್ಖತನವನ್ನು ಇಂದಿನ ಬಹುತೇಕ ಯುವ ಜೋಡಿಯು ಮಾಡುತ್ತಾರೆ. ಇದರಿಂದ ಇಬ್ಬರಲ್ಲೊಬ್ಬರಿಗೂ ನೆಮ್ಮದಿ ಇರುವುದಿಲ್ಲ. ಇದ್ದಿದ್ದನ್ನು ಉಳಿಸಿಕೊಂಡು ಹೋಗಲು ನೀವು ಮಾಡಬಾರದ ತಪ್ಪುಗಳು ಇವು..

ಬೇರೆಯವರೊಂದಿಗೆ  ಹೋಲಿಕೆ ಮಾಡುವುದು
ನಮಗೆ ನಮ್ಮ ಜೀವನದಲ್ಲಿ ಎಷ್ಟೇ ಒಳ್ಳೆಯ ಸಮಾಚಾರಗಳು ಇರಲಿ, ಬೇರೆಯವರ ಜೀವನದ ಕುರಿತಾಗಿ ಆಸಕ್ತಿ ಹೆಚ್ಚು. ಇದರಿಂದಾಗಿ ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಬೇರೆಯವರ  ಪ್ರೇಮಿಗಳಿಗೆ ಹೋಲಿಕೆ (Compare) ಮಾಡಲರಂಭಿಸುತ್ತೇವೆ. ಅವರಂತೆ ನೀವು ಇಲ್ಲ ಎಂದು ಪದೇ ಪದೇ ಹೇಳುವುದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾರಿಗೇ ಆದರೂ ತಮ್ಮನ್ನು ಬೇರೆಯವರೊಂದಿಗೆ ಹೋಲಿಸುವುದು ಇಷ್ಟವಾಗುವುದಿಲ್ಲ. ಅದರಲ್ಲೂ ತನ್ನನ್ನು ಇಷ್ಟ ಪಟ್ಟ ಮೇಲೆ ತಾನು ಇದ್ದಂತೆಯೇ ಒಪ್ಪಿಕೊಳ್ಳದೆ, ಬೇರೆಯವರೊಂದಿಗೆ ಹೋಲಿಕೆ ಮಾಡುತ್ತಾರೆಂದರೆ ನೋವುಂಟು ಮಾಡುತ್ತದೆ. ಪ್ರತಿಯೊಬ್ಬರ ವ್ಯಕ್ತಿತ್ವವೂ ವಿಶಿಷ್ಠ. ಅದನ್ನು ಗೌರವಿಸಲು ಮೊದಲು ಕಲಿತುಕೊಳ್ಳಬೇಕು.

Parenting Tips: ಮಕ್ಕಳಿಗೆ ಚಿಕ್ಕಂದಿನಲ್ಲೇ ಕಲಿಸಿಕೊಡಬೇಕಾದ ವಿಚಾರಗಳಿವು

Tap to resize

Latest Videos

ಅನ್ಯೋನ್ಯತೆ ಕೊರತೆ
ಸಾಮಾನ್ಯವಾಗಿ ಜನರು ಹೆಚ್ಚು ಸಮಯದ ತನಕ ತಮ್ಮ ಪ್ರೀತಿಪಾತ್ರರೊಂದಿಗೆ ಕಾಲ ಕಳೆಯಲು ಬಳಸುತ್ತಾರೆ.  ಅದರಲ್ಲಿಯೂ ಪ್ರೇಮಿಗಳು ಸದಾ ಜೊತೆಯಲ್ಲಿ ಸಮಯ ಕಳೆಯಲು ಇಷ್ಟ ಪಡುತ್ತಾರೆ.  ರಾತ್ರಿಯ ಸಮಯದಲ್ಲಿ ದೀರ್ಘ ಸಂಭಾಷಣೆಯನ್ನು (Conversation) ಬಯಸುತ್ತಾರೆ.  ಆದರೆ ಇವರಿಬ್ಬರ ನಡುವೆ ಅನ್ಯೋನ್ಯತೆ ಕಡಿಮೆ  ಆದರೆ, ಒಬ್ಬರು ಇನ್ನೊಬ್ಬರ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡರೆ ಆಗ ಸಂಬಂಧ ಉಳಿಯುವುದಿಲ್ಲ. ನೀವು ಅವರ ಬಗ್ಗೆ ಗಮನ ಕೊಡುವುದು ಕಡಿಮೆ ಮಾಡಿದರೆ ಅವರು ನಿಮ್ಮಿಂದ ದೂರಾಗುವ ಸಾಧ್ಯತೆ ಇರುತ್ತದೆ. ಒಬ್ಬರು ಇನ್ನೊಬ್ಬರಿಗೆ ಹೆಚ್ಚು ಸಮಯ (Time) ಕೊಟ್ಟುಕೊಳ್ಳಿ.

ಪ್ರೇಮಿಯ ಬಗ್ಗೆ ಗೆಳೆಯರಲ್ಲಿ (Friends) ದೂರು ಹೇಳುತ್ತಿರುವುದು
ಇದು ಇಬ್ಬರ ನಡುವಿನ ಸಂಬಂಧ ಹಾಳಾಗುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ. ನಿಮಗೆ ಯಾರ ಬಗ್ಗೆ ಮನಸ್ತಾಪ ಇದೆಯೋ ಅದನ್ನು ಅವರೊಂದಿಗೆ ಕುಳಿತು ಮಾತನಾಡಿ ಬಗೆಹರಿಸಿ ಕೊಳ್ಳುವುದರಿಂದ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತದೆ. ಆದರೆ  ಹೀಗೆ ಮಾಡುವ ಬದಲಾಗಿ ಒಬ್ಬರ ಮೇಲಿನ ಕೋಪವನ್ನು ಇನ್ನೊಬ್ಬರ ಮೇಲೆ ತೋರಿಸುವುದು ಹಾಗೂ ನಿಮ್ಮ ಪ್ರೇಮಿಯ ಬಗ್ಗೆ ನಿಮ್ಮ ಸ್ನೇಹಿತರಲ್ಲಿ ಯಾವಾಗಲೂ ದೂರು (Compliant) ಹೇಳುತ್ತಿರುವುದರಿಂದ ಸ್ನೇಹಿತರಿಗೂ ಕೂಡ ಕಿರಿಕಿರಿ ಉಂಟಾಗಬಹುದು. ಜೊತೆಗೆ ನಿಮ್ಮ ಪ್ರೇಮಿಗೆ ಇದರಿಂದ ನೋವಾಗುತ್ತದೆ. ಇದು ನೀವು ಅವರಿಗೆ ಮಾಡುವ ಅವಮಾನವಾಗುತ್ತದೆ. 

Friendship ಉಳಿಸಿಕೊಳ್ಬೇಕಂದ್ರೆ ನೀವೇನ್ ಮಾಡ್ಬೇಕು?

ಬಿಟ್ಟು ಬಿಡುತ್ತೇನೆ ಎಂದು ಪದೇ ಪದೆ ಬೆದರಿಸುವುದು
ಬಹಳಷ್ಟು ಸಂಬಂಧದಲ್ಲಿ ಇಂತಹ ಬೆದರಿಕೆಗಳಿಂದ  ಒಬ್ಬರ ಮುಖ ಇನ್ನೊಬ್ಬರು ನೋಡಲಾಗದಷ್ಟು ದೂರಾಗಿ ಬಿಡುತ್ತಾರೆ. ಜಗಳ ಆಡುವುದು ಬಹಳ ಸಾಮಾನ್ಯ ವಿಷಯ. ಆದರೆ ಅಷ್ಟಕ್ಕೇ ಸಂಬಂಧದಿಂದಲೇ ದೂರ ಉಳಿದು ಬಿಡುತ್ತೇನೆ ಎಂದು ಹೇಳುವುದರಿಂದ ಎದುರಿಗೆ ಇರುವ ವ್ಯಕ್ತಿಗೆ ಎಷ್ಟು ಬೇಸರ ಆಗಬಹುದು ಎಂದು ಯೋಚಿಸುವುದೇ ಇಲ್ಲ. ಪದೇ ಪದೇ ದೂರಾಗುವ ಮಾತನ್ನು ಹೇಳುತ್ತಿದ್ದರೆ ನಿಮಗೆ ಆ ವ್ಯಕ್ತಿಯಿಂದ ಮುಕ್ತಿ ಬೇಕಿರಬಹುದು ಎಂದು ಅವರು ಯೋಚಿಸುತ್ತಾರೆ. ಇಂತಹ ಮಾತುಗಳನ್ನು ಆಡಿ ನೀವೆೇ ನಿಮ್ಮ ಸಂಗಾತಿಗೆ ನಿಮ್ಮಿಂದ ದೂರಾಗುವ ಆಲೋಚನೆಯನ್ನು ಬಿತ್ತಬೇಡಿ.

click me!