ಕುಟುಂಬ ಎನ್ನುವ ವ್ಯವಸ್ಥೆ ಮಹಿಳೆಯರಿಗೆ ಮಾತ್ರ ಸಂಬಂಧಿಸಿರುವುದಲ್ಲ. ಪುರುಷರ ಪಾತ್ರವೂ ಇಲ್ಲಿ ಪ್ರಮುಖವಾಗಿರುತ್ತದೆ. ಪತ್ನಿ, ಮನೆ, ಮಕ್ಕಳ ಬಗ್ಗೆ ಹೊಣೆಗಾರಿಕೆಯಿಂದ ವರ್ತಿಸಬೇಕಾಗುತ್ತದೆ. ವೈವಾಹಿಕ ಬದುಕು ಯಶಸ್ವಿಯಾಗಲು ಪುರುಷರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
“ಮದುವೆ ಸಮಯದಲ್ಲಿರೋ ಖುಷಿ ಎಷ್ಟು ದಿನ ಎನ್ನುವುದು ಆತಂಕ ಅನಿಸುತ್ತದೆ. ಮದುವೇ ಅನ್ನೋದೇ ಅನಿಶ್ಚಿತತೆ. ಎಷ್ಟು ದಿನ ಬಾಳುತ್ತೋ ಗೊತ್ತಿಲ್ಲ. ಎಲ್ಲದಕ್ಕೂ ಸಿದ್ಧವಾಗಿರಬೇಕು’ ಎನ್ನುವುದು ಆಧುನಿಕ ಯುವತಿಯರ ಮನೋಭಾವನೆ. ಕಂಗಳಲ್ಲಿ ನೂತನ ಬದುಕಿನ ಕನಸುಗಳನ್ನು ಹೊತ್ತು ಮದುವೆಯೇನೋ ನಡೆದುಹೋಗುತ್ತದೆ. ಆ ಬಳಿಕದ ಸಂಸಾರ ಸುಲಭದ್ದಲ್ಲ. ಮದುವೆಯ ಯಶಸ್ಸು ಪತಿ-ಪತ್ನಿ ಇಬ್ಬರ ಮೇಲೂ ನಿಂತಿದೆ. ಪತ್ನಿಯೊಬ್ಬಳೇ ಸಂಸಾರವನ್ನು ಮುನ್ನಡೆಸಲು, ಯಶಸ್ಸಿನತ್ತ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಪತಿಯೊಬ್ಬನಿಂದಲೂ ಅದು ಸಾಧ್ಯವಿಲ್ಲದ ಮಾತು. ಇಂದಿನ ಆಧುನಿಕ ಯುಗದಲ್ಲಂತೂ ಪುರುಷನಿಗೂ ಸಾಕಷ್ಟು ಜವಾಬ್ದಾರಿ ನೀಡಿದೆ. ಹಿಂದಿನ ಕಾಲದಲ್ಲಾದರೆ ಪುರುಷನಿಗೆ ದುಡಿದು ಹಾಕುವುದಷ್ಟೇ ಕೆಲಸವಾಗಿತ್ತು. ಮನೆ, ಮಕ್ಕಳು ಎಲ್ಲರದ ಹೊಣೆ ಹೆಣ್ಣಿನದ್ದಾಗಿತ್ತು. ಇಂದು ಪರಿಸ್ಥಿತಿ ಹಾಗಿಲ್ಲ. ಹೆಣ್ಣುಮಕ್ಕಳು ಸಹ ಆರ್ಥಿಕ ಜವಾಬ್ದಾರಿ ಹೊರತೊಡಗಿದ್ದಾರೆ. ಒಂದೊಮ್ಮೆ ಆರ್ಥಿಕ ಜವಾಬ್ದಾರಿ ಹೊರದೇ ಇದ್ದರೂ ಮನೆಯ ಕೆಲಸಕಾರ್ಯಗಳಲ್ಲಿ, ಮಕ್ಕಳ ಹೊಣೆಗಾರಿಕೆ ನಿಭಾಯಿಸುವಲ್ಲಿ ಪತಿಯ ಪಾತ್ರವೂ ಮುಖ್ಯ ಎನ್ನುವುದು ಎಲ್ಲರ ನಿಲುವು. ಹೀಗಾಗಿ, ಮದುವೆಯ ಯಶಸ್ಸಿನಲ್ಲಿ ಪತಿಯ ಪಾತ್ರ ಶೇ.50ರಷ್ಟು ಇರುತ್ತದೆ ಎನ್ನಬಹುದು. ಅದಕ್ಕಾಗಿ ಪುರುಷರು ಕೆಲವು ಸಂಗತಿಗಳನ್ನು ಅರಿತುಕೊಳ್ಳಬೇಕು.
• ಪುರುಷ (Male) ಲೀಡ್ (Lead) ಮಾಡಬೇಕು
ಪತಿ-ಪತ್ನಿ (Husband-Wife) ಇಬ್ಬರೂ ಸಮಾನರೇ ಆದರೂ ಸಂಸಾರದಲ್ಲಿ (Family) ಪುರುಷರ ಹೊಣೆಗಾರಿಕೆ (Responsibility) ಭಿನ್ನವಾಗಿರುತ್ತದೆ. ಬಹಳಷ್ಟು ಸನ್ನಿವೇಶಗಳಲ್ಲಿ ಅವರು ಮುಂದಾಳುತ್ವ ವಹಿಸಬೇಕಾಗುತ್ತದೆ. ಆಗ ಮನೆಯಾಕೆ, ಕುಟುಂಬದ ಬೆಂಬಲದೊಂದಿಗೆ ಮುನ್ನಡಿ ಇಡಬೇಕಾಗುತ್ತದೆ. ಅಂತಹ ಯಾವುದೇ ಕೆಲಸದಲ್ಲೂ ಪತ್ನಿಯ ಅಭಿಪ್ರಾಯ (Opinion) ಪಡೆಯಲು ಮರೆಯಬಾರದು.
ವಯಸ್ಸಾಗ್ತಾ ಬಂತು ಇನ್ಯಾವಾಗ ಮದ್ವೆ ಆಗೋದು… ಮದುವೆ ಒತ್ತಡದಿಂದ ಹೀಗೆ ಹೊರ ಬನ್ನಿ
• ತಾಳ್ಮೆ (Patience) ಇರಲಿ
ಪತ್ನಿಯೊಂದಿಗೆ ತಾಳ್ಮೆಯಿಂದ ವರ್ತನೆ ಮಾಡುವುದು ಪ್ರತಿ ಪುರುಷರ (Man) ಕರ್ತವ್ಯ. ಸಂಸಾರದಲ್ಲಿ ತಾಳ್ಮೆ ಕಳೆದುಕೊಳ್ಳುವ ಸನ್ನಿವೇಶಗಳು ಸಾಕಷ್ಟು ಬಾರಿ ನಿರ್ಮಾಣವಾಗುತ್ತವೆ. ಮಹಿಳೆಯರು ಎಷ್ಟೋ ಬಾರಿ ಪತಿಯ ನಿರೀಕ್ಷೆಗೆ (Expectation) ತಕ್ಕಂತೆ ವರ್ತನೆ ಮಾಡದಿರಬಹುದು. ಮಕ್ಕಳು ಸಹ ಅನಿರೀಕ್ಷಿತ ಆಘಾತ (Shock) ತರಬಹುದು. ಅಂತಹ ಸಮಯದಲ್ಲಿ ಸಹನೆಯೇ ಪುರುಷರನ್ನು ರಕ್ಷಿಸುತ್ತದೆ.
• ಹೆಂಡತಿಯ ಅಗತ್ಯ (Need) ಅರಿಯಿರಿ
ಮಹಿಳೆಯರು ಪತಿಯೊಂದಿಗೂ ತಮ್ಮ ಅಗತ್ಯಗಳನ್ನು ಹೇಳಿಕೊಳ್ಳದೆ ಮರೆಮಾಚಬಹುದು. ಪರಸ್ಪರ ಮುಕ್ತ ಮಾತುಕತೆ (Open Communication), ಆಶಯ, ಆಸಕ್ತಿಗಳನ್ನು ಹಂಚಿಕೊಳ್ಳುವುದು ಸಂಬಂಧದಲ್ಲಿ ಅಗತ್ಯ. ಕೆಲವು ಪುರುಷರು ಪತ್ನಿಯ ಆಸಕ್ತಿಗಳ (Interest) ಕಡೆಗೆ ಗಮನವನ್ನೇ ನೀಡುವುದಿಲ್ಲ. ಇದು ತಪ್ಪು. ಅವಳ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಯತ್ನಿಸಿ.
• ಸ್ವತಂತ್ರ (Independence) ಹಾಗೂ ಸಾಂಗತ್ಯ (Companionship)
“ತಾನು ಹಂಗಿನಲ್ಲಿ ಇಲ್ಲ’ ಎನ್ನುವ ಭಾವನೆ ಮೂಡಿಸುವುದು ಎಷ್ಟು ಅಗತ್ಯವೋ ಅಷ್ಟೇ ಪ್ರಮುಖವಾದುದು ಆಕೆಯಲ್ಲಿ ಸಾಂಗತ್ಯದ ಭಾವನೆ ಮೂಡಿಸುವುದು. ಬೇಕಾಬಿಟ್ಟಿ ಮಾತುಗಳನ್ನಾಡದೆ ಸೂಕ್ಷ್ಮವಾದ ಮನೋಭಾವದೊಂದಿಗೆ ಇವುಗಳನ್ನು ಸಾಧಿಸಬೇಕು. ಸ್ವತಂತ್ರ್ಯವಾಗಿರುವ ಭಾವನೆ ಮಾನಸಿಕ ಆರೋಗ್ಯಕ್ಕೆ (Mental Health) ಅಗತ್ಯ. ಹಾಗೆಯೇ, ಪರಸ್ಪರ ಸಾಂಗತ್ಯದ ಭಾವನೆಯೂ ಸಂಬಂಧದ ಮೂಲ.
ಮಡದಿಗೆ ಪೀರಿಯೆಡ್ಸಾ ಪ್ರೀತಿಯ ಮಳೆಗರೆಯಿರಿ ಸಾಕು, ಅವಳು ಫುಲ್ ಖುಷ್
• ಕಚೇರಿ-ಮನೆ (Office-Home)
ಬಹಳಷ್ಟು ಪುರುಷರು ಕಚೇರಿಯ ಒತ್ತಡವನ್ನು (Stress) ಮನೆಗೆ ತಂದು ಪತ್ನಿಯ ಮೇಲೆ ರೇಗುತ್ತಾರೆ. ಅಲ್ಲಿನ ಕಹಿಯನ್ನು ಮನೆಗೆ ತರುತ್ತಾರೆ. ಇದು ಎಂದಿಗೂ ಸಲ್ಲದು. ಬದಲಿಗೆ, ಕಚೇರಿಯಲ್ಲಿ ಆಗುತ್ತಿರುವ ಸಮಸ್ಯೆ, ಒತ್ತಡ, ಚಿಂತೆಗಳ ಬಗ್ಗೆ ಆಕೆಯೊಂದಿಗೆ ನೇರವಾಗಿ ಮಾತುಕತೆ ನಡೆಸಬಹುದು. ಅದನ್ನು ಮರೆತು ಆಕೆಗೆ ಸಮಯ ನೀಡಬೇಕು. ಮಕ್ಕಳು ಮನೆಯಲ್ಲಿರುವಾಗ ಇದು ಸಾಧ್ಯವಾಗದಿರಬಹುದು. ಆದರೂ ಸಂಬಂಧದ ಹಿತಕ್ಕೆ ಅಗತ್ಯ.
• ರೊಮ್ಯಾನ್ಸ್ (Romance) ಇರಲಿ
ದೈನಂದಿನ ಒತ್ತಡ ಕೆಲಸಕಾರ್ಯಗಳಲ್ಲಿ ರೋಮ್ಯಾನ್ಸ್ ಎಲ್ಲೋ ಕಳೆದುಹೋಗುವುದುಂಟು. ಆದರೆ, ದಾಂಪತ್ಯದ ಬದುಕು ಯಶಸ್ವಿಯಾಗಲು ರೋಮ್ಯಾನ್ಸ್, ಲೈಂಗಿಕತೆ (Sex) ಅಗತ್ಯ. ಪರಸ್ಪರರ ನಡುವೆ ಅನುಬಂಧ (Relation) ಹೆಚ್ಚಲು ಇವು ಕಾರಣವಾಗುತ್ತದೆ. ಪತ್ನಿಯ ಬಗ್ಗೆ ಗೌರವವನ್ನೂ (Respect) ಹೊಂದಿರಬೇಕಾದುದು ಅಗತ್ಯ.