ಲೈಂಗಿಕ ಜೀವನದಲ್ಲಿ ಸಂತೋಷವಿದ್ರೆ ಲೈಫ್ ಚೆನ್ನಾಗಿರುತ್ತೆ. ಅಲ್ಲಿನ ಸಮಸ್ಯೆ ಜೀವನದಲ್ಲಿ ನಿರಾಸೆ, ಆತ್ಮವಿಶ್ವಾಸದ ಕೊರತೆಗೆ ಕಾರಣವಾಗುತ್ತೆ. ಪುರುಷರನ್ನು ಅತಿಯಾಗಿ ಕಾಡುವ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಮನೆಯಲ್ಲೇ ಮದ್ದಿದೆ.
ಯುವಕರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಹೆಚ್ಚುತ್ತಿದೆ ಎಂದು ಅಮೆರಿಕಾ ಕ್ಯಾನ್ಸರ್ ಸೊಸೈಟಿ ಹೇಳಿದೆ. ಪ್ರತಿ 8 ಪುರುಷರಲ್ಲಿ ಒಬ್ಬರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಒಳಗಾಗ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವಾಗಿರೋದು ಕೆಟ್ಟ ಜೀವನಶೈಲಿ ಹಾಗೂ ಕೆಟ್ಟ ಆಹಾರ ಪದ್ಧತಿ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಕೇವಲ ಲೈಂಗಿಕ ಜೀವನದ ಮೇಲೆ ಮಾತ್ರ ಪರಿಣಾಮ ಬೀರೋದಿಲ್ಲ. ಇದು ವ್ಯಕ್ತಿಯ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟು ಮಾಡುತ್ತದೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ ಹೊರಬರಲು ಮಾರುಕಟ್ಟೆಯಲ್ಲಿ ಕೆಲ ಔಷಧಿ (Medicine) ಗಳು ಲಭ್ಯವಿದೆ. ಆದ್ರೆ ಈ ಔಷಧಿಗಳ ಅತಿಯಾದ ಸೇವನೆಯಿಂದ ಅಡ್ಡಪರಿಣಾಮಗಳಾಗುತ್ತವೆ. ಕೆಲವರು ವಯಾಗ್ರ (Viagra) ದ ಮೊರೆ ಹೋಗ್ತಾರೆ.
ವಯಾಗ್ರ ತೆಗೆದುಕೊಳ್ಳುವ ವಿಷ್ಯವನ್ನು ಮುಚ್ಚಿಡುವವರೂ ಇದ್ದಾರೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ ಸಂಗಾತಿ ಬಳಲುತ್ತಿದ್ದರೆ ಅವರ ಬೆಂಬಲಕ್ಕೆ ನೀಡುವುದು ಮಹಿಳೆಯ ಕರ್ತವ್ಯವಾಗುತ್ತದೆ. ಅವರಿಗೆ ಆತ್ಮಸ್ಥೈರ್ಯ ನೀಡುವ ಜೊತೆಗೆ ಅವರ ಆರೋಗ್ಯ (Health) ಸ್ಥಿತಿ ಸುಧಾರಿಸಲು ನೆರವಾಗಬೇಕು.
The Karezza Method: ಸುಖಕರ ಲೈಂಗಿಕ ಜೀವನಕ್ಕೆ ಈ ತಂತ್ರ ಬಳಸಿ
ಅಡುಗೆ ಮನೆಯಲ್ಲಿಯೇ ವಯಾಗ್ರ ಲಭ್ಯವಿದೆ. ನಾವು ಸೇವನೆ ಮಾಡುವ ಕೆಲ ಆಹಾರದ ಮೂಲಕ ವಯಾಗ್ರ ನಮ್ಮ ದೇಹ ಸೇರುವಂತೆ ಮಾಡಬಹುದು. ಈ ಮೂಲಕ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ ಹೊರಗೆ ಬರಬಹುದು. ನಿಮ್ಮ ಸಂಗಾತಿಯೂ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದರೆ ಯಾವ ಆಹಾರ ನೀಡ್ಬೇಕು ಎಂಬುದನ್ನು ನಾವು ಹೇಳ್ತೇವೆ.
ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಮನೆ ಮದ್ದು :
ಆವಕಾಡೊ : ಆವಕಾಡೊ ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ. ಪುರುಷ ಬಂಜೆತನಕ್ಕೆ ಚಿಕಿತ್ಸೆ ನೀಡಲು ಇದು ಪರಿಣಾಮಕಾರಿಯಾಗಿದೆ. ಆವಕಾಡೊದಲ್ಲಿ ಸತು ಕಂಡುಬರುತ್ತದೆ. ಸತು ವೀರ್ಯದ ಗುಣಮಟ್ಟವನ್ನು ಹೆಚ್ಚಿಸಿ, ಟೆಸ್ಟೋಸ್ಟೆರಾನ್ ಉತ್ಪಾದನೆಗೆ ನೆರವಾಗುತ್ತದೆ.
ಸೆಕ್ಸ್ ಅಥವಾ ಕಿಸ್‌ಗೂ ಮುನ್ನ ಚೂಯಿಂಗ್ ಗಮ್ ಸೇವಿಸೋದು ತಪ್ಪಾ?
ಡಾರ್ಕ್ ಚಾಕೊಲೇಟ್ : ಡಾರ್ಕ್ ಚಾಕೊಲೇಟ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ನಿಮಿರುವಿಕೆ ಅಪಸಾಮಾನ್ಯ ಕ್ರಿಯೆ ಹೋಗಲಾಡಿಸುವ ಕೆಲಸವನ್ನು ಇದು ಮಾಡುತ್ತದೆ. ಡಾರ್ಕ್ ಚಾಕೊಲೇಟ್ ನಿಮ್ಮ ಒತ್ತಡ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಒತ್ತಡದಿಂದಾಗಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಕಾಡುತ್ತದೆ. ಡಾರ್ಕ್ ಚಾಕೊಲೇಟ್ ನಲ್ಲಿ ಸಿರೊಟೋನಿನ್ ಮತ್ತು ಫೆನೆಥೈಲಮೈನ್ ಇದ್ದು, ಇದು ನಿಮ್ಮ ಸೆಕ್ಸ್ ಲೈಫ್ ಸುಧಾರಿಸುತ್ತದೆ.
ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಬಾಳೆ ಹಣ್ಣಿನಲ್ಲಿ ಬಿ ವಿಟಮಿನ್ ಇದ್ದು, ಶಕ್ತಿಯ ಹೆಚ್ಚಳಕ್ಕೆ ಇದು ಕಾರಣವಾಗುತ್ತದೆ. ಬಾಳೆ ಹಣ್ಣು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವ ಕೆಲಸ ಕೂಡ ಮಾಡುತ್ತದೆ.
ದಾಳಿಂಬೆ ಹಣ್ಣು : ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಇದು ಪ್ರತಿಯೊಬ್ಬ ವ್ಯಕ್ತಿಗೆ ಒಳ್ಳೆಯದು. ಇದು ದೇಹಕ್ಕೆ ಶಕ್ತಿ ನೀಡುವ ಕೆಲಸವನ್ನು ಮಾಡುತ್ತದೆ. ನೈಸರ್ಗಿಕ ವಯಾಗ್ರದಂತೆ ಇದು ಕೆಲಸ ಮಾಡುತ್ತದೆ.
ಪಾಲಕ : ಪಾಲಕ ಕೂಡ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಒಳ್ಳೆಯ ಮದ್ದಾಗಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡೋದ್ರಿಂದ ಲಾಭ ಹೆಚ್ಚು. ಪಾಲಕದಲ್ಲಿ ಫೋಲೇಟ್ ಸಮೃದ್ಧವಾಗಿದೆ. 1 ಕಪ್ ಬೇಯಿಸಿದ ಪಾಲಕ್ ನಮ್ಮ ದೇಹಕ್ಕೆ ನಿಯಮಿತವಾಗಿ ಫೋಲೇಟ್‌ನ ಶೇಕಡಾ 77ರಷ್ಟನ್ನು ಒದಗಿಸುತ್ತದೆ. ಪಾಲಕ್ ನಲ್ಲಿ ಸಾಕಷ್ಟು ಪ್ರಮಾಣದ ಮೆಗ್ನೀಸಿಯಮ್ ಕೂಡ ಲಭ್ಯವಿದೆ. ಇದು ರಕ್ತದ ಹರಿವನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸೇಬು ಹಣ್ಣು : ಸೇಬು ಹಣ್ಣು ಲೈಂಗಿಕ ಆರೋಗ್ಯಕ್ಕೂ ಒಳ್ಳೆಯದು. ಆಪಲ್ ಸಿಪ್ಪೆಗಳು ನಿರ್ದಿಷ್ಟವಾಗಿ ಉರ್ಸೋಲಿಕ್ ಆಮ್ಲ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿರುತ್ತವೆ. ಉರ್ಸೋಲಿಕ್ ಆಮ್ಲವು ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
ಕುಂಬಳಕಾಯಿ ಬೀಜ : ಕುಂಬಳಕಾಯಿ ಬೀಜವನ್ನು ಪುರುಷರಿಗೆ ಆಹಾರದಲ್ಲಿ ನೀಡಬೇಕು. ಇದರಲ್ಲಿ ಸತು ಮತ್ತು ಒಮೆಗಾ – 3 ಇದ್ದು, ಇದು ಲೈಂಗಿಕ ಹಾರ್ಮೋನ್ ಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ.