ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಆಗಿದೆ ಅನ್ನೋದು ಕಂಡು ಹಿಡಿಯೋದು ಹೇಗೆ?

By Suvarna News  |  First Published May 22, 2024, 10:37 PM IST

ಮಹಿಳೆಯರ ಹಾವಭಾವದಲ್ಲಿ ಕೊಂಚ ವ್ಯತ್ಯಾಸ ಕಾಣಿಸುತ್ತದೆ. ಜಾಣ ಪುರುಷರು ಮಹಿಳೆಯರ ಕಣ್ಣುಗಳಿಂದಲೇ  ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದ ಮಾತಿದೆ.


ಲೈಂಗಿಕ ಆಸೆ ಅನ್ನೋದು ಎಲ್ಲಾ ಜೀವಿಗಳಲ್ಲಿ ಇರುತ್ತದೆ. ಪುರುಷನಲ್ಲಿ ಲೈಂಗಿಕಾಸಕ್ತಿ ಉಂಟಾದರೆ ಎದುರಿನ ಸಂಗಾತಿಗೆ ಬಹುಬೇಗ ಗೊತ್ತಾಗುತ್ತದೆ. ಲೈಂಗಿಸಾಕ್ತಿ ಆದಾಗ ಪುರುಷನ ದೇಹದಲ್ಲಿ ಬದಲಾವಣೆ ಆಗುತ್ತದೆ. ಆದ್ರೆ ಮಹಿಳೆಯರಲ್ಲಿ ಈ ತರಹದ ಆಸೆ ಅಥವಾ ಆಸಕ್ತಿ ಉಂಟಾಗಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು ಎಂಬುದರ ಬಗ್ಗೆ ಲೈಂಗಿಕ ತಜ್ಞರು ಮಾಹಿತಿ ನೀಡಿದ್ದಾರೆ. 

ಮಹಿಳೆಯರಲ್ಲಾಗುವ ಆ ಬದಲಾವಣೆಗಳು ಏನು?

Tap to resize

Latest Videos

ಮಹಿಳೆ ಮೂಡ್ ನಲ್ಲಿದ್ದಾಗ ಅಥವಾ  ದೈಹಿಕ ಸಂಪರ್ಕ ಬೇಕೆನಿಸಿದಾಗ ಅವರ ಕಣ್ಣುಗಳಲ್ಲಿಯೇ ಅದು ಕಾಣುತ್ತೆ ಎಂದು ಹೇಳುತ್ತಾರೆ. ಈ ವಿಷಯವನ್ನು ಮೊದಲಿಗೆ ಕಣ್ಣುಗಳಲ್ಲಿಯೇ ಹೇಳಲು ಪ್ರಯತ್ನಿಸುತ್ತಾರಂತೆ. ಇದರ ಜೊತೆಗೆ ಮಹಿಳೆಯರ ಹಾವಭಾವದಲ್ಲಿ ಕೊಂಚ ವ್ಯತ್ಯಾಸ ಕಾಣಿಸುತ್ತದೆ. ಜಾಣ ಪುರುಷರು ಮಹಿಳೆಯರ ಕಣ್ಣುಗಳಿಂದಲೇ  ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದ ಮಾತಿದೆ.

ಲೈಂಗಿಕಾಸಕ್ತಿ ಉಂಟಾದ ವೇಳೆ ಮಹಿಳೆಯ ಸ್ತನಗಳು ಬಿಗಿಯಾಗುತ್ತವೆ ಮತ್ತು ನಿಪ್ಪಲ್ ಗಾತ್ರ ಸಾಮಾನ್ಯಕ್ಕಿಂತ ಕೊಂಚ ದೊಡ್ಡದಾಗಿರುತ್ತದೆ. ಖಾಸಗಿ ಭಾಗದ ಗಾತ್ರವು ಹಿಗ್ಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ರೊಮ್ಯಾಂಟಿಕ್ ಮೂಡ್‌ಗೆ ಬೆಡ್‌ರೂಮ್ ಹೀಗಿರಲಿ

ರೊಮ್ಯಾಂಟಿಕ್ ಮೂಡ್‌ಗೆ ಬೆಡ್‌ರೂಮ್ ಸಹ ಕಾರಣವಾಗುತ್ತದೆ. ಬೆಡ್‌ರೂಮ್‌ನಲ್ಲಿ ಕೆಲವು ವಸ್ತುಗಳನ್ನು ಇರಿಸಿದರೆ ರೊಮ್ಯಾಂಟಿಕ್ ಮೂಡ್ ಉಂಟಾಗುತ್ತೆ ಎಂದು ಹೇಳುತ್ತಾರೆ. ಬೆಡ್‌ರೂಮ್‌ನಲ್ಲಿ ಸ್ವಚ್ಚ ಹಾಸಿಗೆಗಳನ್ನು ಬಳಸಬೇಕು. ಇದು ಸಂಗಾತಿಯನ್ನು ಒಂದೆಡೆ ಸೇರಿಸಲು ಬಾಹ್ಯವಾಗಿ ಕೆಲಸ ಮಾಡುತ್ತದೆ. ಬೆಡ್‌ರೂಮ್ ಸ್ವಚ್ಛವಾಗಿರಬೇಕು. ಧೂಳು, ಗಲೀಜಿನಿಂದ ಕೂಡಿರಬಾರದು.

ಈ  ಬಾರಿ ಶನಿ ಜಯಂತಿಯಂದು ಐದು ರಾಶಿಯವರು ಸಾಡೇಸಾತಿ ನಿವಾರಣೆಗೆ ಈ ಕೆಲಸಗಳನ್ನ ಮಾಡಿ!

ಬೆಡ್‌ರೂಮ್‌ನಲ್ಲಿ ಸ್ವಚ್ಛವಾದ ಗಾಳಿ ಬರುತ್ತಿರಬೇಕು. ಸಾಧ್ಯವಾದರೆ ಕೋಣೆಯಲ್ಲಿ ತಾಜಾ ಹೂಗಳನ್ನು ಇರಿಸಿಕೊಳ್ಳಿ ಅಥವಾ ರೂಮ್‌ ಪ್ರೆಶರ್ ಬಳಸಬಹುದು. ವಾಸ್ತು ಪ್ರಕಾರ ಬೆಡ್‌ರೂಮ್‌ನಲ್ಲಿ ಕನ್ನಡಿ ಇರಿಸಬಾರದು. ಒಂದು ವೇಳೆ ಕನ್ನಡಿ ಇರಿಸಿದ್ರೂ ಅದರಲ್ಲಿ ಬೆಡ್ ಬಿಂಬ ಬೀಳಬಾರದಂತೆ ಇರಿಸಬೇಕು ಎಂದು ಹೇಳಲಾಗುತ್ತದೆ. ನಿಮ್ಮ ಮೂಡ್ ಹೆಚ್ಚಸುವ ಅಥವಾ ಇಷ್ಟವಾದ ಬಣ್ಣದ ಬೆಳಕಿನ ಲೈಟ್‌ಗಳನ್ನು ಅಳವಡಿಸಿಕೊಳ್ಳಬಹುದು. ನೀವು ಸಂಗೀತ ಪ್ರಿಯರಾಗಿದ್ದರೆ ಸಣ್ಣದಾಗಿ ಮ್ಯೂಸಿಕ್ ಹಾಕಿಕೊಳ್ಳಬಹುದು. 

ಗಂಡು ಮಕ್ಕಳ ತಂದೆಯಾಗಿರೋರು ಈ ತಪ್ಪು ಮಾಡಬಾರದು ಅಂತಾರೆ ಚಾಣಕ್ಯ

ಯುವ ಪೀಳಿಗೆಯಲ್ಲಿ ಹೆಚ್ಚಾಗ್ತಿದೆ ಲೈಂಗಿಕ ಸಮಸ್ಯೆಗಳು

ಇಂದಿನ ಯುವ ಪೀಳಿಗೆ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಆಧುನಿಕ ಜೀವನಶೈಲಿ, ಆಹಾರ ಪದ್ಧತಿ, ಒತ್ತಡದ  ಬದುಕು ಸೇರಿದಂತೆ ಹಲವು ಕಾರಣಗಳಿಂದ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಹಿಳೆಯರು ಇಂತಹ ವಿಷಯದಲ್ಲಿ ತುಂಬಾನೇ ಸ್ಟ್ರಾಂಗ್ ಆಗಿರುತ್ತಾರೆ ಎಂಬ ಮಾತಿದೆ. ಮೂಡ್ ಅಥವಾ ರೊಮ್ಯಾನ್ಸ್ ಆಸೆ ಉಂಟಾದಾಗ ಮಹಿಳೆಯರ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ. ಆದರೆ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ತಜ್ಞರು  ಸಲಹೆ ನೀಡುತ್ತಾರೆ. 

click me!