ಅಷ್ಟಕ್ಕೂ ಹೆಣ್ಣಿಗೇಕೆ ಮದುವೆಯಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತೆ!?

Published : Jul 07, 2022, 03:47 PM IST
ಅಷ್ಟಕ್ಕೂ ಹೆಣ್ಣಿಗೇಕೆ ಮದುವೆಯಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತೆ!?

ಸಾರಾಂಶ

ವಿವಾಹ ಇಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ.  ಒಂದು ವಯಸ್ಸಿಗೆ ಬಂದ ಮೇಲೆ ಮದುವೆಯಾಗಿಲ್ಲವೆಂದ್ರೆ ಮಹಿಳೆಯರನ್ನು ನೋಡುವ ದೃಷ್ಟಿಯೇ ಬೇರೆ. ಆದ್ರೆ ಈಗ ಕಾಲ ಬದಲಾಗಿದೆ. ಮದುವೆ ಬಗ್ಗೆ ಮಹಿಳೆಯರ ದೃಷ್ಟಿಕೋನ ಬದಲಾಗಿದೆ.    

ಮದುವೆ (Wedding) ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಜೀವನ (Life) ದ ಮಹತ್ವದ ಘಟ್ಟದಲ್ಲಿ ಇದೂ ಒಂದು. ಜೀವನದ ಒಂಟಿತನ (Loneliness )ದೂರ ಮಾಡಲು ಹಾಗೂ ಸದಾ ಸಂತೋಷ (Happiness) ವಾಗಿರಲು ಮದುವೆಯಾಗ್ಬೇಕು ಎಂದು ಕೆಲವರು ನಂಬುತ್ತಾರೆ. ಈಗಿನ ದಿನಗಳಲ್ಲಿ ಮದುವೆಗೆ ಕಾರಣ ಬದಲಾಗಿದೆ. ಕೇವಲ ಕುಟುಂಬ ಮುನ್ನಡೆಸಲು, ಸಂತೋಷಕ್ಕಾಗಿ ಮಾತ್ರವಲ್ಲ ಅನೇಕ ಮಹಿಳೆಯರು ವಿವಿಧ ಕಾರಣಗಳಿಗೆ ಮದುವೆಯಾಗುತ್ತಿದ್ದಾರೆ. ಸಮಯ ಬದಲಾಗುತ್ತಿರುವಂತೆ, ಮಹಿಳೆಯರ ಮದುವೆಯ ಅರ್ಥವೂ ಬದಲಾಗುತ್ತಿದೆ. ಕೆಲ ಮಹಿಳೆಯರು ಮದುವೆಯಾಗದೆ ಒಬ್ಬಂಟಿ ಜೀವನ ನಡೆಸಲು ಬಯಸ್ತಿದ್ದಾರೆ. ಈಗಿನ ದಿನಗಳಲ್ಲಿ ಮಹಿಳೆಯರು ಯಾವ ಯಾವ ಕಾರಣಕ್ಕೆ ಮದುವೆಯಾಗ್ತಿದ್ದಾರೆ ಎಂಬುದನ್ನು ನಾವು ಹೇಳ್ತೇವೆ.

ಜೀವನ ಸಂಗಾತಿ (Life Partner) : ಅನೇಕ ಮಹಿಳೆಯರಿಗೆ  ಮದುವೆ ಎಂದರೆ ಜೀವನದಲ್ಲಿ ಸಂಗಾತಿಯ ಬೆಂಬಲವನ್ನು ಪಡೆಯುವುದು ಎಂಬ ಭಾವನೆಯಿದೆ. ತನ್ನನ್ನು ಗೌರವಿಸುವುದು ಮಾತ್ರವಲ್ಲದೆ ತನ್ನನ್ನು  ಅರ್ಥ ಮಾಡಿಕೊಳ್ಳುವ ಮತ್ತು ಪ್ರೀತಿ (Love) ಸುವ ಸಂಗಾತಿಯೊಂದಿಗೆ ತನ್ನ ಜೀವನವನ್ನು ಕಳೆಯಲು ಕೆಲ ಮಹಿಳೆಯರು ಬಯಸುತ್ತಾರೆ. ಇದೇ ಕಾರಣಕ್ಕೆ ಮದುವೆಯ ನಂತರ ಮಹಿಳೆಯರು ಹೆಚ್ಚು ಸುರಕ್ಷಿತ ಭಾವನೆಯಲ್ಲಿರುತ್ತಾರೆ. ಗಂಡನನ್ನು ಅವರು ಕುರುಡಾಗಿ ನಂಬುತ್ತಾರೆ.

ಲೈಂಗಿಕ ಬಯಕೆ ಈಡೇರಿಸಿಕೊಳ್ಳಲು ಮದುವೆ : ಸಂಭೋಗ (Intercourse) ಕ್ಕೆ ಮದುವೆ ಅಗತ್ಯ ಎಂದು ಭಾವಿಸುವ ಅನೇಕ ಮಹಿಳೆಯರಿದ್ದಾರೆ. ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಲೈಂಗಿಕ ಬಯಕೆಯನ್ನು ಈಡೇರಿಸಿಕೊಳ್ಳಲು ಮದುವೆ ಅಗತ್ಯವೆಂದು ಪರಿಗಣಿಸುತ್ತಾರೆ. ಮದುವೆ ಮುನ್ನ ಸಂಗಾತಿ ಜೊತೆ ಅನ್ಯೂನ್ಯವಾಗಿದ್ದರೂ ಅವರು ಮದುವೆ ನಂತ್ರವೇ ಶಾರೀರಿಕ ಸಂಬಂಧ ಬೆಳೆಸಲು ಆದ್ಯತೆ ನೀಡ್ತಾರೆ.  

ಜೀವನದಲ್ಲಿ ಪ್ರೀತಿ: ಕೆಲ ಮಹಿಳೆಯರಿಗೆ ಮದುವೆಯ ನಿಜವಾದ ಅರ್ಥವೆಂದರೆ ತಮ್ಮ ಸಂಗಾತಿಯ ಪ್ರೀತಿಯನ್ನು ಬೇಷರತ್ತಾಗಿ ಪಡೆಯುವುದು. ಇಬ್ಬರು ತಮ್ಮ ಜೀವನವನ್ನು ಒಟ್ಟಿಗೆ, ಪ್ರೀತಿಯಿಂದ ಕಳೆಯಲು ನಿರ್ಧರಿಸಿದಾಗ ಮದುವೆಯಾಗುವ ನಿರ್ಧಾರಕ್ಕೆ ಬರ್ತಾರೆ.   

ಆರ್ಥಿಕ ಸ್ಥಿತಿ ಭದ್ರಗೊಳಿಸಲು ಮದುವೆ : ಒಂದು ಅಧ್ಯಯನದ ಪ್ರಕಾರ,  ಮದುವೆಯ ನಂತರ ಮಹಿಳೆಯರಿಗೆ ಆರ್ಥಿಕ ಭದ್ರತೆ ಸಿಗುತ್ತದೆ. ಮದುವೆಯ ನಂತರ ಮಹಿಳೆಯರು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗುವ ಸಾಧ್ಯತೆ ಕಡಿಮೆ. ಏಕೆಂದರೆ ಮದುವೆಯು ಹಣವನ್ನು ಸಂಪಾದಿಸಲು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ನಿರ್ಬಂಧಿಸಲು ಸಹಾಯ ಮಾಡುತ್ತದೆ. ಇಂದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆರ್ಥಿಕ ಸ್ಥಿರತೆ ಇನ್ನೂ ಅನೇಕ ಮಹಿಳೆಯರಿಗೆ ಮುಖ್ಯವಾಗಿದೆ. ಮದುವೆ ನಂತ್ರ ಪತಿಯನ್ನು ನಂಬುವು ಮಹಿಳೆಯರು ಆರ್ಥಿಕ ಜವಾಬ್ದಾರಿಯನ್ನೂ ಅವರಿಗೆ ನೀಡ್ತಾರೆ ಅಂದ್ರೆ ತಪ್ಪಾಗಲಾರದು.

ನಿಮ್ಮ ಗಂಡಂಗೆ ಅಕ್ರಮ ಸಂಬಂಧವಿದೆಯಾ? ಪತ್ತೆ ಮಾಡೋದು ಬಹಳ ಸುಲಭ

ಮದುವೆ ಒಂದು ಲೇಬಲ್ :  ಅನೇಕ ಮಹಿಳೆಯರಿಗೆ  ಮದುವೆಯು ಕೇವಲ ಒಂದು ಲೇಬಲ್ ಆಗಿರುತ್ತದೆ. ಪ್ರೀತಿ ಮತ್ತು ಬದ್ಧತೆ ಸಾಭೀತುಪಡಿಸಲು ಮದುವೆ, ಕಾಗದದ ಅಗತ್ಯವಿಲ್ಲವೆಂದು ಅವರು ಭಾವಿಸ್ತಾರೆ. ಆದ್ರೆ ಸಮಾಜದ ಕಣ್ಣಿಂದ ತಪ್ಪಿಸಿಕೊಳ್ಳಲು, ಸಮಾಜ ತನ್ನ ಮೇಲೆ ಬೆರಳು ಮಾಡದಿರಲಿ ಎನ್ನುವ ಕಾರಣಕ್ಕೆ ಮದುವೆ ಬಂಧನಕ್ಕೆ ಒಳಗಾಗ್ತಾರೆ. ಅವರ ಪ್ರಕಾರ ಮದುವೆ ಇಲ್ಲದೆಯೂ ಒಟ್ಟಿಗೆ ಬದುಕಬಹುದು.  ಮದುವೆ ಜೀವನವನ್ನು  ಅಸ್ತವ್ಯಸ್ತಗೊಳಿಸುತ್ತದೆ ಎಂದವರು ಭಾವಿಸ್ತಾರೆ. ಮದುವೆಯಾದ್ಮೇಲೆ ಬಂಧನದಲ್ಲಿ ಜೀವನ ನಡೆಸಬೇಕು. ಮದುವೆ ಬಂಧವವಿಲ್ಲದೆ ಹೋದ್ರೆ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದುಕೊಳ್ತಾರೆ.

ಸೆಕ್ಸ್‌ ಲೈಫ್‌ನಲ್ಲಿ ಮ್ಯಾಜಿಕ್‌ ಮಾಡುತ್ತೆ ಚಾಕೊಲೇಟ್‌

ಮದುವೆ ಎಂಬುದು ವೈಯಕ್ತಿಕ ನಿರ್ಧಾರ. ಇದು ಮಹಿಳೆಯ ಜೀವನದಲ್ಲಿ ಬಹಳ ದೊಡ್ಡ ಹೆಜ್ಜೆಯಾಗಿದೆ. ಅವಳು ಮದುವೆಗೆ ಸಂಪೂರ್ಣವಾಗಿ ಸಿದ್ಧಪಡಿಸಿದಾಗ ಮಾತ್ರ ಮದುವೆಯಾದ್ರೆ ಒಳ್ಳೆಯದು. ಒಂದ್ವೇಳೆ ಸದ್ಯ ಮದುವೆ ಬೇಡ ಎಂಬ ಹುಡುಗಿಯರ ಮೇಲೆ ಎಂದಿಗೂ ಒತ್ತಡ ಹೇರಬೇಡಿ. ಒತ್ತಾಯ ಪೂರ್ವಕ ಮದುವೆ ದೀರ್ಘಕಾಲ ನಡೆಯುವುದಿಲ್ಲ ಎಂಬುದನ್ನು ನೆನಪಿಡಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

BBK 12: ಆ ವಿಷ್ಯ Suraj Singh ಮುಚ್ಚಿಟ್ಟಿದ್ದ- ಸೂರಜ್​ ಎಂಗೇಜ್​ಮೆಂಟ್​ ಕುರಿತು ರಾಶಿಕಾ ಹೇಳಿದ್ದೇನು?
ನಾನು ಸೀತೆಯಲ್ಲ, ನಿಮ್ಮ ಧರ್ಮ ನಿಮ್ಮಲ್ಲೇ ಇರಲಿ - ಮಾಡೆಲಿಂಗ್​ಗೆ ಮರಳಿದ ಮಹಾಕುಂಭದ ವೈರಲ್​ ಸಾಧ್ವಿ!