ಮಗ– ಸೊಸೆ ಮಕ್ಕಳ ಮಾಡಿಕೊಳ್ತಿಲ್ಲ, ಪಾಲಕರ ರೋದನ ಕೇಳೋರಿಲ್ಲ!

By Suvarna NewsFirst Published Jul 7, 2022, 2:48 PM IST
Highlights

ಮದುವೆಯಾದ ಜೋಡಿಗೆ ಎಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆ ಗುಡ್ ನ್ಯೂಸ್ ಯಾವಾಗ ಅಂತ. ಮದುವೆಯಾದ ತಕ್ಷಣ ಮಕ್ಕಳು ಬೇಕು ಅಂದ್ರೆ ಹೇಗೆ ಅನ್ನೋದು ನವ ಜೋಡಿಯ ಪ್ರಶ್ನೆ. ಮಕ್ಕಳನ್ನು ಪಡೆಯುವು ವಿಷ್ಯದಲ್ಲಿ ಪಾಲಕರು ಹಾಗೂ ಮಕ್ಕಳ ಕಿತ್ತಾಟ ಇಂದು ನಿನ್ನೆಯದಲ್ಲ.
 

Modern family issues ಹಿಂದಿನ ಕಾಲದಲ್ಲಿ  ಮದುವೆ (Marriage) ಆದ ಆರೇಳು ತಿಂಗಳಲ್ಲಿ ಸೊಸೆ ಅಥವಾ ಮಗಳು ಗರ್ಭಿಣಿ ಎಂಬ ಸುದ್ದಿ (News) ಕೇಳ್ಬೇಕಿತ್ತು. ಹಿರಿಯರು ಮದುವೆಯಾದ್ಮೇಲೆ ಶೀಘ್ರ ಪುತ್ರ (Son) ಪ್ರಾಪ್ತಿ ರಸ್ತು ಎಂದು ಹರಸುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಮದುವೆಯಾದ ತಕ್ಷಣ ಯಾವುದೇ ಜೋಡಿ ಮಕ್ಕಳನ್ನು ಪಡೆಯಲು ಇಚ್ಛಿಸುವುದಿಲ್ಲ. ಮಕ್ಕಳಾದ್ಮೇಲೆ ಖರ್ಚು ಹೆಚ್ಚು. ಆರ್ಥಿಕವಾಗಿ ಸದೃಢವಾಗಿರದೆ ಮಕ್ಕಳನ್ನು ಪಡೆಯೋದು ಮೂರ್ಖತನವೆಂದು ಅವರು ಭಾವಿಸ್ತಾರೆ. ಬರೀ ಇದೇ ಕಾರಣವಲ್ಲ, ಮಹಿಳೆಯಾದವಳು ಕೆಲಸ ಮಾಡ್ತಿದ್ದರೆ, ಆಗಷ್ಟೆ ಪ್ರಮೋಷನ್ ಸಿಕ್ಕಿದ್ದರೆ ಮಕ್ಕಳ ಕಾರಣಕ್ಕೆ ಆಕೆಗೆ ಕೆಲಸ ಬಿಡಲು ಇಷ್ಟವಿರೋದಿಲ್ಲ. ವೃತ್ತಿ ಜೀವನ ಇದ್ರಿಂದ ಹಾಳಾಗುತ್ತದೆ ಎಂಬ ಆತಂಕವಿರುತ್ತದೆ. ಗರ್ಭಿಣಿಯಾದ್ಮೇಲೆ ಹಾಗೂ ಹೆರಿಗೆ ನಂತ್ರ ಮಕ್ಕಳನ್ನು ನೋಡಿಕೊಳ್ಳಲು ಸರಿಯಾದ ವ್ಯವಸ್ಥೆ ಇರೋದಿಲ್ಲ. ಮಕ್ಕಳನ್ನು ಬೇರೆಯವರ ಕೈನಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಅವರು ಸಿದ್ಧರಿರೋದಿಲ್ಲ. ಮತ್ತೆ ಕೆಲವರು ದಾಂಪತ್ಯ ಜೀವನವನ್ನು ಎಂಜಾಯ್ ಮಾಡಲು ಬಯಸ್ತಾರೆ. ಹಾಗಾಗಿ ಬೇಗ ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬರ್ತಾರೆ. ಆದ್ರೆ ಮಕ್ಕಳ ಈ ನಿರ್ಧಾರ ಪಾಲಕರ ತಲೆಬಿಸಿಗೆ ಕಾರಣವಾಗುತ್ತದೆ.

ಮಗುವಾದರೆ ಮನೆಯ ವಾತಾವರಣ ಬದಲಾಗುತ್ತದೆ. ಮನೆಯಲ್ಲಿ ಖುಷಿ ಹೆಚ್ಚಾಗುತ್ತದೆ. ಪತಿ – ಪತ್ನಿ ಮಧ್ಯೆ ಅನ್ಯೂನ್ಯತೆ ಹೆಚ್ಚಾಗುತ್ತದೆ ಎಂದು ಹಿರಿಯರು ಭಾವಿಸ್ತಾರೆ. ವರ್ಷಾನುಗಟ್ಟಲೆ ಮಕ್ಕಳನ್ನು ಪಡೆಯದೆ ಹೋದ್ರೆ ನಂತ್ರ ಮಕ್ಕಳಾಗುವ ಸಾಧ್ಯತೆ ಕಡಿಮೆ ಎಂಬ ಭಯವೂ ಅವರಿಗಿರುತ್ತದೆ. ವಯಸ್ಸಾದ ಮೇಲೆ ಗರ್ಭ ಧರಿಸಿದರೆ ತೊಂದರೆ ಜಾಸ್ತಿ ಎಂದು ಹಿರಿಯರು ಭಾವಿಸ್ತಾರೆ. ತಮ್ಮ ಮಕ್ಕಳಿಗೆ ಮದುವೆಯಾಗ್ತಿದ್ದಂತೆ ಮೊಮ್ಮಕ್ಕಳನ್ನು ಆಡಿಸುವ ಕನಸು ಕಾಣಲು ಶುರು ಮಾಡ್ತಾರೆ. ಈ ಎಲ್ಲ ಕಾರಣಕ್ಕೆ  ಶೀಘ್ರದಲ್ಲೇ ಮಗುವನ್ನು ಹೊಂದಲು ಪೋಷಕರು ಒತ್ತಾಯ ಮಾಡಲು ಶುರು ಮಾಡ್ತಾರೆ. ಇದು ಸಾಮಾನ್ಯ ವಿಷ್ಯವೆಂದು ನಿಮಗೆ ಅನ್ನಿಸಬಹುದು. ಆದ್ರೆ ಇದೇ ಸಂಗತಿ ಈಗ ದೊಡ್ಡದಾಗಿದೆ. 

ಇದನ್ನೂ ಓದಿ: ಸೆಕ್ಸ್‌ ಲೈಫ್‌ನಲ್ಲಿ ಮ್ಯಾಜಿಕ್‌ ಮಾಡುತ್ತೆ ಚಾಕೊಲೇಟ್‌

ಉತ್ತರಾಖಂಡದ ಸಂಜೀವ್ (61 ವರ್ಷ) ಮತ್ತು ಸಾಧನಾ ಪ್ರಸಾದ್ (57 ವರ್ಷ) ಅವರು ತಮ್ಮ ಮಗ ಮತ್ತು ಸೊಸೆಯ ಮೇಲೆ ಮಗುವಾಗದ ಕಾರಣ ಮೊಕದ್ದಮೆ ಹೂಡಿದ್ದರು. ಈ ಸುದ್ದಿ ಸಾಕಷ್ಟು ಚರ್ಚೆಯಾಗಿದೆ. ಮಕ್ಕಳನ್ನು ಮಾಡಿಕೊಳ್ಳದೆ ತಮ್ಮ ಮಗ ಮತ್ತು ಸೊಸೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಹಿರಿಯ ದಂಪತಿ ಅರ್ಜಿ ಸಲ್ಲಿಸಿದ್ದರು.

ಮಗುವಿನೊಂದಿಗೆ ಆಟವಾಡುತ್ತಿದೆ : ನಿವೃತ್ತಿ ಅವಧಿಯಲ್ಲಿ ಮೊಮ್ಮಕ್ಕಳೊಂದಿಗೆ ಆಟವಾಡಬೇಕು. ಆದರೆ ಮಗ ಮತ್ತು ಸೊಸೆಗೆ ಮಗು ಬೇಡ. ಅವರ ಈ ನಿರ್ಧಾರ ನಮ್ಮನ್ನು ಮಾನಸಿಕವಾಗಿ ಹಿಂಸಿಸುತ್ತಿದೆ ಎಂದು ಅವರು ದೂರಿದ್ದರು. ಈ ಜೋಡಿ 2016 ರಲ್ಲಿ ವಿವಾಹವಾಗಿದ್ದರು.

ಇದನ್ನೂ ಓದಿ: ನಿಮ್ಮ ಗಂಡಂಗೆ ಅಕ್ರಮ ಸಂಬಂಧವಿದೆಯಾ? ಪತ್ತೆ ಮಾಡೋದು ಬಹಳ ಸುಲಭ

ಮೊಮ್ಮಕ್ಕಳ ಜೊತೆ ಆಟವೊಂದೇ ಅಂತಿಮವಲ್ಲ : ಮೊಮ್ಮಕ್ಕಳ ಜೊತೆ ಆಟವಾಡಬೇಕು ಎಂಬ ಕಾರಣಕ್ಕೆ ಮಕ್ಕಳನ್ನು ಪಡೆಯಿರಿ ಎಂಬುದು ತಪ್ಪು ಎನ್ನುತ್ತಾರೆ ತಜ್ಞರು. ಮಕ್ಕಳನ್ನು ಪಡೆಯುವ ಮೊದಲು ದಂಪತಿ ಆರ್ಥಿಕವಾಗಿ, ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಅನೇಕ ವಿಷಯಗಳನ್ನು ಯೋಜಿಸಬೇಕಾಗುತ್ತದೆ.  

ಮಕ್ಕಳ ಪ್ಲಾನಿಂಗ್ (Family Planning) ಮುಂದೂಡೋದು ಸರಿಯೇ? : ದಂಪತಿಗೆ ಮಗುವನ್ನು ಬೆಳೆಸಲು ಸಮಯವಿಲ್ಲದಿದ್ದರೆ ಅಥವಾ ಇನ್ನೂ ಆರ್ಥಿಕವಾಗಿ ಸಿದ್ಧವಾಗಿಲ್ಲದಿದ್ದರೆ ಅವರು ಮಕ್ಕಳನ್ನು ಪಡೆಯುವ ನಿರ್ಧಾರವನ್ನು ಮುಂದೂಡಬಹುದು. ಕುಟುಂಬದಿಂದ ಒತ್ತಡ ಬರ್ತಿದೆ ಎಂಬ ಕಾರಣಕ್ಕೆ ಮಗುವನ್ನು ಪಡೆದರೆ ನಂತರ ವೃತ್ತಿ ಮತ್ತು ಮಕ್ಕಳ ಪೋಷಣೆ ನಡುವೆ ಸಿಕ್ಕಿಬಿದ್ದು ಒದ್ದಾಡಬೇಕಾಗುತ್ತದೆ.   

ಬದಲಾದ ಜನರು : ಇತ್ತೀಚಿನ ದಿನಗಳಲ್ಲಿ ದಂಪತಿ  ಕುಟುಂಬದ ಒತ್ತಡದಲ್ಲಿ ಮಕ್ಕಳನ್ನು ಹೊಂದಲು ಬಯಸುವುದಿಲ್ಲ. ಮಗುವಿಗೆ  ಉತ್ತಮ ಜೀವನ ನೀಡಬೇಕೆಂದು ಬಯಸುವ ಜನರು ಆರ್ಥಿಕವಾಗಿ ಸದೃಢರಾದ ಮೇಲೆ ಈ ನಿರ್ಧಾರ ತೆಗೆದುಕೊಳ್ತಾರೆ. ಹೀಗೆ ಆಲೋಚಿಸಿ ಮಕ್ಕಳನ್ನು ಪಡೆಯುವುದು ಉತ್ತಮ ಎನ್ನುತ್ತಾರೆ ತಜ್ಞರು.  
 

click me!