#Feelfree: ಶಿಶ್ನವನ್ನು ಕಚ್ಚಿ ಹಿಡಿದು ಕತ್ತರಿಸೋ ಯೋನಿ! ಹೀಗೂ ಇದೆಯಾ!

By Suvarna NewsFirst Published Mar 29, 2021, 3:40 PM IST
Highlights

ಇಂಥದೊಂದು ವಿಚಿತ್ರ ವಿದ್ಯಮಾನ ನೀವು ನೋಡಿರಲಿಕ್ಕಿಲ್ಲ, ಕೇಳಿರಲಿಕ್ಕಿಲ್ಲ. ಆದರೆ ಈ ಬಗ್ಗೆ ದಂತಕತೆಗಳಂತೂ ಸಾಕಷ್ಟು ಇವೆ. 

ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೈದು. ಸದ್ಯದಲ್ಲೇ ಮದುವೆ ಆಗುವವನಿದ್ದೇನೆ. ಆದರೆ, ನನಗೊಂದು ಆತಂಕ. ಚಿಕ್ಕಂದಿನಿಂದಲೂ ನಮ್ಮ ಮನೆಯಲ್ಲಿ ಒಬ್ಬ ಅವಿವಾಹಿತ ಚಿಕ್ಕಪ್ಪ ಇದ್ದರು. ನನಗೆ ಅವರು ಶಿಶ್ನವನ್ನು ಕಚ್ಚಿ ಹಿಡಿದು ತುಂಡು ಮಾಡುವ ಯೋನಿಗಳು ಸ್ತ್ರೀಯರಲ್ಲಿ ಇರುತ್ತವೆ ಅಂತ ಏನೇನೋ ಕತೆಗಳನ್ನು ತಾವೇ ನೋಡಿದಂತೆ ಹೇಳುತ್ತಿದ್ದರು. ಕೆಲವು ಸ್ತ್ರೀಯರ ಯೋನಿಯಲ್ಲಿ ಚೂಪಾದ ಹಲ್ಲುಗಳು ಇರುತ್ತವೆಂದೂ, ಅವು ಪುರುಷರ ಮರ್ಮಾಂಗವನ್ನು ಕಚ್ಚಿ ಹಿಡಿದುಕೊಂಡರೆ ಬಿಡುವುದೇ ಇಲ್ಲ ಎಂದೂ ಹೇಳುತ್ತಿದ್ದರು. ಸಣ್ಣಂದಿನಲ್ಲಿ ಇದನ್ನು ನಂಬಿದ್ದೆ. ದೊಡ್ಡವನಾದ ಬಳಿಕವೂ ನನಗೆ ಆ ಭಯ ಉಳಿದೇ ಇದೆ. ನನ್ನ ಕಾಲೇಜು ದಿನಗಳಲ್ಲೂ ಗೆಳತಿಯರು ಸಾಕಷ್ಟು ಇದ್ದರೂ ಯಾರೊಂದಿಗೂ ನಾನು ಲೈಂಗಿಕ ಅನುಭವ ಪಡೆಯದೇ ಇರಲು ಇದೇ ಕಾರಣ. ಈಗ ಮದುವೆಯಾಗಲು ನನ್ನನ್ನು ಮನೆಯವರು ಒತ್ತಾಯಿಸುತ್ತಿದ್ದಾರೆ. ಮದುವೆಯಾದರೆ ಸರಿಯಾಗಿ ಸಂಭೋಗದಲ್ಲಿ ಪಾಲ್ಗೊಳ್ಳಲಾರೆನೋ ಎಂಬ ಆತಂಕ. ಇತ್ತೀಚೆಗೆ ಕೆಲವು ಇಂಗ್ಲಿಷ್ ಮಾಧ್ಯಮಗಳಲ್ಲಿ, ಹೀಗೆಲ್ಲ ಇದೆ ಎಂಬ ಸುದ್ದಿಗಳನ್ನೂ ಓದಿದ ನೆನಪು. ನನ್ನ ಭಯ ಪರಿಹರಿಸಿ.

ಉತ್ತರ: ನೀವು ಕೇಳಿರುವ ಎಲ್ಲ ಕತೆಗಳೂ ದಂತಕತೆಗಳು ಅಷ್ಟೆ. ದಂತಕತೆ ಅಂದರೆ ಗೊತ್ತು ತಾನೆ? ತಾವೇ ಸೃಷ್ಟಿಸಿಕೊಂಡು ಅಥವಾ ಕಲ್ಪಿಸಿಕೊಂಡು ಹೇಳಿದ ಕತೆಗಳು. ನಿಮ್ಮ ಚಿಕ್ಕಪ್ಪ ಅವಿವಾಹಿತರಾಗಿದ್ದುದರಿಂದ, ಸೆಕ್ಸ್‌ನ ಬಗ್ಗೆ ಅವರಿಗೆ ಸರಿಯಾದ ಕಲ್ಪನೆ ಇಲ್ಲದೆ ಇದ್ದುದರಿಂದ ಹೀಗಾಗಿರಬಹುದು. ಅಥವಾ ಸೆಕ್ಸ್‌ನಲ್ಲಿ ಉಂಟಾದ ಕಹಿ ಅನುಭವದಿಂದಲೂ ಹೀಗಾಗಿರಬಹುದು. ತನಗೆ ದೊರೆಯದ ಸೆಕ್ಸ್ ಸುಖ ಇತರರಿಗೂ ದೊರೆಯುವುದು ಬೇಡ ಎಂಬ ಸ್ಯಾಡಿಸ್ಟಿಕ್ ಮನಸ್ಥಿತಿಯೇ ಇಂಥ ಕತೆಗಳನ್ನು ಸೃಷ್ಟಿಸಿ ಪುಟ್ಟ ಮಕ್ಕಳಿಗೆ ಹೇಳಿ, ಅವರಲ್ಲೂ ಸೆಕ್ಸ್‌ನ ಬಗ್ಗೆ ಭಯ ಬಿತ್ತಲು ಕಾರಣವಾಗುತ್ತದೆ. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.

#Feelfree: ಬೆಡ್‌ರೂಮ್‌ನಲ್ಲಿ ಸರಸ ಹೆಚ್ಚಿಸೋಕೆ ನಿಲುಗನ್ನಡಿ! ...

ಇನ್ನು ನೀವು ಹೇಳಿರುವ ಇಂಗ್ಲಿಷ್ ಮಾಧ್ಯಮಗಳ ಸುದ್ದಿಯ ಬಗ್ಗೆ. ಇವು ಕೂಡ ಒಂದು ಬಗೆಯ ಉತ್ಪ್ರೇಕ್ಷೆ. ಇಂಥ ಕೆಲವು ಘಟನೆಗಳು ನಡೆದಿರುವುದು ನಿಜ- ಆದರೆ ಅದನ್ನು ಯೋನಿಯ ಹಲ್ಲು ಎಂದು ತಿಳಿಯಲಾಗುವುದಿಲ್ಲ. ಅದನ್ನು ವಜೈನಾ ಡೆಂಟಾಟಾ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ. ಇದು ಲ್ಯಾಟಿನ್‌ ಭಾಷೆಯಿಂದ ಉತ್ಪತ್ತಿಯಾದ ಪದ. ಯಾವುದೋ ಕೆಲವು ಸಂದರ್ಭದಲ್ಲಿ, ಸಂಭೋಗದ ಸಂದರ್ಭದಲ್ಲಿ ಬಿಗಿಯಾದ ಯೋನಿಯ ಸ್ನಾಯುಗಳು ಸ್ವಲ್ಪ ಮಟ್ಟಿಗೆ ಶಿಶ್ನವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ಆದರೆ ಇದು ತಾತ್ಕಾಲಿಕ. ಕಾಮೋದ್ರೇಕ ಇಳಿದ ಬಳಿಕ, ಈ ಬಿಗಿತನವೂ ಸಡಿಲವಾಗುತ್ತದೆ ಹಾಗೂ ಶಿಶ್ನವು ಯೋನಿಯಿಂದ ಆಚೆ ಬರುತ್ತದೆ. ಈ ಬಿಗಿತವೂ ಅಂಥ ಮಾರಕವಾದ್ದೇನಲ್ಲ. ಆದರೆ ಆತಂಕಿತರಾದ ಜೋಡಿಗಳು, ಅದನ್ನೇ ಭಯಾನಕ ಎಂದು ತಿಳಿಯುವ ಸಾಧ್ಯತೆ ಹೆಚ್ಚು. ಎಲ್ಲೋ ಒಂದು ಲಕ್ಷ ಮಂದಿಗೆ ಒಂದು ಜೋಡಿಯಲ್ಲಿ ಇಂಥ ಪ್ರಕರಣ ವರದಿಯಾಗುತ್ತದೆ, ಅಪರೂಪವಾಗಿ.

#Feelfree: ಗುರುತು ಪರಿಚಯವಿಲ್ಲದೋರ ಜೊತೆ ಸೆಕ್ಸ್! ಹೀಗೂ ಇರುತ್ತೆ! ...

ಮಧ್ಯಪ್ರದೇಶದ ಬಸ್ತಾರ್‌ ಜಿಲ್ಲೆಯಲ್ಲಿ ಮ್ಯೂರಿಯಾ ಎಂಬ ಒಂದು ಬುಡಕಟ್ಟು ಇದೆ. ಅವರಲ್ಲಿ ಒಂದು ಕತೆಯಿದೆ. ಅದೇನು ಎಂದರೆ, ಒಂದು ಮಾಂತ್ರಿಕ ಶಕ್ತಿಯುಳ್ಳ ಹುಲಿ ಇರುತ್ತದೆ. ಅದು ಮನುಷ್ಯ ಸ್ತ್ರೀಯರ ರೂಪ ತಾಳಿ, ಕಾಡಿಗೆ ಹೋದ ಗಂಡಸರನ್ನು ಆಕರ್ಷಿಸುತ್ತದೆ. ಅವರ ಸಂಭೋಗದ ಸಮಯದಲ್ಲಿ ಅವರ ಶಿಶ್ನವನ್ನು ಕಚ್ಚಿ ಹಿಡಿಯುವ ಆ ಹುಲಿಯ ಯೋನಿ, ನಂತರ ಆ ಗಂಡಸರನ್ನು ಕೊಂದು ತಿನ್ನುವಲ್ಲಿಗೆ ಮುಕ್ತಾಯವಾಗುತ್ತದೆ. ಇದನ್ನು ತಿಳಿದ ಜಾಣ ಯುವಕನೊಬ್ಬ ಆ ಹುಲಿ ಹೆಣ್ಣಿಗೆ ಮನಸೋತಂತೆ ನಟಿಸಿ, ಅದನ್ನು ಉಪಾಯದಿಂದ ಕೊಂದುಹಾಕುತ್ತಾನೆ. ಇಂಥ ಕಟ್ಟುಕತೆಗಳು ಜಗತ್ತಿನಾದ್ಯಂತ ಅಲ್ಲಲ್ಲಿ ಸಾಕಷ್ಟು ಇವೆ.

#Feelfree: ಒಬ್ಳೇ ಇದ್ದಾಗ ತುಂಬಾ ಮೂಡ್ ಬರುತ್ತೆ, ಗಂಡ ಬಂದರೆ ಇರೋಲ್ಲ! ...

ಇವೆಲ್ಲ ಏನು ಗೊತ್ತೇನು? ಸ್ತ್ರೀಯರ ಮೇಲೆ ನಿಯಂತ್ರಣ ಸಾಧಿಸಲು ಪುರುಷ ಸೃಷ್ಟಿಸಿದ ಕಟ್ಟುಕತೆಗಳು. ಪುರುಷಪ್ರಧಾನ ಸಂಸ್ಕೃತಿ ಇಂಥ ಕಟ್ಟುಕತೆಗಳನ್ನು ಹುಟ್ಟು ಹಾಕುತ್ತ, ಸ್ತ್ರೀಯರು ದುಷ್ಟರು, ಪುರುಷರನ್ನು ನಾಶ ಮಾಡುವವರು ಎಂದೆಲ್ಲ ಭಾವನೆ ಸೃಷ್ಟಿಸಿ ಆಕೆಯನ್ನು ಹಿಡಿತದಲ್ಲಿಡುವ ಉಪಾಯ ಕಂಡುಕೊಂಡಿದೆ. ಇಂಥದನ್ನು ನಂಬಬೇಡಿ, ಮುಂದುವರಿಸಬೇಡಿ. ಆಗ ಆರೋಗ್ಯಕರ ಸಮಾಜ ನಿರ್ಮಾಣ ವಾಗುತ್ತದೆ. ನಿಮ್ಮ ಸೆಕ್ಸ್‌ ಬದುಕನ್ನು ಯಾವುದೇ ಆತಂಕವಿಲ್ಲದೆ ಸುಖದಿಂದ ಅನುಭವಿಸಿ.

click me!