#Feelfree: ಬೆಡ್‌ರೂಮ್‌ನಲ್ಲಿ ಸರಸ ಹೆಚ್ಚಿಸೋಕೆ ನಿಲುಗನ್ನಡಿ!

Suvarna News   | Asianet News
Published : Mar 18, 2021, 04:58 PM IST
#Feelfree: ಬೆಡ್‌ರೂಮ್‌ನಲ್ಲಿ ಸರಸ ಹೆಚ್ಚಿಸೋಕೆ ನಿಲುಗನ್ನಡಿ!

ಸಾರಾಂಶ

ಬೆಡ್‌ರೂಮಿನಲ್ಲಿ ದೊಡ್ಡ ದೊಡ್ಡ ಕನ್ನಡಿಗಳಿದ್ದರೆ ಶೃಂಗಾರಕ್ಕೆ ಹೆಚ್ಚಿನ ಹುರುಪು ದೊರೆಯುತ್ತದೆ. ಟ್ರೈ ಮಾಡಿ ನೋಡಿ. 

ಪ್ರಶ್ನೆ: ನಾನು ವಿವಾಹಿತೆ. ಇಪ್ಪತ್ತೆರಡು ವರ್ಷ. ಮದುವೆಯಾಗಿ ಒಂದು ವರ್ಷವಾಗಿದೆಯಷ್ಟೇ. ನನ್ನ ಪತಿಗೆ ಇಪ್ಪತ್ತೆಂಟು ವರ್ಷ. ಇಬ್ಬರೂ ದಾಂಪತ್ಯ ಹಾಗೂ ಬೆಡ್ರೂಮ್ ಸುಖ ಸಾಕಷ್ಟು ಅನುಭವಿಸುತ್ತೇವೆ. ನಾವು ಆರು ತಿಂಗಳ ಹಿಂದೆ ಮನಾಲಿಗೆ ಹೋಗಿದ್ದೆವು. ಅಲ್ಲಿ ನಾವು ಉಳಿದುಕೊಂಡ ಹೋಟೆಲ್‌ನ ಐಷಾರಾಮಿ ರೂಮಿನಲ್ಲಿ ಮಂಚದ ನೇರ ಎದುರುಗಡೆ ಹಾಗೂ ಮೇಲುಗಡೆ ಚಾವಣಿಯಲ್ಲಿ ಕನ್ನಡಿಗಳನ್ನು ಅಳವಡಿಸಲಾಗಿತ್ತು. ಮಂದ ದೀಪ ಉರಿಸಿ ಶೃಂಗಾರ ಚಟುವಟಿಕೆಯಲ್ಲಿ ತೊಡಗಿಕೊಂಡೆವು. ನನ್ನ ಪತಿಗೆ ಇದು ತುಂಬಾ ಇಷ್ಟವಾಯಿತು. ಆದರೆ ನನಗೇನೂ ಅಷ್ಟು ಇಷ್ಟವಾಗಲಿಲ್ಲ. ಮರಳೀ ಮನೆಗೆ ಬಂದ ಬಳಿಕ, ನನ್ನ ಪತಿ, ನಮ್ಮ ಬೆಡ್‌ರೂಮಿನಲ್ಲೂ ಹೀಗೆ ಮಂಚದ ಅಕ್ಕಪಕ್ಕ ದೊಡ್ಡ ಕನ್ನಡಿಗಳನ್ನು ಅಳವಡಿಸಲು ಮುಂದಾದರು. ಇದೇ ಕಾರಣಕ್ಕಾಗಿ ನನಗೂ ಅವರಿಗೂ ಸಣ್ಣ ಜಗಳವಾಯಿತು. ಬೆಡ್‌ರೂಮಿನಲ್ಲಿ ಕನ್ನಡಿಗಳಿದ್ದರೆ ಶೃಂಗಾರದ ಸಂದರ್ಭದಲ್ಲಿ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬಗಳು ಕಂಡು ಇನ್ನಷ್ಟು ಉದ್ರೇಕವಾಗುತ್ತದೆ. ಸೆಕ್ಸ್‌ಗೆ ಇನ್ನಷ್ಟು ರುಚಿ ಬರುತ್ತದೆ ಎಂಬುದು ನನ್ನ ಪತಿಯ ವಿಚಾರ. ಆದರೆ ನನಗೆ, ಅದು ಅತ್ಯಂತ ಖಾಸಗಿ ಕ್ಷಣ. ಆಗ ಕನ್ನಡಿಗಳಲ್ಲಿ ನಮ್ಮ ದೇಹಗಳೇ ಕಂಡರೂ ಇನ್ಯಾರೋ ನಮ್ಮನ್ನು ನೋಡುತ್ತಿರುವ ಹಾಗೆಲ್ಲ ಅನ್ನಿಸಿ ನನ್ನ ಉತ್ಕಟತೆಗೆ ಭಂಗವಾಗುತ್ತದೆ. ಏರಿದ ಉದ್ರೇಕವೆಲ್ಲ ಇಳಿಯುತ್ತದೆ. ಆದರೆ ಕನ್ನಡಿ ಅಳವಡಿಸಲೇಬೇಕು ಎಂಬುದು ಗಂಡನ ಹಠ. ಏನು ಮಾಡಲಿ?

ಉತ್ತರ: ನಿಮ್ಮ ಸಮಸ್ಯೆ ವಿಶಿಷ್ಟವಾದದ್ದು, ಆದರೆ ವಿಚಿತ್ರವಾದದ್ದೇನೂ ಅಲ್ಲ. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತಾವಿಬ್ಬರಲ್ಲದೆ ಅಲ್ಲಿ ಇನ್ಯಾರೂ ಇರುವುದನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಯಾಕೆಂದರೆ ಮನುಷ್ಯ ಏಕಾಂತಜೀವಿಯೂ ಹೌದು. ಪ್ರಾಣಿಗಳಾದರೋ ಬಯಲಿನಲ್ಲಿ, ಇತರ ಪ್ರಾಣಿಗಳ ನಡುವೆಯೂ ಸೆಕ್ಸ್ ನಡೆಸುತ್ತವೆ. ಯಾಕೆಂದರೆ ಸೆಕ್ಸ್ ಅವುಗಳಿಗೆ ಸಂತಾನೋತ್ಪಾದನೆಯ ಒಂದು ಚಟುವಟಿಕೆ ವಿನಾ ಮನುಷ್ಯನಂತೆ ಶೃಂಗಾರ ರಸದ, ಆಸೆಯ, ಪ್ರೀತಿಯ ಇತ್ಯಾದಿಗಳ ಅಭಿವ್ಯಕ್ತಿಯಲ್ಲ. ಹೀಗಾಗಿ ನೀವು ಅದು ಅತ್ಯಂತ ಖಾಸಗಿಯಾಗಿ ಇರಲಿ ಎಂದು ಇಷ್ಟಪಟ್ಟಿದ್ದರೆ ಅದು ಸಹಜ. ಆದರೆ ಸೆಕ್ಸ್ ಎಂಬುದು ಮನುಷ್ಯನಿಗೆ ಮನರಂಜನೆಯೂ ಹೌದು. ಕೆಲವರಲ್ಲಿ ಇರುವ ಸಣ್ಣಪುಟ್ಟ ಲೈಂಗಿಕ ಆಸೆಗಳು ಮದುವೆಯಾದ ಬಳಿಕ ಹೊರಗೆ ಬರುತ್ತವೆ, ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತವೆ. ನಿಮ್ಮ ಗಂಡನ ಮನಸ್ಸಿನ ಆಳದಲ್ಲಿ ಎರಡು ಅಭಿಪ್ಸೆಗಳಿರಬಹುದು- ಒಂದು, ನಮ್ಮ ರತಿಕ್ರೀಡೆಯನ್ನು ಬೇರ್ಯಾರೋ ನೋಡುತ್ತಿದ್ದಾರೆ ಎಂದು ಭಾವಿಸಿಕೊಂಡು ಥ್ರಿಲ್ ಅನುಭವಿಸುವುದು. ಎರಡು, ಇನ್ಯಾರದೋ ಶೃಂಗಾರವನ್ನು ತಾನು ನೋಡುತ್ತಿದ್ದೇನೆ ಎಂದು ಭಾವಿಸಿಕೊಂಡು ಅದರಿಂದ ಕದ್ದು ನೋಡಿ ಪಡೆಯುವ ಸುಖದ ಉದ್ರೇಕವನ್ನು ಹೊಂದುವುದು. ಎರಡೂ ಸಂದರ್ಭದಲ್ಲಿಯೂ ನಿಮಗೆ ಲಾಭವಿದೆ. ನಿಮ್ಮ ಗಂಡ ಹೆಚ್ಚು ಉದ್ರೇಕಿತನಾಗಿ ನಿಮ್ಮೊಂದಿಗೆ ಸೆಕ್ಸ್‌ನಲ್ಲಿ ತೊಡಗಿಕೊಂಡರೆ ನಿಮಗೆ ಸುಖವೇ ತಾನೆ. ಹಾಗೇ ಕನ್ನಡಿಯಲ್ಲಿ ಕಾಣುವ ಬಿಂಬಗಳು ನಮ್ಮ ಚೇಷ್ಟೆಗಳನ್ನೂ ಉದ್ರೇಕಿಸುತ್ತವೆ. ಅಂದರೆ ಕನ್ನಡಿಯ ಮುಂದೆ ನಿಂತಾಗ ಮುಖ ವಾರೆ ಮಾಡಿ ನೋಡುವುದು, ಕೂದಲನ್ನು ತೀಡಿಕೊಳ್ಳುವುದು, ಮೂಗು ಉಜ್ಜಿಕೊಳ್ಳುವುದೆಲ್ಲ ಮಾಡುತ್ತೇವಲ್ಲ. ಹಾಗೇ ಸೆಕ್ಸ್‌ನ ಸಂದರ್ಭದಲ್ಲೂ ಕನ್ನಡಿ ನೋಡುತ್ತಾ ಸಂಭೋಗದ ವಿವಿಧ ಭಂಗಿಗಳನ್ನು ನೀವಿಬ್ಬರೂ ಅನ್ವೇಷಿಸಬಹುದು. ಅದು ನಿಮ್ಮ ಸೆಕ್ಸ್‌ ಬದುಕನ್ನು ಇನ್ನಷ್ಟು ವರ್ಣರಂಜಿತ ಆಗಿಸುತ್ತದೆ.

#Feelfree: ಒಬ್ಳೇ ಇದ್ದಾಗ ತುಂಬಾ ಮೂಡ್ ಬರುತ್ತೆ, ಗಂಡ ಬಂದರೆ ಇರೋಲ್ಲ! ...

ನನಗೇನೋ ನಿಮ್ಮ ಪತಿಯ ಆಸೆಯನ್ನು ನೀವು ಈಡೇರಿಸುವುದು ಒಳ್ಳೆಯದು ಎಂದು ಕಾಣುತ್ತದೆ. ಇದರಿಂದ ನಿಮಗೆ ಗುಣಗಳೇ ಹೆಚ್ಚು ಇದೆ ಹೊರತು, ನಷ್ಟಗಳೇನೂ ಇಲ್ಲ. ನಿಮ್ಮ ಸಂಬಂಧವನ್ನು ಈ ಕನ್ನಡಿಗಳು ಹೆಚ್ಚಿಸುತ್ತದಾದರೆ ಯಾಕೆ ಬೇಡ? ಇಷ್ಟಿದ್ದೂ ನಿಮಗೆ ಕನ್ನಡಿಗಳು ನಿಮ್ಮಲ್ಲಿ ನಕಾರಾತ್ಮಕತೆಯನ್ನು ತುಂಬಾ ಉದ್ದೀಪಿಸುತ್ತದೆ ಎಂದಾದರೆ, ನಿಮ್ಮ ಗಂಡನ ಜತೆ ಕೂತು ಮಾತಾಡಿ ಈ ಯೋಜನೆಯಿಂದ ಅವರು ಹಿಂದೆ ಸರಿಯುವಂತೆ ಮಾಡುವುದು ವಿಹಿತ. ಹೆಚ್ಚು ಕನ್ನಡಿಗಳ ಬದಲು ಒಂದು ಕನ್ನಡಿಗೂ ತೃಪ್ತಿಪಟ್ಟುಕೊಳ್ಳಬಹುದು.

#Feelfree: ಹುಡುಗಿಯರನ್ನು ಸಂತೃಪ್ತಿಪಡಿಸಲು ಶಿಶ್ನ ಎಷ್ಟುದ್ದ ಇರಬೇಕು? ...

ಪ್ರಶ್ನೆ: ನಾನು ಮೂವತ್ತು ವರ್ಷದ ವಿವಾಹಿತ. ಮದುವೆಯಾಗಿ ಐದು ವರ್ಷಗಳಾಗಿವೆ. ಸತತ ಒಂದು ವಾರ ಸೆಕ್ಸ್ ನಡೆಸದೆ ಇದ್ದರೆ, ರಾತ್ರಿ ನಿದ್ರೆಯಲ್ಲೇ ಸ್ಖಲನವಾಗುತ್ತದೆ. ನನ್ನ ಪತ್ನಿ ಇದರ ಬಗ್ಗೆ ಹಾಸ್ಯ ಮಾಡುತ್ತಾಳೆ. ಇದು ಸಹಜವೇ?

ಉತ್ತರ: ಇದು ಸಹಜ. ಉತ್ಪತ್ತಿಯಾಗುವ ವೀರ್ಯ ಯಾವುದೋ ಒಂದು ರೀತಿಯಲ್ಲಿ ಹೊರಗೆ ಹೋಗಲೇಬೇಕಲ್ಲ. ಅದೆಲ್ಲ ಸರಿ, ಒಂದು ವಾರದಷ್ಟು ಗ್ಯಾಪ್ ಯಾಕೆ ಕೊಡಬೇಕು!?

#Feelfree: ಇಬ್ಬರ ಜೊತೆ ಲೈಂಗಿಕ ಸಂಬಂಧ, ಮಗು ಯಾರದ್ದು? ...

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?