ಅತ್ತೆಯೊಂದಿಗೇ ಅಕ್ರಮ ಸಂಬಂಧ ಬೆಳೆಸಿದ ಅಳಿಯ ! ಚಾಕುವಿನಿಂದ ಇರಿದು ಕೊಲೆ

By Suvarna News  |  First Published Aug 12, 2022, 1:18 PM IST

ಅತ್ತೆ-ಅಳಿಯನ ನಡುವೆ ತಾಯಿ-ಮಗನ ಅನ್ಯೋನ್ಯತೆಯಿರುತ್ತದೆ. ಉತ್ತಮ ಬಾಂಧವ್ಯವಿರುತ್ತದೆ. ಆದ್ರೆ ಇಲ್ಲೊಬ್ಬಾತ ಅತ್ತೆಯೊಂದಿಗೇ ಅಕ್ರಮ ಸಂಬಂಧ ಬೆಳೆಸಿ ಕೊಲೆ ಮಾಡಿದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
 


ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಜುಲೈ 15ರಂದು ಸಂಜೆ ಚನ್ನಪಟ್ಟಣದ ಮಹದೇಶ್ವರ ನಗರದಲ್ಲಿ ಮನೆಯ ಬೆಡ್‌ರೂಮ್‌ನಲ್ಲಿ ಮಹಿಳೆಯನ್ನು ಕೊಲೆ ಮಾಡಲಾಗಿತ್ತು. ಚಾಕುವಿನಿಂದ ಇರಿದು ಮಹಿಳೆಯನ್ನು ಕೊಲೆ  ಮಾಡಿದ್ದು, ಜನರನ್ನು ಬೆಚ್ಚಿಬೀಳಿಸಿತ್ತು. ಘಟನೆಯ ತನಿಖೆ ನಡೆಸಿದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಓಂಪ್ರಕಾಶ್ ನೇತೃತ್ವದಲ್ಲಿ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಬಿ ಶಿವಕುಮಾರ್ ಹಾಗೂ ಇತರ ಪೊಲೀಸ್ ತಂಡ ಆರೋಪಿಗಳ್ನು ಬಂಧಿಸಿದೆ.

ಮೃತ ಮಹಿಳೆಯ ತಂಡ ಸೋದರಳಿಯನಾಗಿದ್ದ ಆರೋಪಿ ಅತ್ತೆಯೊಂದಿಗೆ ಅಕ್ರಮ ಸಂಬಂಧ (Relationship) ಬೆಳೆಸಿದ್ದ. ಈ ವಿಷಯ ಯಾರಿಗೂ ಗೊತ್ತಾಗಿರಲ್ಲಿಲ್ಲ. ನಂತರದಲ್ಲಿ ಗಂಡ, ಮಕ್ಕಳನ್ನು ಬಿಟ್ಟು ಬರುವಂತೆ ಅತ್ತೆಗೆ (Mother-in-law) ಬಲವಂತ ಮಾಡಿದ್ದಾನೆ. ಆಕೆ ಇದಕ್ಕೆ ಒಪ್ಪದಿದ್ದಾಗ ಆಕೆಯನ್ನು ಕೊಲೆ (Murder) ಮಾಡಿದ್ದಾನೆ. ಮಹಿಳೆಯ ಗಂಡನ ಅಕ್ಕನ ಮಗನಾಗಿರುವ ಆರೋಪಿ ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ ಮನೆಗೆ ಬಂದು ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

Tap to resize

Latest Videos

ಆರೋಪಿ ಕೊಲೆಯ ನಂತರ ಚಿನ್ನದ ಸರ ಮತ್ತು ಮೊಬೈಲ್ ತೆಗೆದುಕೊಂಡು ಕೆರೆಗೆ ಎಸೆದಿದ್ದಾನೆ. ಬೈಕ್‌ನ ನಂಬರ್ ಪ್ಲೇಟ್ ಕೂಡಾ ಬದಲಾಯಿಸಿದ್ದ. ಕೊಲೆ ಮಾಡಲು ಹೋಗುವಾಗಲೂ, ವಾಪಾಸ್ ಬರುವಾಗಲೂ ಬಟ್ಟೆಗಳನ್ನ ಬದಲಿಸಿದ್ದ. ಆದರೆ ಮಹಿಳೆಯ ಚಿನ್ನದ ಸರ ಅಡವಿಡಲು ಹೋದಾಗ ಸಿಕ್ಕಿಬಿದ್ದಿದ್ದಾನೆ. 

click me!