
ಬ್ಯಾಂಕಾಕ್(ಫೆ. 18) ಪ್ರೇಮಿಗಳ ದಿನದಂದು ಪ್ರಿಯತಮೆಗೆ ವಿಶೇಷ ಗಿಫ್ಟ್ ನೀಡಲು ಹೋದವ ಆಸ್ಪತ್ರೆ ಸೇರಿದ್ದಾನೆ. ಅಷ್ಟಕ್ಕೂ ಈತ ಮಾಡಿಕೊಂಡ ಕೆಲಸ ಮಾತ್ರ ವಿಚಿತ್ರ.
ಪ್ರಿಯತಮೆಗೆ ವಿಶೇಷ ಗಿಫ್ಟ್ ನೀಡಬೇಕು ಎಂದು ಯೋಚಿಸಿದವ ತನ್ನ ಬಳಿ ಇದ್ದ ಕಿಟ್ ಬಾಕ್ಸ್ ತೆಗೆದಿದ್ದಾನೆ. ಮನಸ್ಸಿಗೆ ಏನು ಬಂತೋ ಏನೋ ಅಲ್ಲಿ ಸಿಕ್ಕ ಸ್ಟೀಲ್ ರಿಂಗ್ ಒಂದನ್ನು ತನ್ನ ಶಿಶ್ನಕ್ಕೆ ಹಾಕಿಕೊಂಡಿದ್ದಾನೆ. ಬೇಬಿ ಆಯಿಲ್ ಬಳಸಿ ಉಂಗುರದಂತೆ ಧರಿಸಿಕೊಂಡಿದ್ದಾನೆ.
Feelfree: ಶಿಶ್ನವೂ ಮುರಿದುಹೋಗಬಹುದು, ಹುಷಾರಾಗಿರಿ!...
ಇದಾದ ಮೇಲೆ ಪರಿಣಾಮ ಗೊತ್ತಾಗಲು ಆರಂಭವಾಗಿದೆ. ನೋವು ತಾಳಲಾರದೆ ಒದ್ದಾಡಿದ್ದಾನೆ. ರಿಂಗ್ ವಾಪಸ್ ತೆಗೆಯಲು ಬಂದಿಲ್ಲ.
ಫೆ. 12 ರಂದೇ ಈ ಕೆಲಸ ಮಾಡಿಕೊಂಡು ಎರಡು ದಿನ ರಿಂಗ್ ತೆಗೆಯುವ ಸಾಹಸ ಮಾಡಿದರೂ ಸಫಲನಾಗಲಿಲ್ಲ. ಇದಾದ ಮೇಲೆ ಅಂತಿಮವಾಗಿ ಆಸ್ಪತ್ರೆಗೆ ಬಂದಿದ್ದಾನೆ. ಒಂದು ಗಂಟೆ ಕಾಲ ಚಿಕಿತ್ಸೆ ನಡೆಸಿ ಅಂತೂ ಅಲ್ಲಿಂದ ರಿಂಗ್ ಕಟ್ ಮಾಡಿ ತೆಗೆಯಲಾಗಿದೆ. ಅಂತೂ ಪ್ರೇಯಸಿಗೆ ಗಿಫ್ಟ್ ನೀಡಲು ಹೋದವ ಆಸ್ಪತ್ರೆ ಬೆಡ್ ಮೇಲೆ ರೆಸ್ಟ್ ಮಾಡಬೇಕಾದ ಪರಿಸ್ಥಿತಿ ತಂದುಕೊಂಡಿದ್ದಾನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.