ಅನಂತ್‌ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್‌ ಇವೆಂಟ್‌, ಲೈವ್ ಶೋ ನಡೆಸಲು ಖ್ಯಾತ ಗಾಯಕರು ಪಡೆದ ಸಂಭಾವನೆ ಎಷ್ಟು?

Published : Apr 28, 2024, 05:09 PM ISTUpdated : Apr 28, 2024, 05:20 PM IST
ಅನಂತ್‌ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್‌ ಇವೆಂಟ್‌, ಲೈವ್ ಶೋ ನಡೆಸಲು ಖ್ಯಾತ ಗಾಯಕರು ಪಡೆದ ಸಂಭಾವನೆ ಎಷ್ಟು?

ಸಾರಾಂಶ

ವಿಶ್ವದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ದೇಶ-ವಿದೇಶದ ಹಲವಾರು ಈ ಸಮಾರಂಭದಲ್ಲಿ ಲೈವ್ ಶೋ ನಡೆಸಿಕೊಟ್ಟರು. ಆದರೆ ಈ ಗಾಯಕ-ಗಾಯಕಿಯರು ಬಿಲಿಯನೇರ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪಡೆದ ಸಂಭಾವನೆ ಎಷ್ಟು ನಿಮ್ಗೆ ಗೊತ್ತಿದ್ಯಾ?

ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.  ತಮ್ಮ ಮನೆಯಲ್ಲಿ ನಡೆಯುವ ಪಾರ್ಟಿ, ಸಮಾರಂಭಗಳಿಗಾಗಿ ಕೋಟಿ ಕೋಟಿ ವ್ಯಯಿಸುತ್ತಾರೆ.  ಮಾರ್ಚ್ 1ರಿಂದ 3ರ ವರೆಗೆ ಗುಜರಾತ್‌ನ ಜಾಮ್ನಾ ನಗರದಲ್ಲಿ ಪ್ರಿ ವೆಡ್ಡಿಂಗ್ ಇವೆಂಟ್‌ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಹಲವಾರು ಗಾಯಕರು ಭಾಗಿಯಾಗಿದ್ದರು. ಅನಂತ್‌-ರಾಧಿಕಾ ಸಮಾರಂಭಕ್ಕೆ ಈ ಗಾಯಕರು ಲೈವ್ ಶೋ ನಡೆಸಿಕೊಟ್ಟರು. ಆದರೆ ಈ ಗಾಯಕ-ಗಾಯಕಿಯರು ಬಿಲಿಯನೇರ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪಡೆದ ಸಂಭಾವನೆ ಎಷ್ಟು ನಿಮ್ಗೆ ಗೊತ್ತಿದ್ಯಾ?

ರಿಹಾನ್ನಾ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ಪ್ರಿ ವೆಡ್ಡಿಂಗ್‌ ಇವೆಂಟ್‌ನಲ್ಲಿ ಪಾಪ್‌ ತಾರೆ, ಬಾರ್ಬಡಿಯನ್ ಗಾಯಕಿ ರಿಹಾನ್ನಾ ಲೈವ್‌ ಶೋ ಹೈಲೈಟ್ ಆಗಿತ್ತು. ಬೃಹತ್ ಗಾತ್ರದ ಸಾಮಾನು ಸರಂಜಾಮುಗಳೊಂದಿಗೆ ಜಾಮ್ನಾನಗರಕ್ಕೆ ಆಗಮಿಸಿದಾಗಿನಿಂದ, ಪ್ರದರ್ಶನಕ್ಕಾಗಿ ತನ್ನ ಉಡುಪಿಗೆ ಭಾರತೀಯ ಸ್ಪರ್ಶವನ್ನು ಸೇರಿಸುವ ಮೂಲಕ ರಿಹಾನ್ನಾ ಎಲ್ಲರ ಗಮನ ಸೆಳೆದರು. ಈ ಲೈವ್‌ ಶೋಗಾಗಿ ರಿಹಾನ್ನಾ 12-74 ಕೋಟಿ ಸಂಭಾವನೆ ಪಡೆದಿದ್ದಾರೆಂದು ವರದಿಯಾಗಿದೆ.

ಅನಂತ್ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ ವೆಚ್ಚ ಭರ್ತಿ 1200 ಕೋಟಿ, ಮದುವೆಗೆ ಖರ್ಚು ಮಾಡ್ತಿರೋದೆಷ್ಟು?

ಅರ್ಜಿತ್ ಸಿಂಗ್‌ 
ಪ್ರಸ್ತುತ ಭಾರತದಲ್ಲಿ ಅತ್ಯಂತ ಪ್ರತಿಭಾನ್ವಿತ ಗಾಯಕರಲ್ಲೊಬ್ಬರು ಅರ್ಜಿತ್‌ ಸಿಂಗ್‌. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಅರ್ಜಿತ್‌ ಸಿಂಗ್ ತಮ್ಮ ರೋಮ್ಯಾಂಟಿಕ್ ಹಾಡುಗಳ ಮೂಲಕ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು. ಅರ್ಜಿತ್‌ ಸಿಂಗ್ ತಮ್ಮ ಲೈಫ್ ಶೋಗಾಗಿ ಬರೋಬ್ಬರಿ 5 ಕೋಟಿ ರೂ. ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಎಕಾನ್ 
ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಒಳಗೊಂಡ ಚಮ್ಮಕ್ ಚಲ್ಲೋ ಎಂಬ ಹಾಡಿನೊಂದಿಗೆ ಎಕಾನ್ ಖ್ಯಾತಿಯನ್ನು ಪಡೆದರು. ಆ ಡ್ಯಾನ್ಸ್‌ನ ಟ್ಯೂನ್‌ನ್ನು ಇಂದಿಗೂ ಲಕ್ಷಾಂತರ ಜನರು ಇಷ್ಟಪಡುತ್ತಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಪ್ರಿ ವೆಡ್ಡಿಂಗ್‌ ಇವೆಂಟ್‌ನಲ್ಲಿ ಎಕಾನ್‌ ಈ ಹಾಡಿನ ಮೂಲಕ ಎಲ್ಲರನ್ನು ರಂಜಿಸಿದರು. ಸೆಲೆಬ್ರಿಟಿ ಟ್ಯಾಲೆಂಟ್ ನೆಟ್ ವರದಿಯ ಪ್ರಕಾರ, ಎಕಾನ್ ಸುಮಾರು 2-4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಗ್ರ್ಯಾಂಡ್‌ ವೆಡ್ಡಿಂಗ್ ನಡೀತಿರೋ ಸ್ಟೋಕ್‌ಪಾರ್ಕ್‌ ಹೇಗಿದೆ?

ಪ್ರೀತಮ್ 
ಭಾರತೀಯ ಚಿತ್ರರಂಗಕ್ಕೆ ಕೆಲವು ಅಸಾಮಾನ್ಯ ಸಂಗೀತವನ್ನು ನೀಡಿದ ಗಾಯಕ ಪ್ರೀತಮ್‌. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಪೂರ್ವದಲ್ಲಿ ತಮ್ಮ ಹಾಡಿನ ಮೂಲಕ ಎಲ್ಲರನ್ನೂ ಆಕರ್ಷಿಸಲು ಪ್ರೀತಮ್ ಅವರನ್ನು ಆಹ್ವಾನಿಸಲಾಯಿತು. ಪ್ರದರ್ಶನಕ್ಕಾಗಿ ಪ್ರೀತಮ್‌ 40-50 ಲಕ್ಷ ರೂ. ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಉದಿತ್ ನಾರಾಯಣ್
ಉದಿತ್ ನಾರಾಯಣ್, ಹಿಂದಿ ಚಿತ್ರರಂಗದ 90ರ ದಶಕದ ಎಲ್ಲರ ನೆಚ್ಚಿನ ನಾಯಕರಾಗಿದ್ದಾರೆ. ಗದರ್, ವೀರ್ ಝಾರಾ, ಕರಣ್ ಅರ್ಜುನ್, ಅಗ್ನಿಪಥ್, ವಿವಾಹ ಮತ್ತು ಇನ್ನೂ ಅನೇಕ ಚಲನಚಿತ್ರಗಳಿಗಾಗಿ ಹಾಡಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಪ್ರಿ ವೆಡ್ಡಿಂಗ್ ಇವೆಂಟ್‌ಗಾಗಿ ಪ್ರದರ್ಶನ ನೀಡಿದರು. ವರದಿಯ ಪ್ರಕಾರ, ಉದಿತ್ ನಾರಾಯಣ್‌ ಕಾರ್ಯಕ್ರಮಕ್ಕೆ 22-30 ಲಕ್ಷ ರೂ. ಪಡೆದಿದ್ದಾರೆ.

ಲಕ್ಕಿ ಅಲಿ 
ಲಕ್ಕಿ ಅಲಿಯ ಭಾವಪೂರ್ಣ ಧ್ವನಿಯು ಪ್ರತಿಯೊಬ್ಬರನ್ನು ಉತ್ತಮ ಹಳೆಯ ನೆನಪುಗಳಿಗೆ ಹಿಂತಿರುಗಿಸುತ್ತದೆ. ಓ ಸನಮ್, ನಾ ತುಮ್ ಜಾನೋ ನ ಹಮ್, ಏಕ್ ಪಾಲ್ ಕಾ ಜೀನಾ ಮುಂತಾದ ಕೆಲವು ಸ್ಮರಣೀಯ ಹಾಡುಗಳಿಗೆ ಅವರು ಮನ್ನಣೆ ಪಡೆದಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಪ್ರದರ್ಶನಕ್ಕಾಗಿ ಲಕ್ಕಿ ಆಲಿ 10 ಲಕ್ಷ ರೂ. ಪಡೆದಿದ್ದಾರೆ.

ಶ್ರೇಯಾ ಘೋಷಾಲ್
ಮೆಲೋಡಿ ಕ್ವೀನ್, ಶ್ರೇಯಾ ಘೋಷಾಲ್ ಮಧುರ ಕಂಠದ ಗಾಯಕಿ. ಬಹು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಶ್ರೇಯಾ, ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಹೆಚ್ಚು ಬೇಡಿಕೆಯಿರುವ ಗಾಯಕಿ ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪೂರ್ವ ವಿವಾಹಕ್ಕೆ, ಶ್ರೇಯಾ ಅರಿಜಿತ್ ಸಿಂಗ್ ಅವರೊಂದಿಗೆ ಜುಗಲ್ಬಂದಿ ಪ್ರದರ್ಶಿಸಿದರು. ವರದಿಯ ಪ್ರಕಾರ ಆಕೆ 25 ಲಕ್ಷ ರೂ. ಪಡೆದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Commitment Phobia: ನಿಮ್ಮ ಸಂಗಾತಿಗೂ ಇದ್ಯಾ ಚೆಕ್ ಮಾಡ್ಕೊಳ್ಳಿ! ಗುರುತಿಸುವುದು ಹೇಗೆ?
Women Mistakes in Love: ಲವ್ವಲ್ಲಿ ಬಿದ್ದ ಹೆಣ್ಣು ಮಕ್ಕಳ ಹಣೆ ಬರಹವೇ ಇಷ್ಟು, ಮತ್ತದೇ ತಪ್ಪೆಸೆಗುತ್ತಾರೆ!