ಪ್ರೀತಿ ಎಂದರೆ ಹಾಗೆಯೇ. ಅದಕ್ಕೆ ಯಾವ ಗಡಿಯೂ ಇಲ್ಲ. ಜಾತಿ-ಧರ್ಮ, ರಾಜ್ಯ-ದೇಶಗಳ ಹಂಗಿಲ್ಲ. ಅದು ಅಕ್ಷರಶಃ ನಿಜ ಅನ್ನೋದನ್ನು ಇಲ್ಲೊಂದು ಜೋಡಿ ಸಾಬೀತುಪಡಿಸಿದೆ. ಮೆಕ್ಸಿಕೋ ದೇಶದ ಯುವತಿಯೊಬ್ಬಳು ಭಾರತಕ್ಕೆ ಆಗಮಿಸಿ ತಮಿಳುನಾಡಿನ ತನ್ನ ಪ್ರಿಯಕರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ತಮಿಳುನಾಡು: ವಿದೇಶಿಗರು, ಭಾರತೀಯರನ್ನು ಮದುವೆಯಾಗುವುದು ಹೊಸತೇನಲ್ಲ. ಭಾರತೀಯರು ಸಹ ಮೆಚ್ಚಿ ವಿದೇಶಿಯರನ್ನು ಮದ್ವೆಯಾಗುತ್ತಾರೆ. ಹಾಗೆಯೇ ಮೆಕ್ಸಿಕೊ ದೇಶದ ಯುವತಿ ಹಾಗೂ ತಮಿಳುನಾಡಿನ ಯವಕನಿಗೆ ಪ್ರೇಮಾಂಕುರವಾಗಿ, ಈ ಜೋಡಿ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದಾರೆ. ತಮಿಳುನಾಡಿನ ಕುಪ್ಪುಚಿಪುದೂರ್ ಪೊಲ್ಲಾಚಿ ನಿವಾಸಿಯಾಗಿರುವ ಸಾವುತ್ರಿ ರಾಜ್, ಮೆಕ್ಸಿಕೋ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಡೇನಿಯಾಲಾ ಎಂಬ ಮೆಕ್ಸಿಕನ್ ಯುವತಿಯ ಪರಿಚಯವಾಗಿತ್ತು. ಕ್ರಮೇಣ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದು ನಂತರ ಪ್ರೀತಿಸಲು ಶುರು ಮಾಡಿದ್ದರು.
ಆ ಬಳಿಕ ಮೆಕ್ಸಿಕನ್ ಯುವತಿ, ತಾನು ಪ್ರೀತಿಸಿದವನನ್ನು ಮದುವೆ (Marriage)ಯಾಗಲೂ ಕುಟುಂಬದವರನ್ನು ಒಪ್ಪಿಸಿ, ತನ್ನ ಬಂಧು ಬಳಗದವರ ಜೊತೆಗೆ ಭಾರತಕ್ಕೆ ಬಂದು ಇಲ್ಲಿನ ಸಂಪ್ರದಾಯದಂತೆ (Tradition) ವಿವಾಹವಾಗಿದ್ದಾಳೆ. ಭಾರತೀಯ ಸಾಂಪ್ರದಾಯಿಕ ಶೈಲಿಯ ವಿವಾಹಕ್ಕೆ ಮಾರುಹೋಗಿರುವ ವಧು ಡೇನಿಯಲಾ ಹಳ್ಳಿಯಲ್ಲೇ ಮದುವೆಯಾಗಲು ನಿರ್ಧರಿಸಿದ್ದಾಳೆ. ಹೀಗಾಗಿ ಈ ಜೋಡಿ ತಮಿಳುನಾಡಿನಲ್ಲಿ ಮದುವೆಯಾದರು. ಇವರಿಬ್ಬರ ಮದುವೆ ಸಂಭ್ರಮದಲ್ಲಿ ಇಡೀ ಊರಿನ ಮಂದಿ ಪಾಲ್ಗೊಂಡು ಹಾರೈಸಿದ್ದಾರೆ.
undefined
ಗಂಡ ಕಪ್ಪು ಎಂದು ಹಸಮಣೆಯಲ್ಲಿ ಮದ್ವೆ ಬೇಡ ಎಂದ ವಧು
ಅಲ್ಲದೆ ಡೇನಿಯಾಲಳ ತಂದೆ-ತಾಯಿ ಕೂಡ ತಮಿಳುನಾಡಿಗೆ ಬಂದು ವಧು-ವರರಿಗೆ ಆಶೀರ್ವಾದ ಮಾಡಿದರು. ಇಲ್ಲಿನ ಸಂಸ್ಕೃತಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಮೆಕ್ಸಿಕನ್ ಮಂದಿ ಭಾರತೀಯ ಶೈಲಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ಮಗಳ ಮದುವೆಯಲ್ಲಿ ಮಿಂಚಿದರು. ವಿವಾಹದ ನಂತರ ಎರಡು ಕಡೆಯವರು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಜತೆಯಲ್ಲೇ ನೃತ್ಯ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿವೆ.
ತಂದೆಯ ಅಂತ್ಯಕ್ರಿಯೆಯ ಜೊತೆ ಜೊತೆಗೇ ಮಗನ ಮದುವೆ!
ಮದುವೆ ಅನ್ನೋದು ಜೀವನದಲ್ಲಿ ಸ್ಪೆಷಲ್ ಡೇ. ಶುಭ ಮುಹೂರ್ತದಲ್ಲಿ ಹುಡುಗ-ಹುಡುಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕಷ್ಟನೋ ಸುಖನೋ ಜೀವನದುದ್ದಕ್ಕೂ ಜೊತೆಯಾಗಿ ಸಾಗೋ ನಿರ್ಧಾರ ಮಾಡುತ್ತಾರೆ. ಮನೆ ಮಂದಿ, ಸಂಬಂಧಿಕರು, ಸ್ನೇಹಿತರು ಇವರನ್ನು ಹಾರೈಸುತ್ತಾರೆ. ಮದ್ವೆಗೆ ಸೂಕ್ತವೆನಿಸುವ ಮುಹೂರ್ತ ನೋಡಿ, ಶುಭ ಘಳಿಗೆಯನ್ನು ತಿಳಿದು ತಾಳಿ ಕಟ್ಟಲಾಗುತ್ತದೆ. ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸಿರುತ್ತದೆ. ಮದುವೆ ಇಷ್ಟು ದೊಡ್ಡ ಹಾಲ್‌ನಲ್ಲಿ ಮಾಡಬೇಕು, ಮನೆಯಲ್ಲೇ ಅದ್ಧೂರಿಯಾಗಿ ಮಂಟಪ ಸಿದ್ಧಪಡಿಸಿ, ಡೆಕೊರೇಷನ್ ಮಾಡಿ ಮಾಡ್ಕೊಳ್‌ಬೇಕು ಅಂದ್ಕೊಳ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಇದೆಲ್ಲಕ್ಕಿಂತ ವಿಭಿನ್ನವಾಗಿ ಅಂತ್ಯಕ್ರಿಯೆಯಲ್ಲೇ ಮದ್ವೆ ಮಾಡಿಕೊಂಡಿದ್ದಾನೆ.
ಕುಡಿದ ಮತ್ತಿನಲ್ಲಿ ಅತ್ತಿಗೆ ಕತ್ತಿಗೆ ಹಾರ ಹಾಕಿದ ಭೂಪ : ಬಿತ್ತು ಹಿಗ್ಗಾಮುಗ್ಗಾ ಗೂಸಾ
ಹೌದು, ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಚೆನ್ನೈನ ಕಲ್ಲಕುರಿಚಿಯಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ ಕೊನೆಯ ಆಸೆಯಂತೆ (Fathers last wish) ಅವರ ಅಂತ್ಯಕ್ರಿಯೆಯಲ್ಲೇ ದಾಂಪತ್ಯ ಜೀವನಕ್ಕೆ (Married life) ಕಾಲಿಟ್ಟಿದ್ದಾನೆ. ತಂದೆಯ ಮೃತದೇಹದ ಮುಂದೆಯೇ ಪ್ರಿಯತಮೆಯನ್ನು ವಿವಾಹವಾಗುವ ಮೂಲಕ ತಂದೆಯ ಕೊನೆಯ ಆಸೆಯನ್ನುಈಡೇರಿಸಿದ್ದಾನೆ. ಕಲ್ಲಕುರಿಚಿ ಬಳಿ ಘಟನೆ ನಡೆದಿದ್ದು, ಅದೇ ದಿನ ಸಂಜೆ ತಂದೆಯ ಅಂತಿಮ ವಿಧಿವಿಧಾನಗಳು ನಡೆದವು.