ನಮ್ಮದು ಪುರುಷ ಪ್ರಧಾನ ಸಮಾಜ. ಈ ಸಮಾಜದಲ್ಲಿ ಮಹಿಳೆ ಏನೇ ಮಾಡಿದ್ರೂ ಅದನ್ನು ಪರಿಗಣಿಸೋದು ಬಹಳ ಕಷ್ಟ. ಮನೆಯಲ್ಲಿಯೇ ಆಕೆಗೆ ಮಾನ್ಯತೆ ಸಿಗೋದಿಲ್ಲ. ಏನೆಲ್ಲ ಮಾಡಿದ್ರೂ ಪತಿ ಆಕೆಯನ್ನು ಬದಲಿಸುವ ಗುಂಗಿನಲ್ಲೇ ಇರ್ತಾನೆ.
ಸಮಾಜ ಎಷ್ಟು ಮುಂದುವರೆದಿದೆ, ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಡಲಾಗಿದೆ ಎಂದು ಹೇಳಿದರೂ ಗಂಡ ಹೆಂಡತಿ ನಡುವೆ ಜಗಳವಾದಾಗ, ಹೆಂಡತಿ ಜಾಸ್ತಿ ಜಗಳ, ಕಿರಿಕಿರಿ ಮಾಡಿದ್ರೆ ನಾನು ಬೇರೆ ಮದುವೆ ಆಗುತ್ತೀನಿ ಅಂತ ಗಂಡಸರು ಹೇಳುವುದು ಸಾಮಾನ್ಯ ಸಂಗತಿ.
ಒಬ್ಬ ಮಹಿಳೆ ಮನೆ, ಮಕ್ಕಳು, ಗಂಡ ಎಂದು ಎಷ್ಟೇ ಕಷ್ಟಪಟ್ಟು ದುಡಿದರೂ ಕೊನೆಯಲ್ಲಿ ಅವಳು ಯಾವ ಜವಾಬ್ದಾರಿ (Responsibility ) ಯನ್ನೂ ಸರಿಯಾಗಿ ನಿರ್ವಹಿಸಿಲ್ಲ, ಮಕ್ಕಳನ್ನು ಸರಿಯಾಗಿ ಬೆಳೆಸಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ ಎಂಬ ಕೊಂಕು ಮಾತುಗಳೇ ಹೆಚ್ಚು ಪ್ರತಿಧ್ವನಿಸುತ್ತವೆ. ಎಲ್ಲಿಯವರೆಗೆ ಮಹಿಳೆ ಇದನ್ನೆಲ್ಲ ಸಹಿಸಬೇಕು? ಏಕೆ ಸಹಿಸಬೇಕು? ಒಬ್ಬ ಗಂಡನಾದವನಿಗೆ ಇಂತಹ ಮಾತುಗಳನ್ನಾಡುವ ಹಕ್ಕನ್ನು ಕೊಟ್ಟವರಾದರೂ ಯಾರು?...ಹೆಣ್ಣು ಮಾರುಕಟ್ಟೆ (Market) ಯಲ್ಲಿ ಸಿಗುವ ವಸ್ತುವಲ್ಲ. ನಮಗೆ ಬೇಡದ ವಸ್ತುಗಳನ್ನು ರಿಪ್ಲೇಸ್ ಮಾಡಿದ ತರಹ ಅವಳನ್ನು ರಿಪ್ಲೇಸ್ ಮಾಡಲು ಹೇಗೆ ಸಾಧ್ಯ?
18 ವರ್ಷಗಳ ಹಿಂದೆ ಪತಿ ಬರೆದಿದ್ದ ಲವ್‌ಲೆಟರ್ ಶೇರ್ ಮಾಡಿದ ಮಹಿಳೆ, ವಾರೆವ್ಹಾ ಎಂದ ನೆಟ್ಟಿಗರು
ವಾಸ್ತವದಲ್ಲಿ ಇಂತಹ ಅನೇಕ ಸವಾಲುಗಳಿದ್ದರೂ ಅದಕ್ಕೆ ಉತ್ತರಗಳು ಬಹಳ ಕಡಿಮೆಯಿದೆ. ಪುರುಷರಿಗಿರುವ ಇಂತಹ ಹಕ್ಕುಗಳು ಮಹಿಳೆಯರಿಗೆ ಏಕಿಲ್ಲ. ಒಬ್ಬ ಪತಿಯಾದವನು ತನ್ನ ಹೆಂಡತಿಯ ಮೇಲೆ ಮತ್ತೆ ಮತ್ತೆ ದಬ್ಬಾಳಿಕೆ ನಡೆಸಿ ಎರಡನೇ ಮದುವೆಗೆ ಒಪ್ಪಿಸುತ್ತಾನೆಂದರೆ ಮಹಿಳೆಯರು ಇದರ ವಿರುದ್ಧ ಏಕೆ ಧ್ವನಿ ಎತ್ತಬಾರದು. ಅಷ್ಟಕ್ಕೂ ಮೊದಲ ಹೆಂಡತಿ ಜೀವಂತವಿದ್ದಾಗಲೇ ಎರಡನೇ ಮದುವೆ ಆಗುವುದು ಅಷ್ಟು ಸುಲಭವಲ್ಲ. ನಮ್ಮ ಕಾನೂನು ಅಷ್ಟೊಂದು ಬಲಹೀನವಾಗಿಲ್ಲ.
ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾದರೆ ಶಿಕ್ಷೆ ತಪ್ಪಿದ್ದಲ್ಲ : ಭಾರತೀಯ ಕಾನೂನು ಯಾರು ಏನೇ ಮಾಡಿದರೂ ಶಿಕ್ಷೆ ವಿಧಿಸುವುದಿಲ್ಲ ಎಂದು ತಿಳಿದಿದ್ದರೆ ಅದು ತಪ್ಪು. ಭಾರತೀಯ ಕಾನೂನು ಅಷ್ಟು ಬಲಹೀನವಾಗಿಲ್ಲ. ಭಾರತೀತ ದಂಡಸಂಹಿತೆ 494 ರ ಪ್ರಕಾರ, ಯಾವುದೇ ಪುರುಷ ವಿಚ್ಛೇದನಕ್ಕೂ ಮೊದಲು ಎರಡನೇ ಮದುವೆಯಾದರೆ ಅವನಿಗೆ ಕನಿಷ್ಠ 7 ವರ್ಷದ ಕಠಿಣ ಸಜೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಹಿಂದೂ ಮ್ಯಾರೇಜ್ ಆ್ಯಕ್ಟ್ 1955 ರ ಅನ್ವಯ ಮಹಿಳೆ ಅಥವಾ ಪುರುಷ ವಿಚ್ಛೇದನ ಪಡೆಯದೇ ಇನ್ನೊಂದು ಮದುವೆಯಾಗುವ ಹಾಗಿಲ್ಲ. ಇದು ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮದವರಿಗೆ ಅನ್ವಯವಾಗುತ್ತದೆ. ಮುಸ್ಲಿಮ್ ಸಮುದಾಯದವರಿಗೆ ಬೇರೆ ನಿಯಮ ಅನ್ವಯವಾಗುತ್ತದೆ.
ನಿಮ್ಮ ಹೆಂಡ್ತಿಯಲ್ಲಿದ್ಯಾ ಈ ಗುಣ? ಹಾಗಾದ್ರೆ ಒಳ್ಳೇಯವಳು ಎಂದರ್ಥ!
ವಧು ತೀರಿ ಹೋದಾಗ ಅವಳ ತಂಗಿಯನ್ನು ಮದುವೆಯಾಗೋದು ಸರಿನಾ? : ಇದು ಗುಜರಾತ್ ನಲ್ಲಿ ನಡೆದ ಒಂದು ಘಟನೆಯಾಗಿದೆ. ಮದುವೆಯ ದಿನವೇ ವಧು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾಳೆ. ಮನೆಯವರು ತಮ್ಮ ಮರ್ಯಾದೆಯನ್ನು ಉಳಿಸಿಕೊಳ್ಳಲು, ಮದುಮಗನನ್ನು ಮತ್ತೆ ಹಿಂದಕ್ಕೆ ಕಳುಹಿಸಬಾರದೆಂದು ಸತ್ತ ವಧುವಿನ ತಂಗಿಯನ್ನೇ ವರನಿಗೆ ಕೊಟ್ಟು ಮದುವೆಮಾಡುತ್ತಾರೆ. ಮನೆಯ ಮರ್ಯಾದೆ ಉಳಿಸಲು ಮನೆಯವರು ತೆಗೆದುಕೊಂಡ ಈ ನಿರ್ಧಾರ ಸಮಾಜಕ್ಕೆ ಸರಿ ಎನಿಸಿದರೂ ಮದುವೆಯಾದ ಆ ಹೆಣ್ಣಿನ ದೃಷ್ಟಿಯಲ್ಲಿ ಇಂತಹ ನಿರ್ಧಾರ ಎಷ್ಟು ಸರಿ. ಅವಳ ಆಸೆ ಆಕಾಂಕ್ಷೆಗಳಿಗೆ ಬೆಲೆ ಇಲ್ಲವಾ? ಅವಳು ತನ್ನ ಅಕ್ಕ ತೀರಿಕೊಂಡ ದುಃಖದಲ್ಲೇ ಮನೆಯವರ ಪ್ರತಿಷ್ಠೆ ಉಳಿಸುವುದಕ್ಕೋಸ್ಕರ ಮದುವೆಯಾಗಬೇಕಾಯಿತು.
ಇಂದಿನ ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೂ ಕೂಡ ಕೆಲವೊಮ್ಮೆ ಪರಿಸ್ಥಿತಿಗಳಿಗೆ ಸಿಲುಕಿ ಮಹಿಳೆಯರು ಒದ್ದಾಡುತ್ತಾರೆ. ಅಂತಹ ಸ್ಥಿತಿಯಲ್ಲಿ ಅವರಿಗೆ ಹಕ್ಕುಗಳ ಅರಿವು ಇರುವುದಿಲ್ಲ. ಹಾಗಾಗಿ ಮಹಿಳೆಯರು ಕೂಡ ಈ ವಿಷಯದಲ್ಲಿ ಜಾಗರೂಕರಾಗಿರಬೇಕು. ತಮ್ಮ ಹಕ್ಕುಗಳ ಕುರಿತು ತಿಳುವಳಿಕೆ ಬೆಳೆಸಿಕೊಳ್ಳಬೇಕು. ಒಬ್ಬ ಪುರುಷ ತನ್ನ ಹೆಂಡತಿಯನ್ನು ದೂರ ಮಾಡಿದಾಗ ಮೂಕವಾಗುವ ಈ ಸಮಾಜ ಹೆಂಡತಿ ತನ್ನ ಗಂಡನನ್ನು ದೂರ ಮಾಡಿದಾಗ ಅವಳನ್ನು ಚಾರಿತ್ರ್ಯಹೀನಳೆಂದು ದೂಷಿಸುವುದು ಎಷ್ಟು ಸರಿ?