ತಮ್ಮನಿಗೆ ಪಿರಿಯಡ್ಸ್ ಪಾಠ ಹೇಳಿದ ಅಣ್ಣನ ವೀಡಿಯೋ ವೈರಲ್, ಮಗಳಿಗೆ ಮಾತ್ರವಲ್ಲ, ಮಗಂಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

By Roopa Hegde  |  First Published May 9, 2024, 3:55 PM IST

ಪ್ರತಿ ತಿಂಗಳು ಮಹಿಳೆಯರಿಗೆ ಪಿರಿಯಡ್ಸ್ ನೋವು ಸಾಮಾನ್ಯ. ಮಹಿಳೆ ಎಷ್ಟೇ ನೋವು ತಿಂದ್ರೂ ಕೆಲ ಪುರುಷರು ಅವರ ಬೆಂಬಲಕ್ಕೆ ನಿಲ್ಲೋದಿಲ್ಲ. ಅದಕ್ಕೆ ಕಾರಣ ಅವರಿಗೆ ಮುಟ್ಟಿನ ಜ್ಞಾನವೇ ಇರೋದಿಲ್ಲ. ತನ್ನ ತಮ್ಮ ಕೂಡ ಈ ವಿಷ್ಯದಲ್ಲಿ ಅಜ್ಞಾನಿ ಆಗ್ಬಾರದು ಎನ್ನುವ ಕಾರಣಕ್ಕೆ ಅಣ್ಣ ಮಾಡಿದ ಕೆಲಸ ಮೆಚ್ಚುಗೆಗಳಿಸಿದೆ. 
 


ಈಗ್ಲೂ ಜನರು ಮುಟ್ಟನ್ನು ಮಡಿವಂತಿಕೆಯಂತೆ ನೋಡ್ತಾರೆ. ಪಿರಿಯಡ್ಸ್ ಆದ ವಿಷ್ಯವನ್ನು ಎಲ್ಲಿಯೂ ಮಹಿಳೆಯರು ಹೇಳೋದಿಲ್ಲ. ಮನೆಯಲ್ಲಿರುವ ಗಂಡು ಮಕ್ಕಳಿಗೆ ಅಮ್ಮ ಅಥವಾ ಸಹೋದರಿಯರು ಪಿರಿಯಡ್ಸ್ ನೋವಿನಿಂದ ಬಳಲುತ್ತಿದ್ದಾರೆ ಅನ್ನೋದೇ ತಿಳಿಯೋದಿಲ್ಲ. ಮನೆಯಲ್ಲಿ ತಂಗಿಯರಿದ್ರೆ ಅಣ್ಣಂದಿರಿಗೆ ಇದ್ರ ಬಗ್ಗೆ ಅಲ್ಪಸ್ವಲ್ಪ ವಿಷ್ಯ ತಿಳಿದಿರುತ್ತದೆ. ಅದೇ ಸಹೋದರಿಯರಿಲ್ಲದ ಮನೆಯಲ್ಲಂತೂ ಅಮ್ಮ ಪಿರಿಯಡ್ಸ್ ವಿಷ್ಯವನ್ನು ಗಂಡು ಮಕ್ಕಳಿಗೆ ತಿಳಿಸದೆ ಅದನ್ನು ಗುಟ್ಟಾಗಿ ಇಟ್ಟಿರುತ್ತಾಳೆ. 

ಬ್ಲೀಡಿಂಗ್ (Bleeding), ಪ್ಯಾಡ್ ಬಳಕೆ (Sanitary Pad Usage) ಸೇರಿದಂತೆ ಪಿರಿಯಡ್ಸ್ (Periods) ವೇಳೆ ನೋವಾಗುತ್ತೆ ಎಂಬ ಸಂಗತಿ ಕೂಡ ಅನೇಕ ಪುರುಷರಿಗೆ ತಿಳಿದಿರೋದಿಲ್ಲ. ಮದುವೆ ಆದ್ಮೇಲೆ ಪಿರಿಯಡ್ಸ್ ಸಮಯದಲ್ಲಿ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳೋದ್ರಲ್ಲಿ ಪತಿ ಎಡವುತ್ತಾನೆ. ಪತ್ನಿ ಅಥವಾ ಗರ್ಲ್ ಫ್ರೆಂಡ್ (Girlfriend) ಪಿರಿಯಡ್ಸ್ ನೋವು ಅಂದಾಗ ಅಚ್ಚರಿಯಿಂದ ನೋಡುವ ಹುಡುಗ್ರು ಈಗ್ಲೂ ಇದ್ದಾರೆ. 

Tap to resize

Latest Videos

ಇದೇ ಫಸ್ಟ್ ಟೈಮ್ ಹೋದ ಸ್ಥಳದಲ್ಲಿ ಮಗನ ಪೇಂಟಿಂಗ್, ನೋಡಿ ಬೆಚ್ಚಿದ ದಂಪತಿ! ಪುನರ್ಜನ್ಮ ಇದೇನಾ?

ಹದಿಹರೆಯಕ್ಕೆ ಬರ್ತಿದ್ದಂತೆ ಮಕ್ಕಳಿಗೆ ಎಲ್ಲ ಸಂಗತಿಯನ್ನು ತಿಳಿಯುವ ಕುತೂಹಲವಿರುತ್ತದೆ. ಸ್ನೇಹಿತರು, ಇಂಟರ್ನೆಟ್ (Internet) ಮೂಲಕ ಯುವಕರು ಪಿರಿಯಡ್ಸ್ ಬಗ್ಗೆ ತಪ್ಪಾಗಿ ಮಾಹಿತಿ ಪಡೆಯೋದಿದೆ. ಪ್ರತಿಯೊಬ್ಬ ವ್ಯಕ್ತಿಗೆ ಮುಟ್ಟಿನ ಬಗ್ಗೆ ಸರಿಯಾದ ಮಾಹಿತಿ ತಿಳಿದಿರಬೇಕು. ಇದನ್ನು ಅರಿತಿರುವ ಅನೀಶ್ ಎಂಬ ಯುವಕ ತನ್ನ ಸಹೋದರನ ಹುಟ್ಟುಹಬ್ಬಕ್ಕೆ ಪಿರಿಯಡ್ಸ್ ಬಗ್ಗೆ ಮಾಹಿತಿ ನೀಡಿ ಸರ್ಪ್ರೈಸ್ ನೀಡಿದ್ದಾನೆ. ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ಆತನ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

@anishbhagatt ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅನೀಶ್ ಸಹೋದರ ಧ್ರುವ 12ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಆತನ ಹುಟ್ಟುಹಬ್ಬದ ಸಮಯದಲ್ಲಿ ಧ್ರುವನನ್ನು ಪಿಕ್ ಮಾಡುವ ಅನೀಶ್, ಮೊದಲು ಹುಟ್ಟುಹಬ್ಬಕ್ಕೆ ಶುಭಕೋರುತ್ತಾನೆ. ನಂತ್ರ ಮಹಿಳೆಯರ ಪಿರಿಯಡ್ಸ್ ಬಗ್ಗೆ ನಿನಗೆ ಮಾಹಿತಿ ಇದ್ಯಾ ಎಂದು ಕೇಳುತ್ತಾನೆ. ಅದಕ್ಕೆ ಧ್ರುವ ಇಲ್ಲ ಎನ್ನುವ ಉತ್ತರ ನೀಡ್ತಾನೆ.

ಕಾರಿನಲ್ಲಿ ಕುಳಿತ ಸಹೋದರನಿಗೆ ಅನೀಶ್ ಪಿರಿಯಡ್ಸ್ ಬಗ್ಗೆ ಮಾಹಿತಿ ನೀಡ್ತಾನೆ. ನೀನು ಈಗ ದೊಡ್ಡವನಾಗಿದ್ದೀಯಾ. ಪಿರಿಯಡ್ಸ್ ಬಗ್ಗೆ ತಿಳಿಯುವ ಅಗತ್ಯವಿದೆ ಎನ್ನುವ ಅನೀಶ್, ಮುಟ್ಟಿನ ರಕ್ತಸ್ರಾವ (Period Flow) ಮತ್ತು ಸೆಳೆತದ ಬಗ್ಗೆ ಧ್ರವಗೆ ವಿವರಿಸುತ್ತಾನೆ. ಅಣ್ಣನ ಮಾತನ್ನು ಧ್ರವ ಆಸಕ್ತಿಯಿಂದ ಕೇಳುತ್ತಾನೆ. ಬೇರೆಯವರಿಂದ ತಪ್ಪು ಮಾಹಿತಿ ಪಡೆಯುವ ಬದಲು ತನ್ನಿಂದಲೇ ಸೂಕ್ತ ಮಾಹಿತಿ ಧ್ರುವಗೆ ಸಿಗಲಿ ಎನ್ನುವ ಉದ್ದೇಶದಿಂದ ಅನೀಶ್ ಈ ವಿಷ್ಯವನ್ನು ತಮ್ಮಂಗೆ ಅರ್ಥವಾಗುವಂತೆ ವಿವರಿಸಿದ್ದಾನೆ. ಇದು ಧ್ರುವಗೆ ಸರ್ಪ್ರೈಸ್ ಎನ್ನಬಹುದು. 

ಒಂಟಿತನ, ಏನೋ ಕಳೆದುಕೊಂಡಂಗೆ ಆಗ್ತಿದೆ ಅಂದ್ರೆ ಅಪ್ಪಿಕೊಳ್ಳಿ! ಇದ್ರಿಂದ್ ಆಗೋಲ ಲಾಭ ಒಂದೆರಡಲ್ಲ

ಅಣ್ಣನ ಎಲ್ಲ ಮಾತುಗಳನ್ನು ಕೇಳಿದ ಧ್ರುವ, ಪಿರಿಯಡ್ಸ್ ವೇಳೆ ಮಹಿಳೆಯರಿಗೆ ನೋವಾಗುತ್ತಾ ಎಂದು ಪ್ರಶ್ನೆ ಕೇಳ್ತಾನೆ. ಅದಕ್ಕೆ ಅನೀಶ್ ಯಸ್ ಎನ್ನುವುದಲ್ಲದೆ ಪುರುಷರಾಗಿ ನಾವು ಅವರಿಗೆ ಸಹಾಯ ಮಾಡಬೇಕು ಎನ್ನುತ್ತಾರೆ. ಇಷ್ಟೇ ಅಲ್ಲ, ಅನೀಶ್ ಹೇಳಿದಂತೆ ಧ್ರುವ ಅಂಗಡಿಗೆ ಹೋಗಿ ಪ್ಯಾಡ್ ಖರೀದಿ ಮಾಡ್ತಾನೆ. ವಿಡಿಯೋ ಕೊನೆಯಲ್ಲಿ, ನನ್ನ ಸುತ್ತಲಿನ ಹುಡುಗಿಯರನ್ನು ಸುರಕ್ಷಿತವಾಗಿಡುವ ಭರವಸೆ ನೀಡುತ್ತೇನೆ ಎಂದು ಧ್ರುವ ಹೇಳ್ತಾನೆ. 

ಅನೀಶ್ ಹಾಗೂ ಧ್ರುವ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 18.5 ಮಿಲಿಯನ್ ಗಿಂತಲೂ ಹೆಚ್ಚು ವ್ಯೂವ್ಸ್ ಸಿಕ್ಕಿದೆ. 13 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಕಮೆಂಟ್ ಈ ವಿಡಿಯೋಗೆ ಬಂದಿದೆ.  ಜನರು ಸಹೋದರರ ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಧ್ರುವನ ಧೈರ್ಯವನ್ನು ಕೆಲವರು ಮೆಚ್ಚಿದ್ದಾರೆ. ಮತ್ತೆ ಕೆಲವರು ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂದಿದೆ ಎಂದಿದ್ದಾರೆ.     

 
 
 
 
 
 
 
 
 
 
 
 
 
 
 

A post shared by Anish Bhagat (@anishbhagatt)

click me!