ಭರ್ಜರಿಯಾಗಿ ಮದುವೆಯಾಗ್ಬೇಕು ಎನ್ನುವ ಆಸೆ ಯಾರಿಗೆ ಇರೋದಿಲ್ಲ ಹೇಳಿ. ಎಲ್ಲರೂ ಹುಬ್ಬೇರಿಸುವಂತೆ ಹಣ ಖರ್ಚು ಮಾಡಿ ಮದುವೆ ಆಗ್ಬೇಕು ಅಂದುಕೊಳ್ತಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ರೆ ಈ ಹೊಸ ಅಧ್ಯಯನ ಏನು ಹೇಳುತ್ತೆ ಅನ್ನೋದನ್ನೊಮ್ಮೆ ಓದಿ.
ಹಿಂದಿದ್ದ ಮದುವೆ ಪದ್ಧತಿ ಈಗಿಲ್ಲ. ಮನೆಯವರೆಲ್ಲ ಸೇರಿ ಕಡಿಮೆ ಖರ್ಚಿನಲ್ಲಿ ಸರಳವಾಗಿ ಮದುವೆ ಮಾಡಿದ್ರೂ ನೆಮ್ಮದಿ, ಸಂತೋಷ ಸಿಗ್ತಿದ್ದ ಮದುವೆ ಈಗ ಬದಲಾಗಿದೆ. ಈಗ ಮದುವೆಯ ರೀತಿ ರಿವಾಜುಗಳಲ್ಲಿ ವ್ಯತ್ಯಾಸ ಕಾಣಬಹುದು. ಮದುವೆಯಲ್ಲಿ ತಮ್ಮ ತಮ್ಮ ಸ್ಟೇಟಸ್ ತೋರಿಸಲು ಜನರು ಪ್ರಯತ್ನಿಸ್ತಾರೆ. ಸಾಲ ಮಾಡಿಯಾದ್ರೂ ಅದ್ಧೂರಿ ಮದುವೆ ಮಾಡ್ತಾರೆ. ಮದುವೆಗಾಗಿಯೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವವರ ಸಂಖ್ಯೆ ಹೆಚ್ಚಿದೆ. ಒಬ್ಬರು ಮಾಡಿದ್ರು ಎನ್ನುವ ಕಾರಣಕ್ಕೆ ಇನ್ನೊಬ್ಬರು, ಇನ್ನೊಬ್ಬರು ಮಾಡಿದ್ರು ಎನ್ನುವ ಕಾರಣಕ್ಕೆ ಮತ್ತೊಬ್ಬರು ಹೀಗೆ ಅದ್ಧೂರಿ ಮದುವೆ ಈಗ ಫ್ಯಾಷನ್, ಸ್ಟೇಟಸ್, ಕಾಮನ್ ಆಗ್ತಿದೆ.
ಈಗಿನ ಮದುವೆ (Marriage) ಗಳಲ್ಲಿ ಕುಟುಂಬದವರಿಗಾಗಲೀ ಅಥವಾ ಸಂಬಂಧಿಕರಿಗಾಗಲೀ ಯಾವುದೇ ರೀತಿಯ ಜವಾಬ್ದಾರಿಗಳು ಇರೋದಿಲ್ಲ. ಮದುವೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕಾಗಿಯೇ ಅನೇಕ ವೆಂಡಿಂಗ್ ಕಂಪನಿಗಳು ತಲೆಎತ್ತಿವೆ. ಎಲ್ಲ ಜವಾಬ್ದಾರಿಗಳನ್ನೂ ಅವರೇ ನೋಡಿಕೊಳ್ಳುತ್ತಾರೆ. ಇಂತಹ ಅದ್ದೂರಿ ಮದುವೆಯಿಂದ ಅನೇಕ ರೀತಿಯ ಸೈಡ್ ಇಫೆಕ್ಟ್ ಗಳಿವೆ ಎಂದು ಅಧ್ಯಯನವೊಂದು ಹೇಳಿದೆ.
undefined
ಅಧ್ಯಯನ (Study) ಏನು ಹೇಳುತ್ತೆ? : ಅದ್ದೂರಿ ಮದುವೆ ಹಾಗೂ ಸರಳ ಮದುವೆಯನ್ನು ಹೋಲಿಸಿದರೆ ಸರಳವಾಗಿ ವಿವಾಹವಾದ ದಂಪತಿ ಹೆಚ್ಚು ಸಂತೋಷವಾಗಿರುತ್ತಾರೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಮದುವೆಯ ಖರ್ಚುಗಳ ಬಗ್ಗೆ ನಡೆಸಿದ ಈ ಅಧ್ಯಯನದಲ್ಲಿ ಸುಮಾರು ಮೂರುಸಾವಿರ ಜೋಡಿಗಳು ಪಾಲ್ಗೊಂಡಿದ್ದರು. ತಮ್ಮ ವೆಂಡಿಂಗ್ ಗಾಗಿ ಕಡಿಮೆ ಖರ್ಚು ಮಾಡಿದ್ದವರು, ಅದ್ದೂರಿ ಮದುವೆ ಮಾಡಿಕೊಂಡವರಿಗಿಂತ ಹೆಚ್ಚು ಸುಖವಾಗಿದ್ದಾರೆ ಎಂಬುದು ಅಧ್ಯಯನದ ನಂತರ ತಿಳಿದಿದೆ.
ರಣಬೀರ್ ಕಪೂರ್‌ಗೆ ಲಿಪ್‌ಸ್ಟಿಕ್ ಆಗೋಲ್ವಂತೆ, ನಟಿಯನ್ಯಾಕೆ ಮದ್ವೆಯಾದ ಕೇಳ್ತಿದ್ದಾರೆ ಫ್ಯಾನ್ಸ್!
ಅದ್ದೂರಿ ಮದುವೆಯಿಂದಾಗುವ ನಷ್ಟಗಳು : ಮದುವೆಗಾಗಿ 1000 ಡಾಲರ್ ಅಥವಾ ಅದಕ್ಕಿಂತ ಕಡಿಮೆ ಖರ್ಚು ಮಾಡಿದವರ ಸಂಬಂಧ ಹೆಚ್ಚು ಸಮಯ ಇರುತ್ತದೆ. ತಮ್ಮ ಮದುವೆಗಾಗಿ 20000 ಡಾಲರ್ ಗಿಂತಲೂ ಹೆಚ್ಚು ಖರ್ಚು ಮಾಡುವವರ ಸಂಬಂಧ ಅರ್ಧಕ್ಕೇ ಮುಗಿದು ಹೋಗುತ್ತದೆ. ಅವರು ವಿಚ್ಛೇದನ ತೆಗೆದುಕೊಳ್ತಾರೆ ಎಂದು ಅಧ್ಯಯನ ಹೇಳಿದೆ.
ಮದುವೆಯಲ್ಲಿ ಹೀಗೆ ಖರ್ಚು ಮಾಡ್ತಾರೆ ಜನ : ಇಂದಿನ ಎಷ್ಟೋ ಮದುವೆಗಳಲ್ಲಿ ನಾವು ಅನವಶ್ಯಕ ಖರ್ಚು ಮಾಡುವುದನ್ನು ನೋಡುತ್ತೇವೆ. ಕೆಲವು ಮಂದಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಮದುವೆಯನ್ನು ವೇದಿಕೆಯಾಗಿ ಬಳಸಿಕೊಳ್ತಾರೆ. ಮದುವೆಯನ್ನು ದೊಡ್ಡ ದೊಡ್ಡ ಛತ್ರಗಳಲ್ಲಿ, ಮಾಲ್ ಗಳಲ್ಲಿ ಅಥವಾ ಮೈದಾನಗಳಲ್ಲಿ ಇಟ್ಟುಕೊಳ್ಳುತ್ತಾರೆ. ಮದುವೆಯಲ್ಲಿ ಮಂಟಪದ ಡೆಕೋರೇಶನ್, ಹೂವು, ಲೈಟಿಂಗ್ ಮುಂತಾದವುಗಳಿಗೆ ಕೋಟಿಗಟ್ಟಲೆ ಸುರಿಯುತ್ತಾರೆ. ಇವೆಲ್ಲವೂ ಕ್ಷಣಿಕವೇ ಆದರೂ ಅದರಲ್ಲಿ ಅವರ ಶ್ರೀಮಂತಿಕೆ ಎದ್ದು ಕಾಣುತ್ತಿರುತ್ತದೆ.
ಮದುವೆಯಲ್ಲಿ ನಾನಾ ಬಗೆಯ ತಿಂಡಿ, ಕೋಲ್ಡ್ ಡ್ರಿಂಕ್ಸ್, ಕಾಸ್ಟ್ಲಿ ಗಿಫ್ಟ್ ಗಳನ್ನು ನೀಡಲಾಗುತ್ತದೆ. ಮನೆ ಮಂದಿಯೆಲ್ಲ ಬಂಗಾರ, ವಜ್ರ, ವೈಡೂರ್ಯಗಳಿಂದ ತಮ್ಮನ್ನು ತಾವು ಸಿಂಗರಿಸಿಕೊಳ್ಳುತ್ತಾರೆ. ಕೇವಲ ಒಂದು ದಿನದ ಅಥವಾ ಕೆಲವೇ ತಾಸುಗಳಿಗಾಗಿ ಲಕ್ಷ, ಕೋಟಿಗಟ್ಟಲೇ ಸುರಿಯುತ್ತಾರೆ. ಇದರಲ್ಲಿ ಮುಕ್ಕಾಲು ಭಾಗ ವೇಸ್ಟ್ ಆಗಿ ಕಸದ ರಾಶಿಯನ್ನು ಸೇರುತ್ತದೆ.
6 ಮದ್ವೆಯಾದ ಭೂಪ, ಲೈಂಗಿಕ ಕ್ರಿಯೆಗೆ ಶೆಡ್ಯೂಲ್, ಬಾಡಿಗೆ ತಾಯಿಯಿಂದ ಮಗು!
ಮದುವೆಯ ಬದಲು ಹನಿಮೂನ್ ಗೆ ಖರ್ಚು ಮಾಡಿ : ಮದುವೆಯೆಂದರೆ ಗಂಡು ಹೆಣ್ಣಿನ ಮಧುರ ಬಾಂಧವ್ಯಕ್ಕೆ ಮುನ್ನುಡಿ ಇಡುವ ಶುಭ ಘಳಿಗೆಯಾಗಿದೆ. ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳಲಿ ಎಂದು ಮದುವೆಯೆಂಬ ಸಂಬಂಧದಲ್ಲಿ ಅವರನ್ನು ಬಂಧಿಸಲಾಗುತ್ತದೆ. ಇದರ ಉದ್ದೇಶ ದಂಪತಿ ಸುಖವಾಗಿ ಬಾಳಲಿ ಎನ್ನುವುದಾಗಿದೆಯೇ ವಿನಃ ಶ್ರೀಮಂತಿಕೆಯನ್ನು ತೋರಿಸುವುದಲ್ಲ. ಒಂದು ಮದುವೆಗಾಗಿ ಇಷ್ಟೊಂದು ಅನವಶ್ಯಕ ಖರ್ಚುಗಳನ್ನು ಮಾಡುವ ಬದಲು ಅದೇ ಹಣದಲ್ಲಿ ದಂಪತಿಯನ್ನು ಹನಿಮೂನ್ ಗೆ ಕಳುಹಿಸಬಹುದು. ಇದರಿಂದ ಅವರು ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳುವುದು ಕೂಡ ಸುಲಭವಾಗುತ್ತದೆ ಹಾಗೂ ಇಬ್ಬರ ನಡುವೆ ಬಾಂಧವ್ಯ ಹೆಚ್ಚುತ್ತದೆ.