Viral News: ಪತ್ನಿಗಾಗಿ ಪತಿ ಮಾಡ್ತಿದ್ದ ಈ ಕೆಲಸ; ಟ್ವೀಟ್ ಮಾಡಿದ ಮಗಳ ಪೋಸ್ಟ್ ವೈರಲ್

By Suvarna News  |  First Published Aug 18, 2023, 1:32 PM IST

ಮೊಬೈಲ್ ನಲ್ಲಿಯೇ ನಮ್ಮೆಲ್ಲ ಕೆಲಸ ನಡೆಯುತ್ತಿದೆ. ಅರೆ ಕ್ಷಣದಲ್ಲಿ ಯಾರದ್ದೋ ಸಂದೇಶವನ್ನು ಮತ್ತ್ಯಾರಿಗೊ ಕಳುಹಿಸಿರ್ತೇವೆ. ಆದ್ರೆ ಪಾಪ ಈ ಪತಿ, ಪತ್ನಿಗೆ ಸಂದೇಶ ಕಳುಹಿಸಲು  ಹರಸಾಹಸ ಪಟ್ಟಿದ್ದಾನೆ. ಅದ್ರ ಫೋಟೋ ವೈರಲ್ ಆಗಿದೆ. 
 


ಮಕ್ಕಳು ಸ್ಕೂಲ್ ನಲ್ಲಿ ಬರೆಯೋದು ಬಿಟ್ರೆ ಬಹುತೇಕ ಎಲ್ಲರಿಗೂ ಪೆನ್ ಅಥವಾ ಪೆನ್ಸಿಲ್ ಹಿಡಿದು ಕಾಗದದ ಮೇಲೆ ಬರೆಯೋದೇ ಮರೆತುಹೋಗಿದೆ. ವರ್ಷಗಳಿಂದ ಪೆನ್ ಹಿಡಿಯದ ಜನರಿದ್ದಾರೆ. ಹಿಂದೆ ಪ್ರೇಮ ಪತ್ರವಿರಲಿ ಇಲ್ಲ ಆಪ್ತರಿಗೆ ಕಳುಹಿಸುವ ಪತ್ರವಿರಲಿ ಅದನ್ನು ಪೆನ್ ನಲ್ಲಿ ಬರೆದು ಕಳುಹಿಸಲಾಗ್ತಿತ್ತು. ಡಿಜಿಟಲ್ ಯುಗ ನಮ್ಮ ಕೆಲಸವನ್ನು ಸುಲಭಗೊಳಿಸಿದೆ. ಕೆಲಸ ಎಷ್ಟು ಸರಳವಾಗಿದೆ ಅಂದ್ರೆ ಆಪ್ತರಿಗೆ ಪತ್ರ ಬರೆಯಬೇಕೆಂದ್ರೂ ನಾವು ಮೊಬೈಲ್ ಅಪ್ಲಿಕೇಷನ್ ಅಥವಾ ಲ್ಯಾಪ್ ಟಾಪ್ ತೆಗೆಯುತ್ತೇವೆ. ಅದ್ರಲ್ಲಿ ನಮಗನಿಸಿದ್ದನ್ನು ಟೈಪ್ ಮಾಡಿ ಅದನ್ನು ಪ್ರಿಂಟ್ ತೆಗೆದು ಕೊಡ್ತೇವೆ. ಕೊರಿಯರ್ ಗೆ ಕಳುಹಿಸುವ ಅಡ್ರೆಸನ್ನು ಕೂಡ ನಾನು ಪೆನ್ ನಲ್ಲಿ ಬರೆಯೋದಿಲ್ಲ. 

ಇದು ಇಂಟರ್ನೆಟ್ (Internet) ಕಾಲವಾದ ಕಾರಣ ಏನು ಬರೆಯಬೇಕು ಎನ್ನುವ ಬಗ್ಗೆಯೂ ನಾವು ಹೆಚ್ಚು ಚಿಂತಿಸಬೇಕಾಗಿಲ್ಲ. ಗೂಗಲ್ (Google) ನಲ್ಲಿ ಒಂದು ಸರ್ಚ್ ಮಾಡಿದ್ರೆ ಅನೇಕ ಸಂಗತಿಗಳು ಸಿಗುತ್ವೆ. ಪ್ರತಿ ದಿನ ಗುಡ್ ಮಾರ್ನಿಂಗ್, ಗುಡ್ ನೈಟ್, ಹ್ಯಾಪಿ ಬರ್ತ್ ಡೇ ಸೇರಿದಂತೆ ಅನೇಕ ವಿಶ್ ಗಳನ್ನು ನಾವು ಗೂಗಲ್ ನಲ್ಲಿ ಕಾಪಿ ಮಾಡಿ, ಫೋಟೋ (Photo) ಡೌನ್ ಲೋಡ್ ಮಾಡಿ ಕಳಸ್ತೇವೆ. ಆದ್ರೆ ನಮ್ಮಲ್ಲಿ ಈಗ್ಲೂ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಕೆ ಸರಿಯಾಗಿ ಮಾಡಲು ಬರದ ಜನರಿದ್ದಾರೆ.

Tap to resize

Latest Videos

ಅಪ್ಪನ ವಯಸ್ಸಿನ ಗಂಡ; ಹಣದಾಸೆಗೆ ಮುದುಕರನ್ನು ಮದ್ವೆಯಾದ ಬಾಲಿವುಡ್ ನಟಿಯರಿವರು

ವಾಟ್ಸ್ ಅಪ್ ಸ್ಟೇಟಸ್ ಹೇಗೆ ಹಾಕ್ಬೇಕು, ಫೋಟೋಗಳನ್ನು ಡೌನ್ಲೋಡ್ ಹೇಗೆ ಮಾಡ್ಬೇಕು ಮತ್ತೆ ಅದನ್ನು ಹೇಗೆ ಪೋಸ್ಟ್ ಮಾಡ್ಬೇಕು ಎಂಬುದು ಕೆಲವರಿಗೆ ಗೊತ್ತಿಲ್ಲ. ಅನೇಕ ಅಜ್ಜ – ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳಿಂದ ಇದನ್ನು ಕಲಿಯುತ್ತಿದ್ದಾರೆ. ಅದ್ರಲ್ಲಿ ಈ ಹುಡುಗಿ ಅಪ್ಪ ಕೂಡ ಸೇರಿದ್ದಾನೆ. ಫೇಸ್ಬುಕ್, ವಾಟ್ಸ್ ಅಪ್, ಇನ್ಸ್ಟಾದಲ್ಲಿ ಬಂದ ಸುಂದರ ಕವನ, ಉಲ್ಲೇಖವನ್ನು ನಾವು ಸ್ಕ್ರೀನ್ ಶಾಟ್ ಹೊಡೆದೋ, ಡೌನ್ಲೋಡ್ ಮಾಡಿಯೋ ಸೇವ್ ಮಾಡ್ತೇವೆ. ಆದ್ರೆ ಈ ಹುಡುಗಿ ಅಪ್ಪನಿಗೆ ಡೌನ್ಲೋಡ್, ಕಾಪಿ ವಿಷ್ಯ ತಿಳಿದಿಲ್ಲವಂತೆ. ಹಾಗಾಗಿ ಆತ ಮಾಡಿದ ಕೆಲಸವನ್ನು ಮಗಳು ಟ್ವೀಟ್ ಮಾಡಿದ್ದಾಳೆ. ಇದು ಅನೇಕರ ಮನಸ್ಸು ಕದ್ದಿದೆ.

ದಿಕ್ಕಿ ಹೆಸರಿನ ಟ್ವಿಟರ್ ಖಾತೆಯಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಆ ಫೋಟೋದಲ್ಲಿ ನೀವು ಕಾಗದದ ಮೇಲೆ ಬರೆದ ಅಕ್ಷರವನ್ನು ನೋಡ್ಬಹುದು. ಅದನ್ನು ಹಿಂದಿಯಲ್ಲಿ ಬರೆಯಲಾಗಿದೆ.  ಮನುಷ್ಯನ ಅತ್ಯುತ್ತಮ ಒಡನಾಡಿ ಅವನ ಆರೋಗ್ಯ. ಅವನು ಅದನ್ನು ಕಳೆದುಕೊಂಡರೆ ಅದು ಪ್ರತಿ ಸಂಬಂಧಕ್ಕೂ ಹೊರೆಯಾಗುತ್ತದೆ ಎಂದು ಕಾಗದದ ಮೇಲೆ ಬರೆಯಲಾಗಿದೆ. ನನ್ನ ತಂದೆಗೆ ಅವರು ಫೇಸ್‌ಬುಕ್‌ನಲ್ಲಿ ನೋಡುವ ಉಲ್ಲೇಖಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿದಿಲ್ಲ . ಆದ್ದರಿಂದ ಅವರು ಅವುಗಳನ್ನು ನನ್ನ ತಾಯಿಗೆ ಕಳುಹಿಸಲು ಕಾಗದದ ಮೇಲೆ  ಬರೆಯುತ್ತಿದ್ದಾರೆ ಎಂದು ಶೀರ್ಷಿಕೆ ಹಾಕಲಾಗಿದೆ. 

ನೈತಿಕ ಮೌಲ್ಯಕ್ಕೆ ಬೆಲೆ ನೀಡೋ ಮಂದಿ ನೀವಾ? ಹಾಗಾದ್ರೆ ಕೆಲ ಗುಣಗಳು ನಿಮ್ಮಲ್ಲಿರೋದು ಗ್ಯಾರೆಂಟಿ

ಈ ಟ್ವಿಟರ್ ಸಾಕಷ್ಟು ಜನರ ಮನಸ್ಸು ಗೆದ್ದಿದೆ. ಅನೇಕರು ತಂದೆ ಬರೆದ ವಿಷ್ಯಕ್ಕೆ ಕಮೆಂಟ್ ಮಾಡಿದ್ದಾರೆ. ಇದು ತುಂಬಾ ಮುದ್ದಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ ಮತ್ತೊಬ್ಬರು ನನ್ನ ಮನಸ್ಸು ಗೆದ್ದಿದೆ ಎಂದು ಬರೆದಿದ್ದಾರೆ. 10 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವ ಈ ಟ್ವೀಟ್ ಗೆ 400ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 

ಅವರಿಗೆ ನೀವು ಹೇಳಿ ಕೊಡಬೇಕು ಎಂಬ ಕಮೆಂಟ್ ಗೆ ದಿಕ್ಕಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಫೇಸ್ಬುಕ್ ನಲ್ಲಿ ಬಂದ ಉಲ್ಲಖೇವನ್ನು ಹೇಗೆ ಡೌನ್ಲೋಡ್ ಮಾಡ್ಬೇಕು, ಅದನ್ನು ಹೇಗೆ ಕಳುಹಿಸಬೇಕು ಎಂದು ತಂದೆಗೆ ಹೇಳಿಕೊಟ್ಟೆ. ಅವರು ಎಲ್ಲರಿಗಿಂತ ನಿಮ್ಮ ಅಮ್ಮನೆ ಬೆಸ್ಟ್. ಅವರಿಗೆ ಇದನ್ನು ಕಳುಹಿಸುತ್ತೇನೆ ಎಂದು ಕಳುಹಿಸಿದ್ದಲ್ಲದೆ ಅಮ್ಮನ ಬಳಿ ನೋಡು, ನಿನಗೆ ಒಂದು ಫೋಟೋ ಕಳುಹಿಸಿದ್ದೇನೆ ಎಂದ್ರು ಎಂದಿದ್ದಾಳೆ ದಿಕ್ಕಿ. 
 

😭😭 my dad doesnt know how to download quotes he sees on facebook so he's been writing them down on a piece of paper to send them to my mom pic.twitter.com/g9r0frh1fM

— dikki (@notawatermark)
click me!