ಕೆಲವರನ್ನು ನೋಡಿ. ಅವರು ಸುಲಭಕ್ಕೆ ಮತ್ತೊಬ್ಬರ ವಿಚಾರಗಳನ್ನು ತಮ್ಮದಾಗಿಸಿಕೊಳ್ಳುವುದಿಲ್ಲ. ಹಾಗೆಯೇ, ಅವರು ಮತ್ತೊಬ್ಬರನ್ನು ಅಗೌರವಿಸುವುದೂ ಇಲ್ಲ. ವಿಭಿನ್ನತೆಗಳನ್ನು ಒಪ್ಪಿಕೊಳ್ಳುತ್ತಲೇ ಮೌಲ್ಯಗಳ ಆಧಾರದ ಮೇಲೆ ಬದುಕುತ್ತಾರೆ. ಅವರಲ್ಲಿ ಸ್ವಾರ್ಥ ಕಡಿಮೆ ಇರುತ್ತದೆ. ಮೋಸ, ನಾಟಕಗಳ ಗುಣ ಇರುವುದೇ ಇಲ್ಲ.
ಕಷ್ಟದ ಸನ್ನಿವೇಶಗಳಲ್ಲೂ ತಮ್ಮ ಮೌಲ್ಯಗಳು, ಸಿದ್ಧಾಂತಗಳಿಗೆ ಬದ್ಧರಾಗಿ ನಡೆಯುವವರನ್ನು ನೋಡಿರುತ್ತೇವೆ. ಪ್ರಾಮಾಣಿಕತೆ, ಇತರರಿಗೆ ಗೌರವ ನೀಡುವ ಗುಣಗಳು ಅವರಲ್ಲಿ ಸಾಮಾನ್ಯವಾಗಿರುತ್ತದೆ. ಅವರು ಸ್ನೇಹಿತರಾಗಿರಲಿ, ಸಹೋದ್ಯೋಗಿಗಳಾಗಿರಲಿ, ತಮ್ಮ ಕೆಲಸದ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುತ್ತಾರೆ, ಮತ್ತೊಬ್ಬರಿಗೆ ಸುಲಭವಾಗಿ ವರ್ಗಾಯಿಸುವುದಿಲ್ಲ. ಇಂಥವರು ಮೌಲ್ಯಗಳ ನೆರಳಲ್ಲೇ ನಡೆಯುತ್ತಾರೆ. “ಉತ್ತಮ ಮನುಷ್ಯರಾಗಿದ್ದರೂ ಸಾಕು, ಅದು ಜಗತ್ತಿಗೆ ತಮ್ಮ ಕೊಡುಗೆ’ ಎಂಬುದಾಗಿ ಅವರು ಭಾವಿಸುತ್ತಾರೆ. ಸುತ್ತಲಿನವರು ಏನು ಹೇಳುತ್ತಾರೆ ಎನ್ನುವುದರ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವು ಪದ್ಧತಿಗಳನ್ನು ಅವರು ದಿನವೂ ಪರಿಪಾಲಿಸುತ್ತಾರೆ. ಅವರು ಉದ್ದೇಶಪೂರ್ವಕವಾಗಿ ಯಾರಿಗೂ ದೈಹಿಕವಾಗಿ ಅಥವಾ ಮಾನಸಿಕವಾಗಿ ಕಿರುಳುಳ ನೀಡುವುದಿಲ್ಲ. ಬೇರೆಯವರಿಗೆ ನೋವು ನೀಡುವುದನ್ನು ಅವರು ಯಾವುದೇ ಕಾರಣಕ್ಕೂ ಬಯಸುವುದಿಲ್ಲ. ಕೆಲವರು ಮತ್ತೊಬ್ಬರಿಗೆ ನೋವಾಗುತ್ತದೆ ಎನ್ನುವುದು ತಿಳಿದಿದ್ದರೂ ಕೆಲವು ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ. ಆದರೆ, ಇವರು ಹಾಗಲ್ಲ. ಮೌಲ್ಯಗಳನ್ನು ಆಧರಿಸಿ ಮುನ್ನಡೆಯುವ ಇವರಲ್ಲಿ ಸಹಾನುಭೂತಿ ಮತ್ತು ದಯೆ ಮೇಳೈಸಿರುತ್ತದೆ. ಹಾಗೆಯೇ, ಇನ್ನೂ ಹಲವು ಕೆಲಸಗಳನ್ನು ಇವರು ಎಂದಿಗೂ ಮಾಡುವುದಿಲ್ಲ.
• ಎಲ್ಲರಿಗೂ ಒಳಿತು (Good)
ಮೌಲ್ಯ (Values), ಸಿದ್ಧಾಂತಗಳನ್ನು ಆಧರಿಸಿ ಜೀವಿಸುವವರು ಎಲ್ಲರಿಗೂ ಒಳಿತನ್ನೇ ಬಯಸುತ್ತಾರೆ. ಇವರು ಯಾರಿಗೂ ದೈಹಿಕವಾಗಿ, ಮಾನಸಿಕವಾಗಿ ನೋವು (Pain) ನೀಡಲು ಸಿದ್ಧವಿರುವುದಿಲ್ಲ. ಬೈಯುವುದಿಲ್ಲ. ಅವಮಾನ ಮಾಡುವುದಿಲ್ಲ. ಹೀಯಾಳಿಸುವುದಿಲ್ಲ. ಧರ್ಮ, ಜಾತಿ, ಲಿಂಗಾಧಾರಿತವಾಗಿ ಮಾತನಾಡುವುದಿಲ್ಲ. ಇಂಥ ಮಾತುಗಳು ಜನರ ಮನಸ್ಸಿನ ಮೇಲೆ ಭಾರೀ ಪರಿಣಾಮ (Effect) ಬೀರುತ್ತವೆ ಎನ್ನುವುದನ್ನು ತಿಳಿದಿರುತ್ತಾರೆ.
Mental Health: ವ್ಯಕ್ತಿತ್ವಕ್ಕೆ ಸಂಬಂಧಿಸಿದ ಗುಪ್ತ ಸಮಸ್ಯೆಗಳಿದ್ರೆ ಹೀಗೆಲ್ಲ ವರ್ತಿಸೋದು ಸಹಜ, ಎಚ್ಚರ
• ಮೋಸ (Cheat) ಮಾಡೋದಿಲ್ಲ
ಸಾಕಷ್ಟು ಜನ ತಮ್ಮ ವ್ಯವಹಾರಗಳಲ್ಲಿ, ಕೆಲಸದಲ್ಲಿ, ಪರೀಕ್ಷೆಯಲ್ಲಿ, ಸಂಬಂಧಗಳಲ್ಲಿ ಕೆಲವೊಮ್ಮೆ ಮೋಸ ಮಾಡುತ್ತಾರೆ, ನಕಲಿತನಕ್ಕೆ ಮೊರೆ ಹೋಗುತ್ತಾರೆ. ಆದರೆ, ದೃಢವಾದ ನೈತಿಕ ಮೌಲ್ಯಗಳನ್ನು (Moral Compass) ಅನುಸರಿಸುವವರು ಎಂದಿಗೂ ಮೋಸ ಮಾಡುವುದಿಲ್ಲ. ಪ್ರಾಮಾಣಿಕತೆ (Honest) ಅವರಲ್ಲಿರುತ್ತದೆ. ತಮ್ಮಿಂದ ತಪ್ಪಾದರೆ ಕ್ಷಮೆ ಕೇಳುತ್ತಾರೆಯೇ ಹೊರತು ಅದನ್ನು ಮುಚ್ಚಿಡಲು ಮತ್ತೊಂದು ತಪ್ಪನ್ನು ಮಾಡುವುದಿಲ್ಲ. ಅವರು ಸದಾಕಾಲ ಉತ್ತಮವಾದ ಭಾವನೆಯಲ್ಲೇ ಇರಲು ಇಷ್ಟಪಡುವ ಕಾರಣದಿಂದ ಈ ಭಾವನೆಗೆ ಧಕ್ಕೆ ತರುವ ಯಾವ ಕೃತ್ಯಗಳನ್ನೂ ಅವರು ಮಾಡುವುದಿಲ್ಲ.
• ಅನಗತ್ಯ ಸಂಘರ್ಷಗಳಿಂದ (Conflict) ದೂರ
ಸಾಮಾನ್ಯವಾಗಿ ನೈತಿಕ ಮೌಲ್ಯಗಳನ್ನು ಹೊಂದಿರುವ ಜನ ಅನಗತ್ಯ ಸಂಘರ್ಷಗಳಿಂದ ದೂರವಿರುತ್ತಾರೆ. ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅವುಗಳಿಗಾಗಿ ಸಂಘರ್ಷ, ಬಿಕ್ಕಟ್ಟುಗಳನ್ನು ಸೃಷ್ಟಿಸಿಕೊಳ್ಳುವುದು ಇವರಿಂದ ಸಾಧ್ಯವಿಲ್ಲ. ಇವುಗಳ ಕುರಿತು ಸಾಕಷ್ಟು ಸ್ಪಷ್ಟತೆ (Clarity) ಹೊಂದಿರುತ್ತಾರೆ.
• ತಾರತಮ್ಯ (Discrimination)
ಬಲವಾದ ನೈತಿಕ ನೆಲೆಗಟ್ಟು ಹೊಂದಿರುವ ಜನ ಯಾರನ್ನೂ ತಾರತಮ್ಯದ ಭಾವನೆಯಿಂದ ನೋಡುವುದಿಲ್ಲ. ಜಾತಿ, ಜನಾಂಗ, ಲಿಂಗಾಧಾರಿತವಾಗಿ ಆಯ್ಕೆ ಮಾಡುವುದಿಲ್ಲ. ಎಲ್ಲರನ್ನೂ ಒಳಗೊಳ್ಳುವ ನೋಟ ಅವರಲ್ಲಿರುತ್ತದೆ. ವಿಭಿನ್ನತೆಗಳನ್ನು (Difference) ಒಪ್ಪಿಕೊಳ್ಳುತ್ತಾರೆ ಮತ್ತು ಅವುಗಳಿಗೆ ಗೌರವ ನೀಡುತ್ತಾರೆ. ಎಲ್ಲರ ಅನುಭವ, ದೃಷ್ಟಿಕೋನ, ಅರ್ಹತೆ, ಸಾಮರ್ಥ್ಯ ವಿಭಿನ್ನ ಎನ್ನುವುದನ್ನು ಮುಕ್ತವಾಗಿ ನೋಡುತ್ತಾರೆ.
ಏಕಾಂಗಿತನಕ್ಕೆ ಪರಿಹಾರ ನಿಮ್ಮಲ್ಲೇ ಇದೆ, ನಿಮ್ಮ ಜೊತೆ ನೀವೇ ಫ್ರೆಂಡ್‌ಶಿಪ್ ಮಾಡಿಕೊಳ್ಳಿ!
• ಅಧಿಕಾರದ (Power) ದುರುಪಯೋಗ
ಸಾಕಷ್ಟು ಜನ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವುದು ಕಂಡುಬರುತ್ತದೆ. ಆದರೆ, ನೈತಿಕ ನೆಲೆಗಟ್ಟು ಹೊಂದಿರುವವರು ಹೀಗೆ ಮಾಡುವುದು ಕಡಿಮೆ. ಅಧಿಕಾರವು ಸಿಕ್ಕಾಪಟ್ಟೆ ಜವಾಬ್ದಾರಿಯೊಂದಿಗೆ ಅಪಾರ ಅಹಂಕಾರವನ್ನೂ (Ego) ನೀಡಬಲ್ಲದು. ಅದನ್ನು ಅರಗಿಸಿಕೊಳ್ಳುವುದು ಎಲ್ಲರಿಗೂ ಆಗುವುದಿಲ್ಲ. ಅಧಿಕಾರ ದೊರೆತಾಗಲೂ ಉತ್ತಮ ವ್ಯಕ್ತಿಯಾಗಿಯೇ ಮುಂದುವರಿಯುವುದು ಇವರ ಗುಣ. ಹಾಗೆಯೇ, ಇವರು ಎಂದಿಗೂ ತಮ್ಮ ಜವಾಬ್ದಾರಿಗಳನ್ನು ಕಡೆಗಣಿಸುವುದಿಲ್ಲ.
• ಸ್ವಾರ್ಥಿಯಲ್ಲ (Selfish)
ಸ್ವಾರ್ಥಪರರಾಗಿರುವ ಮಂದಿ ಕೇವಲ ತಾವು ಹಾಗೂ ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ, ದೃಢವಾದ ಮೌಲ್ಯ ಹೊಂದಿರುವವರು ಎಲ್ಲರ ಬಗೆಗೂ ಸಹಾನುಭೂತಿ ಹೊಂದಿರುತ್ತಾರೆ. ಸ್ವಾರ್ಥರಹಿತವಾಗಿ ಚಿಂತನೆ ಮಾಡುತ್ತಾರೆ.