Viral Video : ವೇದಿಕೆ ಮೇಲೆ ಎಸ್ ಆರ್ ಕೆ ಹಾಡು ಹೇಳಿದ ವರ – ಮುರಿದುಬಿತ್ತು ಮದುವೆ!?

Published : Mar 21, 2023, 01:08 PM IST
Viral Video : ವೇದಿಕೆ ಮೇಲೆ ಎಸ್ ಆರ್ ಕೆ ಹಾಡು ಹೇಳಿದ ವರ – ಮುರಿದುಬಿತ್ತು ಮದುವೆ!?

ಸಾರಾಂಶ

ಒಂದು ಮದುವೆ ಯಾವುದೇ ವಿಘ್ನವಿಲ್ಲದೆ ನಡೆಯೋದು ಬಹಳ ಕಷ್ಟ. ಮದುವೆ ನಾನಾ ಕಾರಣಕ್ಕೆ ಮುರಿದು ಬೀಳುತ್ತದೆ. ಅನೇಕ ಬಾರಿ ವಧು ಅಥವಾ ವರ ಮಾಡಿದ ಯಡವಟ್ಟಿನಿಂದ ದಾಂಪತ್ಯ ಜೀವನಕ್ಕೆ ಕಾಲಿಡುವ ಅವಕಾಶ ಸಿಗೋದಿಲ್ಲ. ಈಗ ವೈರಲ್ ಆದ ವಿಡಿಯೋದಲ್ಲೂ ವರನ ಬೇಜವಾಬ್ದಾರಿ ಎದ್ದು ಕಾಣ್ತಿದೆ.  

ತಮ್ಮ ಮದುವೆಯಲ್ಲಿ ವಧು – ವರರು ಡಾನ್ಸ್ ಮಾಡೋದು, ಹಾಡು ಹೇಳೋದು ಕಾಮನ್, ಇತ್ತೀಚಿನ ದಿನಗಳಲ್ಲಿ ವಧು – ವರರ ಜೊತೆ ಕುಟುಂಬಸ್ಥರು ಮದುವೆ ಸಂದರ್ಭದಲ್ಲಿ ಹಾಡಿ, ಕುಣಿಯೋದನ್ನು ನಾವು ನೋಡ್ಬಹದು. ಕೆಲವೊಮ್ಮೆ ಮದುವೆ ಮಂಟಪದಲ್ಲಿ ವಧು ಅಥವಾ ವರ ಮಾಡುವ ಕೆಲಸ ಅವರ ಮದುವೆಗೆ ಅಡ್ಡಿಯಾಗುತ್ತದೆ. ಮಂಟಪಕ್ಕೆ ಬಂದ ಅದೆಷ್ಟೋ ಮದುವೆಗಳು ನಿಂತ ಉದಾಹರಣೆಯಿದೆ. 

ಕುಡಿದು ಬಂದ ವರ (Groom), ವರಕ್ಷಿಣೆ ಕೇಳಿದ ಕುಟುಂಬಸ್ಥರು ಅಥವಾ ಹೊರಬಿದ್ದ ಕೆಲ ಸತ್ಯಗಳ ಕಾರಣಕ್ಕೆ ಮದುವೆ (Marriage) ನಿಲ್ಲುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿಯ ಹುಚ್ಚಾಟ ಆತನ ಮದುವೆ ನಿಲ್ಲಲ್ಲು ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Viral) ಆಗಿದೆ. ಅದಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.  ಉತ್ತರ ಪ್ರದೇಶದ ಮೌ (Mau) ಜಿಲ್ಲೆಯ ಕೊಪಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮದುವೆ ಶಾಂತವಾಗಿ ನಡೆಯುತ್ತಿತ್ತು. ವರ ಮೆರವಣಿಗೆ ಮೂಲಕ ವೇದಿಕೆಗೆ ಬಂದಿದ್ದ. ಆದ್ರೆ ನಂತ್ರ ಏನಾಯ್ತೋ ತಿಳಿದಿಲ್ಲ. ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಾನೆ. 

ಆರ್ಡರ್‌ ಮಾಡಿದ್ದ ಸೂಪ್‌ನಲ್ಲಿ ದಂಪತಿಗೆ ಸಿಕ್ತು ಇಲಿ: ವಿಡಿಯೋ ವೈರಲ್

ವರ ಬಾಲಿವುಡ್ ಅಭಿಮಾನಿಯಂತೆ. ವಧುವಿಗೆ ಮಾಲೆ ಹಾಕುವ ಸಂದರ್ಭದಲ್ಲಿಯೇ ಆತ ಮಾಲೆ ಹಿಡಿಯಲು ನಿರಾಕರಿಸಿದ್ದನಂತೆ. ನಂತ್ರ ಬಾಲಿವುಡ್ ಡೈಲಾಗ್ ಹೇಳಲು ಶುರು ಮಾಡಿದ್ದಾನೆ. ಒಂದಾದ ಮೇಲೆ ಒಂದರಂತೆ ಡೈಲಾಗ್, ಹಾಡು ಹೇಳುತ್ತಿದ್ದ ವರನನ್ನು ಮನವೊಲಿಸಲು ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಆದ್ರೆ ಅದಕ್ಕೆ ವರ ಮಣಿಯಲಿಲ್ಲ. ವಧುವಿನ ಕಡೆಯವರು ಪೊಲೀಸರನ್ನು ಕರೆಯಿಸಿದ್ದಾರೆ. ವೇದಿಕೆ ಮೇಲೆ ವರ ಹೇಳ್ತಿದ್ದ ಡೈಲಾಗ್ ಕೇಳಿದ ಪೊಲೀಸರಿಗೂ ನಗು ಬಂದಿದೆ. ಅವರು ಕೂಡ ಇದನ್ನು ಬಿಟ್ಟು ಮದುವೆ ಕಾರ್ಯ ಮುಂದುವರೆಸುವಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಅದು ಸಾಧ್ಯವಾಗಲಿಲ್ಲ. ಪೊಲೀಸರಿಗೆ ವರ ಧಮಕಿ ಹಾಕಿದ್ದಾನೆ. ಇದ್ರಿಂದ ಬೇಸತ್ತ ಪೊಲೀಸರು ವರನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ವರನ ಈ ಎಲ್ಲ ನಾಟಕವನ್ನು ಕಣ್ಣಾರೆ ಕಂಡ ವಧು ಕುಟುಂಬದವರು, ಮಗಳನ್ನು ಈತನಿಗೆ ನೀಡಲು ನಿರಾಕರಿಸಿದ್ದಾರೆ. ಮದುವೆಯನ್ನು ಮುರಿದುಕೊಂಡಿದ್ದಾರೆ. 

ಮೌ ಜಿಲ್ಲೆಯ ಕೋಪಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ದೋಸ್ತ್ಪುರ ಗ್ರಾಮದ ಹುಡುಗಿ ಮದುವೆ ಅಜಂಗಢ್ ಜಿಲ್ಲೆಯ ಗ್ರಾಮವೊಂದರ ಯುವಕನ ಜೊತೆ ನಿಶ್ಚಿಯವಾಗಿತ್ತು. ಹುಡುಗಿ ಮಾಲೆ ಹಿಡಿದು ಮಂಟಪಕ್ಕೆ ಬರ್ತಿದ್ದಂತೆ ವರನಿಗೆ ಕೋಪ ಬಂದಿತ್ತು. ತಕ್ಷಣ ಆತ ಮಂಟಪಬಿಟ್ಟು ಹೋಗಿದ್ದ. ಕೋಪಕ್ಕೆ ಕಾರಣವೇನು ಅಂತಾ ಕೇಳಿದ್ರೆ ಆತ ಉತ್ತರ ನೀಡಿರಲಿಲ್ಲ. ವಧು ಹಾಗೂ ಆಕೆ ಸ್ನೇಹಿತೆಯರು ವರನಿಗಾಗಿ ಕಾದಿದ್ದಾರೆ. ಸುಮಾರು ಒಂದುವರೆ ಗಂಟೆಯಾದ್ರೂ ವರ, ವೇದಿಕೆಗೆ ಬರದ ಕಾರಣ ವಧು, ತನ್ನ ಸ್ನೇಹಿತೆಯರ ಜೊತೆ ಮನೆಗೆ ವಾಪಸ್ ಆಗಿದ್ದಾಳೆ. ನಂತ್ರ ಪೊಲೀಸ್ ಬರ್ತಿದ್ದಂತೆ ವರ ಮತ್ತೆ ವೇದಿಕೆ ಹತ್ತಿ ಡೈಲಾಗ್ ಶುರು ಮಾಡಿದ್ದಾನೆ.  ಶಾರುಖ್ ಖಾನ್ ಬಾಜಿಗರ್ ಚಿತ್ರದ ‘ಆಶಿಕ್ ಹೂಂ ಮೈ, ಕಾತಿಲ್ ಭಿ ಹೂಂ’ ಹಾಡನ್ನು ಹಾಡುತ್ತಾ ಡೈಲಾಗ್ ಆರಂಭಿಸಿದ್ದಾನೆ.  ವೇದಿಕೆಯಿಂದಲೇ ಪೊಲೀಸರನ್ನು ಬೆದರಿಸುವ ಡೈಲಾಗ್ ಹೇಳಿದ್ದಾನೆ. 

14 ವರ್ಷದ ಛೋಟಾ ಬುಮ್ರಾನ ದಾಳಿಗೆ ವಿಕೆಟ್‌ ಚೆಲ್ಲಾಪಿಲ್ಲಿ..! ವಿಡಿಯೋ ವೈರಲ್

ಮದುವೆಗೆ ಬಂದವರು ವರನ ಈ ಡೈಲಾಗನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈತನ ವಿಡಿಯೋ ವೈರಲ್ ಆಗಿದೆ. ಮೂರು ಗಂಟೆ ಮನವೊಲಿಸಿದ ಮೇಲೆ ಹುಡುಗ ಮದುವೆಗೆ ಒಪ್ಪಿದ್ದನಂತೆ. ಆದ್ರೆ ವಧು ಕಡೆಯವರು ಮದುವೆಗೆ ನಿರಾಕರಿಸಿದ್ದಾರೆ. ಪೊಲೀಸ್ ಠಾಣೆಗೆ ಬಂದ ವಧು ಕಡೆಯವರು ಮದುವೆ ಖರ್ಚು ನೀಡುವಂತೆ ಕೇಳಿದ್ದಾರೆ. ಹುಡುಗನ ಮಾನಸಿಕ ಸ್ಥಿತಿ ಸರಿಯಿಲ್ಲವೆಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಹುಡುಗ ಮದ್ಯದ ಅಮಲಿನಲ್ಲಿದ್ದ ಎಂದಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ