'ಇದೇ ಲಾಸ್ಟು..' ಅಂದ್ಕೊಂಡು 92ನೇ ವರ್ಷದಲ್ಲಿ ಐದನೇ ಬಾರಿ ಮದುವೆಯಾದ ರುಪರ್ಟ್‌ ಮುರ್ಡೋಕ್‌!

By Santosh Naik  |  First Published Mar 20, 2023, 10:03 PM IST


ಜಗತ್ತಿನ ಮಾಧ್ಯಮ ಲೋಕದ ದೊರೆ ರುಪರ್ಟ್‌ ಮುರ್ಡೋಕ್‌ ಮತ್ತೊಮ್ಮೆ ಮದುವೆಯಾಗಲು ಸಿದ್ಧರಾಗಿದ್ದಾರೆ. 92ನೇ ವಯಸ್ಸಿನ ರುಪರ್ಟ್‌ ಮುರ್ಡೋಕ್‌ ಪಾಲಿಗೆ ಇದು 5ನೇ ಮದುವೆಯಾಗಿದೆ.
 


ನವದೆಹಲಿ (ಮಾ.20): ಮಾಡೆಲ್‌ ಹಾಗೂ ನಟಿ ಜೆರ್ರಿ ಹಾಲ್‌ರಿಂದ ವಿಚ್ಛೇದನ ಪಡಡೆದು ಒಂದು ವರ್ಷವಾಗುವ ಮುನ್ನವೇ ಜಗತ್ತಿನ ಮಾಧ್ಯಮ ಲೋಕದ ದೊರೆ ರುಪರ್ಟ್‌ ಮುರ್ಡೋಕ್‌ ಮತ್ತೊಂದು ಮದುವೆಯಾಗಲು ಸಿದ್ಧರಾಗಿದ್ದಾರೆ. ಆಸ್ಟ್ರೇಲಿಯನ್‌ ಮೂಲದ ಅಮೆರಿಕದ ದಿಗ್ಗಜ ಉದ್ಯಮಿ ಪಾಲಿಗೆ 92ನೇ ವರ್ಷದಲ್ಲೂ ವೆಡ್ಡಿಂಗ್‌ ಬೆಲ್‌ ಬಾರಿಸುತ್ತಿದೆ. ತನಗಿಂತ 26 ವರ್ಷ ಕಿರಿಯಳಾಗಿರುವ 66 ವರ್ಷದ ಆನ್‌ ಲೆಸ್ಲಿ ಸ್ಮಿತ್‌ ಜೊತೆಗೆ ಕಳೆದ ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆನ್‌ ಲೆಸ್ಲಿ ಸ್ಮಿತ್‌ ಸ್ಯಾನ್‌ ಫ್ರಾನ್ಸಿಸ್ಕೋ ಪೊಲೀಸ್‌ ಚಾಪ್ಲೇನ್‌ (ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಭಾವನಾತ್ಮಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ಒದಗಿಸುವ ವ್ಯಕ್ತಿಗಳು) ಆಗಿ ಕೆಲಸ ಮಾಡುತ್ತಿದ್ದರು ಎಂದು ವೆರೈಟಿ ಮ್ಯಾಗಝೀನ್‌ ವರದಿ ಮಾಡಿದೆ. ಗಾಸಿಪ್‌ ಕಾಲಿಮಿಸ್ಟ್‌ ಸಿಂಡಿ ಆಡಮನ್ಸ್‌ ನ್ಯೂಯಾರ್ಕ್‌ ಪೋಸ್ಟ್‌ನಲ್ಲಿ ಈ ಸುದ್ದಿ ಪ್ರಕಟಿಸಿದ್ದಾರೆ. ಮುರ್ಡೋಕ್‌ ಅವರ ಮುಂದಿನ ಪತ್ನಿಯಾಗಲಿರುವ ಆನ್‌ ಲೆಸ್ಲಿ ಸ್ಮಿತ್‌, ಇದಕ್ಕೂ ಮುನ್ನ ರೇಡಿಯೋ ಹಾಗೂ ಟಿವಿಯ ಅಧಿಕಾರಿಯಾಗಿದ್ದ ಚೆಸ್ಟರ್‌ ಸ್ಮಿತ್‌ರನ್ನು ಮದುವೆಯಾಗಿದ್ದರು. ಚೆಸ್ಟರ್‌ ಸ್ಮಿತ್‌ 2008ರಲ್ಲಿ ನಿಧನರಾದ ಬಳಿಕ ಲೆಸ್ಲಿ ಸ್ಮಿತ್‌ ಏಕಾಂಗಿಯಾಗಿ ಬದುಕಿದ್ದರು. ಆಡಮ್ಸ್ ವರದಿಗಳ ಪ್ರಕಾರ, ಇಬ್ಬರೂ ಮಾಧ್ಯಮ ವ್ಯವಹಾರದ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಅದರೊಂದಿಗೆ ಲೆಸ್ಲಿ ಸ್ಮಿತ್‌ ಹಿಂದೊಮ್ಮೆ ಅತೀದೊಡ್ಡ ವೈನ್‌ಯಾರ್ಡ್‌ನ ಮಾಲೀಕರಾಗಿದ್ದರು. ವ್ಯವಹಾರದ ಜ್ಞಾನ ಇಬ್ಬರನ್ನು ಬೆಸೆಯಲು ಪ್ರಮುಖ ಕಾರಣವಾಗಿದೆ ಎಂದು ಬರೆದಿದ್ದಾರೆ.

ಮಾಧ್ಯಮ ದಿಗ್ಗಜ ರುಪರ್ಟ್‌ ಮುರ್ಡೋಕ್‌ ಮಾರ್ಚ್‌ 17 ರಂದು ನ್ಯೂಯಾರ್ಕ್‌ ಸಿಟಿಯಲ್ಲಿ ಲೆಸ್ಲಿ ಸ್ಮಿತ್‌ಗೆ ಪ್ರಪೋಸ್‌ ಮಾಡಿದ್ದಾರೆ. ಈ ವೇಳೆ ಸ್ವತಃ ತಾವೇ ಖುದ್ದು ಖರೀದಿ ಮಾಡಿದ್ದ ದುಬಾರಿ ವಜ್ರದ ಉಂಗುರವನ್ನು ಆಕೆಗೆ ತೊಡಿಸಿದ್ದಾರೆ ಎನ್ನಲಾಗಿದೆ. 'ನಾನು ಬಹಳ ನರ್ವಸ್‌ ಆಗಿದ್ದೆ. ಪ್ರೀತಿಯಲ್ಲಿ ಬೀಳುವುದು ನನಗೆ ಅಭ್ಯಾಸವಾಗಿದೆ. ಆದರೆ, ನನಗೆ ಗೊತ್ತು ಇದು ನನ್ನ ಕೊನೆಯ ಪ್ರೀತಿ. ಬಹುಶಃ ಹಾಗೇ ಆದರೆ ಒಳ್ಳೆಯದು. ನನಗೆ ಬಹಳ ಖುಷಿಯಾಗಿದೆ' ಎಂದು ಮರ್ಡೋಕ್‌ ಈ ವೇಳೆ ಹೇಳಿದ್ದಾರೆ.

ಇವರಿಬ್ಬರು ಅಧಿಕೃತವಾಗಿ ವಿವಾಹವಾದಲ್ಲಿ, ಮುರ್ಡೋಕ್‌ ಅವರ ಐದನೇ ಮದುವೆ ಇದಾಗಿರಲಿದೆ. ಆರು ವರ್ಷಗಳ ಕಾಲ ಮಾಡಲ್‌ ಹಾಗೂ ನಟಿ ಜೆರ್ರಿ ಹಾಲ್‌ರನ್ನು ಮುರ್ಡೋಕ್‌ ಮದುವೆಯಾಗಿದ್ದಾರೆ. ಹಾಲ್‌ಗೂ ಮುನ್ನ 1999 ರಿಂದ 2013ರವರೆಗೆ ವೆಂಡಿ ಡೆಂಗ್‌, 1967 ರಿಂದ 1999ರವರೆಗೆ ಅನ್ನಾ ಮರಿಯಾ ಟ್ರೋವ್‌, 1956 ರಿಂದ 1967ರವರೆಗೆ ಪ್ಯಾಟ್ರಿಕಾ ಬೂಕರ್‌ ಪತ್ನಿಯರಾಗಿ ಮುರ್ಡೋಕ್‌ ಬಾಳಿನಲ್ಲಿ ಬಂದಿದ್ದರು.

'ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌' ಮಾಡಿಸಿದ್ದ ಲವರ್ಸ್‌, ಬ್ರೇಕ್‌ಅಪ್‌ ಆದಾಗ ಹುಡುಗನಿಗೆ ಸಿಕ್ತು 25 ಸಾವಿರ!

ರುಪೋರ್ಟ್‌ ಮುರ್ಡೋಕ್‌ ಫಾಕ್ಸ್‌ ಕಾರ್ಪೋರೇಷನ್‌ನ ಅಧ್ಯಕ್ಷರಾಗಿದ್ದಾರೆ. ಇದು ಫಾಕ್ಸ್‌ ಬ್ರಾಡ್‌ಕಾಸ್ಟಿಂಗ್‌, ಫಾಕ್ಸ್‌ ಸ್ಪೋರ್ಟ್ಸ್‌, ಫಾಕ್ಸ್‌ ಬ್ಯುಸಿನೆಸ್‌ ಹಾಗೂ ಫಾಕ್ಸ್‌ ನ್ಯೂಸ್‌ನ ಮಾಲೀಕತ್ವವನ್ನು ಹೊಂದಿದೆ. ನ್ಯೂಸ್‌ ಕಾರ್ಪೋರೇಷನ್‌ನ ಮಾಲೀಕರೂ ಆಗಿರುವ ಮುರ್ಡೋಕ್‌, ನ್ಯೂಯಾರ್ಕ್‌ ಪೋಸ್ಟ್‌, ವಾಲ್‌ ಸ್ಟ್ರೀಟ್‌ ಜರ್ಲ್‌, ದಿ ಸನ್‌ ಹಾಗೂ ಪ್ರಕಾಶಕರಾದ ಹಾರ್ಪರ್‌ ಕಾಲಿನ್ಸ್‌ನ ಮಾಲೀಕತ್ವವನ್ನೂ ಹೊಂದಿದ್ದಾರೆ.

Tap to resize

Latest Videos

ತಂಗಿಯನ್ನೇ ಮದ್ವೆಯಾಗಿ ಸಂಸಾರ ನಡೆಸಿದ್ದ, ಆರು ವರ್ಷದ ನಂತ್ರ ಗೊತ್ತಾಯ್ತು ಬೆಚ್ಚಿಬೀಳಿಸೋ ಸತ್ಯ!

ಡೊಮಿನಿಯನ್‌ ವೋಟಿಂಗ್‌ ಈಗಾಗಲೇ ಫಾಕ್ಸ್‌ ವಿರುದ್ಧ 1.6 ಬಿಲಿಯನ್‌ ಯುಎಸ್‌ ಡಾಲರ್‌ ಮಾನನಷ್ಟ ಮೊಕದ್ದಮೆಯನ್ನು ಹೂಡಿರುವ ನಡುವೆ ಮುರ್ಡೋಕ್‌ ಅವರ ಎಂಗೇಜಜ್‌ಮೆಂಟ್‌ ಸುದ್ದಿ ಬಂದಿದೆ. 2020ರ ಚುನಾವಣೆಯ ಸಂದರ್ಭದಲ್ಲಿ ತಂತ್ರಜ್ಞಾನ ಕಂಪನಿ ಆಗಿರುವ ಡೊಮಿನಿಯನ್‌ ವಿರುದ್ಧ ಫಾಕ್ಸ್‌ ನ್ಯೂಸ್‌ನ ನಿರೂಪಕರು ಸುಳ್ಳು ಸುದ್ದಿ ಬಿತ್ತರ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಕಂಪನಿಯು ಜೋ ಬಿಡೆನ್‌ಗೆ ಹೆಚ್ಚಿನ ಬೆಂಬಲ ನೀಡಿದೆ ಎಂದು ಆರೋಪ ಮಾಡಲಾಗಿತ್ತು.

click me!