Intimate Health: ಲೈಂಗಿಕ ಜೀವನಕ್ಕೂ, ಸ್ಟ್ರಾಬೆರಿಗೂ ಇರುವ ಸಂಬಂಧ ಏನು? 

By Suvarna NewsFirst Published Feb 12, 2024, 2:49 PM IST
Highlights

ಸೆಕ್ಸ್ ವಿಷ್ಯ ಬಂದಾಗ ಸ್ಟ್ರಾಬೆರಿ ಹಣ್ಣು ಇದ್ಧೇ ಇರುತ್ತೆ. ಅದನ್ನು ಸೆಕ್ಸಿ ಹಣ್ಣು ಎಂದೇ ಪರಿಗಣಿಸಲಾಗಿದೆ. ಲೈಂಗಿಕ ಜೀವನಕ್ಕೂ, ಸ್ಟ್ರಾಬೆರಿಗೂ ಏನು ಸಂಬಂಧ ಇದೆ ಎಂಬುದು ಗೊತ್ತಾ? 

ಮಾರುಕಟ್ಟೆಗೆ ಈಗಾಗಲೇ ಸ್ಟ್ರಾಬೆರಿ ಲಗ್ಗೆ ಇಟ್ಟಿದೆ. ಸ್ಟ್ರಾಬೆರಿ ಅನೇಕರ ಫೆವರೆಟ್. ಆದ್ರೆ ಈ ಸ್ಟ್ರಾಬೆರಿಯನ್ನು ಸೆಕ್ಸಿ ಫುಡ್ ಲೀಸ್ಟ್ ನಲ್ಲಿ ಸೇರಿಸಲಾಗುತ್ತದೆ. ಸ್ಟ್ರಾಬೆರಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸ್ಟ್ರಾಬೆರಿ ಹಾಗೂ ಸೆಕ್ಸ್ ಮಧ್ಯೆ ಒಂದು ಸಂಬಂಧವಿದೆ. ಕೆಂಪು ಹಣ್ಣು ಲೈಂಗಿಕ ಜೀವನದ ರೋಮ್ಯಾನ್ಸ್ ಹೆಚ್ಚಿಸುವ ಜೊತೆಗೆ ಲೈಂಗಿಕ ಆರೋಗ್ಯವನ್ನೂ ಕಾಪಾಡುತ್ತದೆ. ಅನೇಕ ಸಿನಿಮಾಗಳಲ್ಲೂ ನೀವು ಸೆಕ್ಸ್ ವಿಷ್ಯ ಬಂದಾಗ ಸ್ಟ್ರಾಬೆರಿ ತೋರಿಸೋದನ್ನು ನೋಡಿರಬಹುದು. ಸೆಕ್ಸಿ ಫೋಸ್ ನೀಡುವವರು ಕೂಡ ಸ್ಟ್ರಾಬೆರಿ ಬಳಕೆ ಮಾಡ್ತಾರೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ಸ್ಟ್ರಾಬೆರಿಯನ್ನು ಉಡುಗೊರೆ ರೂಪದಲ್ಲಿ ನೀಡುವ ದಂಪತಿ ಕೂಡ ಇದ್ದಾರೆ.

ಸ್ಟ್ರಾಬೆರಿ (Strawberry) ನಮ್ಮ ದೇಶದಲ್ಲಿ ಮಾತ್ರವಲ್ಲ ಫ್ರಾನ್ಸ್‌ (France) ನಲ್ಲಿಯೂ ಹೆಚ್ಚಿನ ಪ್ರಾಮುಖ್ಯತೆ ಗಳಿಸಿದೆ. ಫಸ್ಟ್ ನೈಟ್ ಪ್ರಣಯವನ್ನು ಉತ್ತೇಜಿಸಲು ನವವಿವಾಹಿತರಿಗೆ ಸ್ಟ್ರಾಬೆರಿ ಸೂಪ್ (Soup) ಅನ್ನು ನೀಡುವ ಸಂಪ್ರದಾಯ ಅಲ್ಲಿದೆ. ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲೂ ನೋಡ್ಬಹುದು. ಸ್ಟ್ರಾಬೆರಿ, ಪ್ರೀತಿ, ಲೈಂಗಿಕತೆ, ಸೌಂದರ್ಯ ಮತ್ತು ಫಲವತ್ತತೆಯ ದೇವತೆಯಾದ ಶುಕ್ರನ ಜೊತೆ ಸಂಬಂಧ ಹೊಂದಿದೆ ಎಂದು ತಜ್ಞರು ಹೇಳ್ತಾರೆ. ನಾವಿಂದು ಈ ಸ್ಟ್ರಾಬೆರಿ ಹಾಗೂ ಸೆಕ್ಸ್ ಗೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ನಿಮಗೆ ಹೇಳ್ತೇವೆ.

ಮಕ್ಕಳಿಗೆ ಏನೂ ತೊಂದರೆಯಾಗ್ಬಾರ್ದು ಅಂತ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋತೀರಾ? ತುಂಬಾ ತಪ್ಪು ಮಾಡ್ತಿದೀರಾ ಅಂತಾರೆ ತಜ್ಞರು!

ಸಿಹಿ ಮತ್ತು ರಸಭರಿತವಾದ ಸ್ಟ್ರಾಬೆರಿ ಪ್ರೀತಿ ಮತ್ತು ಬಯಕೆಯ ಸಂಕೇತವಾಗಿದೆ. ಸ್ಟ್ರಾಬೆರಿ ತಿಂದ ಸಂಗಾತಿಗಳು ಹತ್ತಿರ ಬರ್ತಾರೆ. ಇದನ್ನು ತಿನ್ನೋದು ಬಹಳ ಸುಲಭ. ಸಿಪ್ಪೆ ತೆಗೆಯಬೇಕಾಗಿಲ್ಲ, ಬೀಜ ತೆಗೆಯಬೇಕಾಗಿಲ್ಲ. ಸ್ಟ್ರಾಬೆರಿ, ಲೈಂಗಿಕ ಸಮಯದಲ್ಲಿ ಸಂತೋಷ ಹೆಚ್ಚಿಸುತ್ತದೆ ಎಂದು ತಜ್ಞರು ನಂಬುತ್ತಾರೆ.

ಸ್ಟ್ರಾಬೆರಿಗಳಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರ ಸೇವನೆ ರಕ್ತದ ಹರಿವು ಹೆಚ್ಚುತ್ತದೆ. ನಿಮ್ಮ ದೇಹಕ್ಕೆ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶ ಸಿಗುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡಿದ್ರೆ ಸೆಕ್ಸ್ ಡ್ರೈವ್ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.

ಪ್ರಿಯತಮೆ ಕೊಲೆಗೈದು, ತಾನು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದರೂ ಬದುಕುಳಿದ ಯುವಕ

ಸ್ಟ್ರಾಬೆರಿಯಲ್ಲಿ ಸತು ಹೆಚ್ಚಿದೆ. ಸತು, ಲೈಂಗಿಕ ಜೀವನ ಸುಧಾರಿಸುವ ಕೆಲಸವನ್ನು ಮಾಡುತ್ತದೆ. ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಆದ್ರೆ ಲೈಂಗಿಕ ಚಟುವಟಿಕೆ, ಬಯಕೆ ಕಡಿಮೆ ಆಗುತ್ತದೆ. ಸ್ಟ್ರಾಬೆರಿಯಲ್ಲಿರುವ ಪೋಷಕಾಂಶ ದೇಹದಲ್ಲಿನ ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದ್ರಿಂದ ಲೈಂಗಿಕ ಬಯಕೆ ಹೆಚ್ಚಾಗುತ್ತದೆ. 

ಸ್ಟ್ರಾಬೆರಿಯಲ್ಲಿರುವ ಸತು ಹಾಗೂ ಖನಿಜಗಳು ಪುರುಷ ಮತ್ತು ಮಹಿಳೆ ಇಬ್ಬರಿಗೂ ಒಳ್ಳೆಯದು. ಪುರುಷರಲ್ಲಿ ಟೆಸ್ಟೋಸ್ಟೇರಾನ್ ಮಟ್ಟ ಹೆಚ್ಚಿಸಿದ್ರೆ ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಾಗುತ್ತದೆ. ದೇಹಕ್ಕೆ ಚೈತನ್ಯ ನೀಡುವ ಕೆಲಸವನ್ನು ಸ್ಟ್ರಾಬೆರಿ ಮಾಡುತ್ತದೆ. ಈ ಹಣ್ಣನ್ನು ಸೆಕ್ಸ್‌ಗೂ ಮುನ್ನ ತಿನ್ನಲೇಬೇಕು.

ಸ್ಟ್ರಾಬೆರಿ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತದೆ. ಸ್ಟ್ರಾಬೆರಿಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳಾದ ಬೀಟಾ-ಕ್ಯಾರೋಟಿನ್ ಮತ್ತು ಆಂಥೋಸಯಾನಿನ್ ಇದೆ..ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲ ಕೂಡ ಇದರಲ್ಲಿ ಕಂಡು ಬರುತ್ತದೆ. ನೀವು ಸ್ಟ್ರಾಬೆರಿ ಸೇವನೆ ಮಾಡಿದಾಗ ಇವೆಲ್ಲ ನಿಮ್ಮ ದೇಹ ಸೇರುವುದಲ್ಲದೆ, ಫಲವತ್ತತೆ ಹೆಚ್ಚುತ್ತದೆ. ರಕ್ತ ಪರಿಚಲನೆ ಸರಿಯಾಗಲು ನೆರವಾಗುತ್ತದೆ.  

ಸ್ಟ್ರಾಬೆರಿ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದೆ. ಇದರಲ್ಲಿ  ಕಡಿಮೆ ಗ್ಲೈಸೆಮಿಕ್ ಕಂಡುಬರುತ್ತದೆ. ಇದನ್ನು ತಿನ್ನುವುದರಿಂದ ದೇಹದ ಕೆಳಭಾಗದಲ್ಲಿ ರಕ್ತದ ಹರಿವು ಕ್ರಮಬದ್ಧವಾಗಿರುತ್ತದೆ. ಇದು ಲೈಂಗಿಕ ಕ್ರಿಯೆ ವೇಳೆ ಸುಲಭವಾಗಿ ಪರಾಕಾಷ್ಠೆ ತಲುಪಲು ಸಹಾಯವಾಗುತ್ತದೆ.  ನೀವು ನಿಯಮಿತವಾಗಿ ಸ್ಟ್ರಾಬೆರಿ ಸೇವನೆ ಮಾಡುತ್ತಿದ್ದರೆ ನಿಮ್ಮ ಸೆಕ್ಸ್ ಜೀವನದಲ್ಲಿ ಹೆಚ್ಚಿನ ಸಂತೋಷ ಕಾಣಬಹುದು. ಅಲ್ಲದೆ ನಿಮ್ಮ ಸ್ನಾಯುಗಳಿಗೆ ಬಲ ನೀಡಬಹುದು ಎನ್ನುತ್ತಾರೆ ತಜ್ಞರು. 

click me!