ಪ್ರಿಯತಮೆ ಕೊಲೆಗೈದು, ತಾನು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದರೂ ಬದುಕುಳಿದ ಯುವಕ

By Sathish Kumar KH  |  First Published Feb 11, 2024, 5:10 PM IST

ಪ್ರೀತಿ ಮಾಡಿದ ಹುಡುಗಿಯನ್ನು ಕೊಲೆ ಮಾಡಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಪ್ರಾಣಾಪಾಯದಿಂದ ಪಾರಾಗಿ ಚಿಕತ್ಸೆ ಪಡೆಯುತ್ತಿದ್ದಾನೆ.


ಕೋಲಾರ (ಫೆ.11): ಪ್ರೀತಿ ಮಾಡಿದ ಹುಡುಗಿಯನ್ನು ಕೊಲೆ ಮಾಡಿ, ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವಿನಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಈಗ ಪುನಃ ಆಸ್ಪತ್ರೆಯಲ್ಲಿ ವಾಕಿಂಗ್ ಮಾಡುತ್ತೇನೆಂದು ಹೇಳಿ ಹೊರಗೆ ಬಂದವನು 2ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೂ, ಕೈಕಾಲು, ತಲೆಗೆ ಪೆಟ್ಟಾಗಿದ್ದು, ಸಾವಿನಿಂದ ಪಾರಾಗಿದ್ದಾನೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.

ಹಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಜೋಡಿಯ ನಡುವೆ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿದ್ದ ಪಾಗಲ್ ಪ್ರೇಮಿ ತಾನೂ ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಬದುಕುಳಿದಿದ್ದನು. ಹಲವು ತಿಂಗಳ ಕಾಲ ಚಿಕಿತ್ಸೆ ಕೊಡಿಸಿದ ನಂತರ ಚೇತರಿಕೆ ಕಂಡಿದ್ದ ಯುವಕ ನಡೆದಾಡುವ ಸ್ಥಿತಿಗೆ ಬಂದಿದ್ದನು. ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ವಾಕಿಂಗ್ ಮಾಡುತ್ತೇನೆಂದು 2ನೇ ಮಹಡಿಯ ಪ್ಯಾಸೇಜ್‌ಗೆ ಬಂದ ಯುವಕ ಪುನಃ ಅಲ್ಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪುನಃ ತೀವ್ರ ರಕ್ತಸ್ರಾವ ಉಂಟಾಗಿ ಸಾವಿನಿಂದ ಪಾರಾದ ಯುವಕನನ್ನು ಪುನಃ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Tap to resize

Latest Videos

undefined

ಚಿಕ್ಕಬಳ್ಳಾಪುರ: ತರಕಾರಿ ತರಲು ಹೋದ ಮಗಳು ಕೊಳೆತ ಶವವಾಗಿ ಸಿಕ್ಕಳು

ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ನಿತಿನ್ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ನಿತಿನ್ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ದೊಮ್ಮಲೂರು ಗ್ರಾಮದ ನಿವಾಸಿಯಾಗಿದ್ದಾನೆ. ತನ್ನ ಪ್ರಿಯತಮೆ ನಂದಿತಾಳನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ್ದನು. ನಂದಿತಾಳನ್ನು ಕತ್ತು ಕುಯ್ದು ಕೊಂದು ತಾನು ಕತ್ತುಕುಯ್ದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ನಂತರ ನಿತಿನ್‌ನನ್ನು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಜಾಲಪ್ಪ ಸ್ಪತ್ರೆಯ ಕಾರಿಡಾರ್ ನಲ್ಲಿ ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತೇನೆಂದು ಹೊರಗೆ ಬಂದ ಯುವಕ ಪುನಃ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಯುವಕ ನಿತಿನ್ ನನ್ನು ಐಸಿಯು ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕೋಲಾರದ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬರ ಪರಿಹಾರಕ್ಕೆ ಮನವಿ ಸಲ್ಲಿಸಿ 5 ತಿಂಗಳಾದ್ರೂ, ಬರಿಗೈಯಲ್ಲಿ ಬಂದ ಅಮಿತ್ ಶಾ; ಸಿಎಂ ಸಿದ್ದರಾಮಯ್ಯ ಟೀಕೆ

ಪ್ರಿಯತಮೆ ಕತ್ತು ಕೊಯ್ದು ಹತ್ಯೆಗೆ ಯತ್ನ:
ಚಿತ್ರದುರ್ಗ:
ಕಳೆದ ತಿಂಗಳು ಚಿತ್ರದುರ್ಗ ತಾಲೂಕಿನ ಸುಲ್ತಾನ್‌ಪುರ ಗ್ರಾಮದಲ್ಲಿ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿತ್ತು. ಆದರೆ, ಮಹಿಳೆಯ ಚೀರಾಟವನ್ನು ನೋಡಿದ್ದ ಜನರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸುಲ್ತಾನಪುರದಲ್ಲಿ ವಾಸವಾಗಿದ್ದ ದಾದಾಪೀರ್-ಸಮೀನಾ ನಡುವೆ ಕಳೆದ ಒಂದು ತಿಂಗಳಿಂದ ಆಗಾಗ ಗಲಾಟೆ ನಡೆಯುತ್ತಿತ್ತು. ನಿನ್ನೆ ರಾತ್ರಿ ಜಗಳ ವಿಕೋಪಕ್ಕೆ ತಿರುಗಿದ್ದು, ದಾದಾಪೀರ್‌ ಮಚ್ಚನ್ನು ತೆಗೆದುಕೊಂಡು ಸಮೀ‌ನಾ ಕತ್ತು ಕೊಯ್ದು ಹತ್ಯೆಗೆಯತ್ನಿಸಿದ್ದಾನೆ. ಈ ವೇಳೆ ಆಕೆಯ ಚೀರಾಟವನ್ನು ನೋಡಿದ ಜನರು ಕೂಡಲೇ ದಾದಾಪೀರ್‌ನನ್ನು ಬಿಡಿದಿ ಸಮೀ‌ನಾಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಮೀನಾ ಚೇತರಿಕೆ ಕಾಣಿಸಿಕೊಂಡಿದ್ದಾಳೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

click me!