ಆಟೋಗಾಗಿ ಕಾಯುತ್ತಿದ್ದ ಯುವಕನನ್ನು ಆಟೋದೊಳಗೆ ಎಳೆದುಕೊಂಡ ಮಹಿಳೆ! ಮುಂದಾಗಿದ್ದು ಮಾನವೀಯತೆಗೆ ಸಾಕ್ಷಿ!

Published : Mar 03, 2025, 05:51 PM ISTUpdated : Mar 03, 2025, 06:51 PM IST
ಆಟೋಗಾಗಿ ಕಾಯುತ್ತಿದ್ದ ಯುವಕನನ್ನು ಆಟೋದೊಳಗೆ ಎಳೆದುಕೊಂಡ ಮಹಿಳೆ! ಮುಂದಾಗಿದ್ದು ಮಾನವೀಯತೆಗೆ ಸಾಕ್ಷಿ!

ಸಾರಾಂಶ

ಆಟೋಗಾಗಿ ಕಾಯುತ್ತಿದ್ದ ಶುಭ್‌ಗೆ ಆಶ್ಚರ್ಯವಾಗುವಂತೆ ಆ ಮಹಿಳೆ ಆಟೋದಲ್ಲಿ ಬರುವಂತೆ ಹೇಳಿದರು. ಹೀಗೆ ಶುಭ್ ಆ ಆಟೋದಲ್ಲಿ ಕೂರುತ್ತುದ್ದಂತೆ ಆ ಮಹಿಳೆ, 'ಚಿಂತೆ ಮಾಡಬೇಡಿ' ಎಂದು ಹೇಳಿದರು. ಮುಂದಾಗಿದ್ದು ನೀವೇ ನೋಡಿ..

ಕೆಲವೊಮ್ಮೆ ನಾವು ಆಟೋದಲ್ಲಿ ಎಲ್ಲಿಗಾದರೂ ತುರ್ತಾಗಿ ಹೋಗುವಾಗ ನಮಗೆ ಏನೆಲ್ಲಾ ಆಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಕೈಯಲ್ಲಿ ಕೆಲವು ಗಂಟೆಗಳಲ್ಲಿ ಈ ಘಟನೆ ನಡೆದಿದ್ದು, ಒಬ್ಬ ಮಹಿಳೆ ಸೇರಿದಂತೆ ಮೂವರು ಅಪರಿಚಿತರ ನಡುವೆ ನಡೆದ ಕಥೆಯನ್ನು ನೀವೊಮ್ಮೆ ಓದಲೇಬೇಕು.. ಇದು ಯಾವ ಸಿನಿಮಾ ಕಥೆಗೂ ಕಮ್ಮಿಯಿಲ್ಲ..

ಯಾವುದೇ ನಿರೀಕ್ಷೆಯಿಲ್ಲದೆ ಕೆಲವು ಅಪರಿಚಿತರು ನಮಗೆ ತೋರಿಸುವ ದಯೆ, ಕಾಳಜಿ ಕೆಲವೊಮ್ಮೆ ನಮ್ಮ ಜೀವನದ ದೊಡ್ಡ ಸಂತೋಷಗಳಾಗಿ ಬದಲಾಗುತ್ತವೆ. ಪ್ರತಿದಿನ ಕೊಲೆ, ಸುಲಿಗೆ ನೋಡುವ ನಮಗೆ ಇಂತಹ ಘಟನೆಗಳು ನೀಡುವ ಶಕ್ತಿ ಕಡಿಮೆಯೇನಲ್ಲ. ಅಂತಹುದೇ ಕೆಲವು ಅನುಭವಗಳನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡುತ್ತೇವೆ. ಈಗ ಎಕ್ಸ್ (ಟ್ವಿಟರ್) ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಅಂತಹದ್ದರಲ್ಲಿ ಒಂದಾಗಿದೆ.

ದೆಹಲಿಯಲ್ಲಿ ಆದ ತನ್ನ ಅನುಭವವನ್ನು ಶುಭ್ ಎಂಬ ಬಳಕೆದಾರರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ದಿನ ಬೆಳಿಗ್ಗೆ 45 ನಿಮಿಷಗಳಲ್ಲಿ ಯುವಕ ಡೆಲ್ಲಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು ತಲುಪಬೇಕಿತ್ತು. ಅಲ್ಲಿಂದ ಊರಿಗೆ ಹೋಗಲು ರೈಲು ಹತ್ತಬೇಕು. ಕಾರಣ ಅಂದು ಶುಭ್ ತಂದೆಯ ಹುಟ್ಟುಹಬ್ಬವಾಗಿತ್ತು. ಮನೆಗೆ ಬರುತ್ತೇನೆಂದು ತಂದೆಗೆ ಶುಭ್ ಅವರು ಮಾತು ಕೊಟ್ಟಿದ್ದರು.  ಹೀಗೆ ಶುಭ್ ಒಂದು ಆಟೋ ಕರೆದರು. ಡ್ರೈವರ್ 150 ರೂ. ಕೇಳಿದನು. ಆದರೆ, ನಾನು 130 ರೂ. ಹೇಳಿದೆ. ಕೊನೆಗೆ ಅದಕ್ಕೆ ಒಪ್ಪಿಕೊಂಡರು ಎಂದು ಶುಭ್ ಹೇಳುತ್ತಾರೆ.

ಇದನ್ನೂ ಓದಿ: ಮದುವೆಯಾದ ಎರಡೇ ದಿನಕ್ಕೆ ಮಗು ಹೆತ್ತ ವಧು, ಸತ್ಯ ತಿಳಿದು ಬೆಚ್ಚಿಬಿದ್ದ ಗಂಡ!

ರೈಲಿನ ಬಗ್ಗೆ ಶುಭ್ ಆಟೋ ಡ್ರೈವರ್‌ಗೆ ಎಲ್ಲವನ್ನೂ ಹೇಳಿದ್ದನು. ಕೊನೆಗೆ ಆಟೋ ಒಂದು ರೈಲ್ವೆ ನಿಲ್ದಾಣದಲ್ಲಿ ನಿಂತಿತು. ಆದರೆ, ಅದು ಕಂಟೋನ್ಮೆಂಟ್ ಸ್ಟೇಷನ್ ಅಲ್ಲ ಎಂದು ಆಗ ಗೊತ್ತಾಯಿತು. ಅದು ನ್ಯೂ ಡೆಲ್ಲಿ ರೈಲ್ವೆ ಸ್ಟೇಷನ್ ಆಗಿತ್ತು. ಆಗ ಸಮಯ ಸಂಜೆ 6.10 ಆಗಿತ್ತು. ರೈಲು ಕಂಟೋನ್ಮೆಂಟ್ ಸ್ಟೇಷನ್‌ಗೆ 6.38ಕ್ಕೆ ಬರುತ್ತದೆ. ಗೂಗಲ್ ಮ್ಯಾಪ್‌ನಲ್ಲಿ ಅಲ್ಲಿಗೆ 30 ನಿಮಿಷ ಎಂದು ತೋರಿಸುತ್ತಿತ್ತು. ಆಟೋ ಚಾಲಕನಿಗೆ ಅಲ್ಲಿಗೆ ತಲುಪಿಸಲು ಸಾಧ್ಯವೇ ಎಂದು ಕೇಳಿದಾಗ, ಗಾಡಿಯಲ್ಲಿ  ಪೆಟ್ರೋಲ್ ಇಲ್ಲ, ಪೆಟ್ರೋಲ್ ಹಾಕಿಸಲು 15 ಕಿಲೋಮೀಟರ್ ಹೋಗಬೇಕು ಎಂದು ಹೇಳಿದನು.

ಆದರೆ, ಆ ಆಟೋ ಚಾಲಕ ಹತ್ತಿರದಲ್ಲಿದ್ದ ಮತ್ತೊಬ್ಬ ಆಟೋ ಚಾಲಕನಿಗೆ ನಿಲ್ಲಿಸಿ ಈತನನ್ನು ಕರೆದುಕೊಂಡು ಹೋಗುತ್ತೀಯಾ ಎಂದು ಕೇಳಿದನು. ಆ ಆಟೋದಲ್ಲಿ ಒಬ್ಬ ಮಹಿಳೆ ಇದ್ದರು. ಅವರು ಯಾವುದೋ ಆ್ಯಪ್ ಮೂಲಕ ಬುಕ್ ಮಾಡಿದ ಆಟೋ ಆಗಿತ್ತು ಅದು. ಆದರೆ, ಇವರ ಸಂಭಾಷಣೆ ಕೇಳಿಸಿಕೊಂಡಿದ್ದ ಮಹಿಳೆ ಶುಭ್‌ ಅವರ ಪರಿಸ್ಥಿತಿ ನೋಡಿ ಆ ಆಟೋದಲ್ಲಿ ಬರಲು ಹೇಳಿದರು. ಹೀಗೆ ಶುಭ್ ಆ ಆಟೋದಲ್ಲಿ ರೈಲ್ವೆ ಸ್ಟೇಷನ್‌ಗೆ ಹೋದರು. ಆಟೋದಲ್ಲಿ ಆ ಮಹಿಳೆ, 'ಚಿಂತೆ ಮಾಡಬೇಡಿ, ಟ್ರೈನ್ ಸಿಗುತ್ತೆ' ಎಂದು ಶುಭ್‌ಗೆ ಹೇಳುತ್ತಿದ್ದರು. ಕೊನೆಗೆ ಸರಿಯಾದ ಸಮಯಕ್ಕೆ ಆಟೋ ಸ್ಟೇಷನ್‌ಗೆ ತಲುಪಿತು. ಶುಭ್ ರೈಲಿನ ಮೆಟ್ಟಿಲ ಮೇಲೆ ಕಾಲಿಟ್ಟ ಕೂಡಲೇ ರೈಲು ಚಲಿಸಲು ಪ್ರಾರಂಭಿಸಿತ್ತು.

ಇನ್ನು ಶುಭ್ ಅವರು ರೈಲ್ವೆ ನಿಲ್ದಾಣಕ್ಕೆ ಬರುವುದಕ್ಕೆ 200 ರೂಪಾಯಿ ಆಟೋ ಚಾರ್ಜ್ ಆಗಿತ್ತು. ಆದರೆ, ಚಿಲ್ಲರೆ ಇರಲಿಲ್ಲ. ಆಗ ಜೇಬಿಂದ ತೆಗೆದು 500 ರೂ. ನೋಟನ್ನು ಕೊಟ್ಟರು. ಆಟೋ ಚಾಲಕನ ಬಳಿಯೂ ಚಿಲ್ಲರೆ ಇರಲಿಲ್ಲ. ಆಟೋ ಚಾಲಕ ಅದನ್ನೂ ತೆಗೆದುಕೊಳ್ಳದೇ ಶುಭ್ ಅವರನ್ನು ರೈಲಿಗೆ ಹೋಗುವಂತೆ ಕಳಿಸಿದ್ದಾರೆ. ಈ ಬಗ್ಗೆ ಶುಭ್ ತನ್ನ ಟ್ವೀಟ್‌ನಲ್ಲಿ  ಬರೆಯುತ್ತಾರೆ. ಏನೇ ಆಗಲಿ, ಶುಭ್‌ಗೆ ತಂದೆಗೆ ಮಾತು ಕೊಟ್ಟಂತೆ ಹುಟ್ಟುಹಬ್ಬಕ್ಕೆ ಮನೆಗೆ ತಲುಪಲು ಸಾಧ್ಯವಾಯಿತು.

ಇದನ್ನೂ ಓದಿ: ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಎಸಿ ಅಳವಡಿಕೆ ರಹಸ್ಯ ರಿವೀಲ್; ಇದು ನೌಕರರು, ಗ್ರಾಹಕಸ್ನೇಹಿ ಕಾರ್ಯವಲ್ಲ!

ಪರಿಚಯವಿಲ್ಲದ ಆ ಮೂವರು ತನ್ನೆಡೆಗೆ ತೋರಿಸಿದ ದಯೆ ಮತ್ತು ಕಾಳಜಿಯನ್ನು ಶುಭ್ ತನ್ನ ಪೋಸ್ಟ್‌ನಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಬಹಳ ಬೇಗನೆ ಗಮನ ಸೆಳೆಯಿತು. 'ದೆಹಲಿಯಲ್ಲಿ ಇಂತಹ ಘಟನೆಯಾ, ನಂಬಲು ಸಾಧ್ಯವಿಲ್ಲ, ಇದು ಸುಳ್ಳು ಕಥೆಯಲ್ಲವೇ' ಎಂದು ಅನೇಕರು ಪೋಸ್ಟ್‌ನ ಕಾಮೆಂಟ್‌ನಲ್ಲಿ ಕೇಳಿದ್ದಾರೆ. ಆದರೆ, 'ಮಾನವೀಯತೆ ಸತ್ತಿಲ್ಲ' ಎಂದು ಕಾಮೆಂಟ್ ಮಾಡಿದವರೂ ಇದ್ದಾರೆ.

(ಚಿತ್ರವು ಸಾಂಕೇತಿಕವಾಗಿದೆ)

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ