
ನವದೆಹಲಿ(ಜ.20) ಭಾನುವಾರ ಹೆಂಡ್ತಿ ಮುಖ ಎಷ್ಟು ನೋಡುತ್ತೀರಾ, 90 ಗಂಟೆ ಕೆಲಸ ಮಾಡಿ ಎಂದು ಇತ್ತೀಚೆಗೆ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್ಎನ್ ಸುಬ್ರಹ್ಮಣ್ಯ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಈ ಹೇಳಿಕೆ ವಿರುದ್ದ ಹಲವು ಕಂಪನಿಗಳು ಸಿಇಒ, ಮುಖ್ಯಸ್ಥರು, ಸೆಲೆಬ್ರೆಟಿಗಳು ಸೇರಿದಂತೆ ಉದ್ಯೋಗಿಗಳು ಭಾರಿ ಆಕ್ರೋಶ ಹೊರಹಾಕಿದ್ದರು.ಹೇಳಿಕೆಗೆ ವಿರುದ್ದ ಭಾರಿ ಟೀಕೆ, ಮೀಮ್ಸ್, ಟ್ರೋಲ್ ಹರಿದಾಡಿತ್ತು. ಇದೀಗ ಇದೇ ವಿವಾದಾತ್ಮಕ ಹೇಳಿಕೆ ಮುಂದಿಟ್ಟುಕೊಂಡು ಕಾಂಡೋಮ್ ಅದ್ಭುತ ಜಾಹೀರಾತು ಹೊರತಂದಿದೆ. ಹೆಂಡತಿ ಮುಖ ನೋಡುವುದು ಅನಿವಾರ್ಯವಲ್ಲ, ಆದರೆ ಪ್ರೀತಿ ಹಾಗೂ ಬಯಕೆ ಈಡೇರಿಸುವಂತಿರಲಿ ಎಂದು ಜಾಹೀರಾತು ನೀಡಿದೆ. ಇಷ್ಟೇ ಅಲ್ಲ ರೊಮ್ಯಾನ್ಸ್ ಅಂತರ ಕಡಿಮೆ ಮಾಡಲು ಕಣ್ಣ ಪಟ್ಟಿಯನ್ನು ಜೊತೆಗಿಟ್ಟ ಫೋಟೋವನ್ನು ಕಾಂಡೋಮ್ ಕಂಪನಿ ನೀಡಿದೆ. ಈ ಜಾಹೀರಾತು ಮೂಲಕ ಪರೋಕ್ಷವಾಗಿ L&T ಮುಖ್ಯಸ್ಥರಿಗೆ ಠಕ್ಕರ್ ನೀಡಿದೆ.
ಡ್ಯುರೆಕ್ಸ್ ಕಾಂಡೋಮ್ ಕಂಪನಿ ಈ ವಿಶಿಷ್ಠ ಜಾಹೀರಾತು ಹೊರತಂದಿದೆ. ಪ್ರಮುಖಾಗಿ L&T ಮುಖ್ಯಸ್ಥ ಎಸ್ಎನ್ ಸುಬ್ರಹ್ಮಣ್ಯ ನೀಡಿದ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಈ ಜಾಹೀರಾತು ನೀಡಲಾಗಿದೆ. ರೊಮ್ಯಾನ್ಸ್ ವೇಳೆ ಕಣ್ಣಿಗೆ ಬಳಸುವ ಕಪ್ಪು ಪಟ್ಟಿ ಜೊತೆಗೆ ಕಾಂಡೋಮ್ ಪ್ಯಾಕೆಟ್ ಫೋಟೋ ನೀಡಲಾಗಿದೆ. ಈ ಮೂಲಕ ಮಾರ್ಮಿಕವಾಗಿ ಹೆಂಡತಿ ಮುಖ ನೋಡದೆ ರೋಮ್ಯಾನ್ಸ್‌ನಲ್ಲಿ ತೊಡಗಿಸಿಕೊಳ್ಳಿ ಎಂದಿದೆ. ಇಷ್ಟೇ ಅಲ್ಲ ಈ ಪೋಸ್ಟ್ ಜೊತೆಗೆ ನಾವು ನಮ್ಮ ಕೆಲಸದ ನೀತಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಬರೆಯಲಾಗಿದೆ.
LT 90 ಗಂಟೆ, ಇನ್ಫೋಸಿಸ್ 70 ಗಂಟೆ, ಆದ್ರೆ ಚಿರತೆಯಿಂದ ಸಿಕ್ತು ಮನೆಯಿಂದ ಕೆಲಸ, ಮೀಮ್ಸ್ ವೈರಲ್
ಡ್ಯುರೆಕ್ಸ್ ಕಾಂಡೋಮ್ ಜಾಹೀರಾತು ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ಜಾಹೀರಾತಿಗೆ ಹಲವರು ಕಮೆಂಟ್ ಮಾಡಿದ್ದಾರೆ. ಪ್ರತಿ ಬಾರಿ ಡ್ಯುರೆಕ್ಸ್ ಜಾಹೀರಾತು ಅದ್ಭುತವಾಗಿರುತ್ತದೆ. ಸೋಶಿಯಲ್ ಮೀಡಿಯಾ ಟ್ರೆಂಡ್ ನೋಡಿಕೊಂಡು ಅತ್ಯುತ್ತಮವಾಗಿ ಉತ್ಪನ್ನದ ಪ್ರಚಾರ ಮಾಡಲಾಗುತ್ತಿದೆ. ಇದೀಗ ಈ ಜಾಹೀರಾತು ನೋಡಿ ಕೆಲ ಮುಖ್ಯಸ್ಥರು ಅಳುತ್ತಿರುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಯಾರು ಈ ಹೇಳಿಕೆ ಕೊಟ್ಟಿದ್ದಾರೋ ಅವರು ಈ ಭಾನುವಾರ ಈ ಉತ್ಪನ್ನ ಬಳಸಬಹುದು. ಕಾರಣ ಅವರು ಹೆಂಡತಿ ಮುಖ ನೋಡುವುದಿಲ್ಲ. ಹೀಗಾಗಿ ಇದು ಸೂಕ್ತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಕೆಲ ದಿನಗಳಿಂದ L&T ಮುಖ್ಯಸ್ಥ ಎಸ್ಎನ್ ಸುಬ್ರಹ್ಮಣ್ಯ ನೀಡಿದ ಹೇಳಿಕೆ ಭಾರಿ ಚರ್ಚೆಯಾಗುತ್ತಿದೆ. ಕೈಗಾರಿಕೆ, ಐಟಿ, ಸ್ಟಾರ್ಟ್ಅಪ್ ಸೇರಿದಂತೆ ಹಲವು ಕ್ಷೇತ್ರದ ದಿಗ್ಗಜರು 90 ಗಂಟೆ ಕೆಲಸ ಹೇಳಿಕೆಯನ್ನು ವಿರೋಧಿಸಿದ್ದಾರೆ. ಇದೇ ವೇಳೆ ಇನ್ಫೋಸಿಸ್ ನಾರಾಯಣಮೂರ್ತಿ ನೀಡಿದ 70 ಗಂಟೆ ಕೆಲಸದ ಕುರಿತು ಚರ್ಚೆ ನಡೆಯುತ್ತಿದೆ.
ಸಂಡೇ ಸೇರಿ 90 ಗಂಟೆ ಕೆಲಸ ಸೂಚಿಸಿದ LT ಮುಖ್ಯಸ್ಥ ಪಡೆಯುವ ಸ್ಯಾಲರಿ ಎಷ್ಟು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.