ಕರಿಮಣಿ ಮಾಲಿಕನಿಗೆ ಇರಬೇಕಾದ ಸ್ಪೆಷಲ್ ಕ್ವಾಲಿಫಿಕೇಶನ್ಸ್ ಹೇಳ್ತಿದ್ದಾರೆ, ತಿಳ್ಕೊಳ್ಳಿ!

By Suvarna News  |  First Published Feb 26, 2024, 12:12 PM IST

ಎಲ್ಲೆಲ್ಲೂ ಕರಿಮಣಿ ಮಾಲಿಕನದೇ ಹವಾ ಜೋರಾಗಿರುವಾಗ ಇಲ್ಲೊಬ್ಬ ಹೆಣ್ಣುಮಗಳು ಕರಿಮಣಿ ಮಾಲಿಕನ ಗುಣಲಕ್ಷಣಗಳನ್ನು ಹೇಳಿದ್ದಾರೆ. ಆ ಗುಣ ಲಕ್ಷಣ ನಿಮ್ಮಲ್ಲಿದೆಯಾ? 


ಸೋಶಿಯಲ್ ಮೀಡಿಯಾ ತುಂಬೆಲ್ಲಾ 'ಕರಿಮಣಿ ಮಾಲೀಕ ನೀನಲ್ಲ' ಹಾಗೂ 'ರಾಹುಲ್ಲಾ.. ರಾಹುಲ್ಲಾ' ಹಾವಳಿ ಶುರುವಾಗಿ ಬಹಳ ದಿನ ಆಯ್ತು. ಆದ್ರೂ ಆ ಹಾಡಿನ ಲೈನ್ ಎಲ್ಲೋ ಕಿವಿಗೆ ಬಿದ್ರೂ ಸಾಕು ಮತ್ತೆ ಮತ್ತೆ ನಾಲಿಗೆ ಮೇಲೆ ಆ ಹಾಡೇ ಬರುತ್ತದೆ. ಇದರಿಂದಾಗಿ ನಿಂತ್ರು ಕುಂತ್ರು ಜನ ಇದನ್ನೇ ಗುನುಗುವಂತಾಗಿದೆ ಬಿಟ್ಟಿದೆ. ಈ ಸೋಶಿಯಲ್ ಮೀಡಿಯಾದಲ್ಲಿ  ಯಾವ ವಿಚಾರ, ಯಾರು ಯಾವಾಗ, ಹೇಗೆ ಟ್ರೆಂಡ್ ಆಗಿಬಿಡುತ್ತಾರೆ ಎಂದು ಹೇಳೋಕ್ಕಾಗಲ್ಲ ಅನ್ನೋದು ಅಕ್ಷರಶಃ ಸತ್ಯ. ಇಷ್ಟೆಲ್ಲ ಸೌಂಡ್ ಮಾಡ್ತಿರೋ 'ಕರಿಮಣಿ ಮಾಲಿಕ'ನ ಬಗ್ಗೆ ಇನ್‌ಸ್ಟಾದಲ್ಲಿ ಹೊಸ ರೀಲ್ಸ್‌ ಒಂದು ಸಖತ್ ಸೌಂಡ್ ಮಾಡ್ತಿದೆ. ಇದರಲ್ಲಿ ವಿವಾಹಿತ ಮಹಿಳೆಯೊಬ್ಬರು 'ನಿಜವಾದ ಕರಿಮಣಿ ಮಾಲಿಕ'ನ ಗುಣಲಕ್ಷಣಗಳನ್ನು ಹೇಳಿದ್ದಾರೆ. ಅವರು ಹೇಳಿರೋ ರೀತಿ ನೋಡಿ ಕರಿಮಣಿ ಮಾಲಿಕ ಆಗ್ಬೇಕು ಅಂದ್ಕೊಂಡಿರೋರು, ಈಗಾಗಲೇ ಆಗಿರೋದು ಗಾಬರಿ ಬಿದ್ರೆ, 'ಕರಿಮಣಿ ಕಡೆ ತಲೆ ಹಾಕೂ ನೋಡಲ್ಲ' ಅನ್ನೋರು ನೆಮ್ಮದಿಯ ನಿಟ್ಟುಸಿರು ಬಿಡೋ ಹಾಗಾಗಿದೆ. 

ಅಷ್ಟಕ್ಕೂ ಈ ಕರಿಮಣಿ ಮಾಲಿಕನ ಬಗ್ಗೆ ಉಪೇಂದ್ರ ನಾಲ್ಕು ಲೈನ್ ಗೀಚಿ ಇಪ್ಪತ್ತೈದು ವರ್ಷಗಳಾಗಿವೆ. ಇದಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದರು. ಈ ಹಾಡು ಹಾಡಿದ ಹೆಣ್ಮಗಳು ಆಮೇಲೆ ಒಂದಿಷ್ಟು ಹಿಂದಿ ಸಿನಿಮಾಗಳಲ್ಲೂ ಹಾಡಿ ಈಗ ಆಸ್ಟ್ರೇಲಿಯಾದಲ್ಲಿ ನೆಲಿಸಿದ್ದಾರೆ. ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿರೋ ಕರಿಮಣಿ ಮಾಲಿಕ ಹಾಡು ಅವರ ಟ್ಯಾಲೆಂಟಿಗೆ ಮರುಜೀವ ಕೊಟ್ಟಿದೆ ಅಂತಲೇ ಹೇಳಬಹುದು. ಭಗ್ನಪ್ರೇಮಿಯೊಬ್ಬ ಇನ್‌ಸ್ಟಾದಲ್ಲಿ ತನ್ನ ನೋವು ತೋಡಿಕೊಂಡು ಮಾಡಿದ ರೀಲ್ಸ್ ರಾತ್ರೋ ರಾತ್ರಿ ವೈರಲ್ ಏನೋ ಆಯ್ತು. ಆದ್ರೆ ವಿಕಿಪೀಡಿಯಾ ವಿಕಾಸ್ ಮತ್ತು ಟೀಮ್ ಮಾಡಿರೋ ರೀಲ್ಸ್ ಮಾತ್ರ ಯದ್ವಾ ತದ್ವಾ ವೈರಲ್ ಆಯ್ತು. ಆಮೇಲೆ ಅವರು ಬೆಳ್ಳುಳ್ಳಿ ಕಬಾಬ್ ಚಂದ್ರು ಮತ್ತು ಅವರ ಸಹಾಯಕ ರಾವುಲ್ಲ ಜೊತೆ ಹೋಗಿ ಮತ್ತೆ ರೀಲ್ಸ್ ಮಾಡಿ ಅದು ಮತ್ತೊಂದು ಮೆಚ್ಚುಗೆಯ ಪ್ರವಾಹವನ್ನೇ ಸೃಷ್ಟಿಸಿತು. 

ಬಿಗ್​ಬಾಸ್​ ಸಂಗೀತಾಗೆ ಕ್ರಷ್​ ಆಫ್​ ಕರ್ನಾಟಕ ಬಿರುದು- ಕರಿಮಣಿ ಮಾಲಿಕ ಯಾರು ಎಂದಾಗ ಹೇಳಿದ್ದೇನು?

ಇಷ್ಟೆಲ್ಲ ಆದ್ಮೇಲೆ ಸದ್ಗೃಹಿಣಿಯೊಬ್ಬರು 'ಕರಿಮಣಿ' ಮಾಲಿಕನ ಸ್ಪೆಷಲ್ ವರ್ಶನ್‌ನ ರೀಲ್ಸ್ ಮಾಡಿ ಹಾಕಿದ್ದಾರೆ. ಅಶ್ವಿನಿ ಅನ್ನೋವರು ಮಾಡಿರೋ ರೀಲ್ಸ್ ಈಗ ಮಿಲಿಯನ್‌ಗಟ್ಟಲೆ ವ್ಯೂಸ್ ದಾಖಲಿಸಿದೆ. ಅವರು ಹೇಳುವ ಪ್ರಕಾರ, 'ಕೈ ಹಿಡಿದ ಹುಡುಗಿಯನ್ನು ರಾಣಿಯಂತೆ ನೋಡುವವ, ಆಕೆಗೆ ಒಂದೇ ಒಂದು ಸುಳ್ಳನ್ನು ಹೇಳದೇ, ಮೋಸ ಮಾಡದೇ ಇರುವವ, ಅವಳ ಜೊತೆ ಖುಷಿಯಿಂದ ದಿನ ಕಳೆಯುವವ, ಅವಳಿಗೆ ಹಾಗೂ ಅವಳ ಕುಟುಂಬದವರಿಗೆ ಏನೇ ತೊಂದರೆ ಬಂದರೂ ಅದರಿಂದ ಪಾರು ಮಾಡುವವ, ಆಕೆಗೆ ಎಲ್ಲ ಬಗೆಯ ಮಾನಸಿಕ ಹಾಗೂ ದೈಹಿಕ ಸುಖ ನೀಡುವವ, ಆಕೆಯ ಎಲ್ಲ ಕಷ್ಟ ನಷ್ಟಗಳಿಗೆ ಜೊತೆಯಾಗಿ ನಿಲ್ಲುವವನೇ ಆ ಕರಿಮಣಿ ಮಾಲಿಕ..' ಎಂದು ಅಶ್ವಿನಿ ರೀಲ್ಸ್ ಮಾಡಿದ್ದಾರೆ. 

Tap to resize

Latest Videos

 

ಪುಣ್ಯಕ್ಕೆ ಅವರು ರೀಲ್ಸ್‌ಗೆ ಕಾಮೆಂಟ್ ಸೆಕ್ಷನ್ ಆಫ್ ಮಾಡಿಟ್ಟಿದ್ದಾರೆ. ಇಲ್ಲಾಂದರೆ ಬಹುಶಃ ಇದಕ್ಕೆ ಬಂದಿರೋ ಕಾಮೆಂಟ್ಸ್‌ ವೈರಲ್ ಆಗ್ತಿದ್ವೇನೋ. ಯಾಕೆಂದರೆ ಇಂಥ ಸ್ಪೆಷಲ್ ಕ್ಯಾರೆಕ್ಟರ್ ಉಳ್ಳ ಕರಿಮಣಿ ಮಾಲೀಕ ಈ ಜಗತ್ತಲ್ಲಿ ಇದ್ದಾರ ಅನ್ನೋದು ಹಲವು ಹುಡುಗಿಯರ ಮಿಲಿಯನ್ ಡಾಲರ್ ಪ್ರಶ್ನೆ. ಆದರೆ ಕರಿಮಣಿ ಮಾಲಿಕನ ಬಗ್ಗೆ ಅವರ ಕನಸಂತೂ ಇದೇ ಇರುತ್ತೆ. 

ಕರಿಮಣಿ ಸೀರಿಯಲ್​ ಫೈಟಿಂಗ್​ ಸೀನ್​ ಶೂಟಿಂಗ್​ ಹೇಗಿತ್ತು ಗೊತ್ತಾ? ಮೈ ಝುಂ ಎನ್ನಿಸುವ ವಿಡಿಯೋ ರಿಲೀಸ್​

ಇದನ್ನು ನೋಡಿದ ಮೇಲಾದ್ರೂ ದಾರಿಯಲ್ಲಿ ಹೋಗೋರೆಲ್ಲ 'ಕರಿಮಣಿ' ಮಾಲೀಕ ನಾನೇ ಅನ್ನೋ ಹಾಗೆ ಫೋಸ್ ನೀಡೋದು ಕಡಿಮೆ ಮಾಡಬಹುದೇನೋ ಅಂತ ಒಂದಿಷ್ಟು ಹುಡುಗೀರು ಎದುರು ನೋಡ್ತಿದ್ದಾರೆ. 

 

 

click me!