ಮನೆ ಅಳಿಯ ಬೇಕಾ? ನಾವು ಹುಡುಕಿಕೊಡ್ತೇವೆ.. ಶುರುವಾಗಿದೆ ಹೊಸ ಟ್ರೆಂಡ್ !

By Suvarna News  |  First Published Feb 26, 2024, 12:04 PM IST

ಮದುವೆ ಆಗೋದೆ ಕಷ್ಟ ಎನ್ನುವ ಪರಿಸ್ಥಿತಿ ಈಗಿನ ದಿನಗಳಲ್ಲಿದೆ. ಹುಡುಗಿ ಸಿಕ್ಕಿದ್ರೆ ಸಾಕು ಎನ್ನುವ ಅನೇಕ ಹುಡುಗರಿದ್ದಾರೆ. ಅವರಿಗೆ ಕಂಪನಿಯೊಂದು ಹೊಸ ಆಫರ್ ನೀಡ್ತಿದೆ. ಆದ್ರೆ ಅದಕ್ಕೊಂದಿಷ್ಟು ಷರತ್ತುಗಳೂ ಇವೆ. 
 


ಮದುವೆ, ಸಂಸಾರ, ಕುಟುಂಬ ಎಲ್ಲವೂ ಹಿಂದೆ ಭಾವನಾತ್ಮಕ ಸಂಬಂಧವನ್ನು ಹೊಂದಿತ್ತು. ಮದುವೆಗಳು ಸಂಪ್ರದಾಯದಂತೆ ನಡೆಯುತ್ತಿದ್ದವು. ಹೆಣ್ಣು – ಗಂಡಿನ ಮಧ್ಯೆ ಮಾತ್ರ ವಿವಾಹ ನಡೆಯುತ್ತಿದ್ದ ಕಾಲ ಈಗಿಲ್ಲ. ಸಲಿಂಗಕಾಮಿ ಮದುವೆ ಕೂಡ ಸಾಮಾನ್ಯ ಎನ್ನುವಂತಾಗಿದೆ. ಮದುವೆ ಆದ್ಮೇಲೆ ಬಹುತೇಕ ಮಹಿಳೆಯರು ಗಂಡನ ಮನೆ ಸೇರುತ್ತಿದ್ದರು. ಅಲ್ಲೊಂದು ಇಲ್ಲೊಂದು ಕಡೆ ಮಾತ್ರ ಅನಿವಾರ್ಯ ಕಾರಣಕ್ಕೆ ಅಳಿಯ ಮಾವನ ಮನೆಗೆ ಬಂದು ವಾಸ ಮಾಡ್ತಿದ್ದ. ಆದ್ರೀಗ ಮದುವೆ ಎನ್ನುವುದು ಬ್ಯುಸಿನೆಸ್ ರೂಪ ಪಡೆದಿದೆ. ಮನೆಗೆ ಹೋಗಿ ಹುಡುಗ – ಹುಡುಗಿಯನ್ನು ನೋಡ್ಬೇಕಾಗಿಲ್ಲ. ಆನ್ಲೈನ್ ನಲ್ಲಿಯೇ ಮದುವೆ ಕೂಡ ನಡೆಯುವ ಕಾಲ ಇದು. ಅನೇಕ ಕಂಪನಿಗಳು ಈ ಮದುವೆ ಜವಾಬ್ದಾರಿಯನ್ನು ವಹಿಸಿಕೊಂಡು, ಸಂಬಂಧ ಕೂಡಿಸಿ, ವಿವಾಹದ ಎಲ್ಲ ಕಾರ್ಯಕ್ರಮವನ್ನು ಪೂರ್ಣಗೊಳಿಸುತ್ತವೆ. 

ಈಗಿನ ದಿನಗಳಲ್ಲಿ ಮಹಿಳೆ, ಗಂಡನ ಮನೆಯಲ್ಲೇ ಇರಬೇಕೆಂದೇನಿಲ್ಲ. ಪತಿ (Husband) ಯಾದವನು ಪತ್ನಿ (Wife) ಮನೆಯಲ್ಲಿ ವಾಸಮಾಡೋದು ಸಾಮಾನ್ಯ ಎನ್ನುವಂತಾಗ್ತಿದೆ. ಹೆಣ್ಣು ಹೆತ್ತವರು ಮಗಳನ್ನು ಬೇರೆಯವರ ಮನೆಗೆ ಕಳುಹಿಸಿಕೊಡಬೇಕಾಗಿಲ್ಲ. ಮಗಳ ಗಂಡನನ್ನು ಮನೆ ತುಂಬಿಸಿಕೊಂಡ್ರೆ ಆಯ್ತು. ಮಗಳು – ಅಳಿಯ ಇಬ್ಬರೂ ಕಣ್ಣ ಮುಂದೆಯೇ ಇರ್ತಾರೆ. ಪುರುಷ ಪ್ರಧಾನ ಭಾರತ (India) ದಲ್ಲಿ ಅಳಿಯ ಸಂತಾನಕ್ಕೆ ಬರುವವರ ಸಂಖ್ಯೆ ಈಗ್ಲೂ ಬಹಳ ಕಡಿಮೆ. ಸ್ವಾತಂತ್ರ್ಯ (independence) ಇರೋದಿಲ್ಲ ಎಂಬ ಭಾವನೆ ಅವರದ್ದು. ಆದ್ರೆ ಕೆಲ ದೇಶಗಳಲ್ಲಿ ಇದನ್ನೇ ಈಗ ಬ್ಯುಸಿನೆಸ್ ಆಗಿ ಪರಿವರ್ತನೆ ಮಾಡಲಾಗ್ತಿದೆ. ಅಳಿಯ ಮಗಳ ಜೊತೆ ನಿಮ್ಮ ಮನೆಯಲ್ಲೇ ಇರಬೇಕು ಅಂದ್ರೆ ನೀವು ಕಂಪನಿ ಒಂದನ್ನು ಸಂಪರ್ಕಿಸಬಹುದು. ನನಗೆ ಮಾವನ ಮನೆ ವಾಸ ಓಕೆ ಎನ್ನುವವರು ಕೂಡ ಆ ಕಂಪನಿಯನ್ನು ಸಂಪರ್ಕಿಸಬಹುದು. ದಿನ ದಿನಕ್ಕೂ ಪ್ರಸಿದ್ಧಿ ಪಡೆಯುತ್ತಿರುವ ಆಕ ಕಂಪನಿ ಸದ್ಯ ಚೀನಾದಲ್ಲಿ ತಲೆ ಎತ್ತಿದೆ. ಸಾಂಪ್ರದಾಯಿಕ ಪತಿ ಬದಲು ಲಿವ್ ಇನ್ ಅಳಿಯನ ಆಫರ್ ನೀಡ್ತಿದೆ.

Latest Videos

undefined

26 ಪುರುಷ ಜೊತೆ! ಹೊರಬಿತ್ತು ಪತ್ನಿಯ ಕಹಿ ಸತ್ಯ..ಶಾಕ್‌ನಲ್ಲಿ ಪತಿ

ಚೀನಾದ ಹ್ಯಾಂಗ್‌ಝೌನ ಶಾವೋಶನ್ ಜಿಲ್ಲೆಯಲ್ಲಿರುವ ಮ್ಯಾಚ್‌ಮೇಕಿಂಗ್ ಏಜೆನ್ಸಿ ಹೊಸ ಬ್ಯುಸಿನೆಸ್ ಶುರು ಮಾಡಿದೆ. ಅದ್ರ ಪ್ರಕಾರ, ಕಂಪನಿ ನಿಮಗೆ ಪತ್ನಿ ಮನೆಯಲ್ಲಿ ವಾಸಮಾಡುವ ಹುಡುಗನನ್ನು ಹುಡುಕಿಕೊಡುತ್ತದೆ. ಅಳಿಯ ನಿಮ್ಮ ಮಗಳ ಜೊತೆ ನಿಮ್ಮ ಮನೆಯಲ್ಲೇ ಇರ್ತಾನೆ. ಚೀನಾದ ಸ್ಪ್ರಿಂಗ್ ಫೆಸ್ಟಿವಲ್ ಸಮಯದಲ್ಲಿ ಈ ಕಂಪನಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿತ್ತು. 

ಅಳಿಯನಾದವನು ಬರೀ ನಿಮ್ಮ ಮನೆಗೆ ಬಂದು ಉಳಿಯೋದಿಲ್ಲ. ನಿಮ್ಮ ಉಪನಾಮವನ್ನು ಆತ ಪಡೆಯುತ್ತಾನೆ. ನಿಮ್ಮ ವಂಶವನ್ನು ಆತ ಮುಂದುವರೆಸುತ್ತಾನೆ. 

ಅಭ್ಯರ್ಥಿ ಆಯ್ಕೆಗೆ ಇದೆ ಷರತ್ತು (Conditions Apply) : ಮಾವನ ಮನೆಯಲ್ಲಿ ಆರಾಮವಾಗಿ ಇರಬಹುದು. ಪತ್ನಿ ಆಸ್ತಿ ನಮ್ಮ ಕೈಸೇರುತ್ತೆ ಎನ್ನುವ ಕಲ್ಪನೆಯಲ್ಲಿ ನೀವಿದ್ದರೆ ಅದು ತಪ್ಪು. ಅಳಿಯ ಸಂತಾನಕ್ಕೆ ಓಕೆ ಎನ್ನುವ ಎಲ್ಲ ಅಭ್ಯರ್ಥಿಗಳನ್ನು ಈ ಕಂಪನಿ ಆಯ್ಕೆ ಮಾಡುವುದಿಲ್ಲ. ಅದಕ್ಕೆ ಒಂದಿಷ್ಟು ಷರತ್ತುಗಳನ್ನು ವಿಧಿಸಿದೆ. ಅಭ್ಯರ್ಥಿಗಳು ವಾರ್ಷಿಕವಾಗಿ ಸುಮಾರು 12 ಲಕ್ಷ ರೂಪಾಯಿ ಗಳಿಸಬೇಕು. ಅವರ ಎತ್ತರ 5 ಅಡಿ 6 ಇಂಚು ಇರಬೇಕು. ಯಾವುದೇ ಕ್ರಿಮಿನಲ್ ದಾಖಲೆ ಅಥವಾ ಟ್ಯಾಟೂ ಇರಬಾರದು. ಅಭ್ಯರ್ಥಿ ಸೋಮಾರಿಯಾಗಬಾರದು. 

ಕನ್ನಡತಿ ರಂಜನಿ ರಾಘವನ್ ಮುದ್ದಿನ ಸಹೋದರಿಯರು ಇವರೇ ನೋಡಿ

ಪ್ರತಿ ದಿನ ಬರುತ್ತೆ ಇಷ್ಟೊಂದು ಅರ್ಜಿ:  ಈ ಸೇವೆಯನ್ನು ಪಡೆಯಲು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನೋಂದಣಿ ಶುಲ್ಕ 1 ಲಕ್ಷದ 74 ಸಾವಿರ ಆಗಿದೆ. ಲಿವ್ ಇನ್ ಅಳಿಯನಾಗಿರಲು ಅನೇಕರು ಆಸಕ್ತಿ ತೋರುತ್ತಿದ್ದಾರೆ. ಪ್ರತಿ ದಿನ 20 ರಿಂದ 30 ಹುಡುಗರು ಅರ್ಜಿ ಸಲ್ಲಿಸುತ್ತಿದ್ದಾರೆಂದು ಸಂಸ್ಥೆ ಹೇಳಿದೆ. 

click me!