ಕೆಲವು ಜನರಲ್ಲಿ ಬುದ್ಧಿವಂತಿಕೆ ಇರುತ್ತದೆ. ಆದರೂ ಅವರು ಸ್ಮಾರ್ಟ್ ಎನಿಸುವುದಿಲ್ಲ. ಸಾಧನೆಯ ಹಾದಿಗೆ ಸ್ಮಾರ್ಟ್ ನೆಸ್ ಕೂಡ ಇಂದಿನ ದಿನಗಳಲ್ಲಿ ಅಗತ್ಯ. ನಾಲ್ಕು ಜನರ ಮಧ್ಯೆ ಗುರುತಿಸಿಕೊಳ್ಳಲು, ಸ್ಮಾರ್ಟ್ ಎನಿಸಿಕೊಳ್ಳಲು ಕೆಲವು ವರ್ತನೆಗಳಿಗೆ ಬೈ ಹೇಳಬೇಕು.
ಕೆಲವರಿರುತ್ತಾರೆ, ಅವರು ವಿದ್ಯಾಭ್ಯಾಸದಲ್ಲಿ ಭಾರೀ ಚುರುಕು. ಎಲ್ಲವನ್ನೂ ಅರೆದು ಕುಡಿದಿರುತ್ತಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲೇ ನಾಲ್ಕಾರು ಭಾಷೆಗಳನ್ನು ಕಲಿತಿರುತ್ತಾರೆ. ಶೈಕ್ಷಣಿಕವಾಗಿ ಏನೇ ಬೇಕಾದರೂ ಸಾಧನೆ ಮಾಡುತ್ತಾರೆ. ಆದರೆ, ಅವರು ನಾಲ್ಕು ಜನರ ಮಧ್ಯೆ ಕಂಡಾಗ ಸ್ಮಾರ್ಟ್ ಎನಿಸುವುದಿಲ್ಲ. ಚುರುಕಾಗಿರುವುದಿಲ್ಲ ಮತ್ತು ತಮ್ಮ ಹಲವು ವರ್ತನೆಗಳ ಮೂಲಕ ವಿಚಿತ್ರ ಎನಿಸಿಕೊಳ್ಳಲೂಬಹುದು. ಅಂದಹಾಗೆ, ಸ್ಮಾರ್ಟ್ ಎನಿಸಿಕೊಳ್ಳುವುದೇ ಜೀವನದ ಪರಮ ಸಾಧನೆಯೇನೂ ಅಲ್ಲ. ಆದರೆ, ಅವರು ಹೊಂದಿರುವ ಜ್ಞಾನದೊಂದಿಗೆ ಸ್ಮಾರ್ಟ್ ನೆಸ್ ಕೂಡ ಸೇರಿದರೆ ಅವರ ಸಾಧನೆಯ ಹಾದಿ ಇನ್ನಷ್ಟು ವಿಸ್ತಾರವಾಗುತ್ತದೆ. ಎಲ್ಲರೂ ಅವರನ್ನು ಇನ್ನಷ್ಟು ಮೆಚ್ಚಿಕೊಳ್ಳುತ್ತಾರೆ. ಇಂತಹ ಜನರ ಪೈಕಿ ನೀವೂ ಒಬ್ಬರಾಗಿದ್ದರೆ ಕೆಲವು ಹವ್ಯಾಸಗಳಿಗೆ ಗುಡ್ ಬೈ ಹೇಳಬೇಕು. ಮನುಷ್ಯನ ಕೆಲವು ವರ್ತನೆಗಳು ಅವನನ್ನು ಮಂದಮತಿಯನ್ನಾಗಿ ತೋರ್ಪಡಿಸುತ್ತವೆ ಹಾಗೂ ಅವುಗಳಿಂದ ಆತ ಗುಂಪಿನಲ್ಲಿ ನಗೆಪಾಟಲಿಗೂ ಗುರಿಯಾಗಬಹುದು. ಉದಾಹರಣೆಗೆ, ನೀವು ಸ್ನೇಹಿತರು ಹೇಳಿದ್ದನ್ನೆಲ್ಲ ನಂಬುತ್ತೀರಿ ಎಂದಾದರೆ ಅದಕ್ಕಿಂತ ಹೆಡ್ಡತನ ಬೇರೆ ಇಲ್ಲ. ಸ್ನೇಹಿತರು ನಿಮ್ಮನ್ನು ನಂಬಿಸಲೆಂದೇ ಏನನ್ನಾದರೂ ಹೇಳಬಹುದು. ಇಂತಹ ಹಲವು ಗುಣಗಳು ನಿಮ್ಮನ್ನು ಸ್ಮಾರ್ಟ್ ಎಂದು ಬಿಂಬಿಸುವುದಿಲ್ಲ. ಇವು ನಿಮ್ಮಲ್ಲಿದ್ದರೆ ಈಗಲೇ ಬೈ ಹೇಳಿಬಿಡಿ.
• ಗೊಂದಲದಲ್ಲಿ (Uncertainty) ಮಾತನಾಡುವುದು
ಮಾತನಾಡುವಾಗ ಗೊಂದಲ, ಅನಿಶ್ಚಿತತೆಗಳು ನಿಮ್ಮಲ್ಲಿದ್ದರೆ ಸ್ಮಾರ್ಟ್ (Smart) ಎನಿಸಿಕೊಳ್ಳುವುದಿಲ್ಲ. ನೀವೇನು ಅರಿತಿದ್ದೀರೋ ಅವುಗಳ ಬಗ್ಗೆ ದೃಢವಾದ ಶಬ್ದಗಳಲ್ಲಿ ಮಾತನಾಡುವುದು ಉತ್ತಮ. ನಿಮಗೆ ಸಂವಹನದ ಸಮಸ್ಯೆ (Communication Problem) ಇದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಕಡಿಮೆ ಮಾತನಾಡಿದರೂ ಸರಿ, ಆಡುವ ಮಾತುಗಳು ದೃಢ (Firmness) ವಾಗಿರಬೇಕು, ಗೊಂದಲದಿಂದ ಕೂಡಿರಬಾರದು. ಎಲ್ಲ ದೃಷ್ಟಿಕೋನಗಳಿಂದಲೂ ವಿಚಾರ ಮಾಡಿ ಮಾತನಾಡುವವರು ಗೊಂದಲಕಾರಿಯಾಗಿ ನುಡಿಯುವುದು ಹೆಚ್ಚು. ಆದರೆ, ಬಹಳಷ್ಟು ಸಮಯದಲ್ಲಿ ಎಲ್ಲ ದೃಷ್ಟಿಕೋನಗಳಿಂದಲೂ ವಿಚಾರ ಮಾಡುವ ಅಗತ್ಯ ಇರುವುದಿಲ್ಲ. ಹೌದು ಅಥವಾ ಇಲ್ಲ ಎನ್ನುವ ಪ್ರಶ್ನೆಗಳಿಗೆ ಹೆಚ್ಚಿನ ವಿವರಣೆಯ ಅಗತ್ಯ ಇರುವುದಿಲ್ಲ.
Personality Tips: ಒತ್ತಡದಲ್ಲೂ ಕೂಲ್ ಆಗಿರ್ಬೇಕಾ? ಈ ಗುಣಗಳನ್ನ ಬೆಳೆಸ್ಕೊಳಿ
• ಎಲ್ಲ ಗೊತ್ತು ಎನ್ನುವ ಮಾತು (All I Know)
ಅನಿಶ್ಚಿತತೆಯಿಂದ ಮಾತನಾಡುವುದು ಎಷ್ಟು ಅಪಾಯಕಾರಿಯೋ ಅದಕ್ಕಿಂತ ಹೆಚ್ಚು ಅಪಾಯಕಾರಿ (Danger) ಎಲ್ಲ ಗೊತ್ತು ಎನ್ನುವ ಮಾತು. ನಿಮಗೇನು ಗೊತ್ತಿದೆಯೋ ಅದರ ಬಗ್ಗೆ ದೃಢವಾಗಿ ಮಾತನಾಡಬೇಕು. ಆದರೆ, ಗೊತ್ತಿಲ್ಲದ ಸಂಗತಿಗಳನ್ನೂ ಗೊತ್ತಿದೆ ಎಂದು ಬಿಂಬಿಸಿಕೊಂಡರೆ ಒಂದಲ್ಲ ಒಂದು ಸಮಯದಲ್ಲಿ ಬಂಡವಾಳ ಬಯಲಾಗುತ್ತದೆ. ಅದು ಹಾಗಿರಲಿ, ಕೇಳುವವರಿಗೂ ನಿಮ್ಮದು ಬರೀ ಬಾಯಿಮಾತು ಎನ್ನುವುದು ಅರಿವಿಗೆ ಬಂದು ಇಂಪ್ರೆಷನ್ (Impression) ಮೂಡುವುದಿಲ್ಲ. ನೀವು ಸ್ಮಾರ್ಟ್ ಎನಿಸಿಕೊಳ್ಳುವಲ್ಲಿ ಹಿಂದೆ ಬೀಳುತ್ತೀರಿ.
• ತ್ವರಿತವಾಗಿ ಅಂತಿಮ ನಿರ್ಧಾರಕ್ಕೆ ಬರುವುದು (Jumping to Conclusion Too Quickly)
ನಿಮ್ಮ ಮನಸ್ಸಿನಲ್ಲಿ ಏನು ವಿಚಾರಗಳಿವೆಯೋ ಅಥವಾ ನೀವೇನು ಊಹಿಸುತ್ತೀರೋ ಅವು ಅಂತಿಮವಲ್ಲ. ಮನುಷ್ಯನ ಸ್ವಭಾವ ಹಾಗೂ ಮನಸ್ಸು (Mind) ಭಾರೀ ಸಂಕೀರ್ಣವಾಗಿರುತ್ತದೆ. ಅದು ಮತ್ತೊಬ್ಬರಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಕಷ್ಟಸಾಧ್ಯ. ಹೀಗಾಗಿ, ಯಾವುದಾದರೂ ವಿಚಾರಕ್ಕೆ ಸಂಬಂಧಿಸಿ ಕೇವಲ ಊಹೆಯನ್ನು ಆಧರಿಸಿ ಬಹುಬೇಗ ಅಂತಿಮ ನಿರ್ಧಾರಕ್ಕೆ ಬಂದುಬಿಡುವುದು ಮೂರ್ಖತನ. ಇಂತಹ ಗುಣ ನಿಮ್ಮನ್ನು ಸ್ಮಾರ್ಟ್ ಆಗಿಸುವುದಿಲ್ಲ. ನಿಮಗೇನು ತಿಳಿದಿಲ್ಲವೋ ಅದನ್ನು ಕೇಳಿ ತಿಳಿದುಕೊಳ್ಳುವುದು ಉತ್ತಮ ಮಾರ್ಗ. ಒಂದೊಮ್ಮೆ ನಿಮ್ಮ ಸಂಗಾತಿ ಯಾಕೋ ಮೌನವಾಗಿ ಬೇಸರದಲ್ಲಿದ್ದಾರೆ ಎಂದರೆ ಅದಕ್ಕೆ ನಿಮ್ಮದೇ ಕಾರಣಗಳನ್ನು ಹುಡುಕಬೇಡಿ. ಅವರ ಬಳಿ ಕೇಳಿ ತಿಳಿದುಕೊಳ್ಳಿ.
Personality Tips:ಬದಲಾವಣೆ ಒಪಿಕ್ಕೊಳ್ಳಬಹುದು ಅಂದ್ರೆ ಈ ಗುಣಗಳಿರುತ್ತೆ ನಿಮ್ಮಲ್ಲಿ!
• ಯೋಚಿಸದೇ ಮಾತನಾಡುವುದು
ಯಾವುದಾದರೂ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವ ಮುನ್ನ ಅದರ ಪರಿಣಾಮಗಳ ಬಗ್ಗೆ ಯೋಚಿಸಿ ಮಾತನಾಡುವುದು ಬೆಟರ್. ಆದರೆ, ಕೇವಲ ನಿಮ್ಮ ಭಾವನೆ ಬಂದ ಹಾಗೆ ಮಾತನಾಡುತ್ತಿದ್ದರೆ ಅದರಿಂದ ಹಾನಿಯೇ ಹೆಚ್ಚು. ಹಾಗೆಯೇ, ಲಾಜಿಕ್ (Logic) ಇಲ್ಲದೇ ಮಾತನಾಡುವುದು, ತಪ್ಪುಗಳನ್ನೇ ಸರಿ ಎಂದು ಬಿಂಬಿಸಲು ಯತ್ನಿಸುವುದು, ಅದಕ್ಕೆ ನಿಮ್ಮದೇ ಒಣ ಕಾರಣ ನೀಡುವುದು, ಮಾತುಕತೆಯಲ್ಲಿ ಆಸಕ್ತಿ ಇಲ್ಲದಿರುವಂತೆ ವರ್ತಿಸುವುದು ಇವುಗಳೆಲ್ಲ ನೀವು ಸ್ಮಾರ್ಟ್ ಎನಿಸಿಕೊಳ್ಳಲು ಅಡ್ಡಿಯಾಗುತ್ತವೆ.