ಈ ಐಎಎಸ್ ಅಧಿಕಾರಿ ದಂಪತಿ ಸರಕಾರಿ ಸೇವೆಗೂ ಸೈ, ಕಲಾ ಕ್ಷೇತ್ರದಲ್ಲೂ ಜೈ!

By Suvarna News  |  First Published Jul 28, 2023, 4:21 PM IST

ಐಎಎಸ್ ಹುದ್ದೆ ಅಲಂಕರಿಸೋದೇ ಅನೇಕರ ಕನಸು. ಅದ್ರಲ್ಲೂ ಪತಿ – ಪತ್ನಿ ಇಬ್ಬರೂ ಐಎಎಸ್ ಅಧಿಕಾರಿಯಾದ್ರೆ ಜವಾಬ್ದಾರಿ ಹೆಚ್ಚು. ಅದೆಲ್ಲವನ್ನೂ ಅರಿಯಾಗಿ ತೂಗಿಸಿಕೊಂಡು ಹೋಗೋದು ಸುಲಭವಲ್ಲವಾದ್ರೂ ಮನಸ್ಸಿದ್ರೆ ಸಾಧ್ಯ ಎಂಬುದಕ್ಕೆ ಈ ದಂಪತಿ ಉದಾಹರಣೆ.
 


ಉನ್ನತ ಹುದ್ದೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಜೊತೆಗೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡೋದು ಸುಲಭವಲ್ಲ. ನಮ್ಮಲ್ಲಿ ಅಂಥವರ ಸಂಖ್ಯೆ ಸಾಕಷ್ಟಿದೆ. ಹಾಗಯೇ ಪತಿ – ಪತ್ನಿ ಇಬ್ಬರೂ ಜವಾಬ್ದಾರಿ ಹುದ್ದೆಯಲ್ಲಿದ್ದು, ಅದ್ರ ಜೊತೆ ಸಂಸಾರ ತೂಕಿಸಿಕೊಂಡು ಹೋಗುವುದು ಸವಾಲಿನ ಕೆಲಸ. ಆದ್ರೆ  ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಹಾಗೂ ಅವರ ಪತ್ನಿ ದುರ್ಗಾ ಶಕ್ತಿ ಇದನ್ನು ಮಾಡಿ ತೋರಿಸಿದ್ದಾರೆ.   

ಈ ಐಎಎಸ್ (IAS) ಅಧಿಕಾರಿಗೆ ಮಾಡೆಲಿಂಗ್ ಮತ್ತು ನಟನೆಯಲ್ಲೂ ಆಸಕ್ತಿ: ಅಭಿಷೇಕ್ ಅವರು ಉತ್ತರ ಪ್ರದೇಶ (Uttar Pradesh) ಜೌನ್ಪುರದ ನಿವಾಸಿ. 2011 ನೇ ವರ್ಷದ ಬ್ಯಾಚ್ ನ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಅವರು ನಾಗರಿಕ ಸೇವೆಗಳಲ್ಲಿ ಮಾತ್ರವಲ್ಲದೇ ಮನರಂಜನಾ ಕ್ಷೇತ್ರದಲ್ಲೂ ಹೆಸರುಗಳಿಸಿದ್ದಾರೆ. ಅಭಿಷೇಕ್ ಸಿಂಗ್ ಅವರ ತಂದೆ ನಿವೃತ್ತ ಐಪಿಎಸ್ ಅಧಿಕಾರಿ. ಅಭಿಷೇಕ್ ಅವರಿಗೆ ಚಿಕ್ಕಂದಿನಿಂದಲೂ ಪೋಲೀಸ್ ಅಧಿಕಾರಿಯಾಗುವ ಆಸೆಯಿತ್ತು. ನಂತರ ಅವರು ತಂದೆಯ ಸಲಹೆಯಂತೆ ಐಎಎಸ್ ಗೆ ತಯಾರಿ ನಡೆಸಿದರು. ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಆಬ್ಸರ್ವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕೆಲವು ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅಭಿಷೇಕ್ ಅವರನ್ನು ಅಮಾನತುಗೊಳಿಸಲಾಗಿತ್ತು.

Tap to resize

Latest Videos

undefined

ಮಗಳಿಗಿಂತ ಚಿಕ್ಕವಳ ಜೊತೆ ಅನಿಲ್​ ಕಪೂರ್​ ಲಿಪ್​ಲಾಕ್​! ಬಾಲಿವುಡ್ಡೋ, ಚರಂಡಿವುಡ್ಡೋ ಅಂತಿದ್ದಾರೆ ಟ್ರೋಲಿಗರು

ಐಎಎಸ್ ಆಫೀಸರ್ ಅಭಿಷೇಕ್ ಅವರು ಗ್ಲ್ಯಾಮರ್ ಇಂಡಸ್ಟ್ರಿಯಲ್ಲು ಕೂಡ ಮಿಂಚಿದ್ದಾರೆ. ಇವರಿಗೆ ಮಾಡೆಲಿಂಗ್ ಮತ್ತು ನಟನೆಯಲ್ಲಿ ಬಹಳ ಆಸಕ್ತಿಯಿದೆ. ಅವರು ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಅವರ ಮ್ಯುಸಿಕ್ ಆಲ್ಬಮ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆದ ದಿಲ್ಲಿ ಕ್ರೈಂ ವೆಬ್ ಸಿರೀಸ್ ನ ಎರಡನೇ ಸೀಸನ್ ನಲ್ಲಿ ಅಭಿಷೇಕ್ ಅವರು ಮುಖ್ಯ ಪಾತ್ರ ವಹಿಸಿದ್ದರು.

ಅಭಿಷೇಕ ಅವರ ಪತ್ನಿಯೂ ದಿಟ್ಟ ಐಎಎಸ್ ಅಧಿಕಾರಿ :  ಅಭಿಷೇಕ್ ಅವರ ಪತ್ನಿ ದುರ್ಗಾ ಶಕ್ತಿ ನಾಗ್ಪಾಲ್ ಅವರು ಕೂಡ ಐಎಎಸ್ ಅಧಿಕಾರಿಯಾಗಿದ್ದಾರೆ. ಅಭಿಷೇಕ್ ಮತ್ತು ದುರ್ಗಾ ಅವರು 2009ರಲ್ಲಿ ಯುಪಿಎಸ್ಇ ಪರೀಕ್ಷೆ ಸಮಯದಲ್ಲಿ ಪರಸ್ಪರ ಭೇಟಿಯಾಗಿದ್ದರು. ನಂತರ ಇವರು 2012ರಲ್ಲಿ ವಿವಾಹವಾದರು. ಈಗ ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಇವರಿಗೆ 30 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಇದ್ದಾರೆ.

ದುರ್ಗಾ ಶಕ್ತಿ ಅವರ ಸಾಧನೆಯ ಹಾದಿ : ಅಭಿಷೇಕ್ ಸಿಂಗ್ ಅವರ ಪತ್ನಿ ದುರ್ಗಾ ಶಕ್ತಿ ನಾಗ್ಪಾಲ್ ಅವರೂ ದಿಟ್ಟ ಐಎಎಸ್ ಅಧಿಕಾರಿ. ಅನೇಕ ಭ್ರಷ್ಟರನ್ನು  ನಿರ್ಭೀತಿಯಿಂದ ಎದುರಿಸಿರುವ ಖ್ಯಾತಿ ದುರ್ಗಾ ಶಕ್ತಿ ಅವರಿಗಿದೆ. ದುರ್ಗಾ ಅವರು ಮೊದಲು ಬಿಟೆಕ್ ಪದವಿಯನ್ನು ಪೂರ್ಣಗೊಳಿಸಿ ನಂತರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಭಾರತಕ್ಕೆ 20 ನೇ ಸ್ಥಾನವನ್ನು ಗಳಿಸುವುದರ ಮೂಲಕ ತಮ್ಮ ಯಶಸ್ಸಿನ ಪಯಣವನ್ನು ಆರಂಭಿಸಿದರು.
ಹಿಂದೆ ಒಮ್ಮೆ ಇವರು ಐಎಎಸ್ ಪದವಿಯಿಂದ ಅಮಾನತುಗೊಂಡಿದ್ದರು. ಆದರೆ ಇವರಿಗೆ ಕೆಲಸದ ಮೇಲಿರುವ ನಿಷ್ಠೆ ಮತ್ತು ಪ್ರಾಮಾಣಿಕತೆ ಮತ್ತೆ ಇವರನ್ನು ಮರುನೇಮಕಾತಿ ಮಾಡುವಂತೆ ಮಾಡಿದೆ. ದುರ್ಗಾ ಶಕ್ತಿ ಅವರು ಯೋಗಿ ಆದಿತ್ಯನಾಥ ಅವರ ಸರಕಾರದ ಅಡಿಯಲ್ಲಿ ಬಂಡಾ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಆಗಿ ಮರುನೇಮಕವಾಗಿದ್ದಾರೆ. ದುರ್ಗಾ ಶಕ್ತಿ ಅವರ ಕೆಲಸದ ಬದ್ಧತೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಗುಣ ಇಂದು ಅನೇಕರಿಗೆ ಸ್ಪೂರ್ತಿಯಾಗಿದೆ.

ಮಕ್ಳು ರೂಡ್ ಆಗಿ ಬಿಹೇವ್ ಮಾಡಿದಾಗ ಪೇರೆಂಟ್ಸ್‌ ಸಿಟ್ಟಿಗೇಳೋದಲ್ಲ..

ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಐಎಎಸ್ ಜೋಡಿಯ ಯಶಸ್ಸು : ಅಭಿಷೇಕ್ ಮತ್ತು ದುರ್ಗಾ ಶಕ್ತಿ ಇಬ್ಬರೂ ವೃತ್ತಿಯಲ್ಲಿ ಐಎಎಸ್ ಅಧಿಕಾರಿಗಳಾಗಿ ಡೈನಾಮಿಕ್ ಪವರ್ ಕಪಲ್ ಎಂದು ಹೆಸರು ಪಡೆದಿದ್ದಾರೆ. ಗಂಡ ಹೆಂಡತಿ ಇಬ್ಬರೂ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ತಮ್ಮ ಸಮರ್ಪಣೆ ಮತ್ತು ಸಾಧನೆಗಳನ್ನು ತೋರಿದ್ದಾರೆ. ಇವರ ಜೀವನದ ಯಶಸ್ಸು ಅನೇಕರಿಗೆ ಮಾದರಿಯಾಗಿದೆ.

click me!