ಎಸ್ಟೆಫಾನಿಯಾ ಹಾಗೂ ಅಜಹರಾ ಇಬ್ಬರು ಮಹಿಳೆಯರು ವಿವಾಹ ಭಾರಿ ಸುದ್ದಿಯಾಗಿತ್ತು. ಇದೀಗ ಈ ಸಲಿಂಗಿ ದಂಪತಿ ಗಂಡು ಮಗುವಿನ ಜನ್ಮ ನೀಡುವ ಮೂಲಕ ಮತ್ತೊಮ್ಮೆ ವಿಶ್ವದ ಗಮನಸೆಳೆದಿದ್ದಾರೆ.
ಸ್ಪೇನ್(ನ.20) ಸಲಿಂಗಿ ದಂಪತಿ ಮಗುವಿಗೆ ಜನ್ಮ ನೀಡಿದ ಘಟನೆ ಸ್ಪೇನ್‌ನಲ್ಲಿ ನಡೆದಿದೆ. 30ರ ಹರೆಯದ ಎಸ್ಟಫಾನಿಯಾ ಹಾಗೂ 27ರ ಹರೆಯದ ಅಜಹರಾ ಇದೀಗ ಗಂಡು ಮಗುವಿನ ಪೋಷಕರಾಗಿದ್ದಾರೆ. ಇದೀಗ ಸಲಿಂಗಿ ದಂಪತಿಗಳ ಸಂಭ್ರಮ ಮನೆ ಮಾಡಿದೆ. ಅಕ್ಟೋಬರ್ 30 ರಂದು ಅಜಹರಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಇದೀಗ ಡೆರೆಕ್ ಎಲೋಯ್ ಎಂದು ಹೆಸರಿಡಲಾಗಿದೆ. ಸಲಿಂಗಿಗಳಾದ 30 ವರ್ಷದ ಎಸ್ಟೆಫಾನಿಯಾ ಹಾಗೂ 27 ವರ್ಷದ ಅಜಹರಾ ಮಗುವಿಗೆ ಜನ್ಮ ನೀಡಿದ ವಿಶ್ವದ 2ನೇ ಪ್ರಕರಣ ಇದಾಗಿದೆ. ಯೂರೋಪ್‌ನ ಮೊದಲ ಘಟನೆ ಇದಾಗಿದೆ.
ಅಜಹರಾ ಒಂಭತ್ತು ತಿಂಗಳ ಕಾಲ ಮಗುವನ್ನು ಗರ್ಭಾಶಯದಲ್ಲಿ ಹೊತ್ತು ಜನ್ಮ ನೀಡಿದ್ದಾರೆ. ಇನೋಸೆಲ್ ಎಂಬ ಸಂಸ್ಥೆಯ ನೆರವಿನಿಂದ ಸಲಿಂಗಿ ದಂಪತಿ ಗರ್ಭ ಧರಿಸಿದ್ದಾರೆ. ಆರಂಭದಲ್ಲಿ ಗರ್ಭ ಫಲವತ್ತತೆಯ ಚಿಕಿತ್ಸೆಯನ್ನು ಎಸ್ಟೆಫಾನಿಯಾಗೆ ನೀಡಲಾಯಿತು. ಫಲವತ್ತ ಮೊಟ್ಟೆ ಹಾಗೂ ವೀರ್ಯದ ಕ್ಯಾಪ್ಸುಲ್‌ನನ್ನು ಎಸ್ಟೆಫಾನಿಯಾ ಯೋನಿಯೊಳಗೆ ಸೇರಿಸಲಾಯಿತು. ಐದು ದಿನಗಳ ಬಳಿಕ ನೈಸರ್ಗಿಕ ಫಲೀಕರಣ ಮಾಡಲಾಗಿತ್ತು. ಭ್ರೂಣ ರೂಪುಗೊಂಡ ಬಳಿಕ ಪರಿಶೀಲನೆ ನಡೆಸಲಾಗಿದೆ. ಬಳಿಕ ಭ್ರೂಣಗಳನ್ನು ಅಜಹರಾ ಗರ್ಭಾಶಯಕ್ಕೆ ವರ್ಗಾಯಿಸಲಾಯಿತು.
ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದ ತೀರ್ಪು ಕೇಳಿ ಎದೆ ಒಡೆದೋಯ್ತು; ನಟಿ ಲಕ್ಷ್ಮಿ ಮಂಚು ಹೇಳಿದ್ದೇನು?
ಅಜಹರಾ ಗರ್ಭಾಶಯದಲ್ಲಿ ಮಗು ಬೆಳೆದಿತ್ತು. ಒಂಭತ್ತು ತಿಂಗಳ ಕಾಲ ಗರ್ಭಾಶಯದಲ್ಲಿ ಮಗುವಿನ ಆರೈಕೆ ಮಾಡಲಾಗಿತ್ತು. ಈ ಚಿಕಿತ್ಸೆಗೆ ಸಲಿಂಗಿ ದಂಪತಿ 4.5 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. 2018ರಲ್ಲಿ ಟೆಕ್ಸಾಸ್‌ನಲ್ಲಿ ಇಬ್ಬರು ಮಹಿಳೆಯರು ಮಗುವಿಗೆ ಜನ್ಮ ನೀಡಿದ್ದರು. ಇದು ವಿಶ್ವದ ಮೊದಲನೇ ಪ್ರಕರಣವಾಗಿತ್ತು.
ಕೇರಳದಲ್ಲಿ ಅಂತರ್ಲಿಂಗಿ ದಂಪತಿಗಳು ಮಗುವಿಗೆ ಜನ್ಮ ನೀಡಿ ಭಾರಿ ಸುದ್ದಿಯಾಗಿತ್ತು. ಮಗುವಿನ ಜನ್ಮ ನೀಡಿದ ದೇಶದ ಮೊದಲ ಅಂತರ್ಲಿಂಗೀಯ ಜೋಡಿ ಅನ್ನೋ ಹೆಗ್ಗಳಿಕೆಗೆ ಝಿಯಾ ಪವಲ್, ‘ನನ್ನ ಜತೆಗಾರ್ತಿ ಝಹ್ಹಾದ್ ಪಾತ್ರರಾಗಿದ್ರು. ಕಲ್ಲಿಕೋಟೆಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಝಹ್ಹಾದ್‌ಗೆ ಆಪರೇಶನ್ ನಡೆಸುವ ಮೂಲಕ ಹೆರಿಗೆ ಮಾಡಲಾಗಿತ್ತು. ಅಂತರ್ಲಿಂಗಿಗಳಾದ ಝಹದ್ ಪುರುಷನಾಗಲು ಮತ್ತು ಝಿಯಾ ಹೆಣ್ಣಾಗಲು ಚಿಕಿತ್ಸೆ ಪಡೆದುಕೊಂಡಿದ್ದರು. ಅಂತರ್ಲಿಂಗೀಯ ದಂಪತಿಗಳು 3 ವರ್ಷಗಳಿಂದ ಜೊತೆಗಿದ್ದು, ಲಿಂಗ ಬದಲಾವಣೆಗೂ ನಿರ್ಧರಿಸಿದ್ದರು. ಹೊಸ ಮಗುವಿನ ಜನನವನ್ನು ಅಂತರ್ಲಿಂಗೀಯ ಸಮುದಾಯ ಸ್ವಾಗತಿಸಿತ್ತು.
ಸಲಿಂಗ ವಿವಾಹ ತೀರ್ಪು: ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಭೂಮಿ ಪೆಡ್ನೇಕರ್, ಸೆಲಿನಾ ಜೇಟ್ಲಿ ನಿರಾಸೆ!