ಈ ಕೊರಿಯನ್ ಟ್ರಿಕ್ಸ್ ಯೂಸ್ ಮಾಡಿದ್ರೆ ಎಂಥ ಹುಡುಗಿಗಾದ್ರೂ ನಿಮ್ ಮೇಲೆ ಲವ್ವಾಗೋದು ಗ್ಯಾರಂಟಿ!

By Vinutha Perla  |  First Published Nov 18, 2023, 2:44 PM IST

ಏನ್‌ ಮಾಡಿದ್ರೂ ನಮ್ಗೆ ಹುಡುಗೀರು ಬೀಳ್ತಿಲ್ಲ ಅನ್ನೋದು ಹಲವು ಹುಡುಗರ ಕಂಪ್ಲೇಂಟ್. ಆದ್ರೆ ನೀವು ಈ ಕೊರಿಯನ್ ಟ್ರಿಕ್ಸ್ ಯೂಸ್ ಮಾಡಿದ್ರೆ ಎಂಥಾ ಹುಡುಗಿರಾದ್ರೂ ನಿಮ್ಮನ್ನು ನೋಡಿದ್ರೆ ಫಿದಾ ಆಗ್ತಾರೆ. ಆ ಸಿಂಪಲ್ ಕೊರಿಯನ್ ಟೆಕ್ನಿಕ್ ಏನು ಅನ್ನೋದನ್ನು ಮೊದಲು ತಿಳ್ಕೊಳ್ಳಿ.


ಏನ್‌ ಮಾಡಿದ್ರೂ ನಮ್ಗೆ ಹುಡುಗೀರು ಬೀಳ್ತಿಲ್ಲ ಅನ್ನೋದು ಹಲವು ಹುಡುಗರ ಕಂಪ್ಲೇಂಟ್. ಹೀಗಾಗಿಯೇ ಹುಡುಗರು ಒಂದು ಹಂತದ ವರೆಗೆ ಟ್ರೈ ಮಾಡಿ ಕೈ ಚೆಲ್ಲಿ ಬಿಡ್ತಾರೆ. ಹುಡುಗಿಯರನ್ನು ಇಂಪ್ರೆಸ್ ಮಾಡೋದೆ ಕೈಲಾಗದ ಕೆಲಸನಪ್ಪಾ ಅಂದ್ಕೊಳ್ತಾರೆ. ಆದ್ರೆ ನೀವು ಈ ಕೊರಿಯನ್ ಟ್ರಿಕ್ಸ್ ಯೂಸ್ ಮಾಡಿದ್ರೆ ಎಂಥಾ ಹುಡುಗಿರಾದ್ರೂ ನಿಮ್ಮನ್ನು ನೋಡಿದ್ರೆ ಫಿದಾ ಆಗ್ತಾರೆ. ಆ ಸಿಂಪಲ್ ಕೊರಿಯನ್ ಟೆಕ್ನಿಕ್ ಏನು ಅನ್ನೋದನ್ನು ಮೊದಲು ತಿಳ್ಕೊಳ್ಳಿ.

ಫ್ಯಾಷನೆಬಲ್ ಆಗಿರಿ
ಫ್ಯಾಷನ್‌ಗೆ ಫಿದಾ ಆಗದವರು ಯಾರಿದ್ದಾರೆ ಹೇಳಿ. ಹೀಗಾಗಿಯೇ ಕೊರಿಯನ್‌ ಹುಡುಗರು ಯಾವಾಗಲೂ ಫ್ಯಾಷನ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಯಾವಾಗ್ಲೂ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಕಾಣಿಸಿಕೊಳ್ಳುತ್ತಾರೆ. ಹೀಗೆ ಫ್ಯಾಷನೆಬಲ್ ಆಗಿರುವುದು ಹುಡುಗಿ (Girls)ಯರನ್ನು ಬೇಗ ಸೆಳೆಯುತ್ತದೆ. ಹೀಗಾಗಿ ಯಾವಾಗಲೂ ಡ್ರೆಸ್ಸಿಂಗ್‌ ಸೆನ್ಸ್‌ ಉತ್ತಮವಾಗಿರಲಿ. ಹಾಕೋ ಪ್ಯಾಂಟ್‌-ಶರ್ಟ್‌, ಶೂ, ವಾಚ್‌, ಪರ್ಫ್ಯೂಮ್ ಬಗ್ಗೆ ಗಮನಹರಿಸಿ.

Tap to resize

Latest Videos

ಟ್ರಿಕ್ಸ್ ಹಳೆಯದಾದರೇನು? ಪ್ರೀತಿಯನ್ನು ಗೆಲ್ಲಿಸೋದು ಇವೇ!

ವರ್ಕೌಟ್‌ ಮಾಡಿ
ಅರೋಗ್ಯವಾಗಿರಲು ವರ್ಕೌಟ್ ಮಾಡುವುದು ತುಂಬಾ ಮುಖ್ಯ. ಹಾಗೆಯೇ ಹುಡುಗಿಯರನ್ನು ಸೆಳೆಯೋಕು ಈ ವರ್ಕೌಟ್‌ ನೆರವಾಗುತ್ತದೆ. ಫಿಟ್‌ ಅಂಡ್ ಫೈನ್‌ ಆಗಿರೋ ಹುಡುಗರನ್ನು ಹುಡುಗೀರು ಯಾಕಾದ್ರೂ ರಿಜೆಕ್ಟ್ ಮಾಡ್ತಾರೆ ಹೇಳಿ. ಕೊರಿಯನ್ ಹುಡುಗರು ಯಾವಾಗ್ಲೂ ಫಿಟ್‌ನೆಸ್‌ಗೆ ಮೊದಲ ಆದ್ಯತೆ (Preference) ನೀಡುವುದನ್ನು ನೀವು ಗಮನಿಸಬಹುದು. 

ಕಾಲ್‌, ಟೆಕ್ಸ್ಟ್‌ ಮಿಸ್ ಮಾಡದಿರಿ
ಕೊರಿಯನ್‌ ಹುಡುಗರು ತಮ್ಮ ಲೇಡಿ ಲವ್‌ನ್ನು ಟ್ರೀಟ್ ಮಾಡುವ ಬಗೆಯನ್ನು ನೋಡಿದ್ದೀರಾ. ಗರ್ಲ್‌ಫ್ರೆಂಡ್‌ ಅಥವಾ ಲವರ್‌ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿ ಯಾವುದೇ ಹುಡುಗಿಗೆ ಕಾಲ್‌, ಟೆಕ್ಸ್ಟ್‌ ಮಾಡುವುದು ಅವರ ಕುರಿತಾಗಿ ನಿಮಗೆ ಹೆಚ್ಚು ಕಾಳಜಿ (Care)ಯಿರುವುದನ್ನು ಸೂಚಿಸುತ್ತದೆ. ಇದು ಸಹಜವಾಗಿಯೇ ಹುಡುಗಿಯ ಮನಸ್ಸಿನಲ್ಲಿ ಪ್ರೀತಿಯನ್ನು ಹುಟ್ಟು ಹಾಕುತ್ತದೆ.

ಹುಡುಗಿಯರನ್ನು ಇಂಪ್ರೆಸ್ ಮಾಡುವುದು ಹೇಗೆ ? ಸ್ಪೆಷಲ್ ಕ್ಲಾಸ್‌ಗೆ 1 ಗಂಟೆಗೆ 25 ಸಾವಿರ ಫೀಸ್ !

ಹೊಗಳುವುದನ್ನು ಮರೆಯಬೇಡಿ
ಹೊಗಳುವುದನ್ನು ಇಷ್ಟಪಡದ ಹುಡುಗಿರು ಈ ಪ್ರಪಂಚದಲ್ಲಿ ಎಲ್ಲಾದರೂ ಇರೋಕೆ ಸಾಧ್ಯಾನ. ಪ್ರತಿಯೊಬ್ಬ ಹುಡುಗಿಯರೂ ಅಟೆನ್ಶನ್‌ ಸೀಕರ್ ಆಗಿರುತ್ತಾರೆ. ಹುಡುಗರಿಂದ ಆಗಾಗ ಮೆಚ್ಚುಗೆಯ ಮಾತುಗಳನ್ನು ಬಯಸುತ್ತಾರೆ. ಹೀಗಾಗಿಯೇ ಕೊರಿಯನ್ ಹುಡುಗರು ಈ ಟೆಕ್ನಿಕ್‌ನ್ನು ಹಲವು ಬಾರಿ ಉಪಯೋಗಿಸುತ್ತಾರೆ. ನೀವು ಅಷ್ಟೆ ಕೊಲೀಗ್‌, ಕ್ರಶ್‌, ಫ್ರೆಂಡ್ಸ್‌ನ್ನು ಹೊಗಳೋದನ್ನು ಮರೆಯಬೇಡಿ.

ಡಿನ್ನರ್ ಡೇಟ್‌ ಕರೆದೊಯ್ಯಿರಿ
ಸ್ಪಲ್ಪ ಪರಿಚಯವಿದ್ದಲ್ಲಿ ಹುಡುಗಿಯರನ್ನು ಡಿನ್ನರ್ ಡೇಟ್‌ಗೆ ಕರೆದೊಯ್ಯಬಹುದು. ಈ ಮೂಲಕ ಸುಲಭವಾಗಿ ಹುಡುಗಿಯರನ್ನು ಇಂಪ್ರೆಸ್ ಮಾಡಬಹುದು. ಒಳ್ಳೆಯ ಫುಡ್‌ಗಿಂತ ಸುಲಭವಾಗಿ ಗರ್ಲ್ಸ್ ಮನಸ್ಸನ್ನು ಮತ್ಯಾವುದು ಗೆಲ್ಲಲು ಸಾಧ್ಯವಿಲ್ಲ. ಈ ಮೂಲಕ ಈಝಿಯಾಗಿ ಹುಡುಗಿಯರ ಮನಸ್ಸಿಗೆ ಲಗ್ಗೆಯಿಡಬಹುದು.

ಬಿಲ್‌ ಪೇ ಮಾಡಿ
ಬಿಲ್‌ ಪೇ ಮಾಡುವುದು ಎಂಥಾ ಹುಡುಗಿಯರ ಮನಸ್ಸನ್ನೂ ಸುಲಭವಾಗಿ ಇಂಪ್ರೆಸ್ ಮಾಡುತ್ತದೆ. ಕೊರಿಯನ್ ಹುಡುಗರು ಈ ಟೆಕ್ನಿಕ್‌ನ್ನು ಹೆಚ್ಚು ಪ್ರಯೋಗಿಸುತ್ತಾರೆ. ಹುಡುಗಿಯ ಜೊತೆ ಔಟಿಂಗ್‌ ಹೋದಾದ ತಪ್ಪದೇ ಬಿಲ್ ಪೇ ಮಾಡಿ. ಇದು ಆಕೆಯ ಮನಸ್ಸಿಗೆ ಎಂಟ್ರಿ ಕೊಡೋಕೆ ಮೊದಲ ಸಕ್ಸಸ್‌ಫುಲ್ ಹೆಜ್ಜೆಯಾಗಿದೆ.

click me!