ಬಿಗ್‌ಬಾಸ್‌ ಮನೆಯೊಳಗೆ ಖುಲ್ಲಂಖುಲ್ಲ ರೊಮ್ಯಾನ್ಸ್‌, ನಟಿಯ ಸೀರೆಯೆತ್ತಿ ಸೊಂಟಕ್ಕೆ ಮುತ್ತಿಟ್ಟ ಸ್ಪರ್ಧಿ!

By Suvarna News  |  First Published Nov 20, 2023, 10:11 AM IST

ಬಿಗ್‌ಬಾಸ್‌ ಮನೆಯೊಳಗೆ ನಡೆಯೋ ಹೈಡ್ರಾಮಾಗಳು ಒಂದೆರಡಲ್ಲ. ಫ್ರೆಂಡ್‌ಶಿಪ್ ಮಾಡ್ಕೊಳ್ಳೋದು, ಜಗಳವಾಡೋದು, ಲವ್‌ ಸ್ಟೋರಿ, ಬ್ರೇಕಪ್ ಎಲ್ಲವೂ ಸಾಮಾನ್ಯವಾಗಿದೆ. ಈ ಮಧ್ಯೆ  ಬಿಗ್‌ಬಾಸ್‌ ಮನೆಯೊಳಗೆ ಖುಲ್ಲಂಖುಲ್ಲ ರೋಮ್ಯಾನ್ಸ್‌ ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದೆ. ಸ್ಪರ್ಧಿಯೊಬ್ಬ ನಟಿಯ ಸೀರೆಯೆತ್ತಿ ಸೊಂಟಕ್ಕೆ ಮುತ್ತಿಡಲು ಯತ್ನಿಸೋದು ವೈರಲ್ ಆಗಿದೆ.


ಬಿಗ್‌ಬಾಸ್‌ ಮನೆಯೊಳಗೆ ನಡೆಯೋ ಹೈಡ್ರಾಮಾಗಳು ಒಂದೆರಡಲ್ಲ. ಫ್ರೆಂಡ್‌ಶಿಪ್ ಮಾಡ್ಕೊಳ್ಳೋದು, ಜಗಳವಾಡೋದು, ಲವ್‌ ಸ್ಟೋರಿ, ಬ್ರೇಕಪ್ ಎಲ್ಲವೂ ಸಾಮಾನ್ಯವಾಗಿದೆ. ಕೆಲವೊಮ್ಮೆ ಬಿಗ್‌ಬಾಸ್‌ ಮನೆಯೊಳಗೆ ಕಪಲ್ಸ್ ಮಧ್ಯೆ ನಡೆಯೋ ರೋಮ್ಯಾನ್ಸ್ ವೀಕ್ಷಕರನ್ನು ತಬ್ಬಿಬ್ಬು ಮಾಡುವುದೂ ಇದೆ. ಇತ್ತೀಚಿಗೆ ದೊಡ್ಮನೆಯಲ್ಲಿ ಸ್ಪರ್ಧಿಗಳ ಅಶ್ಲೀಲ ನಡವಳಿಕೆ, ರೋಮ್ಯಾನ್ಸ್ ಹೆಚ್ಚಾಗಿದೆ. ಅದರಲ್ಲೂ ಹಿಂದಿ ಬಿಗ್‌ಬಾಸ್ ಮನೆಯೊಳಗಡೆ ಸ್ಪರ್ಧಿಗಳು ಎಲ್ಲೆ ಮೀರಿ ವರ್ತಿಸ್ತಿರೋದಕ್ಕೆ ಪ್ರೇಕ್ಷಕರು ಕಂಗಾಲಾಗಿದ್ದಾರೆ. ಫ್ಯಾಮಿಲಿಯಾಗಿ ಕುಳಿತು ಬಿಗ್‌ಬಾಸ್ ರಿಯಾಲಿಟಿ ಶೋವನ್ನು ನೋಡೋಕೆ ಸಾಧ್ಯಾನೇ ಇಲ್ಲಪ್ಪ ಅಂತಿದ್ದಾರೆ.

ಹಿಂದಿ ಬಿಗ್‌ಬಾಸ್‌ ಮನೆಯಲ್ಲಿ ಈ ಬಾರಿ ಹಲವು ಹೆಸರಾಂತ ನಟ, ನಟಿಯರಿದ್ದಾರೆ. ಇಬ್ಬರು ಮ್ಯಾರೀಡ್ ಕಪಲ್‌ ಸಹ ಮನೆಯೊಳಗಿದ್ದು ಇವರ ಕಿತ್ತಾಟ ಎಲ್ಲರ ಗಮನ ಸೆಳೀತಿದೆ. ಇದಲ್ಲದೆ ಕಿರುತೆರೆ ನಟ-ನಟಿಯರಾದ ಸಮರ್ಥ್‌ ಜುರೆಲ್ ಹಾಗೂ ಇಶಾ ಮಾಳವಿಯಾ ರೋಮ್ಯಾನ್ಸ್ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

Tap to resize

Latest Videos

ಬಿಗ್​ಬಾಸ್​ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?

ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದ ಕಪಲ್ಸ್ ರೋಮ್ಯಾನ್ಸ್‌
ಈ ಹಿಂದೆಯೂ ಸಮರ್ಥ್‌ ಜುರೆಲ್ ಹಾಗೂ ಇಶಾ ಮಾಳವಿಯಾ ವಿಷಯ ದೊಡ್ಮನೆಯಲ್ಲಿ ಸುದ್ದಿಯಾಗಿತ್ತು. ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಇಶಾ ತಮ್ಮ ಹಳೆಯ ಬಾಯ್‌ಫ್ರೆಂಡ್ ಅಭಿಷೇಕ್ ಜೊತೆ ಹೆಚ್ಚು ಕ್ಲೋಸ್ ಆಗಿದ್ದರು. ಈ ಸಂದರ್ಭದಲ್ಲೇ ಮನೆಗೆ ವೈಲ್ಡ್‌ ಕಾರ್ಡ್‌ನಲ್ಲಿ ಸಮರ್ಥ್ ಎಂಟ್ರಿಯಾಗಿತ್ತು. ನಾನು ಇಶಾ, ಬಾಯ್‌ಫ್ರೆಂಡ್ ಎಂದು ಸಮರ್ಥ್‌ ಪರಿಚಯಿಸಿಕೊಂಡಿದ್ದರು. ಆದರೆ ಇಶಾ ಇದನ್ನು ಅಲ್ಲಗಳೆದಿದ್ದರು. ಸಾಕಷ್ಟು ಹೈಡ್ರಾಮಾದ ನಂತರ ಇಶಾ, ಅಭಿಷೇಕ್‌ ನನ್ನ ಎಕ್ಸ್‌ ಬಾಯ್‌ಫ್ರೆಂಡ್ ಮತ್ತು ಸಮರ್ಥ್‌ ನನ್ನ ಪ್ರಸೆಂಟ್ ಬಾಯ್‌ಫ್ರೆಂಡ್ ಎಂದು ಒಪ್ಪಿಕೊಂಡಿದ್ದರು. 

ಆ ನಂತರ ಸಮರ್ಥ್‌ ಹಾಗೂ ಇಶಾ, ಬಿಗ್‌ಬಾಸ್‌ ಮನೆಯಲ್ಲಿ ಯಾವಾಗಲೂ ಜೊತೆಯಾಗಿ ಓಡಾಡುವುದು, ಮಲಗುವುದು ಮಾಡುತ್ತಿದ್ದರು. ಅದರಲ್ಲೂ ಇತ್ತೀಚಿಗೆ ಇವರಿಬ್ಬರ ವರ್ತನೆ (Behaviour) ಮಿತಿ ಮೀರ್ತಿದೆ ಅಂತಿದ್ದಾರೆ ಪ್ರೇಕ್ಷಕರು. ಇಬ್ಬರೂ ಹೋದಲ್ಲಿ, ಬಂದಲ್ಲಿ ಕಿಸ್ ಮಾಡಿಕೊಳ್ಳುವುದು, ಹಗ್ ಮಾಡುವುದು ಮಾಡುತ್ತಿದ್ದಾರೆ. ಅದಲ್ಲದೆ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಹೊಸ ವೀಡಿಯೊ ಕ್ಲಿಪ್‌ನಲ್ಲಿ, ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಸಮರ್ಥ್ ಇಶಾ ಅವರ ಸೀರೆಯನ್ನೆತ್ತಿ ಸೊಂಟಕ್ಕೆ ಕಿಸ್ ಮಾಡಲು ಯತ್ನಿಸುವುದನ್ನು ನೋಡಬಹುದು.

ಟಾಪ್‌ ಹಾಕಿ, ಪ್ಯಾಂಟ್ ಹಾಕೋದನ್ನೇ ಮರೆತ್‌ಬಿಟ್ರಾ; ಬಿಗ್‌ಬಾಸ್‌ ನಟಿಯ ಹಾಟ್‌ ಲುಕ್‌ ವೈರಲ್‌

ಸೀರೆ ಮೇಲೆತ್ತಿ ಸೊಂಟಕ್ಕೆ ಕಿಸ್ ಮಾಡಲು ಯತ್ನಿಸಿದ ನಟ
ಸಮರ್ಥ್‌ ಹಾಗೂ ಇಶಾ ಇಬ್ಬರೂ ಬೆಡ್ ಮೇಲೆ ಕುಳಿತಿರುತ್ತಾರೆ. ಸಮರ್ಥ್‌, ಇಶಾಗೆ ಯಾವುದೋ ವಿಚಾರಕ್ಕಾಗಿ ಸಮಾಧಾನ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಆಕೆಯ ಮುಖ, ಭುಜವನ್ನು ಚುಂಬಿಸುತ್ತಾನೆ. ಸೀರೆಯನ್ನು ಸರಿಸಿ ಸೊಂಟಕ್ಕೆ ಕಿಸ್ ಮಾಡಲು ಸಹ ಪ್ರಯತ್ನಿಸುವುದನ್ನು ವೀಡಿಯೋದಲ್ಲಿ ನೋಡಬಹುದು.

ಬಿಗ್‌ಬಾಸ್‌ನ ಈ ವೀಡಿಯೋ ನೋಡಿ ಪ್ರೇಕ್ಷಕರು (Viewers) ಕಿಡಿಕಾರಿದ್ದಾರೆ. ಸಮರ್ಥ್‌ ವರ್ತನೆಯನ್ನು ಟೀಕಿಸಿದ್ದಾರೆ. ಒಬ್ಬ ಬಳಕೆದಾರರು, 'ಆತನನ್ನು ಟೆಂಪ್ಟೇಶನ್ ಐಲ್ಯಾಂಡ್ ಶೋಗೆ ಕಳುಹಿಸಿ' ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು, 'ಈ ವ್ಯಕ್ತಿಯನ್ನು ಲಸ್ಟ್ ಸ್ಟೋರಿಗಳಿಗೆ ಕಳುಹಿಸಿ. ಅವರು ಬಿಗ್ ಬಾಸ್ ಅನ್ನು ಲವ್ ಹಾಸ್ಟೆಲ್ ಮಾಡಿದ್ದಾರೆ' ಎಂದು  ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು (User), 'ಸಮರ್ಥ್‌ನ್ನು ಹುಡುಗಿಯರಿಂದ ದೂರವಿಡಿ' ಎಂದಿದ್ದಾರೆ.

ಕೆಲವು ವಾರಗಳ ಹಿಂದೆ ಇವರಿಬ್ಬರೂ ಒಂದೇ ಬೆಡ್‌ನಲ್ಲಿ ಮುದ್ದಾಡುವ (Romance) ದೃಶ್ಯ ವೈರಲ್ ಆಗಿತ್ತು. ಇದೆಂಥಾ ಅಸಭ್ಯ ವರ್ತನೆ ಎಂದು ನೆಟ್ಟಿಗರು ಕೆಂಡಾಮಂಡಲವಾಗಿದ್ದರು. ಈಗ ಖುಲ್ಲಂಖುಲ್ಲವಾಗಿಯೇ ಇಬ್ಬರು ಕೆಟ್ಟದಾಗಿ ವರ್ತಿಸಿದ್ದಾರೆ. ಈ ಹಿಂದೆ ಇಶಾ ಮಾಳವಿಯಾ ತಾಯಿ, ಆಕೆಯ ವರ್ತನೆಯಿಂದ ನಮಗೆ ಮುಜುಗರವಾಗುತ್ತಿದೆ. ಇಶಾ ತಂದೆ ಸರ್ಕಾರಿ ನೌಕರರಾಗಿದ್ದು ಬಿಗ್‌ಬಾಸ್‌ ಮನೆಯಲ್ಲಿ ಆಕೆಯ ನಡವಳಿಕೆಯಿಂದ ಅವರು ಮನೆಯಿಂದ ಹೊರಗೆ ಹೋಗುವುದೇ ಕಷ್ಟವಾಗಿದೆ' ಎಂದಿದ್ದರು. ಒಟ್ನಲ್ಲಿ ಮನೋರಂಜನೆಗೆಂದು ಆರಂಭವಾಗಿರೋ ಬಿಗ್‌ಬಾಸ್ ರಿಯಾಲಿಟಿ ಶೋ ಎಲ್ಲರ ನೆಮ್ಮದಿ ಕೆಡಿಸ್ತಿರೋದಂತೂ ನಿಜ.

Chintu galat show me aagaya hainpic.twitter.com/VXoD6MjYaB

— #BiggBoss_Tak👁 (@BiggBoss_Tak)
click me!