ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್ ವೇಳೆ ಹೆಂಡ್ತಿಗೆ ಸಿಕ್ಕಿಬಿದ್ದ ಗಂಡ: ಇಬ್ಬರು ಕಿತ್ತಾಡುತ್ತಿದ್ದಂತೆ ಪತಿ ಪರಾರಿ

Published : Feb 10, 2026, 08:04 PM IST
wife caught husband with girlfriend red handedly

ಸಾರಾಂಶ

ಉತ್ತರ ಪ್ರದೇಶದ ಶಾಪಿಂಗ್ ಮಾಲ್ ಒಂದರಲ್ಲಿ ಗರ್ಲ್‌ಫ್ರೆಂಡ್ ಜೊತೆಗಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಕೋಪಗೊಂಡ ಪತ್ನಿ, ಗಂಡನ ಪ್ರಿಯತಮೆಗೆ ಥಳಿಸಿದ್ದು, ಈ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ವೇಳೆ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್ ವೇಳೆ ಹೆಂಡ್ತಿಗೆ ಸಿಕ್ಕಿಬಿದ್ದ ಗಂಡ

ಏರಿಕೆಯಾಗದ ಸ್ಯಾಲರಿ, ಹೆಚ್ಚುತ್ತಿರುವ ಬೆಲೆ ಏರಿಕೆ  ನಡುವೆ ಒಬ್ಬಳು ಹೆಂಡತಿಯನ್ನು ಸಾಕುವುದೇ ಕಷ್ಟ ಹೀಗಿರುವಾಗ ಇಲ್ಲೊಬ್ಬ ವಿವಾಹಿತ, ಸೇಫ್ಟಿಗೆ ಸ್ಟೆಪ್ನಿ ಕೂಡ ಇರಲಿ ಎಂದು ಗರ್ಲ್‌ಫ್ರೆಂಡ್ ಮಾಡ್ಕೊಂಡಿದ್ದಾನೆ. ಸಾಲದು ಎಂಬಂತೆ ಹೆಂಡ್ತಿ ಕೈಗೆ ಶಾಪಿಂಗ್ ವೇಳೆಯೇ ಸಿಕ್ಕಿಬಿದ್ದಿದ್ದು, ಗಂಡನ ಗರ್ಲ್‌ಫ್ರೆಂಡ ನೋಡಿದ ಹೆಂಡ್ತಿ ಕೆಂಡಾಮಂಡಲವಾಗಿದ್ದು, ಶಾಪಿಂಗ್ ಮಾಲ್ ಎಂಬುದನ್ನು ಕೂಡ ನೋಡದೇ ಗಂಡನ ಗರ್ಲ್‌ಫ್ರೆಂಡ್‌ಗೆ ಸರಿಯಾಗಿ ಬಾರಿಸಿದ್ದಾಳೆ. ಇಬ್ಬರ ಗಲಾಟೆಯಿಂದಾಗಿ ಶಾಪಿಂಗ್ ಮಾಲ್ WWE ಸ್ಟೇಜ್ ಆಗಿ ಬದಲಾಗಿದ್ದು, ಮಾಲ್‌ಗೆ ಬಂದವರಿಗೆ ಬಿಟ್ಟಿ ಮನೋರಂಜನೆ ಸಿಕ್ಕಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಹಲವು ರೀತಿಯ ಕಾಮೆಂಟ್ ಮಾಡ್ತಿದ್ದಾರೆ.

ಇಬ್ಬರ ಜಗಳದ ಮಧ್ಯೆ ಎಸ್ಕೇಪ್ ಆದ ಕಿಲಾಡಿ ಪತಿ

ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸೋನ್‌ಭದ್ರದ ಸಿವಿಲ್ ಲೈನ್ಸ್ ರಸ್ತೆಯಲ್ಲಿರುವ ಶಾಪಿಂಗ್ ಮಾಲ್‌ಗೆ ಗಂಡ ತನ್ನ ಗರ್ಲ್‌ಫ್ರೆಂಡ್ ಜೊತೆ ಬಂದಿದ್ದಾನೆ. ಅದೇ ವೇಳೆ ಅನಿರೀಕ್ಷಿತವಾಗಿ ಅವನ ಹೆಂಡತಿ ಕೂಡ ಅದೇ ಸ್ಥಳಕ್ಕೆ ಬಂದಿದ್ದಾಳೆ. ಈ ವೇಳೆ ತನ್ನ ಗಂಡನನ್ನು ಇನ್ನೊಬ್ಬ ಮಹಿಳೆಯೊಂದಿಗೆ ನೋಡಿ ಆ ಹೆಂಡತಿ ಉಗ್ರ ರೂಪ ತಾಳಿದ್ದು, ಆತನ ಮುಂದೆಯೇ ಆಕೆಗೆ ಬಾರಿಸಿದ್ದಾಳೆ. ಹೆಂಡತಿಯ ರಣಚಂಡಿ ಅವತಾರವನ್ನು ನೋಡಿದ ಗಂಡ, ಹೆಂಡ್ತಿ ಹಾಗೂ ಗರ್ಲ್‌ಫ್ರೆಂಡ್‌ ಇಬ್ಬರನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಬ್ಬರು ಪರಸ್ಪರ ಜುಟ್ಟು ಹಿಡಿದು ಎಳೆದಾಡಿ ಗಲಾಟೆ ಮಾಡಿದ್ದಾರೆ. ಆದರೆ ಇದೆಲ್ಲದಕ್ಕೂ ಕಾರಣವಾಗಿದ್ದ ಆ ಪತಿ ಮಹಾಶಯ ಮಾತ್ರ ಮೊದಲೇ ಕಾಲಿಗೆ ಬುದ್ದಿ ಹೇಳಿದ್ದರಿಂದ ಇಬ್ಬರ ಮಧ್ಯೆ ಸಿಕ್ಕಿ ನಜ್ಜುಗುಜ್ಜಾಗುವುದು ತಪ್ಪಿದೆ.

ಇದನ್ನೂ ಓದಿ: ಸಂಸತ್ ಹೊರಗೆ ರಾಹುಲ್ ಪ್ರದರ್ಶಿಸಿದ್ದ ಪುಸ್ತಕ ಇನ್ನೂ ಪ್ರಕಟವಾಗಿಲ್ಲ: ವಿವಾದದ ನಂತರ ಸ್ಪಷ್ಟನೆ ನೀಡಿದ ಪೆಂಗ್ವಿನ್ ಪಬ್ಲಿಕೇಷನ್

ವ್ಯಕ್ತಿಯ ಗರ್ಲ್‌ಫ್ರೆಂಡ್ ಹಾಗೂ ಹೆಂಡ್ತಿ ನಡುವಿನ ಈ ಗಲಾಟೆ ಸುಮಾರು 15 ನಿಮಿಷಗಳ ಕಾಲ ಮುಂದುವರೆದಿದ್ದು, ಇದು ಮಾಲ್‌ಗೆ ಶಾಪಿಂಗ್‌ಗೆಂದು ಬಂದ ಖರೀದಿದಾರರಲ್ಲಿ ಆತಂಕ ಮೂಡಿಸಿತ್ತು. ಹೀಗಾಗಿ ಕೂಡಲೇ ಮಾಲ್‌ನ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಿ ಜಗಳ ಬಿಡಿಸುವಲ್ಲಿ ಯಶಸ್ವಿಯಾದರು ಎಂದು ವರದಿಯಾಗಿದೆ. ವಿಡಿಯೋ ವೈರಲ್ ಆದ ನಂತರ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ರಾಬರ್ಟ್ಸ್‌ಗಂಜ್ ಕೊತ್ವಾಲಿ ಉಸ್ತುವಾರಿ ಇನ್ಸ್‌ಪೆಕ್ಟರ್ ರಾಮಸ್ವರೂಪ್ ವರ್ಮಾ ಅವರು, ವ್ಯಕ್ತಿಯ ಪತ್ನಿ ನಂತರ ದೂರು ನೀಡಲು ತನ್ನ ಪತಿಯೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಳು ಎಂದು ದೃಢಪಡಿಸಿದರು. ತನ್ನ ಪತಿ ಇನ್ನೊಬ್ಬ ಮಹಿಳೆಗೆ ಅತಿಯಾದ ಗಮನ ನೀಡುತ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸಪ್ತಪದಿಯ ಅರ್ಥವನ್ನು ನವವಧುವರರಿಗೆ ಸೊಗಸಾಗಿ ವಿವರಿಸಿದ ಪುರೋಹಿತರು: ವೀಡಿಯೋ ವೈರಲ್

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಪೊಲೀಸರು ದಂಪತಿಗೆ ಸಲಹೆ ನೀಡಿ, ಪತಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಆತನನ್ನು ಬಿಡುಗಡೆ ಮಾಡಿದರು. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಔಪಚಾರಿಕ ಪ್ರಕರಣ ದಾಖಲಾಗಿಲ್ಲ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಯಾವಾಗಾಲು ತಮ್ಮ ತಮ್ಮ ಪತ್ನಿಯೊಂದಿಗೆ ಶಾಪಿಂಗ್ ಮಾಡಬೇಕು ಬೇರೆಯವರ ಜೊತೆ ಶಾಪಿಂಗ್ ಮಾಡಲು ಹೋದರೆ ಹೀಗೆ ಆಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್; ದೂರಿನ ಬೆನ್ನಲ್ಲೇ ಸ್ನೇಹಿತನ ಮನೆಯಲ್ಲಿ ಬಾಯ್‌ ಫ್ರೆಂಡ್ ಶ*ವವಾಗಿ ಪತ್ತೆ!
ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು: ಅಪ್ಪನ ಮರುಹುಟ್ಟು ಎಂದ ನಟಿ