ಸಂಬಂಧದಲ್ಲಿ ನಾನಾ ಬಗೆಯಿದೆ. ಜನರು ತಮ್ಮ ಸಂತೋಷಕ್ಕೆ ಮದುವೆ ಮಾತ್ರವಲ್ಲ, ಲಿವ್ ಇನ್, ಓಪನ್ ಮ್ಯಾರೇಜ್, ಒನ್ ನೈಟ್ ಹೀಗೆ ನಾನಾ ಸಂಬಂಧಗಳ ಮೊರೆ ಹೋಗ್ತಿದ್ದಾರೆ. ಆದ್ರೆ ಇದ್ರ ಕಲ್ಪನೆ ಇಲ್ಲದ ಮಗನೊಬ್ಬ ಬೆಪ್ಪನಾಗಿದ್ದಾನೆ.
ಮಕ್ಕಳು ವಯಸ್ಸಿಗೆ ಬಂದಂತೆ ಮನೆಯಿಂದ ಹೊರಗೆ ಇರೋದೇ ಹೆಚ್ಚು. ಓದು, ಕೆಲಸ ಅಂತ ಮನೆಯಿಂದ ಹೊರ ಬೀಳುವ ಮಕ್ಕಳು ಫೋನ್ ಮೂಲಕ ಸಂಪರ್ಕದಲ್ಲಿ ಇರ್ತಾರೆ ವಿನಃ ಮನೆಗೆ ಭೇಟಿ ನೀಡೋದು ಬಹಳ ಅಪರೂಪ. ಕೆಲವರು ವರ್ಷಗಟ್ಟಲೆ ಮನೆಗೆ ಬರೋದಿಲ್ಲ. ಅಪರೂಪಕ್ಕೆ ಮನೆಗೆ ಬರುವ ಮಕ್ಕಳು ಪಾಲಕರಿಗೆ ಉಡುಗೊರೆ ತಂದು ಸರ್ಪ್ರೈಸ್ ನೀಡೋದಿದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತಂದೆ – ತಾಯಿಗೆ ಹೇಳದೆ ಸರ್ಪ್ರೈಸ್ ನೀಡಲು ಮನೆಗೆ ಬಂದಿದ್ದಾನೆ. ತನ್ನನ್ನು ನೋಡಿ ಪಾಲಕರು ಖುಷಿಯಾಗ್ತಾರೆ ಅಂದ್ಕೊಂಡಿದ್ದಾನೆ. ಆದ್ರೆ ಮನೆ ಸ್ಥಿತಿ ನೋಡಿ ಆತನೇ ಸರ್ಪ್ರೈಸ್ ಗೆ ಒಳಗಾಗಿದ್ದಾನೆ. ಅವನಿಗೆ ಪರಿಸ್ಥಿತಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ರೆಡ್ಡಿಟ್ ನಲ್ಲಿ ಪೋಸ್ಟ್ ಹಾಕಿರುವ ವ್ಯಕ್ತಿ, ಏನೆಲ್ಲ ಆಗಿದೆ ಎಂಬುದನ್ನು ವಿವರಿಸಿದ್ದಾನೆ.
ರೆಡ್ಡಿಟ್ (Reddit) ಪೋಸ್ಟ್ ಪ್ರಕಾರ ಆತ ತಂದೆ – ತಾಯಿಗೆ ಹೇಳದೆ ಮನೆಗೆ ಬಂದಿದ್ದಾನೆ. ಮನೆ ಬಾಗಿಲು ತೆರೆದಾಗ ಅಪ್ಪ ಅಥವಾ ಅಮ್ಮ ಶಾಕ್ ಆಗ್ತಾರೆ ಅನ್ನೋದು ಆತನ ಪ್ಲಾನ್. ಆದ್ರೆ ಮನೆ ಬಾಗಿಲು ತೆರೆದ ಮಹಿಳೆ ಆತನ ಅಮ್ಮ ಆಗಿರಲಿಲ್ಲ. ತಂದೆಯ ಗರ್ಲ್ ಫ್ರೆಂಡ್ (Girlfriend) ಆಗಿದ್ಲು. ಇದನ್ನು ಕೇಳಿ ವ್ಯಕ್ತಿಯೇ ದಂಗಾಗಿದ್ದಾನೆ. ಅಪ್ಪನಿಗೆ ಮದುವೆ ಆಗಿರೋ ವಿಷ್ಯ ನಿನಗೆ ಗೊತ್ತಾ ಎಂದು ಗರ್ಲ್ ಫ್ರೆಂಡ್ ಗೆ ಆತ ಪ್ರಶ್ನೆ ಮಾಡಿದ್ದಾನೆ. ಆಕೆ ಕೂಲ್ ಆಗಿ ಹೌದು ಎಂದಿದ್ದಾಳೆ. ಮನೆಯಲ್ಲಿ ಅಪ್ಪ ಹಾಗೂ ಅಮ್ಮ ಇಬ್ಬರೂ ಇರದ ಕಾರಣ ಟೆನ್ಷನ್ ನಲ್ಲಿ ಅಪ್ಪನ ಕಚೇರಿಗೆ ಹೋಗಿದ್ದಾನೆ ಮಗ. ತಂದೆಗೆ ಅಫೇರ್ ಬಗ್ಗೆ ಕೇಳಿದ್ದಾನೆ. ಆದ್ರೆ ಅದಕ್ಕೆ ಅಪ್ಪನಿಂದ ಯಾವುದೇ ಉತ್ತರ ಬರಲಿಲ್ಲ. ವಿಷ್ಯವನ್ನು ಅಮ್ಮನಿಗೆ ತಿಳಿಸಲು ಕರೆ ಮಾಡಿದ್ರೆ ಆ ಕಡೆಯಿಂದ ಬಂದ ಉತ್ತರ ಈತನ ತಲೆ ಸುತ್ತುವಂತೆ ಮಾಡಿದೆ.
ಪರಸ್ಪರ ಅರಿತೇ ಅವರಿಬ್ಬರು ಮದ್ವೆಯಾಗಿದ್ದರೂ ನಟಿ ಜೀನತ್ ದಾಂಪತ್ಯ ಬರೀ ನರಕವಾಗಿತ್ತು: ಮುಮ್ತಾಜ್
ತಂದೆಗೆ ಗರ್ಲ್ ಫ್ರೆಂಡ್ ಇರೋದು ಗೊತ್ತು ಎಂದು ಶಾಂತವಾಗಿ ಹೇಳಿದ ಅಮ್ಮ, ತಾನೂ ಇನ್ನೊಂದು ಸಂಬಂಧದಲ್ಲಿ ಇರೋದಾಗಿ ಹೇಳಿದ್ದಾಳೆ. ಅಷ್ಟೇ ಅಲ್ಲ ನಾವಿಬ್ಬರೂ ಓಪನ್ ಮ್ಯಾರೇಜ್ ನಲ್ಲಿರೋದಾಗಿ ಹೇಳಿದ್ದಾಳೆ. ಅಪ್ಪ – ಅಮ್ಮನ ಈ ಸ್ವಭಾವ ವ್ಯಕ್ತಿಗೆ ವಿಚಿತ್ರ ಎನ್ನಿಸಿದೆ. ರೆಡ್ಡಿಟ್ ನಲ್ಲಿ ಈ ವಿಷ್ಯ ಹಂಚಿಕೊಳ್ತಿದ್ದಂತೆ ಸಾವಿರಾರು ಕಮೆಂಟ್ಸ್ ಬಂದಿದೆ. ಕೆಲವರು ತಮಗೂ ಇದೇ ಅನುಭವ ಆಗಿದೆ ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ ತನ್ನ ಮಕ್ಕಳಿಗೆ ನಾನು ಮತ್ತು ನನ್ನ ಪತ್ನಿ ಓಪನ್ ಮ್ಯಾರೇಜ್ (Open Marriage) ನಲ್ಲಿರೋದಾಗಿ ತಿಳಿಸಿದ್ದೇವೆ ಎಂದಿದ್ದಾನೆ.
ಟಾಕ್ಸಿಕ್ ಲವ್ ಅಂದ್ರೇನು ಗೊತ್ತಾ? ನೀವೂ ಈ ವರ್ತುಲದಲ್ಲಿ ಸಿಕ್ಹಾಕಿಕೊಂಡಿದ್ದರೆ ತಕ್ಷಣ ಹೊರ ಬನ್ನಿ
ಓಪನ್ ಮ್ಯಾರೇಜ್ ಎಂದರೇನು?: ಜೀವನದಲ್ಲಿ ಒಂದೇ ಬಾರಿ ನಡೆಯೋದು ಮದುವೆ ಎಂದು ನಮ್ಮವರು ಹಿಂದೆ ನಂಬಿದ್ದರು. ಆ ನಂತ್ರ ವಿಚ್ಛೇದನ, ಎರಡನೇ ಮದುವೆಯನ್ನು ಒಪ್ಪಿಕೊಂಡ್ರು. ಮೊದಲ ಮದುವೆ ಆಗ್ಲಿ ಇಲ್ಲ ಎರಡನೇ ಮದುವೆ ಆಗ್ಲಿ ಮದುವೆಯಾದ ದಂಪತಿ ಸಂಬಂಧಕ್ಕೆ ಬದ್ಧರಾಗಿರಬೇಕಾಗುತ್ತದೆ. ಆದ್ರೆ ಈ ಓಪನ್ ಮ್ಯಾರೇಜ್ ನಲ್ಲಿ ಈ ಬದ್ಧತೆ ಇರೋದಿಲ್ಲ. ಪತ್ನಿ ಅಥವಾ ಪತಿ ಏನು ಮಾಡ್ತಿದ್ದಾರೆ ಎಂದು ಪ್ರಶ್ನಿಸುವ ಅಧಿಕಾರ ಇದ್ರಲ್ಲಿ ಇರೋದಿಲ್ಲ. ಇವರ ಇಚ್ಛೆಯಂತೆ ನೀವು ಇನ್ನೊಬ್ಬ ಪಾಲುದಾರನನ್ನು ಆಯ್ಕೆ ಮಾಡಬಹುದು ಅಥವಾ ನೀವು ಇತರ ವ್ಯಕ್ತಿಯೊಂದಿಗೆ ಸ್ವಲ್ಪ ಸಮಯ ಬದುಕಬಹುದು. ಸ್ವಲ್ಪ ಸಮಯದವರೆಗೆ ಬೇರೆಯವರೊಂದಿಗೆ ಇರುವುದು ದಂಪತಿ ನಡುವಿನ ಬಾಂಧವ್ಯದಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಎಂದು ನಂಬಲಾಗಿದೆ. ಇದು ಲಿವ್ ಇನ್ ರಿಲೇಶನ್ಶಿಪ್ ಗಿಂತ ಭಿನ್ನವಾಗಿದೆ. ಓಪನ್ ಮ್ಯಾರೇಜ್ ನಲ್ಲಿ ದಂಪತಿ ಮದುವೆ ಆದ್ರೂ ಮುಕ್ತವಾಗಿರುತ್ತಾರೆ.