ಜೀವನ ಅಂದ್ಮೇಲೆ ಸಣ್ಣಪುಟ್ಟ ಅಡ್ಡ ಗಾಳಿ ಬೀಸುತ್ತಿರುತ್ತದೆ. ಆದ್ರೆ ದೊಡ್ಡ ಬಿರುಗಾಳಿ ಅಚಾನಕ್ ಬೀಸಿದ್ರೆ ಅದನ್ನು ಎದುರಿಸೋದು ಕಷ್ಟ. ಈ ದಂಪತಿಗೆ ಕೂಡ ಬೇಡವಾದ ಸಮಯದಲ್ಲಿ ವಿಚ್ಛೇದನ ಸಿಕ್ಕಿದ್ದು, ಅವರು ಶಾಕ್ ನಲ್ಲಿದ್ದಾರೆ.
ವಿಚ್ಛೇದನಕ್ಕೆ ಸಂಬಂಧಿಸಿದಂತೆ ಕಾನೂನುಗಳು ಭಿನ್ನವಾಗಿದೆ. ಕೆಲ ದೇಶದಲ್ಲಿ ಆರಾಮವಾಗಿ ವಿಚ್ಛೇದನ ಸಿಗುತ್ತದೆ. ಭಾರತದಲ್ಲಿ ವಿಚ್ಛೇದನ ಪಡೆಯಲು ದಂಪತಿ ವರ್ಷಗಳವರೆಗೆ ಕಾಯುವ ಸ್ಥಿತಿ ಇದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತ್ರ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತದೆ ಸರಿ. ಕೋರ್ಟ್ ಬೇಗ ತೀರ್ಪು ನೀಡಿದ್ರೆ ದೂರವಾಗಲು ನಿರ್ಧರಿಸಿದ ದಂಪತಿ ಖುಷಿಯಾಗಿ ಬೇರ್ಪಟ್ಟು ಜೀವನ ಮುನ್ನಡೆಸುತ್ತಾರೆ. ಆದ್ರೆ ವಿಚ್ಛೇದನಕ್ಕೆ ನಿರ್ಧಾರಿಸಿಯೇ ಇಲ್ಲ ಎನ್ನುವ ದಂಪತಿಗೆ ವಿಚ್ಛೇದನ ಸಿಕ್ಕಿದ್ರೆ? ಜೊತೆಯಾಗಿದ್ದ ದಂಪತಿಗೆ ನೀವಿನ್ನು ವಿಚ್ಛೇದಿತರು ಅಂದ್ರೆ ಹೇಗಾಗಬೇಡ? ಅದೂ ಕೋರ್ಟ್ ಆದೇಶವಾಗಿರುವ ಕಾರಣ ಅದನ್ನು ಅಲ್ಲಗಳೆಯಲು ಸಾಧ್ಯವಾಗೋದಿಲ್ಲ. ಹಾಗಂತ ಅದನ್ನು ಸ್ವೀಕರಿಸಿ ಬೇರೆಯಾಗಿರಲು ಸಾಧ್ಯವಿಲ್ಲ. ಕೆಲವೊಮ್ಮೆ ಕಂಪ್ಯೂಟರ್ ತಪ್ಪು ಅಥವಾ ಸಿಬ್ಬಂದಿ ತಪ್ಪಿನಿಂದ ಇಂಥ ಮಹಾನ್ ಅಪರಾಧ ಆಗೋದಿದೆ. ತಪ್ಪಿಗೆ ಶಿಕ್ಷೆ ನೀಡುವ ನ್ಯಾಯಾದೀಶರೇ ಇಂಥ ತಪ್ಪು ಮಾಡಿದ್ದಲ್ಲದೆ ಅದನ್ನು ಸಮರ್ಥಿಸಿಕೊಂಡಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಈಗ ಲಂಡನ್ ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಕೋರ್ಟ್ ಯಾರಿಗೂ ನೀಡಬೇಕಾಗಿದ್ದ ವಿಚ್ಛೇದನದ ಅನುಮತಿಯನ್ನು ಇನ್ನಾರಿಗೋ ನೀಡಿ ಯಡವಟ್ಟು ಮಾಡಿದೆ.
ಆಯೇಷಾ ವರ್ಡಾಗ್ ಅವರ ಲಂಡನ್ (London) ಮೂಲದ ಕಾನೂನು (Law) ಸಂಸ್ಥೆ ವಾರ್ದಾಗ್ಸ್‌ನ ಸಾಲಿಸಿಟರ್ ಮಾಡಿದ ತಪ್ಪಿನಿಂದ ಇದೆಲ್ಲ ಸಂಭವಿಸಿದೆ. ವಿಚಿತ್ರ ಅಂದ್ರೆ ನ್ಯಾಯಾದೀಶರು ತಮ್ಮ ಆದೇಶವನ್ನು ವಾಪಸ್ ಪಡೆಯಲು ನಿರಾಕರಿಸಿದ್ದಾರೆ. ಮಿಸ್ಟರ್ ಆಂಡ್ ಮಿಸಸ್ ವಿಲಿಯಮ್ಸ್ ಎಂದು ಕರೆಯಲ್ಪಡುವ ದಂಪತಿ ಮದುವೆಯಾಗಿ 21 ವರ್ಷ ಕಳೆದಿದೆ. 2023ರಲ್ಲಿ 21ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಆದ್ರೆ 21 ನಿಮಿಷದಲ್ಲಿ ಅವರಿಗೆ ವಿಚ್ಛೇದನ (Divorce) ಸಿಕ್ಕಿದೆ. ಬೇರೆ ದಂಪತಿ ವಿಚ್ಛೇದನದ ಅಂತಿಮ ಆದೇಶದ ಸಮಯದಲ್ಲಿ ವರ್ಡಾಗ್ ಗುಮಾಸ್ತರು ಕಂಪ್ಯೂಟರ್ ನಲ್ಲಿ ತಪ್ಪು ಹೆಸರನ್ನು ಆಯ್ದುಕೊಂಡಿದ್ದಾರೆ. ಡ್ರಾಪ್ ಡೌನ್ ಮೆನುವಿನಲ್ಲಿ ಮಿಸ್ಟರ್ ಆಂಡ್ ಮಿಸಸ್ ವಿಲಿಯಮ್ಸ್ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ವಿಲಿಯಮ್ಸ್ ಹೆಸರು ಅಲ್ಲಿ ಹೇಗೆ ಬಂತು ಅಂತ ನೀವು ಪ್ರಶ್ನೆ ಮಾಡ್ಬಹುದು.
undefined
ಪರಸ್ಪರ ಅರಿತೇ ಅವರಿಬ್ಬರು ಮದ್ವೆಯಾಗಿದ್ದರೂ ನಟಿ ಜೀನತ್ ದಾಂಪತ್ಯ ಬರೀ ನರಕವಾಗಿತ್ತು: ಮುಮ್ತಾಜ್
ವಾಸ್ತವವಾಗಿ ಮಿಸ್ಟರ್ ಆಂಡ್ ಮಿಸಸ್ ವಿಲಿಯಮ್ಸ್ ಕೂಡ ವಿಚ್ಛೇದನ ಪಡೆಯುವವರಿದ್ದಾರೆ. ಆದ್ರೆ ಹಣಕಾಸಿನ ಒಪ್ಪಂದಗಳನ್ನು ಏರ್ಪಡಿಸುವ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಹಣಕಾಸಿನ ಒಪ್ಪಂದ ಮುಗಿದ ಮೇಲೆ ಅವರು ವಿಚ್ಛೇದನ ಬಯಸಿದ್ದರೇ ವಿನಃ ಇಷ್ಟು ಬೇಗ ವಿಚ್ಛೇದನ ಕೇಳಿರಲಿಲ್ಲ.
ನ್ಯಾಯಾಧೀಶರಿಗೆ ಈ ವಿಷ್ಯ ತಿಳಿಸುತ್ತಿದ್ದಂತೆ ಅವರು ತೀರ್ಪು ಹಿಂಪಡೆಯಲು ನಿರಾಕರಿಸಿದ್ದಾರೆ. ನ್ಯಾಯಾಲಯದ ತೀರ್ಪಿನಲ್ಲಿ ಸಾರ್ವಜನಿಕ ವಿಶ್ವಾಸ ಹೆಚ್ಚು ಮುಖ್ಯ. ತೀರ್ಪು ವಾಪಸ್ ಪಡೆದಲ್ಲಿ ಜನರು ವಿಶ್ವಾಸ ಕಳೆದುಕೊಳ್ತಾರೆ ಎನ್ನುವ ಮೂಲಕ ತೀರ್ಪು ವಾಪಸ್ ಪಡೆಯಲು ನಿರಾಕರಿಸಿದ್ದಾರೆ. ನಿರೀಕ್ಷೆ ಮಾಡದ ಇವರಿಬ್ಬರ ವಿಚ್ಛೇದನ ಕೇವಲ 21 ನಿಮಿಷದಲ್ಲಿ ಪೂರ್ಣಗೊಂಡಿದೆ.
ಚುನಾವಣೆ ಸಮಯದಲ್ಲಿ ಪ್ರತ್ಯಕ್ಷರಾದ 2ನೇ ಪತ್ನಿ ಪುತ್ರಿ: ನಟ ಬಿಜೆಪಿ ಸಂಸದ ರವಿ ಕಿಶನ್‌ಗೆ ಸಂಕಷ್ಟ
ಕೋರ್ಟ್ ನೀಡಿದ ಅಂತಿಮ ಆದೇಶವನ್ನು ಗೌರವಿಸುವ ಅವಶ್ಯಕತೆ ಇದೆ ಎಂದು ಕೋರ್ಟ್‌ನಲ್ಲಿ ಕೌಟುಂಬಿಕ ವಿಭಾಗದ ಅಧ್ಯಕ್ಷ ಸರ್ ಆಂಡ್ರ್ಯೂ ಮ್ಯಾಕ್‌ಫರ್ಲೇನ್ ಹೇಳಿದ್ದಾರೆ. ಅಂತಿಮ ವಿಚ್ಛೇದನದ ಸಮಯದಲ್ಲಿ ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ವಕೀಲರು ತಪ್ಪು ಮಾಡಿದ್ದಾರೆ. ಅವರ ತಪ್ಪಿನಿಂದ ಈ ದಂಪತಿಗೆ ವಿಚ್ಛೇದನ ಸಿಕ್ಕಿದೆ ಎಂದು ವಕೀಲರು ಹೇಳಿದ್ದಾರೆ. ಅಂತಿಮ ವಿಚಾರಣೆ ವೇಳೆ ಅನೇಕ ಬಾರಿ ಪರಿಶೀಲನೆ ನಡೆಯುತ್ತದೆ. ಆದ್ರೆ ಈ ತಪ್ಪು ಹೇಗಾಯ್ತು ಎಂಬುದು ಗೊತ್ತಾಗ್ತಿಲ್ಲ. ಕಂಪ್ಯೂಟರ್ ಸಂಬಂಧಿತ ದೋಷಗಳ ಆಧಾರದ ಮೇಲೆ ಜನರಿಗೆ ವಿಚ್ಛೇದನ ನೀಡುವುದು ತಪ್ಪು. ಆನ್‌ಲೈನ್ ವ್ಯವಸ್ಥೆಯಲ್ಲಿ ಆದ ತಪ್ಪಿನಿಂದ ವಿಚ್ಛೇದನ ಪಡೆಯುವುದು ಸರಿ ಅಲ್ಲ ಎಂದು ಅಲ್ಲಿನ ವಕೀಲರು ಹೇಳಿದ್ದಾರೆ.