ಪರಸ್ಪರ ಅರಿತೇ ಅವರಿಬ್ಬರು ಮದ್ವೆಯಾಗಿದ್ದರೂ ನಟಿ ಜೀನತ್ ದಾಂಪತ್ಯ ಬರೀ ನರಕವಾಗಿತ್ತು: ಮುಮ್ತಾಜ್

By Suvarna News  |  First Published Apr 16, 2024, 12:58 PM IST

ಬಾಲಿವುಡ್‌ನ ಹಿರಿಯ ನಟಿ ಜೀನತ್ ಅಮಾನ್ ಅವರು ಕೆಲ ದಿನಗಳ ಹಿಂದೆ ಯುವ ಸಮೂಹಕ್ಕೆ ಮದ್ವೆಗೂ ಮೊದಲು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರಿ ಎಂದು ಸಲಹೆ ನೀಡಿದ್ದರು. ಆದರೆ ನಟಿಯ ಹೇಳಿಕೆಗೆ ಅವರ ಕಾಲದ  ಮತ್ತೊಬ್ಬ ಬಾಲಿವುಡ್ ನಟಿ ಮುಮ್ತಾಜ್ ಟೀಕೆ ವ್ಯಕ್ತಪಡಿಸಿದ್ದಾರೆ. 


ಮುಂಬೈ: ಬಾಲಿವುಡ್‌ನ ಹಿರಿಯ ನಟಿ ಜೀನತ್ ಅಮಾನ್ ಅವರು ಕೆಲ ದಿನಗಳ ಹಿಂದೆ ಯುವ ಸಮೂಹಕ್ಕೆ ಮದ್ವೆಗೂ ಮೊದಲು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರಿ ಎಂದು ಸಲಹೆ ನೀಡಿದ್ದರು. ಆದರೆ ನಟಿಯ ಹೇಳಿಕೆಗೆ ಅವರ ಕಾಲದ  ಮತ್ತೊಬ್ಬ ಬಾಲಿವುಡ್ ನಟಿ ಮುಮ್ತಾಜ್ ಟೀಕೆ ವ್ಯಕ್ತಪಡಿಸಿದ್ದಾರೆ. ನಟಿ ಜೀನತ್ ಅಮಾನ್ ಅವರು ಮದ್ವೆಯಾದ ಮಝರ್ ಖಾನ್ ಬಗ್ಗೆ ಅವರಿಗೆ ಮದ್ವೆಗೆ ವರ್ಷಗಳಿರುವ ಮೊದಲೇ ಚೆನ್ನಾಗಿ ಗೊತ್ತಿತ್ತು ಆದರೂ ಅವರ ದಾಂಪತ್ಯ ಜೀವನ ಸಂಪೂರ್ಣ ನರಕವಾಗಿತ್ತು ಹೀಗಿರುವಾಗ ಲೀಲಿಂಗ್ ರಿಲೇಷನ್‌ ಶಿಪ್‌ನಲ್ಲಿದ್ದರೆ ಮದ್ವೆ ಯಶಸ್ವಿಯಾಗುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. 

ಬಾಲಿವುಡ್‌ನ ಹಿರಿಯ ನಟಿ ಜೀನತ್ ಅಮಾನ್ ಅವರು ಸದಾ ಕಲಾ ವಿಭಿನ್ನವಾಗಿ ಔಟ್ ಆಫ್ ಬಾಕ್ಸ್ ಯೋಚಿಸುವ ನಟಿ, ತಮ್ಮ ಸ್ಟೈಲ್ ವೇಷ ಭೂಷಣದಿಂದ ಹಿಡಿದು ಅವರ ಪ್ರತಿಯೊಂದು ನಡೆಯೂ, ಚಿಂತನೆಯೂ ಎಲ್ಲರಿಂಗಿಂತ ವಿಭಿನ್ನ ಸಾಮಾಜಿಕ ಜಾಲತಾಣದಲ್ಲಿ ಸದಾ ತೆರೆದ ಹೃದಯದಿಂದ ಅವರು ಯುವ ಸಮೂಹಕ್ಕೆ ಸಂಬಂಧಗಳ ಬಗ್ಗೆ ಸಲಹೆ ನೀಡುತ್ತಿರುತ್ತಾರೆ. ಇತ್ತೀಚೆಗೆ ಅವರು ಯುವ ಸಮೂಹಕ್ಕೆ ಮದ್ವೆಗೂ ಮೊದಲು ಜೊತೆಯಾಗಿ ಜೀವಿಸಿ ಇದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ನಿಮ್ಮ ಕುಟುಂಬಕ್ಕೆ  ಇವರು ಹೊಂದಾಣಿಕೆಯಾಗುತ್ತಾರೋ ಇಲ್ಲವೋ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದರು.

Latest Videos

undefined

ಮದ್ವೆಗೂ ಮೊದಲು ಜೊತೆಯಾಗಿ ಜೀವಿಸಿ: ಯುವ ಸಮೂಹಕ್ಕೆ ನಟಿ ಜೀನತ್ ಸಲಹೆ

ಆದರೆ ಇದಕ್ಕೆ ಮತ್ತೊಬ್ಬ ನಟಿ ಮಮ್ತಾಜ್  ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಸಂಬಂಧ ಮದ್ವೆಯ ಬಗ್ಗೆ ವಿಭಿನ್ನ ನಿಲುವು ಹೊಂದಿರುವ ಮಮ್ತಾಜ್, ಎಷ್ಟು ದಿನವಾದರೂ ಲೀವಿಂಗ್ ಇನ್ ರಿಲೇಷನ್‌ ಶಿಪ್‌ನಲ್ಲಿ ಇರಿ, ಆದರೆ ಮದ್ವೆ ಯಶಸ್ಸಾಗುತ್ತದೆ ಎಂಬುದಕ್ಕೆ ಗ್ಯಾರಂಟಿ ಏನಿದೆ? ನಾನು ಹೇಳುತ್ತೇನೆ  ಮದುವೆಯೇ ಆಗುವ ಅಗತ್ಯವಿಲ್ಲ, ಏಕಾಗಿ ಮದ್ವೆಯಾಗಬೇಕು? ಮಕ್ಕಳನ್ನು ಮಾಡುವುದಕ್ಕಾಗಿಯೇ? ಇದೆಲ್ಲದರಿಂದ ದೂರ ಹೋಗಿ ನಿಮ್ಮನ್ನು ಆಕರ್ಷಿಸುವ ವ್ಯಕ್ತಿಯನ್ನು ಹುಡುಕಿ ಹಾಗೂ ದೈಹಿಕ ಸಂಪರ್ಕವಿಲ್ಲದೆಯೇ ಅವನ ಮಗುವನ್ನು ಪಡೆಯಿರಿ, ಇಂದು ಕಾಲ ಬಹಳ ಮುಂದುವರೆದಿದೆ ಎಂದು ಮುಮ್ತಾಜ್ ಹೇಳಿದ್ದಾರೆ. 

ಪ್ರತಿಯೊಬ್ಬರು ತಮ್ಮ  ಮಕ್ಕಳನ್ನು ಸ್ವಾವಲಂಬಿಯಾಗಿ ಬೆಳೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ ಮುಮ್ತಾಜ್ ನಾನು ಮದ್ವೆಯಾಗಿ 40 ವರ್ಷಗಳಿಗಿಂತಲೂ ಹೆಚ್ಚಾಗಿದೆ. ಮದ್ವೆಯನ್ನು ನಿರ್ವಹಿಸುವ ಅಗತ್ಯವಿದೆ ಅದು ಸುಲಭದ ಕೆಲಸವಲ್ಲ ಎಂದು ಮುಮ್ತಾಜ್ ಹೇಳಿದ್ದಾರೆ. ಲಿವ್ ಇನ್ ರಿಲೇಷನ್‌ ಶಿಪ್ ಸಂಪ್ರದಾಯ ಎಂಬಂತೆ ಆದರೆ ಮದುವೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹೆಣ್ಣು ಮಕ್ಕಳು ಲಿವ್ ಇನ್ ಸಂಬಂಧವನ್ನು ಅಳವಡಿಸಿಕೊಂಡರೆ ಮದುವೆ ಅರ್ಥ ಕಳೆದುಕೊಳ್ಳುತ್ತದೆ. ಪ್ರಾಮಾಣಿಕವಾಗಿ ಹೇಳಿ ಲೀವ್ ಇನ್ ರಿಲೇಷನ್‌ ಶಿಪ್‌ನಲ್ಲಿ ಇದ್ದ ಹುಡುಗಿಯೊಂದಿಗೆ ನೀವು ನಿಮ್ಮ ಮಗನ ಮದ್ವೆ ಮಾಡುತ್ತೀರಾ? ನೀವು ಜೀನತ್ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ,  ಅವರಿಗೆ ಗಂಡ ಮಜರ್ ಖಾನ್ ಅವರ ಬಗ್ಗೆ ಮದ್ವೆಯಾಗುವುದಕ್ಕೆ ವರ್ಷಗಳ ಮೊದಲೇ ತಿಳಿದಿತ್ತು. ಆದರೆ ಅವರ ಮದ್ವೆ ಜೀವನ ನರಕವಾಗಿತ್ತು. ಹೀಗಾಗಿ ಜೀನತ್ ಸಂಬಂಧಗಳ ಬಗ್ಗೆ ಸಲಹೆ ನೀಡಬಾರದು ಎಂಬಂತೆ ಮಮ್ತಾಜ್ ಮಾತನಾಡಿದ್ದಾರೆ.  ಜೂಮ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಮುಮ್ತಾಜ್ ಈ ರೀತಿ  ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರೀತಿ, ಕಾಮದ ಟಿಪ್ಸ್​ ನೀಡುತ್ತಲೇ 72ನೇ ವಯಸ್ಸಿನಲ್ಲಿ ತಮ್ಮ ಡೇಟಿಂಗ್​ ವಿಷ್ಯ ಹೇಳಿದ ನಟಿ ಜೀನತ್​ ಅಮಾನ್​!

ಇದೇ ವೇಳೆ ಮನಿಷಾ ಕೊಯಿರಾಲಾ ಅವರನ್ನು ಈ ಬಗ್ಗ ಕೇಳಲಾಗಿದ್ದು, ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸಂಬಂಧಗಳ ಬಗ್ಗೆ ಸಲಹೆ ನೀಡುವಷ್ಟು ಒಳ್ಳೆಯ ಸಲಹೆಗಾರ್ತಿ ನಾನು ಅಲ್ಲ ಎಂದು ಹೇಳದಿ ಮನಿಷಾ ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಮತ್ತೊರ್ವ ನಟಿ ಸೆಲಿನಾ ಜೇಟ್ಲಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲೀವ್ ಇನ್ ರಿಲೇಷನ್‌ ಶಿಪ್‌ನಲ್ಲಿ ಬದುಕುವ ಜನರು ಸಂಬಂಧದಿಂದ ಸುಲಭವಾಗಿ ಹೊರ ಬರುವ ದಾರಿಯನ್ನು ಹುಡುಕಿಕೊಂಡಿರುತ್ತಾರೆ. ಹೀಗಾಗಿ ಒಟ್ಟಿಗೆ ವಾಸಿಸುವ ಜನ ಹಲವು ವರ್ಷಗಳ ನಂತರ ಪರಸ್ಪರ ದೂರವಾಗುತ್ತಾರೆ. ಸಂಬಂಧಗಳ ನಿಭಾಯಿಸುವುದಕ್ಕೆ ಅವರು ಶ್ರಮವಹಿಸುವುದಿಲ್ಲ, ಏಕೆಂದರೆ ಅವರು ಮದುವೆ ಎಂಬ ಬಂಧನದಲ್ಲಿ ಇಲ್ಲ ಎಂದು ಸೆಲೀನಾ ಜೇಟ್ಲಿ ಹೇಳಿದ್ದಾರೆ. 

click me!