ಸ್ವಲ್ಪ ವಯಸ್ಸಿಗೆ ಬಂದ ಮಕ್ಕಳಿರುವ ಮನೆಯಲ್ಲಿ, ಹೆತ್ತವರಿಗೆ ಪ್ರತ್ಯೇಕ ಕೋಣೆ ಇಲ್ಲದಿದ್ದಾಗ ಈ ಮುಜುಗರ ಅನುಭವಿಸಿಯೇ ಇರುತ್ತಾರೆ. ಸೆಕ್ಸ್‌ನಲ್ಲಿ ಆತಂಕ ಒಂದು ಕಡೆ, ಮಕ್ಕಳ ಮುಂದೆ ಮುಜುಗರ ಇನ್ನೊಂದು ಕಡೆ. ಪಾರಾಗುವುದು ಹೇಗೆ?
ಪ್ರಶ್ನೆ: ನನಗೆ ಮೂವತ್ತೈದು, ಪತಿಗೆ ಮೂವತ್ತೆಂಟು ವರ್ಷ. ಏಳು ವರ್ಷದ ಮಗ ಇದ್ದಾನೆ. ನಮ್ಮದು ಸಿಂಗಲ್ ಬೆಡ್‌ರೂಮ್‌ನ ಸಣ್ಣ ಬಾಡಿಗೆ ಮನೆ. ಮಗನನ್ನು ಪ್ರತ್ಯೇಕ ಮಲಗಿಸುವ ಅಭ್ಯಾಸವಿಲ್ಲ. ಮಗ ನಿದ್ದೆ ಹೋದಾಗ ಸಾಮಾನ್ಯವಾಗಿ ನಾವಿಬ್ಬರೂ ಮಿಲನ ನಡೆಸುತ್ತೇವೆ. ಕಳೆದ ವಾರ ನಾವಿಬ್ಬರೂ ಮಧ್ಯರಾತ್ರಿ ಮಗ ನಿದ್ದೆ ಹೋಗಿದ್ದಾನೆಂದೇ ತಿಳಿದು ಮುಕ್ತವಾಗಿ ಸೆಕ್ಸ್‌ನಲ್ಲಿ ತೊಡಗಿದ್ದೆವು. ಇಬ್ಬರೂ ಬೆತ್ತಲಾಗಿದ್ದೆವು. ಸೆಕ್ಸ್ ಮುಗಿಸಿ ನೋಡಿದಾಗ, ಮಗ ಎಚ್ಚರವಾಗಿದ್ದ. ಆತ ಎಲ್ಲವನ್ನೂ ನೋಡಿದ್ದಾನೆ ಎಂಬುದು ಆಮೇಲೆ ತಿಳಿಯಿತು. ರಾತ್ರಿ ಅವನು ಏನೂ ಕೇಳಲಿಲ್ಲ. ಮರುದಿನ ನನ್ನ ಬಳಿ, ನಿನ್ನೆ ರಾತ್ರಿ ಅಪ್ಪ ನಿನ್ನನ್ನು ಹೊಡೀತಿದ್ರಾ ಅಂತ ಕೇಳಿದ. ಪತಿ ನನ್ನ ಮೇಲೆ ಇದ್ದ ಭಂಗಿಯಲ್ಲಿ ಆತ ನಮ್ಮನ್ನು ನೋಡಿದ್ದು ಅವನ ಪ್ರಶ್ನೆಗೆ ಕಾರಣ ಆಗಿರಬಹುದು. ನಾನು ಆತನ ಗಮನ ಬೇರೆಡೆ ಹರಿಸಿ ಆ ಕ್ಷಣ ತಪ್ಪಿಸಿದೆ. ಈಗ ಆತನ ಕುತೂಹಲವನ್ನು ತಣಿಸುವುದು ಹೇಗೆ, ಇದನ್ನು ಆತ ನೋಡಿದ್ದರಿಂದ ಮಾನಸಿಕವಾಗಿ ಅವನಿಗೆ ಏನಾದರೂ ಸಮಸ್ಯೆ ಆಗಬಹುದಾ ಎಂದೆಲ್ಲ ಚಿಂತೆ ಶುರುವಾಗಿದೆ. ದಯವಿಟ್ಟು ಗೈಡ್ ಮಾಡಿ.
ಉತ್ತರ: ಇದೊಂದು ವಿಶಿಷ್ಟ ಸನ್ನಿವೇಶ. ಆದರೂ ಅಪರೂಪ ಏನಲ್ಲ. ನೂರರಲ್ಲಿ ಏಳೆಂಟು ಮಂದಿ ದಂಪತಿಗಳಾದರೂ ಇಂಥ ಸನ್ನಿವೇಶವನ್ನು ಎದುರಿಸುತ್ತಾರೆ. ನಿಮ್ಮ ಮಗನಿಗೆ ಇನ್ನೂ ನಾಲ್ಕೈದು ವರ್ಷಗಳಾಗಿದ್ದರೆ ಆತ ಈ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ ಅಥವಾ ಕೇಳುತ್ತಿದ್ದ ಪ್ರಶ್ನೆಗಳು ಭಿನ್ನವಾಗಿರುತ್ತಿದ್ದವೋ ಏನೋ. ಆದರೂ ಇಂತದೊಂದು ಪರಿಸ್ಥತಿಯನ್ನು ಎದುರಿಸಲು ನೀವು ಮಾನಸಿಕವಾಗಿ ಸಿದ್ಧರಾಗಿರಬೇಕು. ಮುಖ್ಯವಾಗಿ, ವಯಸ್ಸಿಗೆ ಬಂದ ಮಕ್ಕಳು ನಿಮ್ಮ ಆತ್ಮೀಯ ದೇಹಸಂಪರ್ಕದ ಸಂದರ್ಭದಲ್ಲಿ ಅಲ್ಲಿ ಇಲ್ಲದಂತೆ ನೋಡಿಕೊಳ್ಳುವುದು ಅಗತ್ಯ. ಆದರೆ ಕೆಲವು ಮಕ್ಕಳು ನೋಡಿಬಿಡುತ್ತಾರೆ. ನಿದ್ದೆಗಣ್ಣಿನಲ್ಲಿರುವ ಆ ಮಕ್ಕಳಿಗೆ ಅದೇನು ಎಂದು ಪಕ್ಕನೆ ಅರ್ಥವಾಗುವುದಿಲ್ಲ. ಹೀಗಾಗಿ ತಪ್ಪು ಕಲ್ಪನೆ ಮಾಡಿಕೊಂಡಿರುತ್ತಾರೆ.
ಈಗ ನೀವು ಮಾಡಬೇಕಾದ್ದು ಏನೆಂದರೆ, ಮಗುವಿನ ಮನದಲ್ಲಿರುವ ತಪ್ಪು ಕಲ್ಪನೆಯನ್ನು ನಿವಾರಿಸುವುದು. ಆತ ನಿಮ್ಮ ಪತಿ ನಿಮ್ಮನ್ನು ಶಿಕ್ಷಿಸುತ್ತಿದ್ದಾನೆ ಎಂದುಕೊಂಡಿರಬಹುದು. ಮಗುವನ್ನು ಎದುರಿಗೆ ಕೂರಿಸಿಕೊಂಡು, ಆತ ಏನನ್ನು ನೋಡಿದ್ದಾನೆ, ಎಷ್ಟನ್ನು ನೋಡಿದ್ದಾನೆ ಎಂಬುದನ್ನು ಅವನಿಗೆ ಪ್ರಶ್ನೆಗಳನ್ನು ಹಾಕಿ ಅರ್ಥ ಮಾಡಿಕೊಳ್ಳಿ. ಆತನ ಪ್ರಾಯಕ್ಕೆ ತಕ್ಕ ಉತ್ತರಗಳನ್ನು ನೀಡಲು, ಮತ್ತು ಆತ ಎಷ್ಟು ನೋಡಿದ್ದಾನೆ ಎಂದು ಅರ್ಥ ಮಾಡಿಕೊಳ್ಳಲು ಇದು ಅಗತ್ಯ. ಆತ ಏನು ನೋಡಿದ್ದಾನೆ ಎಂಬುದರ ಮೇಲೆ ನಿಮ್ಮ ಉತ್ತರಗಳನ್ನು ರೂಪಿಸಿಕೊಳ್ಳಿ. ಉದಾಹರಣೆಗೆ, ನಿಮ್ಮ ಮಗನಿಗೆ ಈಗಿನ್ನೂ ಲೈಂಗಿಕ ಸಂಬಂಧದ ಅರಿವು ಬಂದಿರಲು ಸಾಧ್ಯವಿಲ್ಲವಾದ್ದರಿಂದ, ನೀವು ಮಾಡುತ್ತಿದ್ದ ಕ್ರಿಯೆಯನ್ನು ಒಂದು ಹಿತವಾದ ಆಟ ಎಂಬಂತೆ ಅರ್ಥ ಮಾಡಿಸಲು ಪ್ರಯತ್ನಿಸಿ. ಆದರೆ ಅದು ಗಂಡ- ಹೆಂಡತಿ ಮಾತ್ರ ಆಡಬೇಕಾದ, ಆಡಬಹುದಾದ ಆಟವೆಂದು ತಿಳಿಸಲು ಮರೆಯಬೇಡಿ. ನಿಮ್ಮ ಗಂಡ ಯಾವುದೇ ಕಾರಣಕ್ಕೂ ನಿಮ್ಮನ್ನು ಶಿಕ್ಷಿಸುತ್ತಿರಲಿಲ್ಲ, ಆದ್ದರಿಂದ ಆತ ಚಿಂತೆ ಮಾಡಬೇಕಾದ ಅಗತ್ಯ ಇಲ್ಲವೆಂದು ಆತನಿಗೆ ತಿಳಿಹೇಳಿ.
#Feelfree: ಸೈಬರ್‌ಸೆಕ್ಸ್ ಮೂಲಕ ಸಂಗಾತಿಗೆ ಮೋಸ ಮಾಡಿದೆನಾ?
ಇನ್ನು ಮುಂದೆ ಇಂಥ ಸ್ಥಿತಿ ತಂದುಕೊಳ್ಳದಿರಲು ಯತ್ನಿಸಿ. ಮಗ ಮಲಗಿದ ನಂತರ, ಬೆಡ್‌ರೂಮಿನ ಬಾಗಿಲು ಹಾಕಿ ಹೊರಗೆ ಬಂದು ಹಾಲ್‌ನಲ್ಲೋ ಅಡುಗೆ ಮನೆಯಲ್ಲೋ ನಿಮ್ಮ ಸೆಕ್ಸ್ ನಡೆಸಲು ಯತ್ನಿಸಿ. ಇದರಿಂದ ನಿಮ್ಮ ಲೈಂಗಿಕ ಸಖ್ಯಕ್ಕೂ ಹೊಸದೊಂದು ಆಯಾಮ ದೊರೆಯಬಹುದು. ಮಗ ಶಾಲೆಗೆ ಹೋದಾಗ ಮನೆಯಲ್ಲಿ ನಿಮಗೆ ಸಿಕ್ಕಿದ ಸಮಯವನ್ನು ಇದಕ್ಕಾಗಿ ಉಪಯೋಗಿಸಿಕೊಳ್ಳಿ. ಮಗನನ್ನು ಅಜ್ಜ- ಅಜ್ಜಿಯರ ಬಳಿ ಬಿಟ್ಟು ನಿಮ್ಮ ಏಕಾಂತದ ಸಮಯ ಕಂಡುಕೊಳ್ಳಿ. ಒಂದೇ ರೂಮಿನಲ್ಲಿರುವುದು ಅನಿವಾರ್ಯವಾಗಿದ್ದರೆ, ಆತನಿಗೆ ನಿದ್ರೆ ಬಂದಿದೆ ಎಂದು ಖಚಿತವಾದ ಬಳಿಕವೇ ನಿಮ್ಮ ಚಟುವಟಿಕೆ ಆರಂಭಿಸಿ.
#Feelfree: ಗಂಡ ಮಲಗಿದ್ದಾಗ ಮಾತ್ರ ನನ್ ಪಕ್ಕ ಬರ್ತಾಳೆ!
ಕೆಲವೊಮ್ಮೆ ಮಕ್ಕಳು ನಿದ್ದೆಗಣ್ಣಿನಲ್ಲಿ ನೋಡುವ ಇಂಥ ನೋಟಗಳು ಮಕ್ಕಳ ಮಾನಸಿಕ ಸ್ಥಿತಿಗತಿಯ ಮೇಲೆ ಪರಿಣಾಮ ಬೀರುವುದು ಉಂಟು, ಇಲ್ಲವೆಂದಲ್ಲ. ಆದರೆ ಅದನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದರ ಮೇಲೆ ಅದು ನಿಂತಿದೆ. ಗಂಡ ಹೆಂಡತಿ ರಾತ್ರಿಯಂತೆ ಹಗಲಿನಲ್ಲೂ ಸದಾ ಆತ್ಮೀಯರಾಗಿ ಇದ್ದರೆ, ಮಕ್ಕಳು ಆ ಕ್ರಿಯೆಯ ಬಗ್ಗೆ ನಿಗೂಢ ಕುತೂಹಲ ಬೆಳೆಸಿಕೊಳ್ಳುವುದಿಲ್ಲ. ಅದೂ ಆತ್ಮೀಯತೆಯ ಒಂದು ಭಾಗವೇ ಎನ್ನುವ ನೋಟ, ಮನೋಭಾವ ಬೆಳೆಸಿಕೊಳ್ಳುತ್ತಾರೆ.
#Feelfree: ಹೆಂಡತಿ ಜೊತೆಗೆ ಸೆಕ್ಸ್, ಸೆಲೆಬ್ರಿಟಿ ಜೊತೆಗಿದ್ದಂತೆ ಕನಸು! ...