ಡೇಟಿಂಗ್ ಪ್ರತಿಯೊಬ್ಬರಿಗೂ ವಿಶೇಷ ಅನುಭವ ನೀಡುತ್ತದೆ. ಅದನ್ನು ಜೀವನ ಪರ್ಯಂತ ನೆನಪಿಟ್ಟುಕೊಳ್ಳುವಂತೆ ಕಳೆಯಲು ಅನೇಕರು ಬಯಸ್ತಾರೆ. ಆದ್ರೆ ಅಲ್ಲಿ ಆಗುವ ಕೆಲ ಘಟನೆಗಳು ಮರಿಬೇಕು ಅಂದ್ರೂ ಮರೆಯೋಕೆ ಸಾಧ್ಯವಾಗಲ್ಲ.
ಡೇಟಿಂಗ್ ಅನ್ನೋದು ಈಗ ಸರ್ವೇ ಸಾಮಾನ್ಯವಾಗಿದೆ. ಹುಡುಗ ಹುಡುಗಿ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಇದೊಂದು ಹೊಸ ದಾರಿಯಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳು ಕೂಡ ಅವರಿವರ ಜೊತೆ ಡೇಟಿಂಗ್ ನಲ್ಲಿ ಇದ್ದಾರೆಂಬುದನ್ನು ನಾವು ಕೇಳುತ್ತಲೇ ಇರುತ್ತೇವೆ. ಇದು ಗೆಳೆತನವನ್ನು ಮೀರಿದ ಮತ್ತು ಪ್ರೇಮಕ್ಕಿಂತ ತುಸು ಕಡಿಮೆ ಇರುವ ಒಂದು ಸಂಬಂಧವಾಗಿದೆ.
ಡೇಟಿಂಗ್ (Dating) ಹೆಸರಿನಲ್ಲಿ ಅನೇಕ ಮಂದಿ ಹೊರಗಡೆ ಸುತ್ತಾಡುವುದನ್ನು ನಾವು ಪ್ರತಿನಿತ್ಯವೂ ನೋಡುತ್ತೇವೆ. ಡೇಟಿಂಗ್ ಸಮಯದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡು, ಪರಸ್ಪರ ಇಷ್ಟಪಟ್ಟರೆ ಮುಂದೆ ಮದುವೆಯಾಗುತ್ತಾರೆ. ಇಲ್ಲದಿದ್ದರೆ ಅಲ್ಲೇ ಆ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಇದರಲ್ಲಿ ಯಾವುದೇ ರೀತಿಯ ಇಮೋಷನಲ್ (Emotional) ಫೀಲಿಂಗ್ಸ್ ಗಳು ಇರೋದಿಲ್ಲ. ಕೆಲವೊಂದು ಡೇಟಿಂಗ್ ಪಾರ್ಟನರ್ (Partner) ಗಳು ಡೇಟಿಂಗ್ ಸಮಯದಲ್ಲಾದ ಖರ್ಚು ವೆಚ್ಚಗಳನ್ನು ಕೂಡ ಶೇರ್ ಮಾಡಿಕೊಳ್ತಾರೆ. ಅದು ಕೂಡ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಅಥವಾ ಆತ್ಮ ಗೌರವದ ಸಂಕೇತವಾಗಿದೆ. ಇನ್ನೂ ಕೆಲವರು ತಾನೇನು ಕಡಿಮೆಯಿಲ್ಲ ಎಂದು ತೋರಿಸಿಕೊಳ್ಳಲು ಕೂಡ ಈ ನಿರ್ಧಾರ ತೆಗೆದುಕೊಳ್ಳಬಹುದು. ಹೀಗಿರುವಾಗ ಇಲ್ಲೊಬ್ಬರು ಡೇಟಿಂಗ್ ನ ಪೂರ್ತಿ ಬಿಲ್ ಅನ್ನು ಒಬ್ಬರೇ ಭರಿಸುವಂತೆ ಹೇಳಿದ್ದು ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗಿದೆ.
ರಣಬೀರ್ ಕಪೂರ್‌ಗೆ ಲಿಪ್‌ಸ್ಟಿಕ್ ಆಗೋಲ್ವಂತೆ, ನಟಿಯನ್ಯಾಕೆ ಮದ್ವೆಯಾದ ಕೇಳ್ತಿದ್ದಾರೆ ಫ್ಯಾನ್ಸ್!
ಆನ್ ಲೈನ್ (Online) ನಲ್ಲಿ ಆರಂಭವಾಯ್ತು ಗೆಳೆತನ : ಯುವತಿಯೊಬ್ಬಳು ತನ್ನ ಡೇಟಿಂಗ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾಳೆ. ಅವಳು ಡೇಟಿಂಗ್ ಸಮಯದಲ್ಲಿ ತನಗಾದ ಮೋಸದ ಬಗ್ಗೆ ಹೇಳಿದ್ದಾಳೆ. ಈ ಯುವತಿ ಹಾಗೂ ಆಕೆಯ ಗೆಳೆಯನ ಪರಿಚಯ ಆನ್ ಲೈನ್ ನಲ್ಲಿ ಆರಂಭವಾಗಿತ್ತು. ಪರಸ್ಪರ ಚೆನ್ನಾಗಿ ಪರಿಚಯವಾದ ನಂತರ ಇವರಿಬ್ಬರು ಡೇಟಿಂಗ್ ಗೆ ಹೋಗಬೇಕೆಂದು ನಿರ್ಧರಿಸಿದ್ರು. ಮೊದಲ ಡೇಟಿಂಗ್ ನಲ್ಲಿ ಬಂದ 8 ಪೌಂಡ್ ಖರ್ಚನ್ನು ಅವಳ ಗೆಳೆಯನೇ ಭರಿಸಿದ. ಆಗ ಇವಳು ಮುಂದಿನ ಡೇಟಿಂಗ್ ಖರ್ಚನ್ನು ನಾವಿಬ್ಬರೂ ಶೇರ್ ಮಾಡಿಕೊಳ್ಳೋಣ ಎಂದು ಹೇಳಿದಳು. ಅವಳ ಮಾತನ್ನು ತಪ್ಪಾಗಿ ಭಾವಿಸಿದ ಅವಳ ಗೆಳೆಯ ಎರಡನೇ ಡೇಟಿಂಗ್ ನ ಅಷ್ಟೂ ಖರ್ಚನ್ನು ಆಕೆಯೇ ಕೊಡುತ್ತಾಳೆ ಅಂದ್ಕೊಂಡ.
ಎರಡನೇ ಬಾರಿ ಡೇಟಿಂಗ್ ನಲ್ಲಿ ಆಗಿದ್ದೇನು? : ಆನ್ ಲೈನ್ ನಲ್ಲಿ ಆರಂಭವಾದ ಇವರ ಗೆಳೆತನ ಮೊದಲ ಡೇಟಿಂಗ್ ಮುಗಿದ ನಂತರ ಇನ್ನಷ್ಟು ಗಾಢವಾಗಿತ್ತು. ಹಾಗಾಗಿ ಇವರು ಎರಡನೇ ಬಾರಿ ಡೇಟಿಂಗ್ ಪ್ಲಾನ್ ಮಾಡಿದ್ರು. ಆ ಎರಡನೇ ಡೇಟ್ ಇವರ ಪಾಲಿಗೆ ಬಹಳ ಮುಖ್ಯವಾಗಿತ್ತು. ಹಾಗಾಗಿ ಅವರು ಡಿನ್ನರ್ ಡೇಟ್ ಪ್ಲಾನ್ ಮಾಡಿದ್ರು.
6 ಮದ್ವೆಯಾದ ಭೂಪ, ಲೈಂಗಿಕ ಕ್ರಿಯೆಗೆ ಶೆಡ್ಯೂಲ್, ಬಾಡಿಗೆ ತಾಯಿಯಿಂದ ಮಗು!
ಎಲ್ಲವೂ ಪ್ಲಾನಿಂಗ್ ಪ್ರಕಾರ ಚೆನ್ನಾಗಿಯೇ ನಡೆದಿತ್ತು. ಆದರೆ ಬಿಲ್ ಮಾತ್ರ ಮೊದಲ ಡೇಟಿಂಗ್ ಗಿಂತ 13 ಪಟ್ಟು ಹೆಚ್ಚು ಬಂದಿತ್ತು. ಅಂದರೆ ಎರಡನೇ ಡೇಟಿಂಗ್ ಬಿಲ್ ಮೊತ್ತ ಬರೋಬ್ಬರಿ 110 ಪೌಂಡ್ ಆಗಿತ್ತು. ಮೊದಲ ಡೇಟಿಂಗ್ ನ ಬಿಲ್ ಗೂ ಎರಡನೇ ಡೇಟಿಂಗ್ ನ ಬಿಲ್ ಗೂ ಅಜಗಜಾಂತರ ವ್ಯತ್ಯಾಸವಿತ್ತು. ಆ ಬಿಲ್ ನೋಡಿ ಯುವತಿಗೆ ಶಾಕ್ ಆಗಿತ್ತು. ಬಿಲ್ ಕುರಿತು ಗೆಳೆಯನ ಜೊತೆ ಚರ್ಚಿಸಲೂ ಅವಳಿಗೆ ಮುಜುಗರ. ಎರಡನೇ ಡೇಟಿಂಗ್ ಅವಳ ಪಾಲಿಗೆ ಉಗುಳಲೂ ಆಗದ ನುಂಗಲೂ ಆಗದ ಬಿಸಿ ತುಪ್ಪವಾಗಿತ್ತು. ಅದಾದ ನಂತರ ಅವಳು ಮತ್ತೆ ಡೇಟಿಂಗ್ ಗೆ ಹೋಗುವ ವಿಚಾರ ಮಾಡಲೇ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಡೇಟಿಂಗ್ ಸಮಸ್ಯೆಯನ್ನು ಹೇಳಿಕೊಂಡಿರುವ ಯುವತಿಗೆ ಅನೇಕ ಮಂದಿ ಕಮೆಂಟ್ ಮಾಡಿದ್ದಾರೆ. ಅಷ್ಟು ದೊಡ್ಡ ಮೊತ್ತದ ಹಣವನ್ನು ಒಬ್ಬರೇ ಪಾವತಿಸುವುದು ಸರಿ ಅಲ್ಲ ಎಂದು ಹೇಳಿದ್ದಾರೆ.