
ಸೈಕಾಲಜಿಸ್ಟ್, ಥೆರಪಿಸ್ಟ್ ಡಾ.ನಿಕೋಲ್ ಲೆಪೆರಾ ಎಂಬಾಕೆ ಹೇಳಿದ ಈ ಪ್ರಕರಣ ಓದಿ:
ಮಿಯಾ ಅವಳ ಹೆಸರು. ಆಕೆಯ ಪೋಷಕರ ನಡುವೆ ಯಾವಾಗಲೂ ಜಗಳ. ಒಮ್ಮೊಮ್ಮೆ ಸಿಹಿ, ಒಮ್ಮೊಮ್ಮೆ ಕಹಿ. ಕೆಲವೊಮ್ಮೆ ಅವಳ ತಂದೆ ಸಂಸಾರ ಬಿಟ್ಟು ಹೋಗುತ್ತಿದ್ದ, ಮತ್ತೆ ಬರುತ್ತಿದ್ದ. ಪತ್ನಿಯನ್ನು ಬಯ್ಯುತ್ತಿದ್ದ. ಕೆಟ್ಟದಾದ ಪದಗಳಿಂದ ಕರೆಯುತಿದ್ದ. ಅವಳ ಮೈ ತೂಕವನ್ನು ಅಪಹಾಸ್ಯ ಮಾಡುತ್ತಿದ್ದ. ಮಿಯಾ ಮುಂದೆ ಕೂಡ ಆಕೆಯ ತಾಯಿಯನ್ನು ದೂರುತ್ತಿದ್ದ. ಆಕೆ 7ನೇ ವಯಸ್ಸಿದ್ದಾಗಲೇ, ತಮ್ಮ ಲೈಂಗಿಕ ಜೀವನದಲ್ಲಿ ಕೊರತೆ ಇದೆ ಎಂದು ಆಕೆಗೆ ಹೇಳಿದ್ದ. ವಯಸ್ಕರ ಸಮಸ್ಯೆಯನ್ನು ಮಗುವಿಗೆ ಹೇಳಬಾರದು ಎಂಬ ಪ್ರಜ್ಞೆ ಅವನಿಗೆ ಇರಲಿಲ್ಲ. ಸಂಪೂರ್ಣ ಸ್ವಯಂ-ಕೇಂದ್ರಿತನಾಗಿದ್ದ ಆತನನ್ನು ಮಿಯಾ ಭಾವನಾತ್ಮಕವಾಗಿ ರಕ್ಷಿಸುತ್ತಿದ್ದಳು.
ಮುಂದೆ ಮಿಯಾ ಜೀವನದಲ್ಲಿ ಇದೇ ರೂಢಿಯಾಯಿತು; ಅವಳ ಸ್ವಭಾವವೇ ಅದಾಗಿ ಹೋಯಿತು. ಮಹಿಳೆಯರನ್ನು ಹೇಯವಾಗಿ ನಿಂದಿಸುವ, ಹಿಂಸಿಸುವ ಪುರುಷರಿಗೆ ಆಕೆ ತೆರೆದುಕೊಳ್ಳುತ್ತಿದ್ದಳು. ಅವಳ ಗೆಳೆಯ ಡಾಂಟೆ ಅವಳ ತಂದೆಯಂತೆಯೇ ಇದ್ದ. ಅನಿಯಂತ್ರಿತ ವ್ಯಕ್ತಿಯಾಗಿದ್ದ. ಹೀಗಾಗಿ ಅವರ ಮಿಯಾ ಮತ್ತು ಡಾಂಟೆಯ ಸಾಂಗತ್ಯ ಕಠಿಣವಾಗಿತ್ತು. ಅದು ಅಸುರಕ್ಷಿತವಾಗಿತ್ತು. ಡಾಂಟೆ ತನ್ನ ಅಭದ್ರತೆಯನ್ನು ಅವಳ ಮೇಲೆ ಚಲಾಯಿಸುತ್ತಿದ್ದ. ಆಕೆಯಿಂದ ಆಚೆ ಹೋಗಲು ಯತ್ನಿಸುತ್ತಿದ್ದ. ಆಗ ಅವಳು ಅವನನ್ನು ಸಂತೈಸಿ ಅವನೊಂದಿಗೆ ಲೈಂಗಿಕವಾಗಿ ಸೇರುತ್ತಿದ್ದಳು. ಲೈಂಗಿಕ ಸಾಂಗತ್ಯದ ಬಳಿಕ ಅವನನ್ನು ಉಳಿಸಿಕೊಂಡೆ ಎಂದು ಭಾವಿಸುತ್ತಿದ್ದಳು. ಇದು ಪ್ರೀತಿ; ಪ್ರೀತಿಯನ್ನು ಸೆಕ್ಸ್ ಮೂಲಕ ಪಡೆಯುತ್ತಿದ್ದೇನೆ, ಉಳಿಸಿಕೊಳ್ಳುತ್ತಿದ್ದೇನೆ ಎಂದು ಅವಳು ಭಾವಿಸಿದ್ದಳು!
ಇಂಥ ಗುಣವನ್ನು ಹಲವು ಮಹಿಳೆಯರಲ್ಲಿ ನಾವು ಕಾಣಬಹುದು. ಇವರು ಬಾಲ್ಯ ಕಾಲದಲ್ಲಿ ಅನುಭವಿಸಿದ ಯಾತನೆಗಳನ್ನು ತಮ್ಮ ದಾಂಪತ್ಯ ಅಥವಾ ಪ್ರೇಮಜೀವನದಲ್ಲಿ ಸರಿಪಡಿಸಿಕೊಳ್ಳಲು ಯತ್ನಿಸುತ್ತಾರೆ. ಸಾಮಾನ್ಯವಾಗಿ ಬಾಲ್ಯದಲ್ಲಿ ಪ್ರೇಮವನ್ನು ಪಡೆಯದವರು, ವಿರಳವಾಗಿ ಕಂಡುಂಡವರು, ದೊಡ್ಡವರಾದ ಮೇಲೆ ಅದನ್ನು ಪಡೆಯಬಹುದಾದ ಸಂಗಾತಿಗಳನ್ನು ಹುಡುಕುತ್ತಾರೆ. ಬಾಲ್ಯದಲ್ಲಿ ಅತೃಪ್ತ ಲೈಂಗಿಕ ಸಂಗಾತಿಗಳನ್ನು ಪೋಷಕರಾಗಿ ಹೊಂದಿದ ಅನೇಕ ಮಂದಿ ದೊಡ್ಡವರಾದ ಮೇಲೂ ತಮ್ಮ ಮೇಲೆ ಪ್ರೇಮ- ಕಾಮದ ಅತೃಪ್ತಿಯ ತೆರೆಯನ್ನು ಹೊದ್ದುಕೊಂಡಿರುತ್ತಾರೆ. ಮಿಯಾಳ ಪ್ರಕರಣದಲ್ಲಿ ಆಕೆಯ ತಂದೆ ಆಕೆಯಲ್ಲಿ ತನ್ನ ಯಾತನೆಯ ಮೂಲ ನಿನ್ನಮ್ಮನಿಂದ ಸಿಗದ ಸೆಕ್ಸ್ ಎಂದು ಆಕೆಯಲ್ಲಿ ಭಾವನೆ ಮೂಡುವಂತೆ ಮಾಡಿದ್ದ. ಅದನ್ನೇ ನಂಬಿ ಬೆಳೆದ ಆಕೆ, ಮುಂದೆ ತನ್ನ ಸಂಗಾತಿಯಲ್ಲೂ ಅದೂ ಗುಣವನ್ನು ಕಾಣುತ್ತಿದ್ದಳು. ತಾನು ಸೆಕ್ಸ್ ಮೂಲಕ ಪ್ರೇಮ ತೋರಿಸದಿದ್ದರೆ ತನ್ನ ಸಂಗಾತಿ ತನ್ನನ್ನು ಬಿಟ್ಟು ಹೋಗಬಹುದು ಎಂಬ ಭಾವ ಆಕೆಯಲ್ಲಿ ಭದ್ರವಾಗಿ ಬೇರೂರಿತ್ತು. ಆದರೆ ಪ್ರೀತಿ ತೋರಿಸುವುದು ಎಂದರೆ ತನಗೆ ಇಷ್ಟವಿಲ್ಲದಿದ್ದರೂ ಗೆಳೆಯನಿಗೆ ಸೆಕ್ಸ್ ಸುಖ ನೀಡುವುದು ಎಂದು ಆಕೆ ಭಾವಿಸಿದ್ದಳು.
ಫಿಸಿಕಲ್ ಬ್ಯೂಟಿ ಜೊತೆ ಲೈಂಗಿಕ ಸುಖ ಕನೆಕ್ಟ್ ಆಗಿರುತ್ತಾ?
ಇದು ಮಿಯಾ ಒಬ್ಬಳ ಕೇಸಲ್ಲ. ಅನೇಕ ಮಹಿಳೆಯರು ಹೀಗೆ ಭಾವಿಸಿ ಜೀವನವನ್ನು ನರಕ ಮಾಡಿಕೊಳ್ಳುತ್ತಾರೆ. ಪ್ರೀತಿ ತೋರಿಸುವುದು ಎಂದರೆ ಸೆಕ್ಸ್‌ನಲ್ಲಿ ಭಾಗಿಯಾಗಬೇಕು ಎಂದಲ್ಲ; ಸೆಕ್ಸ್ ಮಾಡಿದರೆ ಪ್ರೀತಿ ತೋರಿಸಿದಿರಿ ಎಂದೂ ಅರ್ಥವಲ್ಲ. ಸೆಕ್ಸ್‌ನಲ್ಲಿ ಭಾಗಿಯಾಗದೆಯೂ ಪ್ರೀತಿಯನ್ನು ಅಭಿವ್ಯಕ್ತಿಸಬಹುದು; ಅಥವಾ ಪ್ರೀತಿಯಿಲ್ಲದೆಯೂ ಸೆಕ್ಸ್‌ನಲ್ಲಿ ಭಾಗಿಯಾಗಬಹುದು.
ಹಾಗೆಯೇ ಅರ್ಥ ಮಾಡಿಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ ನಿಮ್ಮ ಬಾಲ್ಯದ ಅನುಭವಗಳಿಗೆ ನೀವು ದೊಡ್ಡವಾರದ ಮೇಲೆ ಅರ್ಥ ಹುಡುಕುವುದು ವ್ಯರ್ಥ. ಬಾಲ್ಯ, ಆ ಕಾಲದ ಯಾತನೆ, ನೋವು, ಸಿಟ್ಟು ಇತ್ಯಾದಿಗಳು ಅಲ್ಲಿಯೇ ಮುಗಿದವು. ಆ ಭಾರವನ್ನು ಇನ್ನೂ ನೀವು ಹೊರಬೇಕಾದದ್ದಿಲ್ಲ. ನೀವು ಈಗ ಬದುಕುತ್ತಿರುವ ಪ್ರತಿಯೊಂದು ದಿನವೂ ಹೊಸತೇ ಆಗಿದೆ. ಇದನ್ನು ಯಾವ ನೋವಿನ ಭಾರವಿಲ್ಲದೆ ಸಂತಸದಿಂದ ಕಳೆಯುವುದು ನಿಮ್ಮ ಆದ್ಯತೆಯಾಗಲಿ ಎಂದು ಸೈಕಾಲಜಿಸ್ಟ್ ಹೇಳುತ್ತಾಳೆ.
Masturbation: ಹಸ್ತಮೈಥುನದ ಬಗ್ಗೆ ಈ ಬಾಲಿವುಡ್ ನಟಿಯರಿಗೆ ನಾಚಿಕೆಯೇ ಇಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.