ಬ್ರೇಕಪ್ ನಂತರ ಹಳೆಯ ಗೆಳೆಯ-ಗೆಳತಿಯರು ಭೇಟಿಯಾಗುವುದು, ಮುಖಾಮುಖಿಯಾಗುವುದನ್ನು ಸಾಧ್ಯವಾದಷ್ಟೂ ತಪ್ಪಿಸಿಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಎಕ್ಸ್ ಗೆಳೆಯ ಬೇಕೆಂದೇ ನಿಮ್ಮನ್ನು ಸಂಪರ್ಕಿಸಲು, ನಿಮ್ಮ ಭಾವನೆಗಳನ್ನು ಅರಿಯಲು ಯತ್ನಿಸಬಹುದು.
ಬ್ರೇಕಪ್ ಎನ್ನುವುದು ಸಂಬಂಧದ ನೋವಿನ ಹಂತ. ಆದರೂ ಇದು ಕೆಲವೊಮ್ಮೆ ಅನಿವಾರ್ಯವಾಗಿಬಿಡುತ್ತದೆ. ಬ್ರೇಕಪ್ ನಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಕೆಲವರು ಗೌರವಪೂರ್ಣವಾಗಿ ವಿದಾಯ ಹೇಳಿದರೆ, ಮತ್ತೆ ಕೆಲವರು ಗೊಂದಲ ಮೂಡಿಸುವಂತಹ ಕೃತ್ಯಗಳಿಗೆ ಇಳಿಯುತ್ತಾರೆ. ಮುಗಿದುಹೋದ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಾರೆ. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಅರಿತುಕೊಳ್ಳುವ ಆಸಕ್ತಿಯನ್ನೂ ತೋರಬಹುದು. ಮಾಜಿ ಗೆಳೆಯನ ಇಂತಹ ಲಕ್ಷಣಗಳನ್ನು ಗುರುತಿಸುವುದು, ಹಾಗೆಯೇ, ಇಂತಹ ಟ್ರಿಕ್ಸ್ ಗಳಿಗೆ ಮಾರುಹೋಗದೆ ಇರುವುದು ಮುಖ್ಯ. ಏಕೆಂದರೆ, ಅವರು ನಿಮ್ಮನ್ನು ಪರೀಕ್ಷೆ ಮಾಡುತ್ತಿರಬಹುದು. ತಮ್ಮಲ್ಲಿರುವ ಕೆಲವು ಅಭದ್ರತೆಗಳಿಂದಾಗಿ ನೀವು ಇನ್ನೂ ಅವರ ನೆನಪಿನಲ್ಲಿ ಅಥವಾ ಅವರ ಪ್ರಭಾವದಲ್ಲಿ ಇದ್ದಿರಬಹುದಾದ ಸಾಧ್ಯತೆಗಳ ಕುರಿತು ಅವರು ಪರೀಕ್ಷೆ ಮಾಡುತ್ತಿರಬಹುದು. ಒಂದೊಮ್ಮೆ ನಿಮ್ಮಲ್ಲಿ ಅವರ ಬಗ್ಗೆ ಇನ್ನೂ ಆಸಕ್ತಿ ಇದೆ ಎನ್ನುವುದು ಕಂಡುಬಂದರೆ ಅವರಿಗೆ ಏನೋ ತೃಪ್ತಿ ದೊರೆಯುತ್ತದೆ, ಈಗೋ ತಣಿಯುತ್ತದೆ. ನೀವು ಸಂಪೂರ್ಣವಾಗಿ ಅವರನ್ನು ದೂರ ಮಾಡಿರುವುದು ನಿಜವೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಲು ಅಥವಾ ಕುತೂಹಲದಿಂದಲೂ ಅವರು ಕೆಲವು ವರ್ತನೆ ಮಾಡಬಹುದು. ಏನೇ ಆಗಿರಲಿ. ಅಂತಹ ಲಕ್ಷಣಗಳನ್ನು ಅರಿತು, ಎಚ್ಚರಿಕೆಯಿಂದ ವರ್ತಿಸುವುದು ಅಗತ್ಯವಾಗಿರುತ್ತದೆ.
• ವಿಚಿತ್ರವಾಗಿ ಸಂಪರ್ಕಿಸುವುದು (Contact you Mysteriously)
ಕಳ್ಳರಂತೆ ನಿಗೂಢವಾಗಿ ಸಂಪರ್ಕಿಸಲು ನಿಮ್ಮ ಎಕ್ಸ್ ಗೆಳೆಯ (Ex Friend) ಪ್ರಯತ್ನಿಸಿದರೆ, ದಿಢೀರನೆ ಅವರನ್ನು ಕಂಡಾಗ ನೀವು ಹೇಗೆ ಪ್ರತಿಕ್ರಿಯೆ (Reaction) ನೀಡುತ್ತೀರಿ ಎನ್ನುವುದನ್ನು ಪರೀಕ್ಷಿಸಲು (Test) ಇರಬಹುದು. ನೀವು ಇನ್ನೂ ಅವರ ನೆನಪಿನಲ್ಲಿದ್ದು, ಕಂಡಾಗ ಸಂತಸ ವ್ಯಕ್ತಪಡಿಸುತ್ತೀರಾ ಅಥವಾ ಭಾವನಾತ್ಮಕವಾಗಿ (Emotional) ನಿಜಕ್ಕೂ ಅವರಿಂದ ದೂರವಾಗಿದ್ದೀರಾ ಎಂದು ಟೆಸ್ಟ್ ಮಾಡುವುದಕ್ಕೋಸ್ಕರ ಅವರು ನಿಮ್ಮನ್ನು ನಿಗೂಢವಾಗಿ ಸಂಪರ್ಕಿಸಲು ಯತ್ನಿಸಬಹುದು.
ಜೀವನ ಸಿನಿಮಾ ಅಲ್ಲ; ಯುವಜನತೆಯಲ್ಲಿ ಡಿವೋರ್ಸ್ ಹೆಚ್ಚಾಗೋಕೆ ಇದುವೇ ಕಾರಣ
• ಸಾಮಾಜಿಕ ಜಾಲತಾಣಗಳಲ್ಲಿ (Social Media) ಬೆನ್ನು ಬೀಳುವುದು
ಡಿಜಿಟಲ್ ಪ್ಲಾಟ್ ಫಾರಂಗಳಲ್ಲಿ ಎಕ್ಸ್ ಗೆಳೆಯ ಬೆನ್ನು ಬೀಳುವುದು ಅತಿ ಸಾಮಾನ್ಯ ಸಂಗತಿ. ನಿಮ್ಮ ಪ್ರತಿಕ್ರಿಯೆ ನೋಡಲು ಹಾಗೂ ಭಾವನಾತ್ಮಕ ಸ್ಥಿತಿಗತಿ (Mental Status) ಅರಿಯಲು ಅವರು ಹೀಗೆ ಮಾಡಬಹುದು. ಉದ್ದೇಶಪೂರ್ವಕವಾಗಿ ಮಾತುಕತೆಗೆ ಮುಂದಾಗಬಹುದು. ನಿಮ್ಮ ಪೋಸ್ಟ್ ಗಳನ್ನು ಲೈಕ್ ಮಾಡಬಹುದು. ಕೆಲವು ನಿರ್ದಿಷ್ಟ ರೀತಿಯ ಸಂದೇಶ ಕಳಿಸಬಹುದು. ಅವರಲ್ಲಿ ನಿಮ್ಮ ಬಗ್ಗೆ ಕುತೂಹಲವೂ (Curiosity) ಇರಬಹುದು, ಅದಕ್ಕಿಂತ ಹೆಚ್ಚಾಗಿ, ತಮ್ಮ ಕುರಿತು ನಿಮ್ಮ ಭಾವನೆಗಳು ಹೇಗಿವೆ ಎನ್ನುವುದನ್ನು ಅರಿಯಲು ಹೀಗೆ ಮಾಡಬಹುದು.
• ಹೊಟ್ಟೆಕಿಚ್ಚಿನ ಪ್ರದರ್ಶನ
ಕೆಲವೊಮ್ಮೆ ಎಕ್ಸ್ ಲವರ್ ನಿಮ್ಮನ್ನು ಗುರಿಯಾಗಿಸಿಯೇ ಕೆಲವೊಂದು ಟ್ರಿಕ್ಸ್ (Tricks) ಮಾಡಬಹುದು. ತಮ್ಮ ಗೆಳತಿಯ ಫೋಟೊ ಹಾಕಬಹುದು. ಹೊಸ ರೋಮ್ಯಾಂಟಿಕ್ ಜೀವನದ ಬಗ್ಗೆ ಚರ್ಚಿಸಲು ಬಯಸಬಹುದು. ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪ್ರದರ್ಶಿಸಬಹುದು. ನೇರವಾಗಿ ಮಾತಿನ ಮೂಲಕವೂ ಕಿಂಡಲ್ ಮಾಡಬಹುದು. ನಿಮ್ಮ ಭಾವನೆಗಳನ್ನು ಅರಿಯಲು ಮತ್ತೆ ಮತ್ತೆ ಪ್ರಯತ್ನ ನಡೆಸುವ ಮೂಲಕ ಮರಳಿ ನಿಮ್ಮನ್ನು ಹೊಂದಲು ಸಾಧ್ಯವೇ ಎನ್ನುವ ಪರೀಕ್ಷೆಯೂ ಇರಬಹುದು.
ಬಣ್ಣ ಕಳೆದು ಕೊಂಡ ದಾಂಪತ್ಯಕ್ಕೆ ರೀ ಪೇಂಟಿಂಗ್ ಮಾಡೋದು ಹೇಗೆ? ಅಂಥವರಿಗೆ ಟಿಪ್ಸ್ ಇಲ್ಲಿವೆ
• ಪದೇ ಪದೆ ಸಂಪರ್ಕ (Connect)
ಸಂಬಂಧ ಮುರಿದು ಹೋದ ಮೇಲೆ ಪದೇ ಪದೆ ಹಳೆಯ ಗೆಳೆಯ-ಗೆಳತಿಯನ್ನು ಭೇಟಿಯಾಗಲು ಯಾರೂ ಹೆಚ್ಚಾಗಿ ಇಷ್ಟಪಡುವುದಿಲ್ಲ. ಆದರೆ, ಆತ ನಿಮ್ಮನ್ನು ಸಂಪರ್ಕಿಸಲು ಪದೇ ಪದೆ ಯತ್ನಿಸುತ್ತಿದ್ದರೆ ಅವರು ಬೇಕೆಂದೇ ನಿಮ್ಮ ಹಿಂದೆ ಬಿದ್ದಿದ್ದಾರೆ ಎಂದರ್ಥ. ಆತ ಮತ್ತೆ ಆಪ್ತತೆ ತೋರಬಹುದು. ಮಿಸ್ ಯೂ ಎನ್ನುವಂತಹ ಸಂದೇಶ ಕಳಿಸಬಹುದು. ಭಾವನಾತ್ಮಕವಾಗಿ ಭಾರೀ ನೊಂದಿರುವಂತೆ ತೋರ್ಪಡಿಸಿಕೊಳ್ಳಬಹುದು. ಭಾವನಾತ್ಮಕವಾಗಿ ನಿಮ್ಮನ್ನು ಕೆಣಕಲು ನೋಡಬಹುದು ಅಥವಾ ಕೆಲವೊಮ್ಮೆ ಬೇಕೆಂದೇ ನಿಮ್ಮನ್ನು ಅಲಕ್ಷ್ಯ (Neglect) ಮಾಡಬಹುದು. ನಿರ್ಲಕ್ಷ್ಯ ಮಾಡಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಅರಿಯಲು ಯತ್ನಿಸಬಹುದು.