ಮಾಜಿ ಪತಿ ಕುಟುಂಬದ ಗುಣಗಾನ ಮಾಡಿದ ಸೊಹೈಲ್ ಖಾನ್ ವಿಚ್ಚೇದಿತ ಪತ್ನಿ ಸೀಮಾ

By Anusha Kb  |  First Published Oct 27, 2024, 7:13 PM IST

ಸೀಮಾ ಸಜ್ದೇಹ್ ಅವರು ಸಲ್ಮಾನ್ ಖಾನ್ ಕುಟುಂಬದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮಲೈಕಾ ಅರೋರಾ ತಂದೆಯ ಅಗಲಿಕೆಯ ಸಂದರ್ಭದಲ್ಲಿ ಸಲ್ಮಾನ್ ಕುಟುಂಬ ನೀಡಿದ ಬೆಂಬಲವನ್ನು ಅವರು ಶ್ಲಾಘಿಸಿದ್ದಾರೆ. ಕಷ್ಟದ ಸಮಯದಲ್ಲಿ ಸಲ್ಮಾನ್ ಕುಟುಂಬವು ಬಂಡೆಗಲ್ಲಿದ್ದಂತೆ ಎಂದು ಸೀಮಾ ಹೇಳಿದ್ದಾರೆ.


ಸಲ್ಮಾನ್ ಖಾನ್ ಕಿರಿಯ ಸೋದರ ಸೋಹೈಲ್ ಖಾನ್ ವಿಚ್ಛೇದಿತ ಪತ್ನಿ ಸೀಮಾ ಸಜ್ದೇಹ್ ಅವರು ತಮ್ಮ 'ಫ್ಯಾಬುಲಸ್ ಲೀವ್ಸ್ ವರ್ಸಸ್‌ ಬಾಲಿವುಡ್ ವೈವ್ಸ್‌' (ಫ್ಯಾಬುಲಸ್ ಲೀವ್ಸ್ ಆಫ್ ಬಾಲಿವುಡ್ ವೈವ್ಸ್‌')  ಶೋದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಸಲ್ಮಾನ್ ಖಾನ್ ಕುಟುಂಬದ ಬಗ್ಗೆ ಮಾತನಾಡಿದ್ದು, ತನ್ನ ಮಾಜಿ ಪತಿಯ ಕುಟುಂಬವನ್ನು ಹೊಗಳಿದ್ದಾರೆ.  ಸಲ್ಮಾನ್ ಖಾನ್ ಮತ್ತೊರ್ವ ಸಹೋದರ ಅರ್ಬಾಜ್ ಖಾನ್ ಅವರ ವಿಚ್ಚೇದಿತ ಪತ್ನಿ ಮಲೈಕಾ ಆರೋರಾ ಅವರ ತಂದೆ ಇತ್ತೀಚೆಗೆ ಸೆಪ್ಟೆಂಬರ್ 11ರಂದು ಸಾವಿಗೆ ಶರಣಾಗಿದ್ದು, ಎಲ್ಲರಿಗೂ ಗೊತ್ತೆ ಇದೆ. ಈ ವೇಳೆ ಆಕೆ ತಮ್ಮ ಕುಟುಂಬವನ್ನು ತೊರೆದ ಸೊದೆ ಎಂಬುದರ ಬಗ್ಗೆ ಏನೂ ಯೋಚಿಸದೇ ಸಲ್ಮಾನ್ ಖಾನ್ ವೃದ್ಧ ಪೋಷಕರು ಮಾತ್ರವಲ್ಲದೇ ಇಡೀ ಸಲ್ಮಾನ್ ಖಾನ್ ಕುಟುಂಬವೇ ಮಲೈಕಾ ಶೆರಾವತ್ ಅವರ ಕಷ್ಟಕಾಲಕ್ಕೆ ಧಾವಿಸಿ ಬಂದಿತ್ತು. ಇದೇ ವಿಚಾರವನ್ನು ಉಲ್ಲೇಖಿಸಿದ ಸೋಹೈಲ್ ಖಾನ್ ಮಾಜಿ ಪತ್ನಿಸೀಮಾ ಸಜ್ದೇಹ್, ಸಲ್ಮಾನ್ ಖಾನ್ ಕುಟುಂಬ ಬಂಡೆಗಲ್ಲಿದ್ದಂತೆ ಯಾರಿಗೆ ಆದರೂ ಕಷ್ಟ ಎಂದು ಬಂದಾಗ ಹಿಂದೆಮುಂದೆ ನೋಡದೇ ಅವರು ಸಹಾಯಕ್ಕೆ ಧಾವಿಸಿ ಬರುತ್ತಾರೆ ಎಂದು ಹೇಳಿದ್ದಾರೆ.

ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಅವರು 2017ರಲ್ಲಿ ವಿಚ್ಛೇದನಕ್ಕೊಳಗಾಗಿದ್ದಾರೆ. ಇದಾದ ನಂತರ ಇಬ್ಬರ ಬಾಳಲ್ಲೂ ಬೇರೆಯವರು ಬಂದು ಹೋಗಿದ್ದಾರೆ. ಅರ್ಬಾಜ್ ಖಾನ್ ಬೇರೆ ಮದುವೆಯನ್ನು ಆಗಿದ್ದಾರೆ. ಆದರೆ ಇವರ ವಿಚ್ಛೇದನದ ನಂತರ ಮಲೈಕಾ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಈ ವೇಳೆ ಅಲ್ಲಿ ಸಲ್ಮಾನ್ ಖಾನ್ ಉಪಸ್ಥಿತಿ ಇರುತ್ತಿರಲಿಲ್ಲ, ಆದರೆ ಆಕೆಯ ತಂದೆ ತೀರಿಕೊಂಡಾಗ ಸಲ್ಮಾನ್ ಖಾನ್ ಅವರ ಇಡೀ ಕುಟುಂಬವೇ ಮಲೈಕಾಗೆ ಸಾಂತ್ವನ ಹೇಳಲು ಆಗಮಿಸಿತ್ತು.  ಈ ವಿಚಾರದ ಬಗ್ಗೆ ಮಾತನಾಡಿದ ಸೀಮಾ ಸಜ್ದೇಹ್, ಕಷ್ಟದ ಸಮಯದಲ್ಲಿ ಸಲ್ಮಾನ್ ಕುಟುಂಬದ ಒಡನಾಟವನ್ನು ಕೊಂಡಾಡಿದ್ದಾರೆ.  ಅವರು ಬಂಡೆಗಲ್ಲಿದ್ದಂತೆ ಕಷ್ಟದ ಸಮಯದಲ್ಲಿ ಸದಾ ಜೊತೆಯಾಗ್ತಾರೆ ಎಂದು ಸೀಮಾ ಸಜ್ದೇಹ್ ಹೇಳಿದ್ದಾರೆ. 

Latest Videos

undefined

ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಸೀಮಾ ಸಜ್ದೇಹ್ ಅವರು 1998ರಲ್ಲಿ ಸೋಹೈಲ್ ಖಾನ್ ಅವರನ್ನು ಮದುವೆಯಾಗಿದ್ದರು. 2022ರಲ್ಲಿ ಸೋಹೈಲ್ ಖಾನ್ ಅವರಿಂದ ದೂರಾದ ಸೀಮಾ ಸಜ್ದೇಹ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸ್ತುತ ಉದ್ಯಮಿ ವಿಕ್ರಮ್ ಆಹುಜಾ ಅವರೊಂದಿಗೆ ಡೇಟಿಂಗ್‌ನಲ್ಲಿರುವ 48ರ ಹರೆಯದ ಸೀಮಾ ಸಜ್ದೇಹ್‌ಗೆ ತಮ್ಮ ಈ ಪ್ರೀತಿಗೆ 23ರ ಹರೆಯದ ಮಗ ನಿರ್ವಾಣ್‌ ನ ಒಪ್ಪಿಗೆಯೂ ಇದೆ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು. ಜೀವನದಲ್ಲಿ ಮುಂದುವರೆಯಬೇಕು ನಿಮ್ಮ ಸಂತೋಷವೇ ನಮ್ಮ ಗುರಿ ಎಂದು ಮಗ ಹೇಳಿದ್ದಾಗಿ ಸೀಮಾ ಹೇಳಿಕೊಂಡಿದ್ದರು. 

ಅದೇನೆ ಇರಲಿ ಸಲ್ಮಾನ್ ಖಾನ್ ಅವರು 58 ವರ್ಷವಾದರೂ ಮದುವೆಯಾಗದೇ ಅವಿವಾಹಿತರಾಗಿ ಉಳಿದಿದ್ದರೆ, ಅವರ ಇಬ್ಬರು ಸೋದರರಾದ ಸೋಹೈಲ್ ಖಾನ್  ಹಾಗೂ ಅರ್ಬಾಜ್ ಖಾನ್ ಅವರು ವಿಚ್ಚೇದಿತರಾಗಿದ್ದಾರೆ. ಅದರಲ್ಲಿ ಅರ್ಬಾಜ್ ಖಾನ್ ಮಲೈಕಾ ಜೊತೆ ವಿಚ್ಚೇದನದ ಬಳಿಕ ಇತ್ತೀಚೆಗೆ ಹೇರ್ ಸ್ಟೈಲಿಸ್ಟ್ ಸುರಾ ಖಾನ್ ಅವರನ್ನು ಮದುವೆಯಾಗಿದ್ದಾರೆ. 

click me!