ಐದು ವರ್ಷದದಿಂದ ಪ್ರೀತಿಸುತ್ತಿದ್ದ ಸಹೋದರಿಯರು/ ಮದುವೆ ಮೂಲಕ ಸಂಬಂಧಕ್ಕೆ ಹೊಸ ಅರ್ಥ/ ಕುಟುಂಬದವರ ಮಾತು ಕೇಳಲಾಗುತ್ತಿಲ್ಲ/ ಬೇರೆ ಕಡೆ ಹೋಗಿ ನೆಲೆ ನಿಲ್ಲುತ್ತೇವೆ
ರಾಂಚಿ (ಡಿ. 07) ಪರಸ್ಪರ ಪ್ರೀತಿ ಮಾಡುತ್ತಿದ್ದ ಅಕ್ಕ-ತಂಗಿಯೇ ಮದುವೆಯಾಗಿದ್ದಾರೆ. ಜಾರ್ಖಂಡ್ ರಾಜಧಾನಿ ರಾಂಚಿಯಿಂದ 160 ಕಿಲೋ ಮೀಟರ್ ದೂರದಲ್ಲಿರುವ ಕೊಡರಮಾ ಜಿಲ್ಲೆಯಲ್ಲಿ ಮದುವೆ ನಡೆದಿದೆ.
24 ಮತ್ತು 20 ವಯಸ್ಸಿನ ಯುವತಿಯರು ನವೆಂಬರ್ 8 ಕೊಡರಮಾ ಬಳಿ ಶಿವನ ದೇಗುಲದಲ್ಲಿ ಮದುವೆ ಆಗಿದ್ದಾರೆ. ಝುಮರಿ ತಿಲೈಯಾ ನಿವಾಸಿಗಳಾದ ಜೋಡಿ ಬೇರೆ ಊರಿನಲ್ಲಿ ಬದುಕು ಕಟ್ಟಿಕೊಳ್ಳುತ್ತೇವೆ ಎಂದಿದ್ದಾರೆ. ಓರ್ವ ಯುವತಿ ಪದವಿಧರೆಯಾಗಿದ್ದು, ಮತ್ತೋರ್ವಳು 12ನೇ ತರಗತಿವರೆಗೆ ಓದಿದ್ದಾಳೆ. ಉರಿನವರ ಮತ್ತು ಕುಟುಂಬದಬವರ ಮಾತು ಕೇಳಲಾಗದೆ ಬೇರೆ ಕಡೆ ಹೋಗಿ ನೆಲೆಸುವ ತೀರ್ಮಾನ ಮಾಡಿದ್ದಾರೆ.
ಸಲಿಂಗಿಯಾಗಿದ್ದಮ ಮಗ, ತನ್ನೊಂದಿಗೆ ಸಂಬಂಧ ಬೆಳೆಸು ಎಂದ ಡಿಜಿಪಿ ಮಾವ
ನಾವು ಯಾರಿಗೂ ತೊಂಧರೆ ಕೊಟ್ಟಿಲ್ಲ, ಕೊಡುವುದು ಇಲ್ಲ. ನಮ್ಮ ಬದುಕನ್ನು ಹೇಗೆ ನಿರ್ಮಾಣ ಮಾಡಿಕೊಳ್ಳಬೇಕು ಎಂಬುದು ಗೊತ್ತಿದೆ. ನಮ್ಮ ಬಗ್ಗೆ ಮಾತನಾಡುವವರು ಮೊದಲ ಅವರ ಸ್ಥಿತಿ ಗತಿ ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ.
ಕುಟುಂಬಸ್ಥರಿಗೆ ಹೇಳದೆ ಮೊದಲು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಪರಪ್ಪರ ಒಪ್ಪಿಗೆ ಮೇರೆಗೆ ಈಗ ಮದುವೆ ಆಗಿದ್ದಾರೆ. ನ್ಯೂಯಾರ್ಕ್ ಜೋಡಿ ಅಂಜಲಿ ಚಕ್ರಾ ಮತ್ತು ಸುಂದಾಸ್ ಮಲಿಕ್ ಜೋಡಿಯಿಂದ ಪ್ರೇರಣೆ ಪಡೆದುಕೊಂಡಿದ್ದೇವೆ ಎಂದಿದ್ದಾರೆ. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸಹ ಈ ಬಗ್ಗೆ ತೀರ್ಮಾನ ನೀಡಿದ್ದು ಸಲಿಂಗಿಗಳು ಒಟ್ಟಿಗೆ ಬಾಳಲು ಅಡ್ಡಿ ಇಲ್ಲ ಎಂದಿದೆ.