ಕಾಮಕ್ರಿಯೆಗೆ ಮುನ್ನ ಸಾಕಷ್ಟು ಮುನ್ನಲಿವು ಇರಬೇಕು. ಇಲ್ಲವಾದರೆ ಯೋನಿ ಸಾಕಷ್ಟು ಒದ್ದೆಯಾಗದೆ, ಉರಿ ಉಂಟಾಗಬಹುದು.
ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತು. ನನ್ನ ಗರ್ಲ್‌ಫ್ರೆಂಡ್ ವಯಸ್ಸು ಕೂಡ ಅದೇ. ನಾವಿಬ್ಬರೂ ಒಂದೇ ಕ್ಲಾಸಿನವರು. ಆಗಾಗ ನನ್ನ ಮನೆಯಲ್ಲಿ ಅಥವಾ ನನ್ನ ಗೆಳತಿಯ ಮನೆಯಲ್ಲಿ ನಮ್ಮಿಬ್ಬರ ಪೇರೆಂಟ್ಸ್ ಇಲ್ಲದೆ ಹೋದಾಗ ಕದ್ದು ಮುಚ್ಚಿ ಸೇರುತ್ತೇವೆ. ಇತ್ತೀಚೆಗೆ ಎರಡು ಬಾರಿ ನಾವಿಬ್ಬರೂ ಸೆಕ್ಸ್ ಮಾಡಿದೆವು. ಎರಡು ಸಲವೂ ಸೆಕ್ಸ್ ಹಿತಕರ ಅನುಭವ ನೀಡಲಿಲ್ಲ. ಅದಾದ ನಂತರ ನಮ್ಮಿಬ್ಬರ ಮರ್ಮಾಂಗಗಳಲ್ಲಿ ಉರಿ ಕಾಣಿಸಿಕೊಂಡಿತು. ಅದು ಒಂದೆರಡು ದಿನವಿತ್ತು. ಯಾಕೆ ಹೀಗಾಗುತ್ತಿದೆಯೋ ಗೊತ್ತಾಗುತ್ತಿಲ್ಲ. ಪರಿಹಾರ ತಿಳಿಸಿ. ಹಾಗೇ ಸೆಕ್ಸ್ ವೇಳೆ ಕಾಂಡೋಮ್ ಬಳಸಿರಲಿಲ್ಲ. ಆಕೆ ಪ್ರೆಗ್ನೆಂಟ್ ಆಗುವ ಸಂಭವ ಇದೆಯಾ?
ಉತ್ತರ: ನೀವಿಬ್ಬರೂ ರಿಸ್ಕ್ ಝೋನ್‌ನಲ್ಲಿ ಇದ್ದೀರಿ. ಯಾಕೆಂದರೆ ನಿಮ್ಮಿಬ್ಬರ ವಯಸ್ಸು ಇನ್ನೂ ಇಪ್ಪತ್ತು. ಈ ಪ್ರಾಯದಲ್ಲಿ ಸೆಕ್ಸ್ ಮಾಡಬಾರದು ಎಂದಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಇಷ್ಟು ಹೊತ್ತಿಗೆ ಸಾಕಷ್ಟು ಅನುಭವ ಪಡೆದಿರುತ್ತಾರೆ. ಆದರೆ ಭಾರತದಲ್ಲಿ ಇದು ಸಾಮಾನ್ಯವಲ್ಲ. ನಿಮಗಿಬ್ಬರಿಗೂ ಬಹುಶಃ ನಿಮ್ಮ ಹೆತ್ತವರು ಸಾಕಷ್ಟು ಸ್ವಾತಂತ್ರ್ಯ ಹಾಗೂ ಮುಕ್ತತೆ ನೀಡಿದ್ದಾರೆ ಅನಿಸುತ್ತದೆ. ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ. ಈ ವಯಸ್ಸಿನಲ್ಲಿ ಸೆಕ್ಸ್‌ನಲ್ಲಿ ತೊಡಗಿಕೊಳ್ಳುವುದರಿಂದ ಶಿಕ್ಷಣದ ಮೇಲೆ ಗಮನ ತಪ್ಪಿ ಹಾನಿ ಉಂಟಾಗುವುದೇ ಹೆಚ್ಚು. ಹಾಗೇ ನಿಮಗೆ ಸೇಫ್ ಸೆಕ್ಸ್ ಬಗ್ಗೆ ಅನುಭವವೂ ಇಲ್ಲ ಎಂಬುದು ಗೊತ್ತಾಗುತ್ತಿದೆ.
undefined
ನೀವು ಸೆಕ್ಸ್ ನಡೆಸಿದ ಸನ್ನಿವೇಶ ಹೇಗಿತ್ತು ಎಂಬುದರ ಮೇಲೆ ನಿಮ್ಮ ಅನುಭವ ಹಾಗ್ಯಾಕೆ ಆಯಿತು ಎಂಬುದನ್ನು ಹೇಳಬಹುದು. ಬಹುಶಃ ನೀವಿಬ್ಬರೂ ನಿಮ್ಮ ಪೇರೆಂಟ್ಸ್ ಮನೆಗೆ ಮರಳುವ ಮುನ್ನ ಸೆಕ್ಸ್ ಮಾಡಿ ಮುಗಿಸೋಣ ಎಂಬ ತರಾತುರಿಯಲ್ಲಿ ಇದ್ದಿರಬಹುದು. ಇಂಥ ಗಡಿಬಿಡಿಯ ವೇಳೆ ಸಂಭೋಗ ಮಾಡುವಾಗ, ಮನಸ್ಸು ಹಾಗೂ ದೇಹಗಳೆರಡೂ ಮಿಲನಕ್ಕೆ ಸಿದ್ಧವಾಗಿರುವುದಿಲ್ಲ. ಸಾಕಷ್ಟು ಮುನ್ನಲಿವು ಅಥವಾ ಫೋರ್ ಪ್ಲೇ ಕೂಡ ಮಾಡಿರುವುದಿಲ್ಲ. ಇದರಿಂದಾಗಿ ಹೆಣ್ಣಿನಲ್ಲಿ ಯೋನಿ ಸಾಕಷ್ಟು ಒದ್ದೆಯಾಗಿರುವುದಿಲ್ಲ ಹಾಗೂ ಗಂಡಿನ ಶಿಶ್ನದ ತುದಿ ಒದ್ದೆಯಾಗಿ, ಯೋನಿಪ್ರವೇಶಕ್ಕೆ ಬೇಕಾದಷ್ಟು ನಿಮಿರಿರುವುದಿಲ್ಲ. ಇಂಥ ಸನ್ನಿವೇಶದಲ್ಲಿ ಬಲವಂತದ ಸೆಕ್ಸ್ ಮಾಡಿದಾಗ, ಮರ್ಮಾಂಗಗಳಲ್ಲಿ ಉರಿ ಸೃಷ್ಟಿಯಾಗುತ್ತದೆ. ನಿಮ್ಮಿಬ್ಬರ ಖಾಸಗಿ ಭಾಗಗಳಿಗೂ ಉಜ್ಜಿದ, ತರಚಿದ, ಗಾಯವೂ ಆಗಬಹುದು. ಈ ಗಾಯದ ಉರಿ ಒಂದೆರಡು ದಿನಗಳ ಕಾಲ ಇರಬಹುದು.
ಸೋ, ಏನು ಮಾಡಬೇಕೆಂದರೆ, ಸೆಕ್ಸ್ ವೇಳೆ ಮನಸ್ಸು ಪ್ರಶಾಂತವಾಗಿರಬೇಕು. ಯಾವುದೇ ಗಡಿಬಿಡಿ ಇರಕೂಡದು. ನಿಮ್ಮದೇ ಆದ ಏಕಾಂತವನ್ನು ನಿರ್ಮಿಸಿಕೊಳ್ಳಿ. ವಾತಾವರಣ ಪ್ರಶಾಂತವಾಗಿರಲಿ. ಯಾವುದೇ ಕಿರಿಕಿರಿ ಅಡಚಣೆ ಇಲ್ಲದಿರಲಿ. ಫೋರ್ ಪ್ಲೇಗೆ ಸಾಕಷ್ಟು ಸಮಯವನ್ನು ವಿನಿಯೋಗಿಸಿ. ಯೋನಿ ಸಾಕಷ್ಟು ತೇವಗೊಂಡ ಬಳಿಕವೇ ಸೆಕ್ಸ್ ಕ್ರಿಯೆ ನಡೆಸಿ. ಆಗ ಅದು ಸುಮಧುರ ಅನುಭವ ಆದೀತು.
#Feelfree: ನಾನ್ ಮದ್ವೆ ಆಗೋ ಹುಡುಗೀಗೆ ಬೇರೆಯವ್ರ ಜೊತೆ ದೈಹಿಕ ಸಂಬಂಧ ಇರಬಹುದಾ? ...
ಇನ್ನು ಪ್ರೆಗ್ನೆನ್ಸಿಯ ಬಗ್ಗೆ. ನೀವಿಬ್ಬರೂ ಯಾವ ಅವಧಿಯಲ್ಲಿ ಮಿಲನ ಕ್ರಿಯೆ ನಡೆಸಿದ್ದೀರಿ ಎಂದು ನೀವು ಹೇಳಿಲ್ಲ. ನಿಮ್ಮ ಗೆಳತಿಗೆ ಪೀರಿಯಡ್ಸ್ ರೆಗ್ಯುಲರ್ ಆಗಿ ನಡೆಯುತ್ತಿದೆಯೇ? ನೀವಿಬ್ಬರೂ ಸೇರಿದಾಗ ಆಕೆಗೆ ಪೀರಿಯಡ್ಸ್ ಆಗಿ ಎಷ್ಟು ದಿನಗಳಾಗಿದ್ದವು? ಸರಿಯಾಗಿ ಇಪ್ಪತ್ತೆಂಟು ದಿನಗಳ ಋತುಚಕ್ರ ನಿಮ್ಮ ಗೆಳತಿಯದಾಗಿದ್ದರೆ, ಪೀರಿಯಡ್ಸ್ ಆದ ಒಂಬತ್ತನೆಯ ದಿನದಿಂದ ಇಪ್ಪತ್ತನೆಯ ದಿನದವರೆಗೂ ಮುನ್ನೆಚ್ಚರಿಕೆ ಇಲ್ಲದೆ ಸೆಕ್ಸ್ ನಡೆಸುವುದು ಸುರಕ್ಷಿತವಲ್ಲ. ಈ ಅವಧಿಯಲ್ಲಿ ಕಾಂಡೋಮ್ ಧರಿಸಿಯೇ ಕೂಡುವುದು ವಿಹಿತ. ಇಲ್ಲವಾದರೆ ನಿಮ್ಮ ಪದವಿ ಪರೀಕ್ಷೆಯ ಜೊತೆಗೆ ಇನ್ನೊಂದು ಅಗ್ನಿಪರೀಕ್ಷೆಯೂ ನಿಮಗೆ ಎದುರಾದೀತು, ಎಚ್ಚರ!
#Feelfree: ಮಗಳು ನನ್ನ ಹತ್ರಾನೇ ಬರೋಲ್ಲ, ಏನು ಮಾಡಲಿ? ...
ಪ್ರಶ್ನೆ: ನನ್ನ ವಯಸ್ಸು ಹತ್ತೊಂಬತ್ತು. ಪದವಿಯಲ್ಲಿದ್ದೇನೆ. ಇತ್ತೀಚೆಗೆ ನನಗೊಬ್ಬಳು ಗೆಳತಿಯಾಗಿದ್ದಾಳೆ. ನಾವಿಬ್ಬರೂ ಸೆಕ್ಸ್ ಬಗ್ಗೆ ಇದುವರೆಗೂ ಏನೂ ಮಾತನಾಡಿಲ್ಲ. ಆದರೆ ಎರಡು ಬಾರಿ ಮನೆಗೆ ಕರೆದಳು. ನಾನು ಅನ್ಯ ಕಾರಣಗಳಿಂದಾಗಿ ಹೋಗಲಿಲ್ಲ. ಆ ಎರಡು ಬಾರಿಯೂ ಆಕೆಯ ಹೆತ್ತವರು ಮನೆಯಲ್ಲಿ ಇರಲಿಲ್ಲ ಎಂಬುದು ನನಗೆ ಗೊತ್ತಿದೆ. ಆಕೆಗೆ ರತಿಸುಖ ಪಡೆಯುವ ಉದ್ದೇಶ ಇದ್ದಿರಬಹುದಾ?
#Feelfree: ಮದುವೆಯಾಗಿ ವರ್ಷವಾದರೂ ಆಕೆ ಬೆತ್ತಲಾಗಿಲ್ಲ ...
ಉತ್ತರ: ಈ ಪ್ರಶ್ನೆಗೆ ನಾನು ಉತ್ತರಿಸುವುದು ಕಷ್ಟ. ಆಕೆಯ ಇಂಗಿತ ಏನು ಎಂಬುದನ್ನು ನಾನು ಹೇಗೆ ಹೇಳಲಿ? ಸುಮ್ಮನೇ ಪ್ರೀತಿಯಿಂದಲೂ ಕರೆದಿರಬಹುದು; ಇಬ್ಬರೇ ಏಕಾಂತವಾದ ಕ್ಷಣಗಳನ್ನುಭಾವನಾತ್ಮಕವಾಗಿ ಕಳೆಯೋಣ ಎಂಬ ಆಶಯವೂ ಇದ್ದೀತು. ಹುಡುಗಿ ಕರೆದರೆ ಸೆಕ್ಸ್ ಒಂದೇ ಉದ್ದೇಶವಾಗಿರೊಲ್ಲ. ಅದನ್ನೂ ಮೀರಿದ ಭದ್ರತೆಯ, ಬೆಚ್ಚಗಿನ ಭಾವನಾತ್ಮಕ ಕಾರಣಗಳೂ ಇರುತ್ತವೆ. ನೀವು ಟ್ರೇನೇ ಇಲ್ಲದಾಗಲೂ ಟಿಕೆಟ್ ತಗೊಂಡೋರ ಥರ ಮಾಡಬಾರದು!