ಪ್ರೇಮಿಗಳಲ್ಲಿ ಒಬ್ಬರು ಮೋಸ ಮಾಡಿದ್ರೂ ಪ್ರೀತಿ ಸಂಬಂಧ ಮುರಿದು ಬೀಳುತ್ತದೆ. ಮೋಸ ಮಾಡದೆ ಪ್ರಾಮಾಣಿಕವಾಗಿದ್ದವರಿಗೆ ಈ ನೋವು ಸದಾ ಕಾಡುತ್ತದೆ. ಅವರು ಸೇಡು ತೀರಿಸಿಕೊಳ್ಳಲು ನಾನಾ ಪ್ರಯತ್ನ ಮಾಡ್ತಾರೆ.
ಪ್ರೇಮ ಸಂಬಂಧ, ವೈವಾಹಿಕ ಸಂಬಂಧದಲ್ಲಿ ಗಲಾಟೆಯಾಗೋದು ಮಾಮೂಲಿ. ಇಬ್ಬರು ಬೇರೆಯಾಗುವಷ್ಟು ಗಲಾಟೆ ತೀವ್ರತೆ ಪಡೆದಾಗ ಜೋಡಿ ತನ್ನ ದಾರಿ ನೋಡಿಕೊಳ್ತಾರೆ. ಮೋಸ ಮಾಡಿದ ಸಂಗಾತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಕೆಲವರು ಮುಂದಾದ್ರೆ ಮತ್ತೆ ಕೆಲವರು ಅತ್ತು ಸಮಾಧಾನ ಮಾಡಿಕೊಳ್ತಾರೆ. ಮತ್ತೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಂಗಾತಿ ವಿರುದ್ಧ ಕೆಟ್ಟ ಕಮೆಂಟ್ ಗಳನ್ನು ಹಾಕಿ, ಸಾರ್ವಜನಿಕರ ಮುಂದೆ ಅವರ ಮರ್ಯಾದೆ ತೆಗೆಯುವ ಪ್ರಯತ್ನ ಮಾಡ್ತಾರೆ. ಇಲ್ಲೊಬ್ಬ ಭಗ್ನ ಪ್ರೇಮಿ ತನ್ನದೇ ರೀತಿಯಲ್ಲಿ ಮಾಜಿ ಗರ್ಲ್ ಫ್ರೆಂಡ್ ಮೇಲೆ ಸೇಡು ತೀರಿಸಿಕೊಂಡಿದ್ದಾನೆ. ಆತನಿಂದಾಗಿ ಗರ್ಲ್ ಫ್ರೆಂಡ್ ಮನೆ ಮುಂದೆ ಜನವೋ ಜನ. ಒಬ್ಬರಾದ್ಮೇಲೆ ಒಬ್ಬರಂತೆ ಗರ್ಲ್ ಫ್ರೆಂಡ್ ಮನೆಗೆ ಬಂದು ಬೆಲ್ ಮಾಡಿದ್ದಲ್ಲದೆ ಬಿಲ್ ಪಾವತಿಸುವಂತೆ ಕೇಳಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಡೆಲಿವರಿ ಬಾಯ್ಸ್ ಹುಡುಗಿ ಮನೆ ಮುಂದಿದ್ದರು.
ಅಷ್ಟಕ್ಕೂ ಸೇಡು ತೀರಿಸಿಕೊಳ್ಳಲು ಬಾಯ್ ಫ್ರೆಂಡ್ (Boy Friend) ಮಾಡಿದ್ದು ಏನು ಅಂದ್ರ? ಆನ್ಲೈನ್ (Online) ಫುಡ್ ಡಿಲಿವರಿ ಅಪ್ಲಿಕೇಷನ್ ಬಳಸಿಕೊಂಡಿದ್ದಾನೆ. ಘಟನೆ ಟರ್ಕಿ (Turkey) ಯ ಇಜ್ಮಿರ್ ನಲ್ಲಿ ನಡೆದಿದೆ.
ಮಗು ಬೇಕು, ಮದ್ವೆ-ಹೆರಿಗೆ ಸಾಕಪ್ಪಾ ಸಾಕು! ಅಂಡಾಣು ಫ್ರೀಜ್ಗೆ ಮುಂದಾದ ಮತ್ತೋರ್ವ ಬಾಲಿವುಡ್ ನಟಿ
ಸರಿಸುಮಾರು ರಾತ್ರಿ 9 ಗಂಟೆ ವೇಳೆಗೆ ಯುವತಿ ಮನೆ ಮುಂದೆ 50ಕ್ಕಿಂತ ಹೆಚ್ಚು ಫುಡ್ (Food) ಡಿಲಿವರಿ ಬಾಯ್ಸ್ ಸೇರಿದ್ದಾರೆ. ಹುಡುಗ ನಗರದಲ್ಲಿರುವ ಎಲ್ಲ ಫುಡ್ ಡಿಲೆವರಿ ಅಪ್ಲಿಕೇಷನ್ ಬಳಸಿಕೊಂಡು ಆಹಾರ ಬುಕ್ ಮಾಡಿದ್ದಾನೆ. ಬೇರೆ ಬೇರೆ ಹೆಸರಿನಿಂದ ಆಹಾರ ಆರ್ಡರ್ ಮಾಡಿದ್ದು, ಡೆಲಿವರಿಗೆ ಒಂದೇ Address ನೀಡಿದ್ದಾನೆ.
ವ್ಯಕಿ ತನ್ನ ಹೆಸರನ್ನು ಮಾತ್ರವಲ್ಲ ಫೋನ್ ನಂಬರ್ ಕೂಡ ಬದಲಿಸಿದ್ದ. ಆತನ ಫೋನ್ ನಂಬರ್ 0555 555 55 55 ಆಗಿತ್ತು. ಈ ನಂಬರ್ ನೋಡಿದ ಕೆಲ ಹೊಟೇಲ್, ರೆಸ್ಟೋರೆಂಟ್ ಮಾಲೀಕರಿಗೆ ಅನುಮಾನ ಬಂದಿದೆ. ಅವರು ಈ ನಂಬರ್ ಗೆ ಕರೆ ಮಾಡಿ ಫೋನ್ ಮಾಡುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಫೋನ್ ಹೋಗ್ತಿರಲಿಲ್ಲ. ಮತ್ತೆ ಕೆಲ ಹೊಟೇಲ್ ಮಾಲೀಕರು ಫೋನ್ ನಂಬರ್ ನೋಡಿಯೂ ಅದ್ರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಹಾಗೆಯೇ ಫುಡ್ ಪ್ಯಾಕ್ ಮಾಡಿಕೊಂಡಿದ್ದಾರೆ.
ಡಿಲಿವರಿ ಸ್ಥಳಕ್ಕೆ ಬಂದ್ಮೇಲೆ ತಾವು ಮೋಸ ಹೋಗಿದ್ದೇವೆ ಎಂಬುದು ತಿಳಿದಿದೆ. ಬೇರೆ ರೆಸ್ಟೋರೆಂಟ್ ಗೆ ಕರೆ ಮಾಡಿ ಆರ್ಡರ್ ಸ್ವೀಕರಿಸದಂತೆ ಸೂಚನೆ ನೀಡಿದ್ದಾರೆ. ಆದ್ರೆ ಅವರ ಕರೆ ಬರುವ ಮೊದಲೇ ಆರ್ಡರ್ ಡಿಲಿವರಿ ಆಗಿತ್ತು ಎಂದು ಮಾಲೀಕರು ಹೇಳಿದ್ದಾರೆ. ಬೇರೆ ಬೇರೆ ರೆಸ್ಟೋರೆಂಟ್ ಗಳಿಂದ ಫುಡ್ ಆರ್ಡರ್ (Food Order) ಮಾಡಿದ್ದ ವ್ಯಕ್ತಿ ಕ್ಯಾಶ್ ಆನ್ ಡಿಲಿವರಿ ಆಯ್ಕೆ ಮಾಡಿದ್ದಾನೆ.
ತನ್ನ ಮಾಜಿ ಗರ್ಲ್ ಫ್ರೆಂಡ್ ಗೆ ಈ ಎಲ್ಲ ರೆಸ್ಟೋರೆಂಟ್ ಬಿಲ್ ಪಾವತಿ ಸಂಕಷ್ಟ ಎದುರಾಗ್ಲಿ ಇಲ್ಲವೆ ಫುಡ್ ಡಿಲೆವರಿ ಬಾಯ್ಸ್ ಜೊತೆ ಕಿತ್ತಾಟವಾಗ್ಲಿ ಎನ್ನುವ ಕಾರಣಕ್ಕೆ ಆತ ಹೀಗೆ ಮಾಡಿದ್ದಾನೆ ಎಂದು ಅಂದಾಜಿಸಲಾಗಿದೆ.
ವಾತ್ಸಾಯನ ಕಾಮಸೂತ್ರ: ಪುರುಷನ ಪ್ರೇಮವನ್ನು ಸ್ತ್ರೀ ತಿರಸ್ಕರಿಸುವುದು ಯಾಕೆ?
ಹುಡುಗಿ ಯಾವುದೇ ಆರ್ಡರ್ ಸ್ವೀಕರಿಸಿಲ್ಲ. ಇದ್ರಿಂದ ರೆಸ್ಟೋರೆಂಟ್ ಗಳಿಗೆ ನಷ್ಟವಾಗಿದೆ. 50 ಆರ್ಡರ್ ಗಳನ್ನು ಡಿಲಿವರಿ ಬಾಯ್ಸ್ ಹಿಂದೆ ತಂದಿದ್ದಾರೆ. ಅದನ್ನು ಹಾಗೆ ಎಸೆಯಲಾಗಿದೆ ಎಂದು ಕೆಲ ಮಾಲೀಕರು ಹೇಳಿದ್ದಾರೆ. ಇಷ್ಟಾದ್ರೂ ರೆಸ್ಟೋರೆಂಟ್ ಮಾಲೀಕರು ಯಾವುದೇ ದೂರು ನೀಡಿಲ್ಲ. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ್ಮೇಲೆ ತಾವು ಮೋಸ ಹೋಗಿದ್ದೇವೆ ಎಂಬುದನ್ನು ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ರೀತಿ ಆಟವಾಡಿದ ವ್ಯಕ್ತಿ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.