ಅವರಿಗೆ ವಯಸ್ಸಾಗಿದೆ ನಾನೇನು ಮಾಡಲಿ? ಒಂದೇ ಮಾತಿಗೆ ವರನನ್ನೇ ತಿರಸ್ಕರಿಸಿದ ಯುವತಿ

Published : Aug 22, 2026, 03:36 PM IST
Woman Rejects Marriage Proposal

ಸಾರಾಂಶ

ಮದುವೆ ಮಾತುಕತೆ ನಡೆದಿತ್ತು. ಹುಡುಗ ಹಾಗೂ ಹುಡುಗಿ ಕಾಫಿ ಶಾಪ್‌ನಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ. ಹುಡುಗನ ಒಂದು ಮಾತಿನಿಂದ ಆಕೆ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆ. ಈ ಮದುವೆ ಬೇಡ ಎಂದು ನೇರವಾಗಿ ಆತನಿಗೆ ಹೇಳಿ ಹೊರಟಿದ್ದಾಳೆ.

ಮದುವೆ ಪ್ರಪೋಸಲ್ ಬಂದ ಬಳಿಕ ಜಾತಕ, ಕುಟುಂಬ, ಸ್ಯಾಲರಿ, ಆಸ್ತಿ ಎಲ್ಲಾ ವಿಭಾಗದಲ್ಲಿ ಒಕೆಯಾದರೂ ಕೊನೆಗೆ ಹುಡುಗ ಹುಡುಗಿ ಮಾತುಕತೆಯಲ್ಲಿ ಅದೆಷ್ಟೋ ಪ್ರಪೋಸಲ್ ಅರ್ಧಕ್ಕೆ ಮುರಿದು ಬಿದ್ದ ಘಟನೆಗಳಿವೆ. ಹೀಗೆ ಎಲ್ಲಾ ರೀತಿಯಿಂದಲೂ ಒಕೆ ಎಂದ ಬಳಿಕ ಹುಡುಗ ಹುಡುಗಿ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿ ಮಾತಾಡಲು ನಿರ್ಧರಿಸಿದ್ದಾರೆ. ಇದರಂತೆ ಭೇಟಿಯಾಗಿ ಮಾತುಕತೆ ಆರಂಭಗೊಂಡಿದೆ. ಈ ಮಾತುಕತೆಯಲ್ಲಿ ಹುಡುಗ ಹೇಳಿದ ಒಂದು ಮಾತಿನಿಂದ ವರನನ್ನೇ ತಿರಸ್ಕರಿಸಿದ ಘಟನೆ ನಡೆದಿದೆ. ಇದೀಗ ಯುವತಿ ನಿರ್ಧಾರಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.

ಒಕೆ ಒಕೆ ಇದ್ದ ಯವತಿಯ ದಿಢೀರ್ ನಿರ್ಧಾರ ಬದಲು

ಸೋಶಿಯಲ್ ಮೀಡಿಯಾದಲ್ಲಿ ಯುವತಿ ತನ್ನ ಮದುವೆ ಪ್ರಪೋಸಲ್ ಹಾಗೂ ಮುರಿದು ಬಿದ್ದ ಘಟನೆ ಕುರಿತು ಹೇಳಿಕೊಂಡಿದ್ದಾಳೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮಾತುಕತೆ ವೇಳೆ ಹುಡುಗ, ನಮ್ಮ ಮದುವೆ ಬಳಿಕ ನನ್ನ ತಾಯಿ ನಮ್ಮೊಂದಿಗೆ ಇರಲಿದ್ದಾರೆ ಎಂದು ಹೇಳಿದ್ದಾರೆ. ಈ ನಿರ್ಧಾರದಲ್ಲಿ ಯುವತಿಗೆ ಯಾವುದೇ ಅಕ್ಷೇಪ ಇರಲಿಲ್ಲ. ನಮ್ಮ ತಾಯಿಗೆ ವಯಸ್ಸಾಗಿದೆ. ನಾನು ಇನ್ನೇನು ಮಾಡಬೇಕು ಎಂದು ಯುವತಿಯನ್ನೇ ಪ್ರಶ್ನಿಸಿದ್ದಾನೆ. ಇಲ್ಲೀವರೆಗೂ ಎಲ್ಲವೂ ಶಾಂತವಾಗಿ, ಒಕೆ ಒಕೆ ಅನ್ನೋ ಮಟ್ಟದಲ್ಲೇ ಇತ್ತು. ಆದರೆ ಹುಡುಗನ ಒಂದು ವಾಕ್ಯ ಯುವತಿಯ ನಿರ್ಧಾರವನ್ನೇ ಬದಲಿಸಿತು.

ತನ್ನ ಪತಿಯಾಗುವ ಹುಡುಗನ ತಾಯಿಯನ್ನು ನೋಡಿಕೊಳ್ಳಲು ಯುವತಿಗೆ ಅಕ್ಷೇಪ ಇರಲಿಲ್ಲ. ಹುಡುಗನ ನಿರ್ಧಾರದಲ್ಲಿ ತಾನು ಭಾಗಿಯಾಗಿಲ್ಲ. ಅದರ ಹೊಣೆಗಾರಿಕೆ ಕುರಿತು ಯುವತಿಗೆ ಆಕ್ಷೇಪವಿತ್ತು. ತಾಯಿನ್ನು ನೋಡಿಕೊಳ್ಳುವುದು ನನ್ನೊಬ್ಬಳ ಹೊಣೆಗಾರಿಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಇಲ್ಲಿಂದ ಮಾತುಕತೆ ವರಸೆ ಬದಲಾಯಿತು, ನೀನು ಸ್ವಾರ್ಥಿಎಂದು ಯುವತಿಗೆ ಆಕ್ರೋಶದಿಂದಲೇ ಹೇಳಿದ್ದಾನೆ.

ಮದುವೆ ಹೆಸರಲ್ಲಿ ನನ್ನ ಮೇಲೆ ಜವಾಬ್ದಾರಿ ಹೇರಬೇಡಿ

ಹುಡುಗನ ತಾಯಿಯನ್ನು ನೋಡಿಕೊಳ್ಳಬೇಕು ಅನ್ನೋ ನಿರ್ಧಾರ ನಾನು ತೆಗೆದುಕೊಂಡಿಲ್ಲ. ಆತನ ನಿರ್ಧಾರದ ಹೊಣೆಗಾರಿಕೆ ನನ್ನ ಮೇಲೆ ಯಾಕೆ ಎಂಬುದು ಯುವತಿ ಪ್ರಶ್ನೆ. ಮದುವೆ ಎಂದರೆ ನಾನು ಒಪ್ಪಿಕೊಳ್ಳದ, ನಮ್ಮ ಅನುಮತಿ ಇಲ್ಲದೆ ತೆಗೆದುಕೊಂಡು ನಿರ್ಧಾರಗಳು, ಜವಾಬ್ದಾರಿಗಳನ್ನು ಸ್ವೀಕರಿಸುವುದಲ್ಲ ಎಂದು ಯುವತಿ ಹೇಳಿದ್ದಾಳೆ. ನಾನು ಸ್ವಾರ್ಥಿಯಾಗಿರಬಹುದು. ಆದರೆ ನಾನು ಒಪ್ಪದ ಜವಾಬ್ದಾರಿಗಳನ್ನು ಮದುವೆ ಹೆಸರಲ್ಲಿ ನನ್ನ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಯುವತಿ ಹೇಳಿದ್ದಾಳೆ. ಒಬ್ಬ ಒಳ್ಳೆಯ ಮಗ, ಒಳ್ಳೆಯ ಪತಿಯಾಗುವುದಿಲ್ಲ ಎಂದು ಯುವತಿ ಹೇಳಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ಇದೀಗ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಒಂದೆಡೆ ಆರಂಭದಲ್ಲೇ ಯುವತಿ ಕ್ಲಾರಿಟಿ ನೀಡಿರುವ ಕಾರಣ ಮುಂಬರುವ ಅತೀ ದೊಡ್ಡ ಅನಾಹುತಗಳನ್ನು ತಪ್ಪಿಸಿದ್ದಾಳೆ. ಹೀಗಾಗಿ ನೇರವಾಗಿ ಮಾತನಾಡಿ ಸಮಸ್ಯೆಗೂ ಮೊದಲೇ ದೂರವಾಗಿರುವುದು ಉತ್ತಮ ಎಂದಿದ್ದಾರೆ. ವೈಯುಕ್ತಿಕ ಮಿತಿಗಳ ಉದಾಹರಣೆ ಮೂಲಕ ಹಲವರು ಯುವತಿಯನ್ನು ಹೊಗಳಿದ್ದಾರೆ. ಇದೇ ವೇಳೆ ಮದುವೆ ಬಳಿಕ ಯುವತಿ ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ. ಮುಂಬರು ಅಪಾಯದಿಂದ ಮೊದಲೇ ವ್ಯಕ್ತಿ ಪರಾಗಿದ್ದಾನೆ ಎಂದು ಯುವತಿ ನಿರ್ಧಾರವನ್ನು ಹಲವರು ಟೀಕಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bigg Bossನಲ್ಲಿ ಶುರುವಾಯ್ತು ಲವ್​ ಪರ್ವ? ಅಲ್ಲೂ ತಾಂಡವ್​, ಇಲ್ಲೂ ತಾಂಡವ್​? ಜೋಡಿ ಮಾಡೇಬಿಟ್ರು ನೆಟ್ಟಿಗರು
Parenting Tips: ನಿಮ್ಮ ಮಗುವಿಗೂ ಈ ಅಭ್ಯಾಸ ಇದೆಯಾ? ಹಾಗಿದ್ರೆ ಖಂಡಿತ ನಿರ್ಲಕ್ಷ್ಯ ಮಾಡ್ಬೇಡಿ!