
ಬಾಲಿವುಡ್ ಬ್ಯೂಟಿ, ಫಿಟ್‌ನೆಸ್ ರಾಣಿ ಎಂದೇ ಫೇಮಸ್ ಆಗಿರೋ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ, ನೀಲಿ ಚಿತ್ರದ ಪ್ರಕರಣದಲ್ಲಿ ಜೈಲು ವಾಸಿಯಾಗಿದ್ದು ಎಲ್ಲರಿಗೂ ತಿಳಿದದ್ದೇ. 2021ರ ಸಮಯದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಲೈಫ್‌ನಲ್ಲಿ ಬಿರುಗಾಳಿ ಎದ್ದಿತ್ತು. ಅಶ್ಲೀಲ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು, ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 63 ದಿನ ಬಂಧಿಸಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಆತ್ಮಹತ್ಯೆಯ ಯೋಚನೆ ಬಂದಿದ್ದ ಬಗ್ಗೆ ಈಗ ರಾಜ್ ಕುಂದ್ರಾ ಅವರು ಓಪನ್ ಆಗಿ ಮಾತನಾಡಿದ್ದಾರೆ. ಆ ದಿನಗಳು ತನ್ನ ಜೀವನದ ಅತ್ಯಂತ ಕಷ್ಟಕರ ಹಂತ ಎಂದು ವಿವರಿಸಿದ್ದಾರೆ.
ಇದಕ್ಕೆ ಕಾರಣ ಕೊಟ್ಟಿರುವ ಅವರು, ಜೈಲಿನಲ್ಲಿದ್ದಾಗ ಪತ್ನಿ ಶಿಲ್ಪಾ ಶೆಟ್ಟಿ ವಿಚ್ಛೇದನ ಕೊಡಲಿದ್ದಾಳೆ ಎನ್ನುವ ಸುದ್ದಿ ಬಂತು. ಇದನ್ನು ಕೇಳಿ ನನ್ನ ನೆಲವೇ ಕುಸಿದು ಹೋಯಿತು. ಸುದ್ದಿ ತಿಳಿದ ನಂತರ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದಿದ್ದಾರೆ ಉದ್ಯಮಿ.
ಎಬಿಪಿ ನ್ಯೂಸ್ ಜೊತೆಗಿನ ಸಂವಾದದಲ್ಲಿ ರಾಜ್ ಅವರು ಜೈಲಿನಲ್ಲಿದ್ದಾಗ ಪತ್ನಿ ಶಿಲ್ಪಾ ಶೆಟ್ಟಿ ನನ್ನನ್ನು ತೊರೆದಿದ್ದಾಳೆ ಮತ್ತು ಡಿವೋರ್ಸ್ ಪಡೆದುಕೊಳ್ಳಲಿದ್ದಾಳೆ ಎನ್ನುವ ಸುದ್ದಿ ಬಂತು. ನಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಏನಾಗುತ್ತಿದೆ ಎಂದು ನನಗೆ ಗೊತ್ತಾಗಲಿಲ್ಲ. ಆ ರಾತ್ರಿ ನನಗೆ ನಿದ್ರೆ ಬರಲಿಲ್ಲ, ಈ ಸುದ್ದಿ ಕೇಳಿ ಶಾಕ್ ಆಯ್ತು. ಆದ್ದರಿಂದ ನನ್ನ ಜೀವನವನ್ನು ಕೊನೆಗೊಳಿಸಲು ಬಯಸಿದೆ. ಬದುಕುವುದರಲ್ಲಿ ಅರ್ಥವಿಲ್ಲ ಎಂದು ನಾನು ಭಾವಿಸಿದೆ. ನನ್ನ ಹೆಂಡತಿ ಮತ್ತು ನನ್ನ ಕುಟುಂಬ ನನಗೆ ಅತ್ಯಂತ ಮುಖ್ಯವಾಗಿದೆ, ನಾನು ನನ್ನ ಜೀವನವನ್ನು ತ್ಯಜಿಸಲು ಬಯಸುತ್ತೇನೆ. ನಾನು ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದೆ ಎಂದಿದ್ದಾರೆ ರಾಜ್ ಕುಂದ್ರಾ.
ಮಾಧ್ಯಮಗಳಲ್ಲಿ ಡಿವೋರ್ಸ್ ಸುದ್ದಿ ಕೇಳುತ್ತಲೇ, ಶಿಲ್ಪಾ ಶೆಟ್ಟಿ ಅವರೂ ಆಘಾತಕ್ಕೆ ಒಳಗಾಗಿದ್ದರು. ನಾನು ಈ ಸುದ್ದಿಯನ್ನು ನಿಜ ಎಂದು ನಂಬಿ ಆಕೆ ಜೊತೆ ಫೋನ್‌ನಲ್ಲಿ ಮಾತನಾಡಿದೆ. ಇದು ನಿಜವಾಗಿ ಇದ್ದರೆ ಸಾಯುವ ನಿರ್ಧಾರ ಮಾಡಿದ್ದೆ. ಕೊನೆಗೆ ಅವಳಿಗೆ ಕಾಲ್ ಮಾಡಿದಾಗ, ಆಕೆ, "ಇದು ನಾನ್ಸೆನ್ಸ್ ನ್ಯೂಸ್. ನಾನು ನಿಮ್ಮ ಜೊತೆ ಇದ್ದೇನೆ. ನಾನು ನಿನ್ನನ್ನು ನಂಬುತ್ತೇನೆ. ಅದರ ಬಗ್ಗೆ ಚಿಂತಿಸಬೇಡ" ಎಂದು ಹೇಳಿದಳು. ಆಗ ನಾನು ನಿರಾಳನಾದೆ ಎಂದಿದ್ದಾರೆ ರಾಜ್ ಕುಂದ್ರಾ.
ಶಿಲ್ಪಾಳ ಈ ಮಾತು ನನಗೆ ಧೈರ್ಯ ತುಂಬಿತು. ಯಾರು ಏನೇ ಮಾಡಿದರೂ ನನ್ನ ಪತ್ನಿ ನನ್ನ ಜೊತೆ ಇದ್ದಾಳೆ ಎನ್ನುವ ನಂಬಿಕೆ ಬಂತು. ಹೀಗೆ ಆದ್ದರಿಂದ ನಾನು ಇಡೀ ಜಗತ್ತನ್ನು ಎದುರಿಸಬಲ್ಲೆ. ನಾನು ಹೆದರುವುದಿಲ್ಲ ಎಂದುಕೊಂಡು ಸಾವಿನ ಮನಸ್ಸು ಬದಲಾಯಿಸಿದೆ ಎಂದಿದ್ದಾರೆ.
ಆರ್ಥರ್ ರೋಡ್ ಜೈಲಿನಲ್ಲಿ ಕಳೆದ ಸಮಯವನ್ನು ಸ್ಮರಿಸಿದ ರಾಜ್, ಅಲ್ಲಿನ ಪರಿಸ್ಥಿತಿಗಳು ತುಂಬಾ ಕಷ್ಟಕರವಾಗಿತ್ತು. ಜೈಲಿನ ತಿಂಡಿ ತಿನ್ನುವಂತರಲಿಲ್ಲ. 63 ದಿನಗಳಲ್ಲಿ ಹೆಚ್ಚಾಗಿ ಪಾರ್ಲೆ-ಜಿ ಬಿಸ್ಕತ್ತುಗಳು ಮತ್ತು ನೀರಿನಿಂದ ಬದುಕುಳಿದೆ. ಜೈಲಿನಲ್ಲಿ ತೂಕ ಸುಮಾರು 17-18 ಕೆಜಿ ಕಡಿಮೆಯಾಯಿತು ಎಂದಿದ್ದಾರೆ. ಇವರ ಈ ಜೈಲಿನ ಚಿತ್ರಣ ಇರುವ, UT69 ಚಿತ್ರ 2023ರಲ್ಲಿ ಬಿಡುಗಡೆಯಾಗಿತ್ತು. ಇದು ರಾಜ್ ಕುಂದ್ರಾ ಅವರ ಜೈಲಿಗೆ ಹೋಗಿ ಜೈಲಿಗೆ ಹೋದ ಅನುಭವವನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಜ್ ಕುಂದ್ರಾ ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009 ರಲ್ಲಿ ವಿವಾಹವಾದರು. ಈ ವಿವಾಹದಿಂದ ದಂಪತಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ರಾಜ್ ಎರಡು ಮದುವೆಯಾಗಿದ್ದರು. ಅವರ ಮೊದಲ ಮದುವೆ ಕವಿತಾ ಕುಂದ್ರಾ ಅವರೊಂದಿಗೆ. ಕೆಲವು ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.