ಒಬ್ಳು ಪತ್ನಿ, 4 ಗರ್ಲ್‌ ಫ್ರೆಂಡ್ಸ್..‌ ಫ್ಲರ್ಟ್‌ ಮಾಡ್ತಿದ್ದ ಬ್ಯುಸಿನೆಸ್‌ ಮ್ಯಾನ್ ಅಸಲಿಗೆ ಯಾರು ಗೊತ್ತಾ?

By Roopa Hegde  |  First Published Nov 6, 2024, 5:21 PM IST

ಚೀನಾದಲ್ಲಿ ವಿವಾಹಿತ ವ್ಯಕ್ತಿಯೊಬ್ಬ ನಾಲ್ವರು ಹುಡುಗಿಯರ ಜೊತೆ ಪ್ರೀತಿಯಾವಾಡಿದ್ದಾನೆ. ಆತನ ಮೋಸಕ್ಕೆ ಬಲಿಯಾದ ಹುಡುಗಿಯರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ವಂಚಿಸಿದ ವ್ಯಕ್ತಿ ಈಗ ಜೈಲು ಸೇರಿದ್ದಾನೆ. 
 


ಒಂದು ಹುಡುಗಿ ಸಂಭಾಳಿಸೋದೇ ಕಷ್ಟ ಎನ್ನುತ್ತಾರೆ ಹುಡುಗರು. ಅಪ್ಪಿತಪ್ಪಿ ಎರಡು ಹುಡುಗಿ ಮಧ್ಯೆ ಸಿಕ್ಕಿಬಿದ್ರೆ ಅವರ ಕಥೆ ಮುಗಿದಂತೆ. ಆದ್ರೆ ಈತ ಎರಡಲ್ಲ, ಮೂರಲ್ಲ, ನಾಲ್ವರು ಹುಡುಗಿಯರ ಜೊತೆ ಆಟವಾಡಿದ್ದಾನೆ. ಒಬ್ಬ ಹುಡುಗಿಗೂ ಸುಳಿವು ಸಿಗದಂತೆ ನಾಲ್ವರಿಗೆ ಮೋಸ ಮಾಡಿದ್ದಾನೆ. ವಿಚಿತ್ರ ಅಂದ್ರೆ, ಇವರೆಲ್ಲ ಒಂದೇ ಕಂಪೌಂಡ್ ನಲ್ಲಿ ನೆಲೆಸಿದ್ದರು. ಅದ್ರಲ್ಲಿ ಒಬ್ಬಳು, ಈತನ ಪತ್ನಿ ವಾಸಿಸುವ ಅಪಾರ್ಟ್ಮೆಂಟ್ (Apartment) ನಲ್ಲಿಯೇ ವಾಸವಾಗಿದ್ದಳು. ಬರೀ ಪ್ರೀತಿ (love) ಯಲ್ಲಿ ಮಾತ್ರವಲ್ಲ ತನ್ನ ಬಗ್ಗೆಯೂ ಆತ ತಪ್ಪು ಮಾಹಿತಿ ನೀಡಿದ್ದ. ನಾನು ಬ್ಯುಸಿನೆಸ್‌ ಮ್ಯಾನ್   (business men)‌ ಅಂತ ಎಲ್ಲರನ್ನೂ ನಂಬಿಸಿದ್ದ ಈತನ ಬಣ್ಣ ಬಯಲಾಗ್ತಿದ್ದಂತೆ ಜನರು ಬೆಚ್ಚಿ ಬಿದ್ದಿದ್ದಾರೆ.

ಘಟನೆ ನಡೆದಿರೋದು ಚೀನಾದಲ್ಲಿ. ಜಿಯಾಜುನ್, ಐದು ಮಹಿಳೆಯರಿಗೆ ಮೋಸ ಮಾಡಿದ ವ್ಯಕ್ತಿ. ಜಿಯಾಜುನ್, ಚೀನಾದ ಜಿಲಿನ್ ನಿವಾಸಿ. ಬಡ ಕುಟುಂಬದಲ್ಲಿ ಬೆಳೆದ ಜಿಯಾಜುನ್ ಗೆ ಓದಲು ಸರಿಯಾಗಿ ಹಣವಿರಲಿಲ್ಲ. ಹಾಗಾಗಿ ಅರ್ಧಕ್ಕೆ ಓದು ನಿಲ್ಲಿಸಿದ್ದ ಜಿಯಾಜುನ್. ಜನರ ಮುಂದೆ ತನ್ನನ್ನು ತಾನು ಶ್ರೀಮಂತ ಎಂದು ಬಿಂಬಿಸಿಕೊಳ್ಳುತ್ತಿದ್ದ. ಆತನ ಬಟ್ಟೆ, ವರ್ತನೆ ನೋಡಿ ಜಿಯೋಜಿಯಾ ಎಂಬ ಹುಡುಗಿ ಆತನ ಪ್ರೀತಿಗೆ ಬಿದ್ದಿದ್ದಳು. ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಜಿಯೋಜಿಯಾ ಗರ್ಭಿಣಿಯಾಗ್ತಿದ್ದಂತೆ ಇಬ್ಬರೂ ಮದುವೆಯಾಗಿದ್ದರು. 

Tap to resize

Latest Videos

undefined

ಮದುವೆಗೆ ರಜೆ ನಿರಾಕರಿಸಿದ ಬಾಸ್, ವರನ ನಿರ್ಧಾರಕ್ಕೆ ಕಕ್ಕಾಬಿಕ್ಕಿಯಾದ ಕಂಪನಿ

ಮದುವೆಯಾದ್ಮೇಲೆ ಜಿಯೋಜಿಯಾಗೆ ಪತಿ ಜಿಯಾಜುನ್ ಬಣ್ಣ ಗೊತ್ತಾಗಿದೆ. ಆತ ಬಡ ಕುಟುಂಬದಿಂದ ಬಂದವನು. ಆತನ ತಾಯಿ, ಸ್ನಾನಗೃಹದಲ್ಲಿ ಕೆಲಸ ಮಾಡ್ತಿದ್ದಳು. ತಂದೆ ಕೂಲಿ ಕೆಲಸ ಮಾಡುತ್ತಾರೆ. ಒಂದು ರೂಪಾಯಿಗೆ ಕಷ್ಟಪಡ್ತಿದ್ದ ಜಿಯಾಜುನ್  ಮೋಸಕ್ಕೆ ಬೇಸರಗೊಂಡ ಪತ್ನಿ, ತನ್ನ ಮಗುವನ್ನು ಒಂಟಿಯಾಗಿ ಬೆಳೆಸುವ ನಿರ್ಧಾರಕ್ಕೆ ಬಂದಿದ್ದಳು. ಪತಿ ಜಿಯಾಜುನ್ ನನ್ನು ಮನೆಯಿಂದ ಹೊರಗೆ ಹಾಕಿದ್ದಳು. ಮನೆಯಿಂದ ಹೊರಬಿದ್ದ ಜಿಯಾಜುನ್, ಒಂದೇ ವಾರದಲ್ಲಿ ಇನ್ನೊಬ್ಬಳನ್ನು ಗಾಳಕ್ಕೆ ಬೀಳಿಸಿಕೊಂಡಿದ್ದ. ಆನ್ಲೈನ್ ಗೇಮ್ ಮೂಲಕ ಇನ್ನೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ. ಆಕೆ ಜೊತೆ ಆತನ ಚೆಲ್ಲಾಟ ಶುರುವಾಗಿತ್ತು. 

ಆಕೆ ಮುಂದೆ ಶ್ರೀಮಂತನಾಗಿ ಕಾಣಲು ಜುಯಾಜುನ್ ಸಾಕಷ್ಟು ಸಾಲ ಮಾಡಲು ಮುಂದಾಗಿದ್ದಾನೆ. 140,000 ಯುವಾನ್ ಅಂದ್ರೆ ಸುಮಾರು 16 ಲಕ್ಷಕ್ಕೂ ಹೆಚ್ಚು ಹಣವನ್ನು ಸಾಲ ಪಡೆದ ಜಿಯಾಜುನ್, ಶ್ರೀಮಂತನಾಗಿ ಕಾಣಲು ಈ ಹಣವನ್ನು ಖರ್ಚು ಮಾಡಿದ. ತನ್ನ ಪತ್ನಿ ವಾಸವಾಗಿದ್ದ ಅಪಾರ್ಟ್ಮೆಂಟ್ ನಲ್ಲಿಯೇ ಮನೆಯೊಂದನ್ನು ಬಾಡಿಗೆಗೆ ಪಡೆದ. ಆನ್ಲೈನ್ ಗೇಮ್ ಮೂಲಕ ಪರಿಚಯವಾದ ಹುಡುಗಿ ಜೊತೆ ಅಲ್ಲಿಯೇ ವಾಸ ಶುರು ಮಾಡಿದ್ದ. ಆಕೆ ಕೂಡ ಗರ್ಭಿಣಿಯಾದಳು. 

ಮಹಾನಟಿ ಸಾವಿತ್ರಿ ಮೇಲೆ ಕಣ್ಣು ಹಾಕಿದ 'ಆ ರಾಜಕಾರಣಿ'; ರಾಣಿಯಂತೆ ಮೆರೆಯುತ್ತಿದ್ದ ನಟಿ

ಇಬ್ಬರು ಗರ್ಭಿಣಿಯಾದ್ಮೇಲೆ ಜಿಯಾಜುನ್ ತನ್ನ ಕೆಲಸ ಮುಂದುವರೆಸಿದ್ದಾನೆ. ಅದೇ ಪ್ರದೇಶದಲ್ಲಿದ್ದ ಮೂವರು ಮಹಿಳೆಯರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡಿದ್ದಾನೆ. ನಂತ್ರ ಅವರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾನೆ. ಗರ್ಲ್ ಫ್ರೆಂಡ್ ಒಬ್ಬಳ ಜೊತೆ ಜಿಯಾಜುನ್ ಗಲಾಟೆ ಮಾಡ್ಕೊಂಡಿದ್ದಾನೆ. ಇಬ್ಬರ ಸಂಬಂಧ ಮುರಿದಿದೆ. ಈ ಸಮಯದಲ್ಲಿ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆಗ ಜಿಯಾಜುನ್ ಒಂದೊಂದೇ ಪ್ರೇಮಕಥೆ ಹೊರಬಿದ್ದಿದೆ. ಜಿಯಾಜುನ್ ಪುರಾಣ ಕೇಳಿ ಜನರು ದಂಗಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಕೋರ್ಟ್, ಜಿಯಾಜುನ್ ಗೆ ಒಂಬತ್ತು ವರ್ಷ ಆರು ತಿಂಗಳ ಜೈಲು ಶಿಕ್ಷೆ ಮತ್ತು ಭಾರೀ ದಂಡವನ್ನು ವಿಧಿಸಿದೆ.

click me!