
ಇತ್ತೀಚಿಗೆ ಯಾವುದೇ ವಿಚಾರಗಳನ್ನು ತಿಳಿದುಕೊಳ್ಳಲು ಎಲ್ಲರೂ ಥಟ್ಟಂತ ಗೂಗಲ್ ಮಾಡುವುದು ಸಾಮಾನ್ಯ. ಎಂಥೆಂಥಾ ಪ್ರಶ್ನೆಗೂ ಗೂಗಲ್ ಉತ್ತರ ನೀಡುತ್ತದೆ. ಆದ್ರೆ ಕೆಲವೊಮ್ಮೆ ಇದು ತಪ್ಪಾದ ಮಾಹಿತಿಯನ್ನು ನೀಡುವುದೂ ಇದೆ. ಹಾಗೆಯೇ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಂಗ್ ಮದುವೆ ವಿಚಾರದಲ್ಲಿ ಗೂಗಲ್ ತಪ್ಪಾದ ಮಾಹಿತಿ ನೀಡಿದೆ. ಈ ವಿಚಾರವಾಗಿ ಸಚಿವರು ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.
ನಾಗಾಲ್ಯಾಂಡ್ ಸಚಿವ (Nagaland Minister) ತೆಮ್ಜೆನ್ ಇಮ್ನಾ ಅಲಂಗ್ ತಮ್ಮ ಹೆಸರಿನ ಕುರಿತಾದ ಗೂಗಲ್ ಹುಡುಕಾಟದ (Google search) ಫಲಿತಾಂಶದ ಸ್ಕ್ರೀನ್‌ಶಾಟ್‌ನ್ನು ಶೇರ್ ಮಾಡಿಕೊಂಡಿದ್ದಾರೆ. ಅವರ ವಯಸ್ಸಿನ ಬಗ್ಗೆ ತಿಳಿದುಕೊಳ್ಳಲು ನೆಟ್ಟಿಗರು ಬಯಸಿದ್ದಲ್ಲದೆ, ಅವರ ಹೆಂಡತಿಯ ಬಗ್ಗೆಯೂ ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ನಾಗಾಲ್ಯಾಂಡ್ ಸಚಿವರ ವಯಸ್ಸು ಮತ್ತು ಜೀವನದ ಜೊತೆಗೆ ಅಲೋಂಗ್ ಅವರ ಹೆಂಡತಿಯ ಬಗ್ಗೆ ತಿಳಿದುಕೊಳ್ಳಲು ಗೂಗಲ್‌ನಲ್ಲಿ ಹುಡುಕಾಟ ನಡೆಸಲಾಗಿದೆ. ಆದರೆ ತಾವು ಒಂಟಿಯಾಗಿರುವುದಾಗಿ ಅಲೋಂಗ್ ಜಗತ್ತಿಗೆ ತಿಳಿಸಿದ್ದು, ನಾನು ನನಗೆ ಹೆಂಡತಿಯಾಗಬೇಕಿರುವವಳನ್ನು ಇನ್ನೂ ಹುಡುಕುತ್ತಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಶಾದಿ ಡಾಟ್ ಕಾಮ್‌ನಲ್ಲಿ ಹುಡುಗೀರು ಹೆಚ್ಚು ಸರ್ಚ್ ಮಾಡ್ತಿರೋದು ಇಂಥಾ ಹುಡುಗರನ್ನಂತೆ !
ಗೂಗಲ್‌ನಲ್ಲಿ ತೆಮ್ಜೆನ್ ಇಮ್ನಾ ಅಲಂಗ್ ಮದುವೆಯ (Marriage) ಬಗ್ಗೆ ಹುಡುಕಾಟ ನಡೆಸಿದಾಗ ಅಲ್ಲಿ ಅವರ ಹೆಂಡತಿಯ ಹೆಸರು ಮತ್ತು ವಿವರಗಳು ಕಾಣಸಿಗುತ್ತದೆ. ಆದರೆ ಅಚ್ಚರಿಯ ವಿಷಯವೆಂದರೆ ಸಚಿವವರಿಗೆ ಇನ್ನೂ ಮದುವೆಯೇ ಆಗಿಲ್ಲ. ನಾನು ಅವಿವಾಹಿತ ಎಂದು ಸಚಿವ ತೆಮ್ಜೆನ್ ಇಮ್ನಾ ಅಲಂಗ್ ಹೇಳಿಕೊಂಡಿದ್ದಾರೆ. ಆದರೆ ಅವಿವಾಹಿತನಾದ ನನ್ನ ಹೆಂಡತಿಯ ವಿವರಗಳನ್ನು ಗೂಗಲ್‌ನಲ್ಲಿ ತೋರಿಸಲಾಗುತ್ತಿದೆ ಎಂದು ಸಚಿವರು ಗೂಗಲ್ ಅನ್ನು ಟ್ಯಾಗ್ ಮಾಡಿ ಬರೆದಿದ್ದಾರೆ. ಮಾತ್ರವಲ್ಲ 'ಗೂಗಲ್ ಹುಡುಕಾಟವು ನನ್ನನ್ನು ರೋಮಾಂಚನಗೊಳಿಸಿದೆ. ನಾನು ಇನ್ನೂ ಅವಳನ್ನು (ಹೆಂಡತಿ) ಹುಡುಕುತ್ತಿದ್ದೇನೆ. ಆದರೆ ಗೂಗಲ್‌ನಲ್ಲಿ ಹುಡುಕಾಟ ಫಲಿತಾಂಶಗಳು ಗೋಚರಿಸುತ್ತವೆ' ಎಂದಿದ್ದಾರೆ.
ಅಲೋಂಗ್ ಅವರ ಹಾಸ್ಯ ಪ್ರಜ್ಞೆಯು ಇಂಟರ್‌ನೆಟ್‌ನ್ನು ನಗೆಗಡಲಲಲ್ಲಿ ತೇಲಿಸಿದೆ. ಅವತ ಹಾಸ್ಯಭರಿತ ಹೇಳಿಕೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಮ್ಜೆನ್ ಇಮ್ನಾ ಅಲಂಗ್ ನಾಗಾಲ್ಯಾಂಡ್‌ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಕ್ತಿಯಿಲ್ಲದ ವ್ಯಕ್ತಿ ಮದುವೆಯಾಗಿ ಬಾಳು ಹಾಳ್ಮಾಡ್ಕೊಂಡ ಮಹಿಳೆ
ಶಾದಿ ಡಾಟ್ ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಕೂಡ ಈ ಚರ್ಚೆಯಲ್ಲಿ ಭಾಗಿಯಾಗಿದ್ದು, ಈ ವಿಷಯ ಮತ್ತಷ್ಟು ವೈರಲ್ ಆಗಿದೆ. ಬಳಕೆದಾರರು ಸಹ ಸ್ಕ್ರೀನ್‌ಶಾಟ್‌ಗಳ ಕುರಿತು ಕಾಮೆಂಟ್ ಮಾಡುತ್ತಿದ್ದಾರೆ. ಶಾದಿ ಡಾಟ್ ಕಾಮ್ ಸಂಸ್ಥಾಪಕರು ಅವರಿಗೆ ಸಹಾಯ ಮಾಡಲು ಬಯಸಿದಾಗ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವೀಟ್ ವೈರಲ್ ಆಗಿದೆ
ಟ್ವೀಟ್ ಪೋಸ್ಟ್‌ನ ಕಾಮೆಂಟ್‌ನಲ್ಲಿ, ಅನುಪಮ್ ಮಿತ್ತಲ್ ಸಚಿವರಿಗೆ ಏನಾದರೂ ಸಹಾಯ ಬೇಕಿದೆಯಾ ಎಂದು ಕೇಳಿದ್ದಾರೆ. ಟೆಮ್ಜೆನ್ ಇದಕ್ಕೆ ತ್ವರಿತ ಮತ್ತು ವಿಲಕ್ಷಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಾನು ಬಿಂದಾಸ್ ಆಗಿದ್ದೇವೆ. ಸಲ್ಮಾನ್ ಭಾಯ್ ಮದುವೆಗಾಗಿ ಕಾಯುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಈ ಫನ್ನಿ ಕಾಮೆಂಟ್‌ಗಳು ಇಲ್ಲಿಗೆ ಮುಗಿದಿಲ್ಲ. ಶಾದಿ ಡಾಟ್ ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಇದಕ್ಕೆ ಪ್ರತಿಕ್ರಿಯಿಸಿ ಶಾದಿ ಡಾಟ್ ಕಾಮ್ ಹಾಗೂ ನಾನು ನಿಮ್ಮ ಖುಷಿಯ ಕ್ಷಣಗಳನ್ನು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.