ಹಿಂದೊಂದು ಜಮಾನವಿತ್ತು. ಮದುವೆ (Marriage) ಯಾದ ಮೇಲೆ, ಅದೂ ಸುಮಾರು 25 ವರ್ಷಗಳ ನಂತರವೇ ಹೆಣ್ಣು ಗಂಡಿನ ಲೈಂಗಿಕ (Sex) ಜೀವನ ಶುರುವಾಗುತ್ತಿತ್ತು. ಕಾಲ ಬದಲಾಗಿದೆ. ಹೈಸ್ಕೂಲಿಗೆ ಹೋಗೋ ಹುಡುಗನ ಬ್ಯಾಗಲ್ಲಿ ಕಾಂಡೋಮ್ (Condom) ಕಂಡರೂ ಆಶ್ಚರ್ಯ ಪಡಬೇಕಾಗಿಲ್ಲ. ಹಾಗಾದರೆ ಈ ಮಕ್ಕಳು ಸೆಕ್ಸ್ ಲೈಫ್ 30ರ ನಂತರ ಹೇಗಿರುತ್ತೆ
ಟಿವಿ ಪ್ರಭಾವವೋ, ಬದಲಾದ ಜೀವನ ಶೈಲಿಯೋ (Lifestyle) ಒಟ್ಟಿನಲ್ಲಿ ಈಗೀಗ ಇಪ್ಪತ್ತರ ಹರೆಯದಲ್ಲಿಯೇ ಮಕ್ಕಳು ಸೆಕ್ಸ್ ಅನುಭವ ಹೊಂದಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಅನುಭವಿಸುವ ತೀವ್ರ ಉದ್ರೇಕ, ಉತ್ಸಾಹ, ಸುಖಗಳು ಅರಿವಿಗೆ ಬಂದಿರುತ್ತವೆ. ವಯಸ್ಸು ಮೂವತ್ತು ಆದ ಬಳಿಕ ಈ ತೀವ್ರೋದ್ರೇಕಗಳು ಸಹಜವಾಗಿಯೇ ಇಳಿಯುತ್ತವೆ. ವಯಸ್ಸಾದಂತೆ ಅದು ಬದಲಾಗೋದು ಕಾಮನ್. 30ರ ಹರೆಯದಲ್ಲಿದ್ದರೆ ಲೈಂಗಿಕ ಜೀವನದಲ್ಲಾಗುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳಿವೆ.
ಉತ್ಸಾಹ ಕುಂದುತ್ತೆ: 20 ಹರೆಯದಲ್ಲಿಯೇ ಲೈಂಗಿಕ ಜೀವನ ಆರಂಭಿಸುವವರು ಪ್ರತಿದಿನವೂ ಸಂಭೋಗ ಮಾಡೋ ಉತ್ಸಾಹ ತೋರುತ್ತಾರೆ. ಏನೇನೋ ಪ್ರಯೋಗಗಳನ್ನೂ ಮಾಡಿರುತ್ತಾರೆ. ಸಂಗಾತಿ ದೇಹವನ್ನು ಅನ್ವೇಷಿಸುವುದೂ ಇದರಲ್ಲಿ ಸೇರಿರುತ್ತೆ. ಮದುವೆಯಾದ ಹೊಸದರಲ್ಲಿ ಕೆಲವೊಮ್ಮೆ ದಿನಕ್ಕೆಡು ಬಾರಿಯೂ ಸಂಭೋಗಿಸಬಹುದು. ಆದರೆ ಮೂವತ್ತರ ಹರೆಯದಲ್ಲಿ ಅದು ಅಸಾಧ್ಯ. ಆಗ ಮೊದಲಿನ ದೇಹ ಶ್(Body) ಕುತೂಹಲವೇ ಇರೋಲ್ಲ. ಅದೇ ಬೇರೆ ಸಂಗಾತಿಯ ಜೊತೆಗಾದರೆ ಆ ಕುತೂಹಲ ಸ್ವಲ್ಪವಾದರೂ ಉಳಿಯುತ್ತೇನೋ?
ಲೈಂಗಿಕ ಕ್ರಿಯೆ ಎಂಜಾಯ್ ಮಾಡಲು ಕಾಂಡೋಮ್ ಆಯ್ಕೆ ಹೇಗಿರಬೇಕು?
ಒಣಗಿದ ಜನನಾಂಗ: ಬಹುಬೇಕ ಲೈಂಗಿಕ ಜೀವನ ಆರಂಭಿಸುವವರು ಸೇಫ್ ಸೆಕ್ಸ್ (Safe Sex) ಬಗ್ಗೆಯೂ ಗಮನ ಕೊಡುವುದು ಅನಿವಾರ್ಯ. ಯಾವುದೇ ಕಾರಣಕ್ಕೂ ಕನ್ಸೀವ್ ಆಗಬಾರದು ಎಂಬ ಕಾರಣಕ್ಕೆ ಏನೇನು ಮಾಡಬೇಕೋ ಎಲ್ಲವನ್ನೂ ಮಾಡಿರುತ್ತಾರೆ. ಹೆಣ್ಣು ಮಕ್ಕಳು ಜನನ ನಿಯಂತ್ರಣ ಮಾತ್ರೆ ಸೇವಿಸಿದರೆ, ಗಂಡು ಮಕ್ಕಳು ಕಾಂಡೋಮ್ ಬಳಸುತ್ತಾರೆ. ಅಥವಾ ಇನ್ನೇನೋ ಮಾಡಬಹುದು.
ಇವೆಲ್ಲಾ ಬರ ಬರುತ್ತಾ ಮನುಷ್ಯನ ಲೈಂಗಿಕ ಕ್ರಿಯೆ (Intercourse) ನಡೆಸುವ ಅಸಕ್ತಿಯನ್ನೇ ಕುಂದಿಸುತ್ತದೆ. ಜನನ ನಿಯಂತ್ರಣ ಮಾತ್ರೆ ಅಂಡೋತ್ಪತ್ತಿಯನ್ನು ನಿಯಂತ್ರಿಸುವುದರಿಂದ ಟೆಸ್ಟೋಸ್ಟೆರಾನ್ ಉತ್ಪತ್ತಿಯನ್ನು ಕುಂಠಿತಗೊಳಿಸುತ್ತದೆ. ಇವೆಲ್ಲಾ ಅಸಹಜ ಪ್ರಕ್ರಿಯೆಗಳು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯದ (Mental Health) ಮೇಲೂ ಪ್ರಭಾವ ಬೀರುತ್ತೆ. ಒಣಗಿದ ಜನನಾಂಗ ಸ್ಥಿತಿ ಉಂಟಾಗುತ್ತದೆ. ಸಾಕಷ್ಟು ತೇವ ಉತ್ಪತ್ತಿಯಾಗದಿದ್ದರೆ, ಸೆಕ್ಸ್ ಸುಖ ತರುವ ಬದಲು, ನೋವು ತರುತ್ತದೆ. ಉತ್ತಮ ಲೂಬ್ರಿಕಂಟ್ಸ್ (Lubricants) ಮೊರೆ ಹೋಗಬೇಕಾಗುತ್ತದೆ. ಈ ಸಮಸ್ಯೆ ಬಗ್ಗೆ ಸಂಗಾತಿಗಳು ಒಬ್ಬರಿಗೊಬ್ಬರು ಮಾತನಾಡಿ, ಪರಿಹಾರ ಕಂಡು ಕೊಳ್ಳಬೇಕು.
ಕಡಿಮೆ ಆವರ್ತನ: ನಡು ವಯಸ್ಸಿಗೆ ಬರುತ್ತಿದ್ದಂತೆ, ಮನುಷ್ಯನ ಜೀವನಶೈಲಿಯೂ ಬದಲಾಗುತ್ತದೆ. ಹೆಚ್ಚಾಗುವ ಜವಾಬ್ದಾರಿಯಿಂದ (Responsibilities) ಒತ್ತಡಗಳು ಹೆಚ್ಚುತ್ತಿವೆ. ಅಷ್ಟೊತ್ತಿಗೆ ಕಚೇರಿ ಮತ್ತಿತರ ಒತ್ತಡವೂ ಹೆಗಲ ಮೇಲಿರುತ್ತದೆ. ಮಕ್ಕಳು, ಕುಟುಂಬ, ಕೆಲಸ ಅಥವಾ ಯಾವಾಗಲೂ ಫಿಟ್ ಆಗಿ ಕಾಣುವ ಬಯಕೆಯೂ ಮನಸ್ಸು, ದೇಹದ ಮೇಲೆ ಎಲ್ಲಿಲ್ಲದ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ವಾರಕ್ಕೆರಡು ಸಾರಿ ಕೂಡುವುದೂ ಕಷ್ಟವಾಗಿ ಬಿಡುತ್ತದೆ. ಇಂಥ ಸಮಸ್ಯೆಗಳಿಗೆ ಸಂಗಾತಿಗಳು ಮುಕ್ತರಾಗಿ ಮಾತನಾಡುವುದೊಂದೇ ಉತ್ತಮ ಪರಿಹಾರ. ಮನಸ್ಸಿನ ಭಾರವನ್ನು ಹಂಚಿಕೊಂಡು, ದೇಹ ಹಂಚಿಕೊಂಡರೆ ಜೀವನ ಸುಖ.
ಮದುವೆಯಾಗಿ ಮೋಸ ಮಾಡೋದ್ರಲ್ಲಿ ಮಹಿಳೆಯರದ್ದೇ ಎತ್ತಿದ ಕೈ !
ಪರಾಕಾಷ್ಠೆ ಸುಲಭ: ಅನುಭವ ಎಲ್ಲರನ್ನೂ ಪಕ್ವವಾಗಿಸುತ್ತದೆ. ಸೆಕ್ಸ್ ವಿಷಯಕ್ಕೂ ಇದು ಸೂಟ್ ಆಗುತ್ತೆ. ಒಂದು ಹಂತಕ್ಕೆ ಬಂದ ಮೇಲೆ ತಮಗೇನು ಬೇಕು, ಏನು ಮಾಡಿದರೆ ತೃಪ್ತಿ ಎಂಬ ಪ್ರಜ್ಞೆ ಹುಟ್ಟಿಕೊಳ್ಳುತ್ತದೆ. ಸೂಕ್ತ ಜಾಗದಲ್ಲಿ, ಸರಿಯಾದ ಹೊತ್ತಿನಲ್ಲಿ, ಏನನ್ನು ಮಾಡಿದರೆ ಸೆಕ್ಸ್ ಪರಾಕಾಷ್ಠೆ ಮುಟ್ಟಬಹುದು ಎಂಬುವುದೂ ಅರ್ಥವಾಗಿರುತ್ತದೆ. ದೇಹದ ಸುಖದ ಬಿಂದುಗಳ ಬಗ್ಗೆಯೂ ತಿಳಿದಿರುತ್ತದೆ. ಇದು ಪರಾಕಾಷ್ಠೆ ಪಡೆಯುವುದನ್ನು ಸುಲಭಗೊಳಿಸುತ್ತದೆ. 20ರ ಹರೆಯದಲ್ಲಿ ಇನ್ನೂ ನಮ್ಮ ದೇಹಗಳು, ನಮ್ಮ ಇಷ್ಟಗಳನ್ನು ಕಂಡುಹಿಡಿಯುವುದರಲ್ಲಿಯೇ ಇರುತ್ತಾರೆ.
ಪ್ರಾಯೋಗಿಕತೆ ಹೆಚ್ಚು : ಸಾಮಾನ್ಯವಾಗಿ ಹರೆಯದಲ್ಲಿ ಸೆಕ್ಸ್ ಉತ್ತುಂಗ ತಲುಪುವುದೇ ಮುಖ್ಯ. ಆದರೆ 30ರ ಹರೆಯದಲ್ಲಿ, ಹೆಣ್ಣು-ಗಂಡಿನ ದೇಹಗಳು ಹೆಚ್ಚು ಪರಿಚಯವಾಗಿರುತ್ತದೆ. ಹೆಚ್ಚು ಆರಾಮದಾಯಕವಾಗಿ ಸೆಕ್ಸ್‌ನಲ್ಲಿ ತೊಡಗಿಕೊಳ್ಳಲು ಸಾಧ್ಯ. ಆದ್ದರಿಂದ ಹೆಚ್ಚಿನ ಪ್ರಯೋಗಗಳು ನಡೆಯುತ್ತವೆ.
ಹೆಚ್ಚಿನ ಸುಖಕ್ಕಾಗಿ ಏನು ಮಾಡಬಹುದು, ಮಾಡಬಾರದು ಎಂಬುದನ್ನು ಕಂಡು ಕೊಳ್ಳುವುದು ಅಗತ್ಯ. ಇಬ್ಬರ ನಡುವೆ ಸಂಕೋಚ ಇರ ಕೂಡದು. ಸೆಕ್ಸ್ ಬಗ್ಗೆ ಮಾತನಾಡಿಕೊಳ್ಳಬೇಕು. ದೇಹ ಸುಖಕ್ಕೆ ಮನಸ್ಸು ಬೆರೆಯೋದು ಮುಖ್ಯ. ಇಬ್ಬರ ನಡುವಿನ ಮಿಸ್ ಅಂಡರ್‌ಸ್ಟಾಂಡಿಗ್ (Mis Understanding)ಇದ್ದರೆ ಯಾವುದೂ ಚಂದ ಅನಿಸೋಲ್ಲ. ಮಾತು, ಅದೂ ಮನಸ್ಸು ಬಿಚ್ಚಿ ಮಾತನಾಡಿದರೆ ಬಗೆ ಹರಿಯುತ್ತೆ ಸಮಸ್ಯೆ.