ವರನ ನೋಡಿ ಅಳಲು ಶುರು ಮಾಡಿದ ವಧು: ವಿಡಿಯೋ ವೈರಲ್‌

By Suvarna News  |  First Published Jul 4, 2022, 3:37 PM IST

ಮದುವೆ ಒಂದು ಅತೀ ಭಾವುಕ ಕ್ಷಣ. ಅದರಲ್ಲೂ ಹೆಣ್ಣು ಮಕ್ಕಳಿಗೆ ಇದು ಖುಷಿಯ ಜೊತೆ ದುಃಖ ಆತಂಕವನ್ನು ಒಟ್ಟೊಟ್ಟಿಗೆ ನೀಡುವ ಕ್ಷಣ. ತಾನು ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೊಸದೊಂದು ಬೇರೆಯದೇ ಪ್ರಪಂಚಕ್ಕೆ ಹೊರಡುವ ವಧುವಿನ ಮನದ ಭಾವುಕತೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. 


ಮದುವೆ ಒಂದು ಅತೀ ಭಾವುಕ ಕ್ಷಣ. ಅದರಲ್ಲೂ ಹೆಣ್ಣು ಮಕ್ಕಳಿಗೆ ಇದು ಖುಷಿಯ ಜೊತೆ ದುಃಖ ಆತಂಕವನ್ನು ಒಟ್ಟೊಟ್ಟಿಗೆ ನೀಡುವ ಕ್ಷಣ. ತಾನು ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೊಸದೊಂದು ಬೇರೆಯದೇ ಪ್ರಪಂಚಕ್ಕೆ ಹೊರಡುವ ವಧುವಿನ ಮನದ ಭಾವುಕತೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದು ಪ್ರೇಮ ವಿವಾಹವೇ (Love marriage) ಆಗಿರಲಿ ಅಥವಾ ಅಥವಾ ಕುಟುಂಬದವರೆಲ್ಲಾ (Family) ಸೇರಿ ನಿರ್ಧರಿಸಿದ ಮದುವೆಯೇ ಆಗಿರಲಿ ಆ ಕ್ಷಣ ಒಂದು ವಿಶೇಷವಾದ ಹೇಳಲಾಗದೆ ಭಾವುಕತೆಯನ್ನು ಹೊಂದಿರುತ್ತದೆ. 

ಎಷ್ಟೇ ಖುಷಿಯಲ್ಲಿದ್ದರೂ ಬಹುತೇಕ ಹೆಣ್ಣು ಮಕ್ಕಳು ಗಂಡನ (Husband) ಮನೆಗೆ ಹೋಗುವಾಗ ಕಣ್ಣೀರು ಸುರಿಸುತ್ತಲೇ ಹೋಗುತ್ತಾರೆ. ಆದರೆ ಇತ್ತೀಚೆಗೆ ವಧುಗಳು ಡಾನ್ಸ್ (Dance) ಮಾಡುತ್ತಾ ತುಂಬಾ ಸಂಭ್ರಮದಿಂದ ವಿಭಿನ್ನವಾಗಿ ಮದುವೆ ಮಂಟಪಕ್ಕೆ ಕಾಲಿಡುವ ವಿಭಿನ್ನ ವಿಡಿಯೋಗಳನ್ನು ನಾವು ನೋಡಿದ್ದೇವೆ. ಆದರೆ ಮದುವೆ ಗಂಡನ್ನು ನೋಡಿ ವಧು ಭಾವುಕವಾಗಿ ಕಣ್ಣೀರಿಟ್ಟ ವಿಡಿಯೋವನ್ನು (Video) ನೋಡಿದ್ದೀರಾ? ಇಲ್ಲೊಬ್ಬರು ವಧು ಮದುವೆ ಮಂಟಪಕ್ಕೆ ಕಾಲಿಡುತ್ತಿದ್ದಂತೆ ತುಂಬಾ ಭಾವುಕಳಾಗಿ ಕಣ್ಣೀರಿಟ್ಟಿದ್ದಾಳೆ. ಈಕೆಯನ್ನು ನೋಡಿದ ವರನೂ ಕೂಡ ತುಂಭಾ ಭಾವುಕನಾಗಿದ್ದಾನೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Eternal Weddings (@eternalweddingstm)

 

ಇದು ಪಕ್ಕ ದಕ್ಷಿಣ ಭಾರತ (South India) ಶೈಲಿಯ ವಿವಾಹವಾಗಿದ್ದು, ವಧು (Groom) ಕ್ರೀಮ್ ಕಲರ್‌ ಬಣ್ಣದ ರೇಷ್ಮೆ ಸೀರೆ ಉಟ್ಟಿದ್ದು, ವರ ಪಂಚೆ ಸಲ್ಯ ಧರಿಸಿದ್ದಾನೆ. ಸುಂದರವಾಗಿ ಇಬ್ಬರು ತಮ್ಮ ವಿಶೇಷ ದಿನಕ್ಕೆ ಸಿದ್ಧರಾಗಿದ್ದು, ವಧು ಆ ಕ್ಷಣ ತುಂಬಾ ಭಾವುಕಳಾಗುತ್ತಾ ನಡೆದು ಬರುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ವೀಕ್ಷಿಸಿದ್ದಾರೆ. ನಂತರ ವಧು ಮಂಟಪಕ್ಕೆ ಬರುತ್ತಿದ್ದಂತೆ ವರ ತಾಳಿ ಕಟ್ಟಿದ್ದು ಈ ವೇಳೆ ವಧು (Bride) ವಿನ್ರಮಳಾಗಿ ಕೈ ಮುಗಿಯುತ್ತಿದ್ದಾಳೆ. ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

3ನೇ ಪತ್ನಿ ರಮ್ಯಾಗೆ ಡಿವೋರ್ಸ್‌ಗೆ ಪವಿತ್ರ ಲೋಕೇಶ್ ಕಾರಣವಲ್ಲ, ನರೇಶ್ ಹೇಳಿದ ಮದುವೆ ಸೀಕ್ರೆಟ್!

ಕೆಲ ದಿನಗಳ ಹಿಂದೆ ತಮಿಳುನಾಡಿನ ಯುವಕನೋರ್ವ ಮದುವೆಯಾಗಲು ಹೆಣ್ಣು ಹುಡುಕಿ ಕೊಡಿ ಎಂದು ಊರಿನ ತುಂಬಾ ಪೋಸ್ಟರ್ ಅನ್ನು ಅಂಟಿಸಿದರು. ಹಲವಾರು ವರ್ಷಗಳಿಂದ ಸೂಕ್ತ ಸಂಗಾತಿಯನ್ನು ಹುಡುಕುತ್ತಿರುವ ಜಗನ್‌ ಬ್ರೋಕರ್‌ಗಳಿಗೆ ತಮ್ಮ ಪ್ರೊಫೈಲ್‌ನ್ನು ನೀಡಿದ್ದರು. ಮಾತ್ರವಲ್ಲ ಮ್ಯಾಟ್ರಿಮೋನಿ ಸೈಟ್‌ನಲ್ಲೂ ಪ್ರೊಫೈಲ್ ಅಟ್ಯಾಚ್ ಮಾಡಿದ್ದರು. ಆದರೆ ಯಾವ ರೀತಿಯಲ್ಲಿ ಹುಡುಕಿದರೂ ಸೂಕ್ತ ಸಂಗಾತಿ ಸಿಕ್ಕಿರಲ್ಲಿಲ್ಲ. ಹೀಗಾಗಿ ಮಧುರೈನ ವಿಲ್ಲುಪುರಂನ ಎಂಎಸ್ ಜಗನ್ ಎಂಬ 27 ವರ್ಷದ ಇಂಜಿನಿಯರ್ ಅವರು ತಮ್ಮ ವೈಯಕ್ತಿಕ ವಿವರಗಳನ್ನು ಹೊಂದಿರುವ ದೊಡ್ಡ ಪೋಸ್ಟರ್‌ಗಳನ್ನು ತಮ್ಮ ಊರಿನ ಸುತ್ತಲೂ ಹಾಕಿದ್ದಾರೆ. 

 

ಪೋಸ್ಟರ್‌ಗಳು (Poster) ಹುಡುಗಿಗಾಗಿ ಹುಡುಕುತ್ತಿರುವ ಶೀರ್ಷಿಕೆಯನ್ನು ಹೊಂದಿದೆ. ವರದಿಗಳ ಪ್ರಕಾರ, ಜಗನ್‌, ಸಾಂಪ್ರದಾಯಿಕ ಮಾರ್ಗಗಳ ಮೂಲಕ ತನಗಾಗಿ ಪಾಲುದಾರನನ್ನು ಹುಡುಕಲು ಆರಂಭಿಸಿದ ನಂತರ ಈ ರೀತಿ ಮಾಡಿದ್ದಾರೆ. ಪೋಸ್ಟರ್‌ಗಳಲ್ಲಿ ಜಗನ್ ಅವರ ಫೋಟೋ ಮತ್ತು ಅವರ ಹೆಸರು, ಜಾತಿ, ಸಂಬಳ, ವೃತ್ತಿ, ವಿಳಾಸ ಮತ್ತು ಅವರು ಹೊಂದಿರುವ ಜಮೀನಿನ ವಿವರಗಳಿವೆ. 

ದಲಿತರೆಂದು ಮನೆಯೊಳಗೆ ಸೇರಿಸಲ್ಲ ಸರ್..ಹೇಗೆ ಕೆಲಸ ಮಾಡ್ಲಿ, ಆಶಾ ಕಾರ್ಯಕರ್ತೆ ಕಣ್ಣೀರು

ನಾನು ಕಳೆದ ಐದು ವರ್ಷಗಳಿಂದ ವಧು (Bride)ವನ್ನು ಹುಡುಕುತ್ತಿದ್ದೇನೆ, ಆದರೆ ಯಶಸ್ವಿಯಾಗಲಿಲ್ಲ. ನಾನು ಅನೇಕ ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸಿದ್ದೇನೆ, ನಾನು ನನಗಾಗಿ ಒಂದನ್ನು ಏಕೆ ವಿನ್ಯಾಸಗೊಳಿಸಬಾರದು ಎಂದು ಯೋಚಿಸಿದೆ ಎಂದು 27 ವರ್ಷದ ಜಗನ್ ಮಧುರೈ 360 ಸುದ್ದಿ ವಾಹಿನಿಗೆ ತಿಳಿಸಿದರು. ಪಾರ್ಟ್ ಟೈಮ್ ಡಿಸೈನರ್ ಆಗಿ ಕೆಲಸ ಮಾಡುವಾಗ ಪೋಸ್ಟರ್ ಐಡಿಯಾ ಬಂತು ಎಂದು ಜಗನ್ ಹೇಳಿದ್ದಾರೆ.

click me!